ಕಿಫ್‌ಬಿ ಮಸಾಲೆ ಬಾಂಡ್ ವ್ಯವಹಾರ: ಮುಖ್ಯಮಂತ್ರಿ, ಮಾಜಿ ಹಣಕಾಸು ಸಚಿವರಿಗೆ ಇ.ಡಿಯಿಂದ ನೋಟೀಸು 

ತಿರುವನಂತಪುರ: ಕೇರಳ ಸರಕಾರದ ಹಣಕಾಸು ಇಲಾಖೆಯ ನಿಯಂತ್ರಣದ ಲ್ಲಿರುವ  ಕಿಫ್‌ಬಿ  ಕೇರಳ ಇನ್‌ಫ್ರಾ ಸ್ಟಕ್ಚರ್ (ಇನ್‌ವೆಸ್ಟ್‌ಮೆಂಟ್ ಬೋ ರ್ಡ್-   ಕೇರಳ ಮೂಲ  ಸೌಕರ್ಯ ಹೂಡಿಕೆ ಮಂಡಳಿ)ಯ ಮಸಾಲೆ ಬಾಂಡ್  ವ್ಯವಹಾರಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್  ಮತ್ತು ಅವರ ನೇತೃತ್ವದ ಒಂದನೇ ಸರಕಾರದ ಅವಧಿಯಲ್ಲಿ ರಾಜ್ಯದ ಹಣಕಾಸು ಸಚಿವರಾಗಿದ್ದ ಥೋಮಸ್ ಐಸಾಕ್, ಕಿಫ್‌ಬಿಯ ಸಿಇಒ ಕೆ.ಎಂ. ಎಬ್ರಹಾಂರಿಗೆ ಎನ್‌ಫೋರ್ಸ್‌ಮೆಂಟ್ ಡೈರೆಕ್ಟರೇಟ್ (ಇ.ಡಿ ಜ್ಯಾರಿ ನಿರ್ದೇಶನಾ ಲಯ) ನೋಟೀಸು ಜ್ಯಾರಿಗೊಳಿಸಿದೆ. 2016ರಲ್ಲಿ ಶೇ. 9.72ರಷ್ಟು ಬಡ್ಡಿದರದಲ್ಲಿ ಲಂಡನ್‌ನ ಸ್ಟೋಕ್ …

ಶಬರಿಮಲೆ ದರ್ಶನಕ್ಕೆ ತೆರಳಿದ ಅಯ್ಯಪ್ಪ ಭಕ್ತ ಹೃದಯಾಘಾತದಿಂದ ಮೃತ್ಯು

ಕಾಸರಗೋಡು: ಶಬರಿಮಲೆ ದರ್ಶನಕ್ಕೆ ತೆರಳಿದ ಅಯ್ಯಪ್ಪ ಭಕ್ತ ಹೃದಯಾಘಾತದಿಂದ ಮೃತಪಟ್ಟರು. ಪೆರಿಯಾಟಡ್ಕ ದೇವನ್ ಪೊಡಿಚ್ಚಪ್ಪಾರ ಕರಿಂಬಾಲಕ್ಕಾಲ್ ಹೌಸ್‌ನ ಎಂ. ಬಾಲಕೃಷ್ಣನ್ (63) ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ 4 ಗಂಟೆಗೆ ಪಂಪಾದಿಂದ ಶಬರಿಮಲೆಗಿರುವ ದಾರಿಯಲ್ಲಿ ನೀಲಿ ಮಲೆ ಏರುತ್ತಿದ್ದಂತೆ ಕುಸಿದು ಇವರು ಬಿದ್ದಿದ್ದಾರೆ. ಕೂಡಲೇ ನೀಲಿಮಲೆ ಕಾರ್ಡಿಯೋಲಜಿ ಸೆಂಟರ್‌ಗೆ ತಲುಪಿ ಸಿದರೂ ಜೀವ ರಕ್ಷಿಸಲಾಗಲಿಲ್ಲ. ಬಾಲ ಕೃಷ್ಣನ್ ಪತ್ನಿ ಕೆ.ವಿ. ಪ್ರತಿಭಾ, ಕಿರಿಯ ಪುತ್ರ ಗೋಪ ಕುಮಾರ್ ಎಂಬಿವ ರೊಂದಿಗೆ ಶನಿವಾರ ಶಬರಿಮಲೆಗೆ ತೆರಳಿದ್ದರು. ಸೌದಿಯಲ್ಲಿ ಹಲವು …

