ಎಕೆಎಂ ಅಶ್ರಫ್‌ಗೆ ಸಚಿವ ಸ್ಥಾನ ಸಾಧ್ಯತೆ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸತತ ಎgಡನೇ ಬಾರಿ ಗೆಲುವು ಸಾಧಿಸಿರುವ ಎಕೆಎಂ ಅಶ್ರಫ್‌ರಿಗೆ ಸಚಿವ ಸ್ಥಾನ ಲಭಿಸುವ ಸಾಧ್ಯತೆ ಇದೆ. ಈ ವಿಷಯ ಮುಸ್ಲಿಂ ಲೀಗ್‌ನ ರಾಜ್ಯ ಸಮಿತಿ ಸಕ್ರಿಯವಾಗಿ ಪರಿಗಣಿಸುತ್ತಿದೆಯೆಂಬ ಮಾಹಿತಿಯೂ ಲಭಿಸಿದೆ. ಒಂದನೇ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸಚಿವ ಸಂಪುಟದಲ್ಲಿ ಇ. ಚಂದ್ರಶೇಖರನ್ ಸಚಿವರಾದ ಬಳಿಕ ಕಳೆದ ಐದು ವರ್ಷದಲ್ಲಿ ಕಾಸರಗೋಡು  ಜಿಲ್ಲೆಗೆ ಯಾರಿಗೂ ಸಚಿವ ಸ್ಥಾನ ಲಭಿಸಿಲ್ಲ. ಅಂದು ಹೊಸದುರ್ಗ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿದ ಇ. ಚಂದ್ರಶೇಖರನ್ 2016-2021ರ …

ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಉಪ್ಪಳ: ಯುವಕನೋರ್ವ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಮೀಯಪದವು ಬಳಿಯ ಚಿಗುರುಪಾದೆ ನಿವಾಸಿ ಮೋಹನ್ ದಾಸ್‌ರ ಪುತ್ರ ರಂಜಿತ್ (40) ಮೃತ ಯುವಕನಾಗಿದ್ದಾರೆ. ಇವರು ಸೆಂಟ್ರಿಂಗ್ ಕಾರ್ಮಿಕನಾಗಿದ್ದರು. ನಿನ್ನೆ ಬೆಳಿಗ್ಗೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ರಂಜಿತ್ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ರಂಜಿತ್‌ರ ಪತ್ನಿ ಹಾಗೂ ಮಕ್ಕಳು ಸೋಮವಾರ ವಿಟ್ಲದಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಇದೇ ವೇಳೆ ತಂದೆ ಹಾಗೂ ತಾಯಿ ಮಂಗಳೂರಿನಲ್ಲಿ ಸಂಬಂಧಿಕ ರೋರ್ವರು ನಿಧನರಾದ …

ಮಂಜೇಶ್ವರದಲ್ಲಿ 6ರ ಹರೆಯದ ಬಾಲಕ ಸಮುದ್ರದಲ್ಲಿ ಮುಳುಗಿ ಮೃತ್ಯು

ಮಂಜೇಶ್ವರ: ಮಂಜೇಶ್ವರ ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ಆರರ ಹರೆಯದ ಬಾಲಕ ಕಡಲಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸಂಭವಿಸಿದೆ. ಕರ್ನಾಟಕ ನಿವಾಸಿಯಾದ ಫೈಸಾನ್ ಮೃತಪಟ್ಟ ಬಾಲಕ. ನಿನ್ನೆ ಸಂಜೆ 6 ಗಂಟೆಗೆ ಈ ಧಾರುಣ ಘಟನೆ ಸಂಭವಿಸಿದೆ. ಹೊಸಬೆಟ್ಟುವಿನ ಸಂಬಂಧಿಕರ ಮನೆಗೆ ಫೈಸಾನ್ ತಲುಪಿದ್ದನು.  ಇತರ ಮೂರು ಮಕ್ಕಳ ಜೊತೆ ಹೊಸಬೆಟ್ಟು ಸಮುದ್ರ ತೀರದಲ್ಲಿ ಆಟವಾಡುತ್ತಿದ್ದ ಮಧ್ಯೆ ದುರಂತ ಉಂಟಾಗಿದೆ. ಮೂರು ಮಕ್ಕಳನ್ನು ದಡಕ್ಕೆ ತಲುಪಿಸಿ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಫೈಸಾನ್‌ನ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮಂಜೇಶ್ವರ ಪೊಲೀಸರು ಸ್ಥಳಕ್ಕೆ …

