ಕುಂಬಳೆಯಲ್ಲಿ ಜಯಕೃಷ್ಣ ಮಾಸ್ತರ್ ಬಲಿದಾನ ದಿನಾಚರಣೆ

ಕುಂಬಳೆ: ಪಂಚಾಯತ್ ಬಿಜೆಪಿ ಸಮಿತಿ ವತಿಯಿಂದ ದಿ| ಜಯಕೃಷ್ಣ ಮಾಸ್ತರ್ ಅವರ ೨೭ನೇ ಬಲಿದಾನ ದಿನವನ್ನು ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸುವ ಮೂಲಕ ಆಚರಿಸಲಾಯಿತು. ಪಕ್ಷದ ರಾಜ್ಯ ಸಮಿತಿ ಸದಸ್ಯ ವಿ. ರವೀಂದ್ರನ್ ಉದ್ಘಾಟಿಸಿ ಮಾತನಾಡಿದರು. ಉತ್ತರ ವಲಯ ಅಧ್ಯಕ್ಷ ಶಿವಪ್ರಸಾದ್ ರೈ ಮಡ್ವ ಅಧ್ಯಕ್ಷತೆ ವಹಿಸಿದರು. ದಕ್ಷಿಣ ವಲಯ ಅಧ್ಯಕ್ಷ ಸುಜಿತ್ ರೈ, ಕುಂಬಳೆ ಮಂಡಲ ಅಧ್ಯಕ್ಷ ಸುನಿಲ್ ಅನಂತಪುರ, ಮಂಡಲ ಕೋಶಾಧಿಕಾರಿ ರಾಧಾಕೃಷ್ಣ ರೈ, ವಿವಿಧ ವಾರ್ಡ್‌ಗಳಿಂದ ಸ್ಪರ್ಧಿಸುತ್ತಿರುವ ಬಿ. ವಿಕ್ರಂ …

ಗಡಿನಾಡ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಹೃದಯದಲ್ಲಿ ಪೋಣಿಸಿದಷ್ಟು ಭಾಷೆಯ ಪ್ರೌಢತೆ ಪ್ರಜ್ವಲಿಸುತ್ತದೆ- ಬಿ.ಎಂ. ಹನೀಫ್

ಪೈವಳಿಕೆ: ಕನ್ನಡ ಭಾಷೆ, ಸಂಸ್ಕೃತಿಯ ಪ್ರೀತಿ ಹೃದಯದಲ್ಲಿ ಪೋಣಿಸಿದಷ್ಟು ಭಾಷೆಯ ಪ್ರೌಢತೆ ಪ್ರಜ್ವಲಿಸುತ್ತದೆ. ಹಡಿನಾಡು, ಹೊರ ನಾಡುಗಳಲ್ಲಿ ಇದನ್ನು ಕಾಣಬಹುದು ಎಂದು ಹಿರಿಯ ಪತ್ರಕರ್ತ ಬಿ.ಎಂ. ಹನೀಫ್ ಅಭಿಪ್ರಾಯ ವ್ಯಕ್ತಪಡಿಸಿದರು.ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಆಶ್ರಯದಲ್ಲಿ ಪೈವಳಿಕೆ ಕಾಯರ್‌ಕಟ್ಟೆ ಸರಕಾರಿ ಹೈಯರ್ ಸೆಕೆಂಡರಿ ಶಾಲಾ ಸಭಾಂಗಣದಲ್ಲಿ ಶನಿವಾರ ನಡೆದ ಗಡಿನಾಡ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಪ್ರಾದೇಶಿಕ ಭಾಷಾ ವೈವಿಧ್ಯತೆಯಿಂದ ಕನ್ನಡ ಭಾಷೆ ಉಳಿದಿದೆ. ಈ ನಿಟ್ಟಿನಲ್ಲಿ …