ಪತ್ವಾಡಿಯ ಮನೆಯಿಂದ ಮಾದಕ ವಸ್ತು ವಶ ಪ್ರಕರಣ: ಗಲ್ಫ್‌ಗೆ ಪರಾರಿ ವೇಳೆ ಇನ್ನೋರ್ವ ಆರೋಪಿ ಸೆರೆ

ಮಂಜೇಶ್ವರ: ಉಪ್ಪಳ ಪತ್ವಾಡಿಯ ಮನೆಯೊಂದರಿಂದ ಭಾರೀ ಪ್ರಮಾಣದ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದ ಆರೋಪಿಯಾದ ಇನ್ನೋರ್ವ ನನ್ನು ಮಂಜೇಶ್ವರ ಪೊಲೀಸರು ಕರಿಪ್ಪೂರ್ ವಿಮಾನ ನಿಲ್ದಾಣ ದಿಂದ ಸೆರೆ ಹಿಡಿದಿದ್ದಾರೆ. ತೃಶೂರು ನೆಲ್ಲರಕಾಡ್ ನಿವಾಸಿ ಸರ್ಫುದ್ದೀನ್ (35) ಸೆರೆಗೀಡಾದ ಆರೋಪಿ ಯಾಗಿದ್ದಾನೆ. 2024 ಸೆಪ್ಟಂಬರ್ 20ರಂದು ಅಪರಾಹ್ನ 3.45ಕ್ಕೆ ಪತ್ವಾಡಿಯ ಮನೆಯೊಂದಕ್ಕೆ ದಾಳಿ ನಡೆಸಿದ ಪೊಲೀಸರು 3.407 ಕಿಲೋ ಎಂಡಿಎಂಎ ಮತ್ತು 642.65 ಗ್ರಾಂ ಗಾಂಜಾ ಸಹಿತ ವಿವಿಧ ರೀತಿಯ ಮಾದಕ ವಸ್ತುಗಳನ್ನು  ವಶಪಡಿಸಿ ಕೊಂಡಿ ದ್ದರು. ಈ ಸಂಬಂಧ …

ತಲಕ್ಲಾಯಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳವು: ಹಲವು ಬೆರಳಚ್ಚು ಪತ್ತೆ

ಕಾಸರಗೋಡು: ಪರವನಡ್ಕ ತಲಕ್ಲಾಯಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ಕಳವಿಗೆ ಸಂಬಂಧಿಸಿ ಬೆರಳಚ್ಚು ತಜ್ಞರು ನಡೆಸಿದ ಪರಿಶೀಲನೆಯಲ್ಲಿ ಅಲ್ಲಿಂದ ಹಲವು ಬೆರಳಚ್ಚುಗಳನ್ನು ಪತ್ತೆಹಚ್ಚಿದ್ದಾರೆ. ಶನಿವಾರದಂದು ರಾತ್ರಿ ಈ ದೇಗುಲದಲ್ಲಿ ಕಳವು ನಡೆದಿದೆ. ಅರ್ಚಕರು ನಿನ್ನೆ ಬೆಳಿಗ್ಗೆ ದೇವಸ್ಥಾನಕ್ಕೆ ಆಗಮಿಸಿದಾಗಲಷ್ಟೇ ಕಳವು ನಡೆದ ವಿಷಯ ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ಷೇತ್ರದ ಉಪಾಧ್ಯಕ್ಷ ಕೆ. ಆನಂದ್ ನೀಡಿದ ದೂರಿನಂತೆ ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವಿಷಯ ತಿಳಿದ ಊರವರೂ ಭಾರೀ ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿದರು. …