ಶತಾಯುಷಿ ಕಮಲ ರೈ ನಿಧನ

ಬದಿಯಡ್ಕ: ಕೆಳಗಿನ ವಳಮಲೆ ನಿವಾಸಿ ದಿ| ಉಗ್ರಾಣಿ ಬಾಬು ರೈಯವರ ಪತ್ನಿ ಕಮಲ ರೈ (101) ನಿನ್ನೆ ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು ಮಕ್ಕಳಾದ ಚಂದ್ರಾವತಿ, ಜಯಕರ, ಸಾವಿತ್ರಿ, ಶಾರದ, ಅಳಿಯಂದಿರಾದ ಮಹಾಬಲ ರೈ (ನಾಯ್ಕಾಪು),  ಮಾಧವ ಶೆಟ್ಟಿ (ಬೆಂಗಳೂರು), ಪುಷ್ಪಾವತಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಮಗಳ ಮದುವೆ ಕಳೆದು ಮೂರನೇ ದಿನ ತಂದೆ ಹೃದಯಾಘಾತದಿಂದ ನಿಧನ

ಪೆರ್ಲ: ಮಗಳ ಮದುವೆ ಕಳೆದು ಮೂರನೇ ದಿನ ತಂದೆ ಹೃದಯಾಘಾತ ದಿಂದ ನಿಧನಹೊಂದಿದ ಘಟನೆ ನಡೆದಿದೆ. ಮೂಲತಃ ಮಣಿಯಂಪಾರೆ ಸರ್ವೆ ನಿವಾಸಿಯೂ ಪ್ರಸ್ತುತ ಉಕ್ಕಿನಡ್ಕ ಮಸೀದಿ ಬಳಿ ವಾಸಿಸುವಸಾದಿಕ್ ಸರ್ವೆ (55) ಎಂಬವರು ಮೃತಪಟ್ಟ ವ್ಯಕ್ತಿ.  ನಿನ್ನೆ ರಾತ್ರಿ ಊಟಮಾಡಿ ಮನೆಯವ ರೊಂದಿಗೆ ಮಾತನಾಡುತ್ತಾ ಕುಳಿತಿದ್ದಾಗ ಸಾದಿಕ್‌ರಿಗೆ ಎದೆನೋವು  ಅನುಭವ ಗೊಂಡಿತ್ತೆನ್ನಲಾಗಿದೆ.  ಕೂಡಲೇ ಅವರನ್ನು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.  ಈ ತಿಂಗಳ ೩ರಂದು ಪುತ್ರಿ ಡಾ| ಸರ್ಫುನ್ನಿಸಾರ ಮದುವೆ ನಡೆದಿತ್ತು. ಇದರ ಬೆನ್ನಲ್ಲೇ ತಂದೆ ನಿಧನಹೊಂದಿರುವುದು …

ತಾಯಿಯೊಂದಿಗೆ ನಡೆದು ಹೋಗುತ್ತಿದ್ದ ಮಗು ಬೈಕ್ ಢಿಕ್ಕಿ ಹೊಡೆದು ಮೃತ್ಯು

ಕೊಚ್ಚಿ: ತಾಯಿಯೊಂದಿಗೆ ನಡೆದು ಹೋಗುತ್ತಿದ್ದ ೪ರ ಹರೆಯದ ಮಗು ಇಲೆಕ್ಟ್ರಿಕ್ ಬೈಕ್ ಢಿಕ್ಕಿ ಹೊಡೆದು ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಮುಳಂಕಾಡ್-  ಪೊನ್ನಾರಿಮಂಗಲ ಪಡನ್ನ ಎಂಬಲ್ಲಿನ ಧನೀಶ್ ಎಂಬವರ ಪುತ್ರಿ ಮೇಧ ಧನೀಶ್ ಮೃತಪಟ್ಟ ಮಗುವಾಗಿದೆ. ತಾಯಿ ಮಿಥುನ ಹಾಗೂ ನೆರೆಮನೆಯ ನಿವಾಸಿಯಾದ ರೇಖಾ ಎಂಬಿವರೊಂದಿಗೆ  ಮಗು ನಡೆದು ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿ ಬಂದ ಇಲೆಕ್ಟ್ರಿಕ್ ಬೈಕ್ ಅವರಿಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಾಯಗೊಂಡ ಮೇಧ,  ಮಿಥುನ ಹಾಗೂ  ರೇಖಾರನ್ನು ಆಸ್ಪತ್ರೆಗೆ ತಲುಪಿಸಲಾಯಿತು. ತಲೆಗೆ ಗಂಭೀರ ಗಾಯಗೊಂಡ …