ಕಾಸರಗೋಡಿನ ಹಿಂದುಳಿದ ಅವಸ್ಥೆಗೆ ಎಡ-ಬಲ ಒಕ್ಕೂಟಗಳು ಕಾರಣ- ನಳಿನ್ ಕುಮಾರ್ ಕಟೀಲ್

ಪೈವಳಿಕೆ: ಗಡಿ ಜಿಲ್ಲೆಗಳಾದ  ದಕ್ಷಿಣ ಕನ್ನಡ ಹಾಗೂ ಕಾಸರಗೋಡಿನ ಮಧ್ಯೆ ಅಭಿವೃದ್ಧಿಯಲ್ಲಿ ಭಾರೀ ಅಂತರವಿದೆ ಎಂದು, ಜಿಲ್ಲೆಯ ಹಿಂದುಳಿದಾವಸ್ಥೆಗೆ ಎಡ-ಐಕ್ಯರಂಗದ ಒಕ್ಕೂಟಗಳು ಕಾರಣ ವೆಂದು ನಳಿನ್ ಕುಮಾರ್ ಕಟೀಲ್ ನುಡಿದರು. ಪೈವಳಿಕೆ ಪಂಚಾಯತ್ ಬಿಜೆಪಿ ಕಾರ್ಯಕರ್ತರ ಸಮಾವೇಶ ಹಾಗೂ ಜಯಕೃಷ್ಣನ್ ಮಾಸ್ತರ್ ಬಲಿದಾನ ದಿನಾಚರಣೆಯನ್ನು ಕಾಯರ್‌ಕಟ್ಟೆ ಕುಲಾಲ ಮಂದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಳೆದ ಆರು ದಶಕಗಳಿಂದ ಪಕ್ಷವನ್ನು ಬೇಟೆಯಾಡುತ್ತಿದ್ದರೂ ಬಿಜೆಪಿ- ಆರ್‌ಎಸ್‌ಎಸ್ ಕಾರ್ಯ ಕರ್ತರ ಉತ್ಸಾಹವನ್ನು ತಗ್ಗಿಸಲು ಸಿಪಿಎಂಗೆ ಸಾಧ್ಯವಾಗಿಲ್ಲವೆಂದು ಕೆ.ಟಿ. ಜಯಕೃಷ್ಣನ್ ಮಾಸ್ತರ್‌ರಂತಹ ಬಲಿದಾನಿಗಳು …

ಡೇಟಿಂಗ್ ಆಪ್ ಮೂಲಕ ಪರಿಚಯ: 16ರ ಬಾಲಕನಿಗೆ ದೌರ್ಜನ್ಯಗೈದ ಘಟನೆಯಲ್ಲಿ ಪೋಕ್ಸೋ ಕೇಸು ದಾಖಲು

ಕಾಸರಗೋಡು: ಡೇಟಿಂಗ್ ಆಪ್ ಮೂಲಕ ಪರಿಚಯಗೊಂಡು ೧೬ರ ಹರೆಯದ ಬಾಲಕನನ್ನು ದೌರ್ಜನ್ಯಗೈದ ಘಟನೆಯಲ್ಲಿ ಚಂದೇರ ಪೊಲೀಸರು ಪೋಕ್ಸೋ ಕೇಸೊಂದನ್ನು ದಾಖಲಿಸಿ ದ್ದಾರೆ. ಪಯ್ಯನ್ನೂರು ನಿವಾಸಿಯಾದ ಪ್ರಸಾದ್ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಈತನನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಇದರೊಂದಿಗೆ 16ರ ಹರೆಯದ ಬಾಲಕ ನೀಡಿದ ದೂರಿನಂತೆ ಚಂದೇರ ಪೊಲೀಸರು ನೋಂದಾಯಿಸಿದ ಪೋಕ್ಸೋ ಪ್ರಕರಣಗಳ ಸಂಖ್ಯೆ 15ಕ್ಕೇರಿದೆ. ಈ ಮೊದಲು ನೋಂದಾಯಿಸಿದ ಪ್ರಕರಣಗಳಲ್ಲಿ ಆರೋಪಿಗಳಾದ ಬೇಕಲ ಎಇಒ ಆಗಿದ್ದ ಪಡನ್ನಕ್ಕಾಡ್‌ನ ವಿ.ಕೆ. ಸೈನುದ್ದೀನ್ (52), ಆರ್‌ಪಿಎಫ್ ನೌಕರ …

