ಉಮೇಶ್ ಕಾಮತ್ ಕಂಪೆನಿ ಮಾಲಕ ನಿಧನ
ಕಾಸರಗೋಡು: ಕಾಞಂಗಾಡ್‌ನ ಹಿರಿಯ ವ್ಯಾಪಾರಿ ಕೆ. ಉಮೇಶ್ ಕಾಮತ್ ಕಂಪೆನಿಯ ಮಾಲಕ ಮೇಲಾಂಗೋಟ್ ಎಸ್‌ಎಸ್ ಕಲಾ ಮಂದಿರ ಸಮೀಪ ನಿವಾಸಿ ಕೆ. ಉಮೇಶ್ ಕಾಮತ್ (78) ನಿಧನ ಹೊಂದಿದರು. ಕಾಞಂಗಾಡ್‌ನ ಮೊದಲ ಮಿಠಾಯಿ ನಿರ್ಮಾಣ ಕಂಪೆನಿಯಾದ ಬ್ರೂಕ್ ಕನ್ಫೆಕ್ಷನರಿ ಮಾಲಕನಾಗಿದ್ದರು. ಕಾಞಂಗಾಡ್ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಅಧ್ಯಕ್ಷ, ಹೊಸದುರ್ಗ ಲಕ್ಷ್ಮೀವೆಂಕಟೇ ಶ್ವರ ಕ್ಷೇತ್ರ ಮೆನೇಜಿಂಗ್ ಟ್ರಸ್ಟಿ, ಜಿಎಸ್‌ಬಿ ಗ್ರಾಮಸಭಾ ಅಧ್ಯಕ್ಷ, ಕಾಞಂಗಾಡ್ ಚಿನ್ಮಯ ಮಿಷನ್ ಅಧ್ಯಕ್ಷ ಸಹಿತ ವಿವಿಧ ರಂಗದಲ್ಲಿ ಕಾರ್ಯಾ ಚರಿಸಿದ್ದರು. ಇಂದು ಬೆಳಿಗ್ಗೆ …