ಮಲತ್ಯಾಜ್ಯ ತಂದು ಹೊಳೆಗೆ: ಪೊಸೋಟು ಹೊಳೆಯ ನೀರು ಮಲಿನ; ಆರೋಗ್ಯ ಸಮಸ್ಯೆ ಭೀತಿ

ಮಂಜೇಶ್ವರ: ಪೊಸೋಟು ಹೊಳೆ ಕಸದ ತೊಟ್ಟಿಯಾಗಿ ಮಾರ್ಪಡುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ತೀವ್ರ ಆತಂಕ ಮೂಡಿಸಿದೆ. ಜನಸಂದಣಿ ಇಲ್ಲದ ಸಮಯ ನೋಡಿ ಸೆಪ್ಟಿಕ್ ಟ್ಯಾಂಕ್‌ಗಳಿAದ ಸಂಗ್ರಹಿಸಿದ ತ್ಯಾಜ್ಯವನ್ನು ಟ್ಯಾಂಕರ್‌ಗಳ ಮೂಲಕ ತಂದು ನೇರವಾಗಿ ಹೊಳೆಗೆ ಸುರಿಯಲಾಗುತ್ತಿದೆ ಎಂಬ ಗಂಭೀರ ದೂರುಗಳು ಕೇಳಿಬಂದಿವೆ.ಕೇವಲ ಮಲತ್ಯಾಜ್ಯ ಮಾತ್ರವಲ್ಲದೆ, ಕೋಳಿ ಮತ್ತು ದನದ ಮಾಂಸ ತ್ಯಾಜ್ಯಗಳನ್ನು ಕೂಡ ಇಲ್ಲಿ ಎಸೆಯಲಾಗುತ್ತಿದೆ. ಇದರಿಂದಾಗಿ ಇಡೀ ಪರಿಸರ ದುರ್ನಾತದಿಂದ ಕೂಡಿದ್ದು, ಈ ಭಾಗದ ಸುಮಾರು 60ಕ್ಕೂ ಹೆಚ್ಚು ಕುಟುಂಬಗಳು ಸಾಂಕ್ರಾಮಿಕ ರೋಗ ಭೀತಿಯನ್ನು ಎದುರಿಸುತ್ತಿದ್ದಾರೆ. …

ವಿದ್ಯುನ್ಮಾನ ಮತಯಂತ್ರಗಳಿಗೆ ಇನ್ನು ಕಲೆಕ್ಟ್ರೇಟ್‌ನ ಭದ್ರತಾ ಕೊಠಡಿಯಲ್ಲಿ ನಿದ್ದೆ

ಕಾಸರಗೋಡು: ವಿಧಾನಸಭಾ ಚುನಾವಣೆಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಮತದಾನಕ್ಕಾಗಿ ಉಪ ಯೋಗಿಸಿದ ವಿದ್ಯುನ್ಮಾನ ಮತಯಂತ್ರ ಗಳನ್ನು ಕಲೆಕ್ಟ್ರೇಟ್‌ನ ಭದ್ರತಾ ಕೊಠಡಿಗೆ ತಲುಪಿಸಲಾಗಿದೆ. ಮೇ 4ರಂದು ನಡೆದ ಮತ ಎಣಿಕೆಯ ಬಳಿಕ ವಿವಿಧ ಮತ ಎಣಿಕೆ ಕೇಂದ್ರಗಳಿಂದ ಪೊಲೀಸರ ಬಿಗು ಕಾವಲಿನೊಂದಿಗೆ ಕಲೆಕ್ಟ್ರೇಟ್‌ನ ಭದ್ರತಾ ಕೊಠಡಿಗೆ ಈ ಯಂತ್ರಗಳನ್ನು ತಲುಪಿಸ ಲಾಯಿತು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಇವಿಎಂಗಳು ಕಲೆಕ್ಟ್ರೇಟ್‌ನ ವೇರ್ ಹೌಸ್‌ನಲ್ಲಿ ಸ್ವೀಕರಿಸಿ ತೆಗೆದಿರಿಸಲಾ ಯಿತು. ಎಲ್ಲಾ ಮಂಡಲಗಳ ಮತಯಂ ತ್ರಗಳು ಸೇರಿ ಒಟ್ಟು 1126 ಬ್ಯಾಲೆಟ್ ಯೂನಿಟ್‌ಗಳು, 1136 …