ದಾಖಲುಪತ್ರಗಳಿಲ್ಲದೆ ಸಾಗಿಸುತ್ತಿದ್ದ 7.03 ಲಕ್ಷ ರೂ. ಮಂಜೇಶ್ವರದಲ್ಲಿ ವಶ

ಮಂಜೇಶ್ವರ: ಸ್ಥಳೀಯಾಡಳಿತ ಚುನಾವಣೆಯ ಹಿನ್ನೆಲೆಯಲ್ಲಿ ನಡೆಸುತ್ತಿರುವ ಸ್ಪೆಷಲ್ ಡ್ರೈವ್‌ನಂಗವಾಗಿ ವಾಹನ ತಪಾಸಣೆ ವೇಳೆ ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್‌ನಿಂದ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 7.03 ಲಕ್ಷ ರೂ.ವನ್ನು ವಶಪಡಿಸಲಾಗಿದೆ. ಮಂಜೇಶ್ವರ ಎಕ್ಸೈಸ್ ಚೆಕ್‌ಪೋಸ್ಟ್‌ನ ಅಬಕಾರಿ ಅಧಿಕಾರಿಗಳು ವಾಹನ ತಪಾಸಣೆ ನಡೆಸಿದ್ದಾರೆ.  ಕೋಟಯಂ ಜಿಲ್ಲೆಯ ಪಾಲ ತಾಲೂಕಿನ ಈರಾಟ್ ಪೇಟೆ ವಿಲ್ಲೇಜ್‌ನ ಹಸನ್ ಕುಂಞಿ ಎಂಬವರ ಪುತ್ರ ತಾಹ ಎಂಬಾತನನ್ನು ಅಬಕಾರಿ ಸರ್ಕಲ್ ಇನ್ಸ್‌ಪೆಕ್ಟರ್ ಶಿಜಿಲ್ ಕುಮಾರ್ ಹಾಗೂ ತಂಡ ಕಸ್ಟಡಿಗೆ ತೆಗೆದಿದೆ. ತಂಡದಲ್ಲಿ ಇನ್ಸ್‌ಪೆಕ್ಟರ್ ಜಿನು …

ಅನಧಿಕೃತ ಪ್ರಚಾರ ಬ್ಯಾನರ್ ವಶಪಡಿಸಿ ಮುದ್ರಣ ಸಂಸ್ಥೆಗಳಿಗೆ ದಂಡ

ಕಾಸರಗೋಡು: ತ್ರಿಸ್ತರ ಚುನಾವಣೆಗೆ ಸಂಬಂಧಿಸಿ ವಿವಿಧ ಮುದ್ರಣ ಸಂಸ್ಥೆಗಳಲ್ಲಿ ಜಿಲ್ಲಾ ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್ ನಡೆಸಿದ ತಪಾಸಣೆಯಲ್ಲಿ ಪ್ರಿಂಟಿಂಗ್ ಮೆಟೀರಿಯಲ್‌ಗಳಲ್ಲಿ ಸರಕಾರ ನಿರ್ದೇಶಿಸಿದಂತಹ ಮೊಹರು ಹಾಕದ ಹಿನ್ನೆಲೆಯಲ್ಲಿ ಮುದ್ರಣ ಸಂಸ್ಥೆಯ ಮಾಲಕರಿಗೆ ದಂಡ ಹೇರಲಾಯಿತು. ಜಿಲ್ಲೆಯ ಎರಡು ಮುದ್ರಣ ಸಂಸ್ಥೆಗಳಿಂದ ಪ್ರಿಂಟ್ ಮಾಡಿದ ಬ್ಯಾನರ್‌ಗಳಲ್ಲಿ ಸಂಸ್ಥೆಯ ಹೆಸರು, ವಿಳಾಸ ಮುದ್ರಿಸದಿರುವುದನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ 1೦,೦೦೦ ರೂ.ನಂತೆ ದಂಡ ವಿಧಿಸಲಾಯಿತು. ಮುದ್ರಣ ಸಂಸ್ಥೆಗಳ ವಿಳಾಸ ಇಲ್ಲದೆ ನಿಷೇಧಿತ ಉತ್ಪನ್ನಗಳಲ್ಲಿ ಬೋರ್ಡ್‌ಗಳನ್ನು ಮುದ್ರಿಸಿ ಸ್ಥಾಪಿಸಿದ ಅಭ್ಯರ್ಥಿಗಳ ವಿರುದ್ಧವೂ ಕಠಿಣ ಕ್ರಮ ಉಂಟಾಗಲಿದೆ …