ಅಸೌಖ್ಯ: ಬಾಲಕ ದುಬಾಯಿಯಲ್ಲಿ  ನಿಧನ

ಕಾಸರಗೋಡು: ಅಸೌಖ್ಯ ನಿಮಿತ್ತ ಕಾಸರಗೋಡಿನ ಬಾಲಕ ದುಬಾಯಿಯಲ್ಲಿ ಚಿಕಿತ್ಸೆ ಮಧ್ಯೆ ಸಾವನ್ನಪ್ಪಿದ ಘಟನೆ ನಡೆದಿದೆ. ಕಾಸರಗೋಡು ಚೌಕಿಯ ಖಲಂದರ್ ಸಂಶೀರ್-ರೈಹಾನ ದಂಪತಿ ಪುತ್ರ ಫಸಾ ಸುಲ್ತಾನ್ (6) ಸಾವನ್ನಪ್ಪಿದ ಬಾಲಕ. ಅಸೌಖ್ಯ ನಿಮಿತ್ತ ಈತನನ್ನು ದುಬಾಯಿಯ ಖಿಸೈಸಿ  ಆಸ್ಪತ್ರೆಯಲ್ಲಿ ದಾಖಲಿಸಿದ್ದು ಫಲಕಾರಿಯಾಗಲಿಲ್ಲ. ಮೃತ ಬಾಲಕ ಹೆತ್ತವರ ಹೊರತಾಗಿ ಸಹೋದರ-ಸಹೋದರಿಯರಾದ ಫಾಸ್, ಫಾತಿಮ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾನೆ. ಮೃತದೇಹವನ್ನು ದುಬಾಯಿಯಲ್ಲೇ ದಫನಗೈಯ್ಯಲಾಯಿತು.

ಕುಂಬಳೆ ಪಂ. ಕೊಪಾಡಿ ಕಡಪ್ಪುರ ವಾರ್ಡ್‌ನಲ್ಲಿ ಅಭಿವೃದ್ಧಿಯ ಭರವಸೆಯೊಂದಿಗೆ ಮತ ಯಾಚಿಸಿ ಬಿಜೆಪಿ ಅಭ್ಯರ್ಥಿ ವಿಕ್ರಂ ಪೈ ಮತದಾರರ ಬಳಿಗೆ

ಕುಂಬಳೆ: ಕುಂಬಳೆ ಪಂಚಾಯತ್‌ನಲ್ಲಿ ಸ್ಥಳೀಯಾಡಳಿತ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ನಡೆಯುವ ಕಡಪ್ಪುರ ೧೭ನೇ ವಾರ್ಡ್‌ನಲ್ಲಿ ಪ್ರಚಾರ ತಾರಕಕ್ಕೇರಿದೆ. ಎಲ್‌ಡಿಎಫ್, ಯುಡಿಎಫ್, ಬಿಜೆಪಿ ಇಲ್ಲಿ ಸ್ಪರ್ಧಿಸುತ್ತಿದೆ. ಎಡರಂಗದಿಂದ ಅಬ್ದುಲ್ ಸಲೀಂ, ಐಕ್ಯರಂಗದಿಂದ  ಹಮೀದ್ ಕೊಪಾಡಿ ಹಾಗೂ ಬಿಜೆಪಿಯಿಂದ  ಕುಂಬಳೆಯ ಪ್ರಮುಖ ಉದ್ಯಮಿ ವಿಕ್ರಂ ಪೈ ಸ್ಪರ್ಧಿಸುತ್ತಿದ್ದಾರೆ. ಪ್ರಾಮಾಣಿಕತೆಯುಳ್ಳ ಸಾಮಾಜಿಕ ಕಾರ್ಯಕರ್ತನೆಂದು ನಾಗರಿಕರು ಅಂಗೀಕರಿಸಿರುವ ವಿಕ್ರಂ ಪೈಯವರು  ಪ್ರಚಾರಕಣದಲ್ಲಿದ್ದು, ತಾನು ಇಲ್ಲಿ ಗೆಲುವು ಸಾಧಿಸಿದರೆ ಈ ನಾಡಿನ ಅಭಿವೃದ್ಧಿಗಾಗಿ ಪ್ರಯತ್ನಿಸುವುದಾಗಿ ಮತದಾರರಿಗೆ ಭರವಸೆ ನೀಡುತ್ತಿದ್ದಾರೆ. ಕೊಪಾಡಿ ಕಡಪ್ಪುರ ವಾರ್ಡ್‌ನ್ನು ಅಭಿವೃದ್ಧಿಗೊಳಿಸಲು …

