ಬೀಗ ಜಡಿದ ಮನೆಯಿಂದ ಐದೂವರೆ ಪವನ್ ಚಿನ್ನಾಭರಣ, 40 ಸಾವಿರ ರೂ. ಕಳವು: ತನಿಖೆ ಆರಂಭ

ಹೊಸದುರ್ಗ: ಬೀಗ ಜಡಿದ ಮನೆಗೆ ನುಗ್ಗಿದ ಕಳ್ಳರು ಐದೂವರೆ ಪವನ್ ಚಿನ್ನಾಭರಣ ಹಾಗೂ 4೦,೦೦೦ ರೂಪಾಯಿಗಳನ್ನು ದೋಚಿದ ಘಟನೆಗೆ ಸಂಬಂಧಿಸಿ ನೀಲೇಶ್ವರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.   ಕರಿಂದಳ ಕಾಲಿಚ್ಚಾಮರ ಮೀರ್ಕಾನಂತಟ್ಟ್‌ನ ಕೃಷಿಕ ಇರಟ್ಟ ಮುಂಡಕ್ಕಲ್ ಜೋರ್ಜ್ ಸೆಬಾಸ್ಟಿಯನ್ ಎಂಬವರ ಮನೆಯಿಂದ ನಗ-ನಗದು ಕಳವಿಗೀಡಾಗಿದೆ.  ಸೋಮವಾರ ಸಂಜೆ ೪ರಿಂದ ಮಂಗಳವಾರ ಬೆಳಿಗ್ಗೆ ೬.೩೦ರ ಮಧ್ಯೆ ಕಳವು ನಡೆದಿರು ವುದಾಗಿ ಸಂಶಯಿಸಲಾಗುತ್ತಿದೆ. ಮನೆಯವರು ಬಾಗಿಲು ಮುಚ್ಚಿ ಮಗಳ ಚಿಕಿತ್ಸೆಗಾಗಿ ಆಲುವಾದ ಆಸ್ಪತ್ರೆಗೆ ತೆರಳಿದ್ದರು. ಮಂಗಳವಾರ ಬೆಳಿಗ್ಗೆ  ಮನೆಯ ಬಾಗಿಲು ತೆರೆದಿಟ್ಟಿರುವುದನ್ನು …

ಐಕ್ಯರಂಗದ ಇತಿಹಾಸ ಜಯ ಯಾರದ್ದೇ ಸಾಧನೆಯಿಂದ ಲಭಿಸಿದುದಲ್ಲ- ಸುಕುಮಾರನ್ ನಾಯರ್

ಕೋಟ್ಟಯಂ: ಕೇರಳದಲ್ಲಿ ಐಕ್ಯರಂಗಕ್ಕೆ ಲಭಿಸಿದ ಇತಿಹಾಸ ಜಯ ಕೆಲವರ ಸಾಧನೆಯಿಂದ ಲಭಿಸಿದುದಲ್ಲವೆಂದು ಎನ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಜಿ. ಸುಕುಮಾರನ್ ನಾಯರ್ ನುಡಿದರು. ಪಿಣರಾಯಿ ವಿಜಯನ್‌ರ ಆಡಳಿತದಲ್ಲಿ ಜನರು ನಿರಾಶೆಹೊಂದಿ ಬದಲಾವಣೆಗೆ ಬೇಕಾಗಿ ಮತದಾನ ಮಾಡಿದ ಕಾರಣ ಇದು ಸಂಭವಿಸಿದೆ ಎಂದು ಅವರು ನುಡಿದರು. ಜನರಿಗೆ ಸರಕಾರದೊಂದಿಗಿರುವ ಪ್ರತಿಭಟನೆ ಐಕ್ಯರಂಗಕ್ಕೆ ಅನುಕೂಲಕರವಾಗಿ ಪ್ರತಿಫಲಿಸಿತು ಎಂದು ಅವರು ಎನ್‌ಎಸ್‌ಎಸ್ ಕೇಂದ್ರ ಕಚೇರಿ ಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದರು. ಯುಡಿಎಫ್ ಯಾರನ್ನೇ ಮುಖ್ಯಮಂತ್ರಿಯನ್ನಾಗಿ ಮಾಡಿದರೂ ಎನ್‌ಎಸ್‌ಎಸ್‌ಗೆ ತೊಂದರೆಯಿಲ್ಲ ಎಂದು ಅವರು ನುಡಿದರು. …