‘ಲೋಕ್‌ಭವನ್’ ಆಗಿ ಬದಲಾದ ಕೇರಳದ ‘ರಾಜ್‌ಭವನ್’

ತಿರುವನಂತಪುರ: ತಿರುವನಂ ತಪುರದಲ್ಲಿರುವ ಕೇರಳ ‘ರಾಜ್ ಭವನ್’ನ ಹೆಸರನ್ನು ‘ಲೋಕ್‌ಭವನ್’ ಆಗಿ ಬದಲಾಯಿಸಲಾಗಿದೆ.  ಇದರ ಜತೆಗೆ ಭಾರತದ ಹಲವು ರಾಜ್ಯಗಳ ರಾಜ್‌ಭವನಗಳ ಹೆಸರುಗಳು ಕೂಡಾ ಲೋಕ್‌ಭವನ್ ಆಗಿ ನಿನ್ನೆಯಿಂದ ಮಾರ್ಪಟ್ಟಿದೆ. ಲೆಫ್ಟಿನೆಂಟ್ ಗವರ್ನರ್‌ಗಳ ಔದ್ಯೋಗಿಕ ವಸತಿ ಹಾಗೂ ಕಚೇ ರಿಯೂ ಆಗಿರುವ ರಾಜ್‌ಭವನ್ ಗಳ ಹೆಸರನ್ನು ಲೋಕ್ ಭವನ್ ಆಗಿ ಮರುನಾಮಕರಣಗೊಳಿಸುವಂತೆ ಕೇಂದ್ರ ಗೃಹಖಾತೆ ದೇಶದ ಎಲ್ಲಾ ರಾಜ್ಯಗಳಿಗೂ ನಿರ್ದೇಶ ನೀಡಿದ್ದು, ಅದರ ಪ್ರಕಾರ ಕೇರಳ ರಾಜ್‌ಭವನದ ಹೆಸರನ್ನು ಬದಲಿಸಿ ಲೋಕ್ ಭವನ್ ಎಂದು ಮರುನಾಮಕರಣಗೊಳಿಸಿದ ಫಲಕವನ್ನು …

ಬಿಜೆಪಿಗೆ ಸಹಾಯ ಒದಗಿಸುವ ನಿಲುವನ್ನು ಎಲ್‌ಡಿಎಫ್ ಹೊಂದಿದೆ-ರಮೇಶ್ ಚೆನ್ನಿತ್ತಲ

ಕಾಸರಗೋಡು:  ಬಿಜೆಪಿಗೆ ಸಹಾಯವೊದಗಿಸುವ ನಿಲುವನ್ನು ಎಲ್‌ಡಿಎಫ್ ಹೊಂದಿದೆಯೆಂದು ಕಾಂಗ್ರೆಸ್‌ನ ಹಿರಿಯ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ಇಂದು ಬೆಳಿಗ್ಗೆ ಕಾಸರಗೋಡು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯುಡಿಎಫ್‌ಗೆ ಶೇ. 40ರಷ್ಟು ಮತಗಳು ಲಭಿಸಿದ್ದವು. ಎಡರಂಗಕ್ಕೆ ಶೇ. 45ರಷ್ಟು ಮತ ಲಭಿಸಿದರೆ ಬಿಜೆಪಿಗೆ ಶೇ. 14ರಷ್ಟು ಮತಗಳು ಲಭಿಸಿತ್ತು. ಆದರೆ ನಂತರ ನಡೆದ ಚುನಾವಣೆಗಳಲ್ಲಿ ಬಿಜೆಪಿಗೆ ಲಭಿಸಿದ  ಮತಗಳ ಶೇಕಡಾವಾರು ೧೦ಕ್ಕೆ ಕುಸಿದಿದೆ. ಅಂದರೆ ಕಳೆದ ವಿಧಾನಸ ಭಾ ಚುನಾವಣೆಯಲ್ಲಿ ಬಿಜೆಪಿಯ …

