ಕೊಳಚೆ ಹೊಂಡಕ್ಕೆ ಬಿದ್ದ ಗರ್ಭಿಣಿ ಹಸುವಿನ ಪ್ರಾಣ ರಕ್ಷಿಸಿದ ಅಗ್ನಿಶಾಮಕದಳ

ನೀರ್ಚಾಲು: ಹುಲ್ಲು ಮೇಯುತ್ತಿದ್ದ ವೇಳೆ ಗರ್ಭಿಣಿ ಹಸುವೊಂದು   ಕೊಳಚೆ ಹೊಂಡಕ್ಕೆ ಬಿದ್ದಿದ್ದು ಅಗ್ನಿಶಾಮಕದಳ ಮೇಲಕ್ಕೆತ್ತಿ ಅದರ ಪ್ರಾಣ ರಕ್ಷಿಸಿದ ಘಟನೆ ನಿನ್ನೆ ಬೇಳದಲ್ಲಿ ನಡೆದಿದೆ.  ಬೇಳದ  ಅಬ್ದುಲ್ ಖಾದರ್ ಎಂಬವರ ಹಿತ್ತಿಲಲ್ಲಿರುವ  ಸುಮಾರು 6 ಅಡಿ ಆಳದ ಕೊಳಚೆ ಹೊಂಡಕ್ಕೆ ಗರ್ಭಿಣಿ ಹಸು  ನಿನ್ನೆ   ಜಾರಿ ಬಿದ್ದಿದೆ. ಅದನ್ನು ಮೇಲಕ್ಕೆತ್ತಲು ಸ್ಥಳೀಯರು ಭಾರೀ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಊರವರು ನೀಡಿದ ಮಾಹಿತಿಯಂತೆ ಅಸಿಸ್ಟೆಂಟ್ ಸ್ಟೇಶನ್ ಆಫೀಸರ್ ಆರ್. ವಿನೋದ್ ಕುಮಾರ್ ನೇತೃತ್ವದ ಕಾಸರಗೋಡು ಅಗ್ನಿಶಾಮಕದಳ ತಲುಪಿ  ಕ್ಯಾನ್‌ವಾಸ್ …

ಸ್ಥಳೀಯಾಡಳಿತ ಚುನಾವಣೆ: ಸ್ಪಷ್ಟಗೊಂಡ ಚುನಾವಣಾ ಚಿತ್ರಣ; ಇನ್ನುಅಬ್ಬರದ ಪ್ರಚಾರ  ದಿನಗಳು

ಕಾಸರಗೋಡು: ರಾಜ್ಯದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಡಿಸೆಂಬರ್ 9 ಮತ್ತು 11ರಂದು ನಡೆಯಲಿರುವ ಚುನಾವಣೆಗಿರುವ ನಾಮಪತ್ರ ಸಲ್ಲಿಕೆ, ಅವುಗಳ ಸೂಕ್ಷ್ಮ ಪರಿಶೀಲನೆ ನಡೆದ ಬಳಿಕ ನಾಮಪತ್ರಗಳ ಹಿಂತೆಗೆತ ಪ್ರಕ್ರಿಯೆ ನಿನ್ನೆ ಪೂರ್ಣಗೊಂಡಿತು. ಬಳಿಕ ಸ್ಪರ್ಧಾಕಣದಲ್ಲಿ ಉಳಿದಿರುವ ಅಭ್ಯರ್ಥಿಗಳ ಸ್ಪಷ್ಟ ಚಿತ್ರಣ ಬಹಿರಂಗಗೊAಡಿದ್ದು, ಅದರ ಬೆನ್ನಲ್ಲೇ ಅಬ್ಬರದ ಪ್ರಚಾರವೂ ಆರಂಭಗೊAಡಿತು.ಕಾಸರಗೋಡು ಜಿಲ್ಲೆಯಲ್ಲಿ ಒಟ್ಟು 2786 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಇದರಲ್ಲಿ 1432 ಮಹಿಳೆಯರು ಮತ್ತು 1359 ಪುರುಷ ಅಭ್ಯರ್ಥಿಗಳಾಗಿದ್ದಾರೆ. ಕಾಸರಗೋಡು, ಕಣ್ಣೂರು, ವಯನಾಡು, ಕಲ್ಲಿಕೋಟೆ, ಮಲಪ್ಪುರಂ, ಪಾಲಕ್ಕಾಡ್, ತೃಶೂರು ಜಿಲ್ಲೆಗಳಲ್ಲಿ …