ಬೀದಿನಾಯಿಗಳ ಕಾಟ: ಉಪ್ಪಳ, ಹೊಸಂಗಡಿ ಪ್ರದೇಶದಲ್ಲಿ ಸಂಚಾರಕ್ಕೆ ಆತಂಕ

ಉಪ್ಪಳ: ವಿವಿಧ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾಟ ವ್ಯಾಪಕ ಗೊಳ್ಳುತ್ತಿರುವುದು ಸ್ಥಳೀಯರಲ್ಲಿ ಆತಂಕವನ್ನುoಟುಮಾಡಿದೆ. ಮಂಗಲ್ಪಾಡಿ, ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಸವಾರಿ ನಡೆಸುತ್ತಿರುವ ಬೀದಿ ನಾಯಿಗಳ ಹಿಂಡು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹೊಸಂಗಡಿ, ಉಪ್ಪಳ ಪೇಟೆ ಸಹಿತ ಒಳ ಪ್ರದೇಶದಲ್ಲಿ ಬೀದಿ ನಾಯಿಗಳ ಕಾಟ ವ್ಯಾಪಕ ಗೊಂಡಿರುವುದಾಗಿ ದೂರಲಾಗಿದೆ.ಪ್ರತಾಪನಗರದ ಶಿವಶಕ್ತಿ ಮೈದಾನ ಹಾಗೂ ಪರಿಸರ ಪ್ರದೇಶದಲ್ಲಿ ರಾತ್ರಿ ಹಗಲೆನ್ನದೆ 10ರಷ್ಟು ನಾಯಿಗಳು ನಿರಂತರವಾಗಿ ಈ ಪರಿಸರದ ಗಣೇಶ ಮಂದಿರ, ಗಾಯತ್ರಿ ಮಂದಿರ, ಗುಳಿಗ ಬನ ಪರಿಸರದಲ್ಲಿ …

ಅಲ್ಲಲ್ಲಿ ಗುಡುಗು ಸಹಿತ ಮಿಂಚು: ಮೇ 10ರವರೆಗೆ: ಜಾಗ್ರತೆ ಪಾಲಿಸಲು ಕರೆ

ಕಾಸರಗೋಡು: ರಾಜ್ಯದ ಕೆಲವು ಕಡೆಗಳಲ್ಲಿ ಮೇ 10ರವರೆಗೆ ಮಿಂಚು ಸಹಿತದ ಮಳೆ ಹಾಗೂ ಗಂಟೆಗೆ 4೦ರಿಂದ 5೦ ಕಿಲೋ ಮೀಟರ್ ವೇಗದಲ್ಲಿ ಗಾಳಿಗೂ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಜನರು ಜಾಗ್ರತೆ ವಹಿಸಲು ಕರೆ ನೀಡಲಾಗಿದೆ. ಮಿಂಚು ಅಪಾಯಕರವಾಗಿದೆ. ಮನುಷ್ಯರಿಗೆ ಹಾಗೂ ಮೃಗಗಳಿಗೆ ಜೀವ ಹಾಗೂ ವಿದ್ಯುತ್ ವ್ಯವಸ್ಥೆಗಳನ್ನು ಹಾನಿಗೊಳಿಸಲಿರುವ ಸಾಧ್ಯತೆಯು ಇದ್ದು ನಾಶನಷ್ಟ ಸಂಭವಿಸಬಹುದಾಗಿದೆ. ಆದ್ದರಿಂದ ಸಾರ್ವಜನಿಕರು ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ತೀವ್ರ ಗಾಳಿ ಹಾಗೂ ಮಿಂಚಿಗೆ ಸಾಧ್ಯತೆ ಇರುವ …