ವಾಣಿಜ್ಯ ಅಡುಗೆ ಅನಿಲ ಬೆಲೆ ಹೆಚ್ಚಳ: ಕುಂಬಳೆಯಲ್ಲಿ ಕೆಎಚ್‌ಆರ್‌ಎಯಿಂದ ಪಂಜಿನ ಮೆರವಣಿಗೆ

ಕುಂಬಳೆ: ವಾಣಿಜ್ಯ ಅಗತ್ಯ ಗಳಿಗಾಗಿರುವ ಗ್ಯಾಸ್ ಸಿಲಿಂಡರ್‌ನ ಬೆಲೆ ಹೆಚ್ಚಿಸಿದ ಕೇಂದ್ರ ಸರಕಾರದ ನಿಲುವನ್ನು ಪ್ರತಿಭಟಿಸಿ ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ಕುಂಬಳೆ ಯೂನಿಟ್ ಘಟಕ ಕುಂಬಳೆಯಲ್ಲಿ ಪಂಜಿನ ಮೆರವಣಿಗೆ ನಡೆಸಿತು. ಈ ವೇಳೆ ಮಾತನಾಡಿದ ಕೆಎಚ್‌ಆರ್‌ಎ ಜಿಲ್ಲಾ ಕಾರ್ಯದರ್ಶಿ ಬಿಜು ಚುಳ್ಳಿಕ್ಕರ ಸಿಲಿಂಡರ್‌ನ ಅಪರಿಮಿತ ಬೆಲೆ ಹೆಚ್ಚಳದಿಂದ ಹೋಟೆಲ್ ಆಹಾರ ಪದಾರ್ಥಗಳಿಗೆ ಬೆಲೆ ಹೆಚ್ಚಿಸಬೇಕಾದ ಸನ್ನಿವೇಶವಿದೆ ಎಂದು ಕೇಂದ್ರ ಸರಕಾರದ ಈ ನಿಲುವನ್ನು ಪ್ರತಿಭಟಿಸಿ ಹೋಟೆಲ್‌ಗಳನ್ನು ಮುಚ್ಚುವಂತಹ ಪ್ರತಿಭಟನೆಗಳನ್ನು ನಡೆಸಲಾಗುವುದೆಂದು ತಿಳಿಸಿದರು. ಪಂಜಿನ ಮೆರವಣಿಗೆಯನ್ನು …

ಕಾರು ಸ್ಕೂಟರ್‌ಗೆ ಢಿಕ್ಕಿ: ಮೋಟಾರ್ ವಾಹನ ಇಲಾಖೆ ಅಧಿಕಾರಿ ಮೃತ್ಯು

ತಿರುವನಂತಪುರ: ಕಾರು ಸ್ಕೂಟರ್‌ಗೆ ಢಿಕ್ಕಿ ಹೊಡೆದು ಮೋಟಾರ್ ವಾಹನ ಇಲಾಖೆ ಅಧಿಕಾರಿ ಮೃತಪಟ್ಟರು. ಕಲ್ಲಿಯೂರ್ ಪೆರಿಂಙಮಲ ಸಾಫಲ್ಯ ನಿವಾಸಿ ಎಸ್. ಮಧು (42) ಮೃತಪಟ್ಟವರು. ವಳುದಕ್ಕಾಡ್ ಟ್ರಾನ್ಸ್‌ಪೋರ್ಟ್ ಕಮಿಷನರೇಟ್‌ನ ನೌಕರನಾಗಿದ್ದಾರೆ. ವಿಳಿಂಞ ಭಾಗದಿಂದ ಬಾಲರಾಮಪುರ ಭಾಗಕ್ಕೆ ತೆರಳುತ್ತಿದ್ದ ಕಾರು ಮುಂಭಾಗದಿಂದ ಬಂದ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಢಿಕ್ಕಿಯ ಆಘಾತಕ್ಕೆ ರಸ್ತೆಗೆ ಬಿದ್ದ ಮಧು ಅವರ ತಲೆಗೆ ಹಾಗೂ ಇತರ ಭಾಗಗಳಿಗೆ ಗಂಭೀರ ಗಾಯವುಂಟಾಗಿತ್ತು. ಕೂಡಲೇ ಆಂಬುಲೆನ್ಸ್‌ನಲ್ಲಿ ಕೊಂಡೊಯ್ದು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. …