ಬೆದರಿಕೆಯೊಡ್ಡಿ ಚುನಾವಣೆಯಲ್ಲಿ ಜಯಗಳಿಸಲು ಸಿಪಿಎಂ ಯತ್ನ- ಎಂ.ಎಲ್. ಅಶ್ವಿನಿ

ಕಾಸರಗೋಡು: ಬೆದರಿಕೆಯೊಡ್ಡಿ ಚುನಾವಣೆಯಲ್ಲಿ ಜಯಗಳಿಸಲು ಸಿಪಿಎಂ ಯತ್ನಿಸುತ್ತಿದೆ ಎಂದು ಆದರೆ ಅಭಿವೃದ್ಧಿಯ ಭರವಸೆ ನೀಡಿ ಬಿಜೆಪಿ ಜನರನ್ನು ಸಮೀಪಿಸುತ್ತಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ನುಡಿದರು. ಮಡಿಕೈ, ಬೇಡಡ್ಕ ಮೊದಲಾದ ಪಂಚಾಯತ್‌ಗಳಲ್ಲಿ ಅಭ್ಯರ್ಥಿಗಳಿಗೆ ಬೆದರಿಕೆಯೊಡ್ಡಿ ಹಿಂಜರಿಸಲು ಸಾಧ್ಯವಾಗದ ಕಾರಣ ಅವರನ್ನು ನಿರ್ದೇಶಿಸಿದ ವ್ಯಕ್ತಿಗಳಿಗೆ ಸಿಪಿಎಂ ಬೆದರಿಕೆಯೊಡ್ಡುತ್ತಿದೆ. ಈ ಬೆದರಿಕೆಯನ್ನು ಹಿಮ್ಮೆಟ್ಟಿಸಿ ವಿರೋಧ ಪಕ್ಷ ಕೂಡಾ ಇಲ್ಲದ ಬೇಡಡ್ಕ ಪಂಚಾಯತ್‌ನಲ್ಲಿ ಇತಿಹಾಸದಲ್ಲೇ ಪ್ರಥಮವಾಗಿ ಎಲ್ಲಾ ವಾರ್ಡ್‌ಗಳಲ್ಲೂ ಬಿಜೆಪಿ ತೀವ್ರ ಸ್ಪರ್ಧೆ ಒಡ್ಡಲಿದೆ ಎಂದರು. ಪಿಣರಾಯಿ ವಿಜಯನ್‌ರ ಭ್ರಷ್ಟಾಚಾರ ಆಡಳಿತ, …