ಬಿಎಂಎಸ್ ಕಾರ್ಯಕರ್ತ ಬಿ.ಟಿ.ವಿಜಯನ್ ಕೊಲೆ ಪ್ರಕರಣ: 25 ವರ್ಷಗಳ ಬಳಿಕ ಸೆರೆಗೀಡಾದ ಆರೋಪಿಗೆ ರಿಮಾಂಡ್

ಕಾಸರಗೋಡು: 15 ವರ್ಷಗಳ ಹಿಂದೆ ಕಾಸರಗೋಡಿನ ಬಿಎಂಎಸ್ ಕಾರ್ಯಕರ್ತನನ್ನು ಇರಿದು ಕೊಲೆ ಗೈದ ಪ್ರಕರಣದಲ್ಲಿ ಸೆರೆಗೀಡಾದ ಆರೋಪಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕಾಸರಗೋಡು ಮೀಪು ಗುರಿಯ ಬಿ.ಟಿ. ವಿಜಯನ್ ಎಂಬ ವರನ್ನು ಕೊಲೆಗೈದ ಪ್ರಕರಣದಲ್ಲಿ ಸೆರೆಗೀಡಾದ ಇಕ್ಕು ಯಾನೆ ಅರಿಕ್ಕಾಡಿ ಬನ್ನಂಗುಳದ ಮೊಹಮ್ಮದ್ ಇಕ್ಬಾಲ್ ಎಂಬಾತನಿಗೆ ರಿಮಾಂಡ್ ವಿಧಿಸಲಾಗಿದೆ. ೨೫ ವರ್ಷಗಳ ಹಿಂದೆ ಬಿ.ಟಿ. ವಿಜಯನ್‌ರನ್ನು ಕೊಲೆಗೈದ ಸಂಬಂಧ ಕುಂಬಳೆ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ಮೊಹಮ್ಮದ್ ಇಕ್ಬಾಲ್  ಆರೋಪಿ ಯಾಗಿದ್ದಾನೆ. ಆರೋಪಿಯಾಗುವು ದರೊಂದಿಗೆ ಈತ ವಿದೇಶಕ್ಕೆ ಪರಾರಿ …

ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ವ್ಯಕ್ತಿ ದಾರುಣ ಮೃತ್ಯು

ಕುಂಬಳೆ: ಶಿರಿಯದಲ್ಲಿ ಟಿಪ್ಪರ್ ಲಾರಿ ಢಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಶಿರಿಯ ಚಾಕಂಡಡಿಯ ಅಕ್ಕರೆ ಮುಹಮ್ಮದ್ (74) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಳೆದ ಶನಿವಾರ ಮಧ್ಯಾಹ್ನ 12.30 ರ ವೇಳೆ ಮನೆ ಸಮೀಪದಲ್ಲಿ ಅಪಘಾತವುಂ ಟಾಗಿತ್ತು. ಪುತ್ರ ಅಬ್ದುಲ್ ಅಸೀಸ್‌ಗೆ ಹೊಸತಾಗಿ ನಿರ್ಮಿಸುವ ಮನೆ ನೋಡಲು ಮುಹಮ್ಮದ್ ತೆರಳುತ್ತಿದ್ದರು. ಇದೇ ಹಿತ್ತಿಲಿನಲ್ಲಿ ಮಣ್ಣು ಇಳಿಸಲು ಬಂದ ಟಿಪ್ಪರ್ ಲಾರಿ ಮರಳಿ ಹೋಗುತ್ತಿ ದ್ದಾಗ ಮುಹಮ್ಮದ್‌ರಿಗೆ ಢಿಕ್ಕಿ ಹೊಡೆದಿತ್ತು. ಬಳಿಕ ಆ ಲಾರಿ …