ಪಕ್ಷ ವಿರೋಧಿ ಚಟುವಟಿಕೆ: ಕುಂಬಳೆಯಲ್ಲಿ 4ಮಂದಿ ಮುಸ್ಲಿಂ ಲೀಗ್‌ನ ಪ್ರಾಥಮಿಕ ಸದಸ್ಯತ್ವದಿಂದ ವಜಾ;  ಹೊಯ್ಗೆ ದಂಧೆ ವಿವಾದ ತೀವ್ರ

ಕುಂಬಳೆ: ಪಕ್ಷದಲ್ಲಿದ್ದುಕೊಂಡು ಪಕ್ಷಕ್ಕೆ ಮೋಸ ಮಾಡಿದ ಆರೋಪ ದಂತೆ ಕುಂಬಳೆ ಪಂಚಾಯತ್‌ನ ಪ್ರಮುಖ ಲೀಗ್ ಕಾರ್ಯಕರ್ತರನ್ನು ರಾಜ್ಯ ನಾಯಕತ್ವ ಪಕ್ಷದಿಂದ ಹೊರ ಹಾಕಿದೆ. ಯೂತ್‌ಲೀಗ್ ಮಾಜಿ ಕುಂಬಳೆ ಪಂಚಾಯತ್ ಸಮಿತಿ ಅಧ್ಯಕ್ಷ ಕೆ.ಎಂ. ಅಬ್ಬಾಸ್, ೧೦ನೇ ವಾರ್ಡ್‌ನಲ್ಲಿ ಕಾಂಗ್ರೆಸ್‌ನ ವಿರುದ್ಧ ಸ್ಪರ್ಧಿಸುವ ಸಬೂರ, ಈ ವಾರ್ಡ್‌ನ ಲೀಗ್ ಶಾಖಾ ಅಧ್ಯಕ್ಷ ಐ.ಸಿ. ಮುಹಮ್ಮದ್, ಶಾಖಾ ಕಾರ್ಯದರ್ಶಿ ಲತೀಫ್ ಎಂಬಿವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರ ಹಾಕಲಾಗಿದೆ. ಕುಂಬಳೆ ಪಂಚಾಯತ್‌ನಲ್ಲಿ ಪೋರ್ಟ್‌ನ ಅನುಮತಿಯೊಂದಿಗೆ ಪಂಚಾಯತ್ ನೇರವಾಗಿ ನಡೆಸಿದ ಕಡವಿನ …

ಹಿರಿಯ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತ ನಿಧನ

ಉಪ್ಪಳ: ಹಿರಿಯ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತ ಬಾಯಾರು ಸಜಂಕಿಲದ ವಿಷ್ಣು ಭಟ್ (75) ನಿನ್ನೆ ಮಧ್ಯಾಹ್ನ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ರಮಾವತಿ, ಪುತ್ರ ಕೃಷ್ಣ ಪ್ರಸನ್ನ, ಸೊಸೆ ಪೂಜಾ, ಸಹೋದರ ಸೂರ್ಯ ನಾರಾಯಣ ಭಟ್, ಸಹೋದರಿಯ ರಾದ ಶಶಿಪ್ರಭ, ಸರಸ್ವತಿ, ವಿಶಾಲಾಕ್ಷಿ, ಸೀತಾದೇವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಸಂಘ ಪರಿವಾರದ ನೇತಾರರು ಹಾಗೂ ಕಾರ್ಯಕರ್ತರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ಮೀನುಗಾರಿಕೆ ವೇಳೆ ದೋಣಿಯಿಂದ ಸಮುದ್ರಕ್ಕೆ ಬಿದ್ದು ಬೆಸ್ತ ನಾಪತ್ತೆ: ವ್ಯಾಪಕ ಶೋಧ