ಹೋಟೆಲ್ ವ್ಯಾಪಾರಿ ನಿಧನ

ಉಪ್ಪಳ: ಉಪ್ಪಳ  ಕ್ಯಾನ್ಸರ್ ಕೇರ್ ಫೌಂಡೇಶನ್‌ನ ಚೆಯರ್ ಮೆನ್ ಹಾಗೂ ಮುಂಬೈಯಲ್ಲಿ ಹೋಟೆಲ್ ವ್ಯಾಪಾರಿಯಾಗಿದ್ದ ಪ್ರಮುಖ ಜೀವ ಕಾರುಣ್ಯ ಕಾರ್ಯ ಕರ್ತನಾದ ಉಪ್ಪಳ ಬಪ್ಪಾಯಿತೊಟ್ಟಿ ನಿವಾಸಿ ಮುಹಮ್ಮದ್ ಮೊಯ್ದೀನ್ ಹಿಂದುಸ್ಥಾನ್   (75) ನಿಧನ ಹೊಂದಿದರು.  ಬಾಂಬೆ ಕೇರಳ ಮುಸ್ಲಿಂ ಜಮಾ ಯತ್ ಮಾಜಿ ಕೌನ್ಸಿಲ್ ಸದಸ್ಯನೂ, ಮುಂಬೈಯ ಹಿಂದೂಸ್ಥಾನ್ ರೆಸ್ಟೋರೆಂಟ್‌ನ ಮಾಲಕನಾಗಿದ್ದರು. ಮೃತರು ಪತ್ನಿ ಆಸ್ಯಮ್ಮ, ಮಕ್ಕಳಾದ  ನೂರ್‌ಜಹಾನ್, ಫೈರೂಸ್, ಯಾಸಿರ್, ಅಳಿಯ ಖಲೀಲ್ ಕಲ್ಲಟ್ರ, ಸಹೋದರ ಸಿದ್ದಿಕ್, ಸಹೋದರಿಯರಾದ ಆಯಿಶ, ಬೀಫಾತಿಮ ಹಾಗೂ ಅಪಾರ ಬಂಧು-ಮಿತ್ರರನ್ನು …

ಸ್ಥಳೀಯಾಡಳಿತ ಚುನಾವಣೆ: ಜಿಲ್ಲಾ ಪಂಚಾಯತ್ನ 18 ಡಿವಿಶನ್ಗಳಿಗೆ 62 ಮಂದಿ ಅಭ್ಯರ್ಥಿಗಳು

ಕಾಸರಗೋಡು: ಸ್ಥಳೀಯಾಡಳಿತ ಚುನಾವಣೆಗಿರುವ ನಾಮಪತ್ರ ಹಿಂತೆಗೆಯಲಿರುವ ಕೊನೆಯ ದಿನಾಂಕ ನಿನ್ನೆ ಸಂಜೆ ಕೊನೆಗೊಂಡಾಗ ಜಿಲ್ಲಾ ಪಂಚಾಯತ್ನ 18 ಡಿವಿಶನ್ಗಳಿಗೆ 62 ಮಂದಿ ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. ಒಟ್ಟು 91 ಮಂದಿ ನಾಮಪತ್ರ ಸಲ್ಲಿಸಿದ್ದರು. 29 ಮಂದಿ ಹಿಂತೆಗೆದರು.ಮಂಜೇಶ್ವರ ಬ್ಲೋಕ್ ಪಂಚಾ ಯತ್ನ 16 ಡಿವಿಶನ್ಗಳಿಗೆ 57 ಅಭ್ಯರ್ಥಿಗಳು ಸ್ಪರ್ಧಾಕಣದಲ್ಲಿದ್ದಾರೆ. 77 ಮಂದಿ ನಾಮಪತ್ರ ಸಲ್ಲಿಸಿದ್ದು, 20 ಮಂದಿ ಹಿಂತೆಗೆದಿದ್ದಾರೆ. ಇದೇ ರೀತಿ ಕಾಸರಗೋಡು ಬ್ಲೋಕ್ ಪಂಚಾಯ ತ್ನ 18 ಡಿವಿಶನ್ಗಳಿಗೆ 63 ಮಂದಿ ಸ್ಪರ್ಧಿಸುತ್ತಿದ್ದಾರೆ. 86 ಮಂದಿ ನಾಮಪತ್ರ …