ಸುಲೋಚನ  ನಿಧನ

ಪಾವೂರು: ಮುಡಿಮಾರು ಕಾಂಜರ ಮನೆತನದ ದಿ| ಶೇಷಪ್ಪ ಪೂಜಾರಿಯವರ ಪತ್ನಿ ಸುಲೋಚನ (62) ನಿಧನ ಹೊಂದಿದರು. ಮೃತರು ಮಕ್ಕಳಾದ ಹರೀಶ್, ಬಬಿತ, ಅಮಿತ, ಅಳಿಯಂದಿರಾದ ದಿನೇಶ್ ಕೋಡಿಕಲ್, ದಿನೇಶ್ ಕಾವೂರು, ಸಹೋದರ ಸಹೋದರಿಯರು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ನಿಧನಕ್ಕೆ ಬ್ರಹ್ಮಶ್ರೀ ನಾರಾಯಣಗುರು ಯುವ ವೇದಿಕೆ ಜಿಲ್ಲಾ ಸಮಿತಿ ಅಧ್ಯಕ್ಷ ಕೃಷ್ಣ ಶಿವಕೃಪ, ಮುಡಿಮಾರು ಶ್ರೀ ಮಲರಾಯ ದೈವಸ್ಥಾನದ ಅರ್ಚಕ ಚಂದ್ರಹಾಸ ಪೂಜಾರಿ, ಬಿಜೆಪಿ ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ ಯತಿರಾಜ್ ಶೆಟ್ಟಿ, ವರ್ಕಾಡಿ ಪಂ. ಸದಸ್ಯ …

ಕಿಳಿಂಗಾರು ಸಾಯಿರಾಂ ಭಟ್ ಕುಟುಂಬದಿಂದ ಧನಸಹಾಯ ವಿತರಣೆ

ಬದಿಯಡ್ಕ: ಕಿಳಿಂಗಾರು ದಿ| ಸಾಯಿರಾಂ ಭಟ್ ಕುಟುಂಬದ ವತಿಯಿಂದ ಬಡ ಜನತೆಗೆ ನೆರವು ಹಸ್ತಾಂತರ ನಡೆಯಿತು. ವೇದಮೂರ್ತಿ ಮಹಾಲಿಂಗೇಶ್ವರ ಉಪಾಧ್ಯಾಯ ಮಣಿಮುಂಡ, ವೇದಮೂರ್ತಿ ಗೋಪಾಲಕೃಷ್ಣ ಭಟ್ ಕಿಳಿಂಗಾರು ಸಹಾಯ ವಿತರಿಸಿದರು. ಸಾಯಿರಾಂ ಕೃಷ್ಣ ಭಟ್ ಪ್ರಾಸ್ತಾವಿಕ ಮಾತನಾಡಿದರು. ರಮೇಶ್ ಬೇರಿಕೆ ಅವರಿಗೆ  ಚಿಕಿತ್ಸಾ ಧನಸಹಾಯ, ಭವ್ಯ ಬಾಂಜತ್ತಡ್ಕ, ರಾಜೀವಿ ಬೇಳ, ನಾರಾಯಣ ಮಣಿಯಾಣಿ ಅವರಿಗೆ ಮನೆ ದುರಸ್ತಿಗೆ, ಯಶೋಧ ಬೇಳರಿಗೆ ಮದುವೆ ಧನಸಹಾಯ ನೀಡಲಾಯಿತು. ಪಂಚಾಯತ್ ಅಧ್ಯಕ್ಷ ಶಂಕರ ಡಿ, ಗೋಪಾಲಕೃಷ್ಣ ಭಟ್ ಅಡ್ಯನಡ್ಕ, ಸಂದೇಶ, ವೇಣುಗೋಪಾಲ …