ಕಾಸರಗೋಡು: ಮೀನುಗಾರಿಕೆ ವೇಳೆ ದೋಣಿಯಿಂದ ಸಮುದ್ರಕ್ಕೆ ಬಿದ್ದು ಬೆಸ್ತ ನಾಪತ್ತೆಯಾದ ಘಟನೆ ನಡೆದಿದೆ. ಕೊಳತ್ತೂರು ತೊಟ್ಟಿ ನಿವಾಸಿ  ಕುಮಾರ್ ಎಂಬವರ  ಪುತ್ರ ರಾಮಕೃಷ್ಣನ್ (48) ನಾಪತ್ತೆಯಾದ ಬೆಸ್ತ. ನಿನ್ನೆ ಮುಂಜಾನೆ  ಚೆಂಬರಿಕ ಸಮುದ್ರ ದಡದಿಂದ ಸುಮಾರು ಏಳು ಕಿಲೋ ಮೀಟರ್ ನಷ್ಟು ದೂರದಲ್ಲಿ ಸಮುದ್ರದಲ್ಲಿ  ಈ ಘಟನೆ ನಡೆದಿದೆ. ರಾಮಕೃಷ್ಣನ್ ಮೇಲ್ಪರಂಬದ ರಾಜನ್, ಕೀಯೂರಿನ ಶಾಫಿ ಎಂಬವರೊಂದಿಗೆ ಶನಿವಾರ ಸಂಜೆ ಮೀನುಗಾರಿಕೆಗಾಗಿ ದೋಣಿಯಲ್ಲಿ  ಸಮುದ್ರಕ್ಕಿಳಿದಿದ್ದರು. ರಾತ್ರಿ ಮೀನುಗಾರಿಕೆ  ನಡೆಸಿ ಬಳಿಕ ನಿನ್ನೆ ಮುಂಜಾನೆ ಹಿಂತಿರುಗುತ್ತಿದ್ದ ವೇಳೆ ರಾಮಕೃಷ್ಣನ್ …

ಎಸ್‌ಐಆರ್: ಕೇರಳದ ಅರ್ಜಿ ಸುಪ್ರೀಂಕೋರ್ಟ್ ಪರಿಶೀಲನೆ ನಾಳೆ

ನವದೆಹಲಿ: ಕೇರಳದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕ್ರಮವನ್ನು ಮುಂದೂಡಬೇಕೆಂದು ಕೋರಿ ಕೇರಳ ಸರಕಾರ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ನಾಳೆ ಪರಿಶೀಲಿಸಲಿದೆ. ಇದೇ ಸಂದರ್ಭದಲ್ಲಿ ಕೇರಳದಲ್ಲಿ ನಡೆಯುತ್ತಿರುವ ಎಸ್‌ಐಆರ್ ಕ್ರಮದ ಸಮಯವನ್ನು ಇನ್ನೊಂದೆಡೆ ಕೇಂದ್ರ ಚುನಾವಣಾ ಆಯೋಗ ಡಿ. 4ರ ಬದಲಾಗಿ ಡಿ.11ರ ತನಕ ವಿಸ್ತರಿಸಿದೆ. ಇದರಂತೆ ಕರಡು ಮತದಾರ ಯಾದಿಯನ್ನು ಪ್ರಕಟಿಸುವ ಸಮಯವನ್ನು ಆಯೋಗ ಡಿ. 9ರ ಬದಲು ಡಿ. 16ಕ್ಕೆ ಮುಂದೂಡಿದೆ. ಇದಕ್ಕೆ ಹೊಂದಿಕೊಂಡು  …