ಹೊಸಂಗಡಿ ಆನೆಕಲ್ಲು ರಸ್ತೆಯ ಇಕ್ಕಡೆಗಳಲ್ಲಿ ಭೀತಿಯೊಡ್ಡುವ ಮರಗಳು: ವಾಹನ ಪ್ರಯಾಣಿಕರಲ್ಲಿ ಆತಂಕ

ಮಂಜೇಶ್ವರ: ಹೊಸಂಗಡಿಯಿAದ ಆನೆಕಲ್ಲು ಭಾಗಕ್ಕೆ ತೆರಳುವ ರಸ್ತೆಯಲ್ಲಿ ಅಪಾಯ ಭೀತಿಯುಂಟುಮಾಡುವ ಹಲವು ಮರಗಳಿವೆ. ಈ ರಸ್ತೆ ಉದ್ದಕ್ಕೂ ಇಕ್ಕೆಡೆಗಳಲ್ಲಿ ಬೃಹತ್ ಗಾತ್ರದ ಮರಗಳು ಆತಂಕವನ್ನುAಟುಮಾಡುತ್ತಿದೆ. ಮರದ ಬೃಹತ್ ರೆಂಬೆಗಳು ರಸ್ತೆಗೆ ಬಾಗಿಕೊಂಡು ವಾಹನಗಳಿಗೆ ಅಡಚಣೆ ಉಂಟಾಗುತ್ತಿರುವುದಾಗಿ ದೂರಲಾಗಿದೆ. ಕಳೆದ ವರ್ಷ ಸುರಿದ ಭಾರೀ ಮಳೆ ಗಾಳಿಗೆ ಇದೇ ರಸ್ತೆಯ ಅಲ್ಲಲ್ಲಿ ಮರಗಳು ಧರಾಶಾಯಿಗಿದ್ದು, ಕೆಲವು ವಾಹನಗಳಿಗೆ ಹಾನಿ ಹಾಗೂ ಇನ್ನೂ ಕೆಲವು ಸವಾರರು ಅಪಾಯದಿಂದ ಪಾರಾಗಿರುವುದಾಗಿ ಹೇಳಲಾಗುತ್ತಿದೆ. ಅಲ್ಲಲ್ಲಿ ವಿದ್ಯುತ್ ತಂತಿಗಳು ಹಾದುಹೋಗಿದ್ದು, ಮಳೆ, ಗಾಳಿಗೆ ಮರ …

ಒಂದೇ ಮನೆಯಿಂದ ಏಕಕಾಲದಲ್ಲಿ ಎಸ್‌ಐಗಳಾಗಿ ಉದ್ಯೋಗಕ್ಕೆ ನೇಮಕಗೊಂಡ ಸಹೋದರರು

ಕಾಸರಗೋಡು: ಒಂದೇ ಮನೆಯಿಂದ ಏಕ ಕಾಲದಲ್ಲಿ ಕೇರಳ ಪೊಲೀಸ್ ಸೇನೆಯಲ್ಲಿ ಎಸ್‌ಐಗಳಾಗಿ ತರಬೇತಿ  ಪೂರ್ತಿಗೊಳಿಸಿ ಸಹೋದ ರರು ಗಮನ ಸೆಳೆದಿದ್ದಾರೆ. ಚುನಾವಣಾ ಕರ್ತವ್ಯ ಮುಗಿಯುವುದರೊಂದಿಗೆ ಈ ಇಬ್ಬರು ಸೇವೆಗೆ ಸೇರ್ಪಡೆಗೊಳ್ಳ ಲಿದ್ದಾರೆ. ಮಡಿಕೈ ಏಚ್ಚಿಕ್ಕಾನಂ ಅಂಚೆ ಕಚೇರಿಯ ಪೋಸ್ಟ್ ಮಾಸ್ತರ್ ವಿ. ತಂಬಾನ್‌ರ ಮಕ್ಕಳಾದ ಮಡಿಕೈ ಪೂತಕ್ಕಾಲ್‌ನ  ಇಲ್ಲತ್ತ್ ವಳಪ್ಪಿಲ್ ಟಿ.ಸಿ. ಅಕ್ಷಯ್, ಟಿ.ಸಿ. ಅಜಯ್ ಎಂಬಿವರಿಗೆ ಈ ಅಪೂರ್ವ ಭಾಗ್ಯ ಲಭಿಸಿದೆ. ಎಸ್‌ಐ ನೇಮಕಾತಿ ಲಭಿಸಿದ ಈ ಇಬ್ಬರು 2025 ಎಪ್ರಿಲ್ 3ರಂದು ತೃಶೂರು ಪೊಲೀಸ್ …

ರಾಜ್ಯದಲ್ಲಿ ಹೋಟೆಲ್, ಬೇಕರಿ ಬಂದ್ ಪೂರ್ಣ

ತಿರುವನಂತಪುರ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಏರಿಕೆಯನ್ನು  ಪ್ರತಿಭಟಿಸಿ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿ ಯೇಶನ್ ನೀಡಿರುವ ಆಹ್ವಾನದಂತೆ ರಾಜ್ಯದಲ್ಲಿ ಇಂದು ಹೋಟೆಲ್, ರೆಸ್ಟೋರೆಂಟ್‌ಗಳು, ಬೇಕರಿಗಳು ಮತ್ತು ಕ್ಯಾಂಟೀನ್‌ಗಳನ್ನು ಮುಚ್ಚುಗಡೆಗೊಳಿಸಿ ಮುಷ್ಕರ ನಡೆಸಲಾಗುತ್ತಿದೆ.  ಇಂದು ಬೆಳಿಗ್ಗೆ ಆರಂಭಗೊಂಡಿರುವ ಮುಷ್ಕರ ದಿಂದ ರಾಜ್ಯದ  ಹೋಟೆಲ್, ರೆಸ್ಟೋ ರಂಟ್ ಮತ್ತು ಬೇಕರಿ ವಲಯಗಳ ಎಲ್ಲಾ ವ್ಯವಹಾರಗಳು ಸ್ತಬ್ದಗೊಂಡಿದೆ. ಆನ್‌ಲೈನ್ ಮೂಲಕದ ಆಹಾರ ವಿತರಣೆಯೂ  ಮೊಟಕುಗೊಂಡಿದೆ. ಇದರ ಪರಿಣಾಮ ಜನರು ಆಹಾರಕ್ಕಾಗಿ ತೀವ್ರ ಸಂಕಷ್ಟ ಎದುರಿಸಬೇಕಾಗಿ ಬಂದಿದೆ.  ಇಂದಿನ ಮುಷ್ಕರಕ್ಕೆ ಕೇರಳ …

ಕೆ. ಸುರೇಂದ್ರನ್‌ರ ಪ್ರಚಾರ ಬೋರ್ಡ್ ಪಟಾಕಿ ಸಿಡಿಸಿ ನಾಶಗೊಳಿಸುವ ದೃಶ್ಯ: ಗಲಭೆ ಸೃಷ್ಟಿಗೆ ಯತ್ನ ಆರೋಪದಂತೆ ಕೇಸು ದಾಖಲು

ಕುಂಬಳೆ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಕೆ. ಸುರೇಂದ್ರನ್‌ರ ಚುನಾವಣಾ ಪ್ರಚಾರ ಬೋರ್ಡನ್ನು ಪಟಾಕಿ ಸಿಡಿಸಿ ನಾಶಗೊಳಿಸಿ ಬಳಿಕ ಆ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿದ ಆರೋಪದಂತೆ ಕುಂಬಳೆ ಪೊಲೀಸರು ಸ್ವಯಂ ಕೇಸು ದಾಖಲಿಸಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನ ‘ವಲಿಯೇಟನ್’ ಎಂಬ ಖಾತೆದಾರನ ವಿರುದ್ಧ ಕುಂಬಳೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಚುನಾವಣಾ ಪ್ರಚಾರ ಬೋರ್ಡ್‌ನಲ್ಲಿ ವ್ಯಕ್ತಿ ಹತ್ಯೆ ನಡೆಸುವ ರೀತಿಯ ವಾಕ್ಯಗಳನ್ನು ಬರೆದ ಬಳಿಕ ಸೋಮವಾರ ರಾತ್ರಿ 1 ಗಂಟೆ ಹಾಗೂ ಮಂಗಳವಾರ ಸಂಜೆ 6 ಗಂಟೆ …