ಮಾಜಿ ಗಲ್ಫ್ ಉದ್ಯೋಗಿ ನಿಧನ

ಕುಂಬಳೆ: ಮಾಟೆಂಗುಳಿ ನಿವಾಸಿ  ಕುಂಞಿಮಾಹಿನ್ ಕುಟ್ಟಿ (79) ನಿಧನಹೊಂದಿದರು.  ಇವರು ಮಾಜಿ ಗಲ್ಫ್ ಉದ್ಯೋಗಿಯಾಗಿದ್ದಾರೆ.  ಮೃತರು ಪತ್ನಿ ಫಾತಿಬಿ, ಮಕ್ಕಳಾದ ಅಸ್ಲಾಂ, ರಹೀಂ, ರಿಫಾಯಿ, ಸೊಸೆಯಂದಿರಾದ ಸರೀನ, ರೌಲ, ಇರ್ಫಾನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಕುಂಬಳೆ ಬದರ್ ಜುಮಾ ಮಸೀದಿ ಬಳಿ ನಡೆಯಿತು.

ಚುನಾವಣೆ ಪ್ರಕ್ರಿಯೆಯಲ್ಲಿ ಕನ್ನಡಕ್ಕೆ ಅವಗಣನೆ: ಮಾಹಿತಿ ಹಕ್ಕು ಕಾರ್ಯಕರ್ತ ಆರೋಪ

ಕುಂಬಳೆ: ತ್ರಿಸ್ತರ ಪಂಚಾಯತ್‌ಗಳಿಗೆ ಸ್ಪರ್ಧಿಸುವ ಭಾಷಾ ಅಲ್ಪಸಂಖ್ಯಾತರಾದ ಅಭ್ಯರ್ಥಿಗಳೊಂದಿಗೆ ತಾರತಮ್ಯ ನೀತಿ ತೋರಿಸುತ್ತಿರುವುದಾಗಿ ಕುಂಬಳೆಯ ಮಾಹಿತಿ ಹಕ್ಕು ಕಾರ್ಯಕರ್ತ ಎನ್. ಕೇಶವ ನಾಯ್ಕ್ ಕುಂಬಳೆಯಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು. ಕನ್ನಡ ಭಾಷೆ ತಿಳಿದಿರುವ ಅಭ್ಯರ್ಥಿಗಳು ಮಲೆಯಾಳದಲ್ಲಿರುವ ನಾಮಪತ್ರಿಕೆಯ ಸತ್ಯಪ್ರತಿಜ್ಞೆಯನ್ನು ಹೇಗೆ ಹೇಳುವುದೆಂದು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಬೇಕೆಂದು ಅವರು ಆಗ್ರಹಿಸಿದರು. ಈ ಬಗ್ಗೆ ಹಲವು ಕಡೆಗಳಲ್ಲಿ ವಾಗ್ವಾದಗಳು ಉಂಟಾಗಿವೆ. ಜಿಲ್ಲಾ ಪಂಚಾಯತ್‌ಗೆ ನಾಮಪತ್ರ ಸಲ್ಲಿಸಿದ ಕೇಶವ ನಾಯ್ಕ್ ಮಲಯಾಳ ತಿಳಿದಿಲ್ಲವೆಂದು ತಿಳಿಸಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಕನ್ನಡದಲ್ಲಿರುವ ಪ್ರಮಾಣವಚನ ಪ್ರತಿಯನ್ನು …

ಸ್ಥಳೀಯಾಡಳಿತ ಚುನಾವಣೆ ಸ್ವೀಕೃತಿ-ವಿತರಣೆ ಕೇಂದ್ರಗಳ ಘೋಷಣೆ

ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಸ್ವೀಕೃತಿ, ವಿತರಣೆ ಕೇಂದ್ರಗಳನ್ನು ತೀರ್ಮಾನಿಸಲಾಯಿತು. ಕಾಸರಗೋಡು ಬ್ಲೋಕ್ ಪಂಚಾಯತ್‌ನ ಅಡಿಯಲ್ಲಿ ಬರುವ ಗ್ರಾಮ ಪಂಚಾಯತ್‌ಗಳಿಗೆ (ಕುಂಬಳೆ, ಮೊಗ್ರಾಲ್ ಪುತ್ತೂರು, ಮಧೂರು, ಚೆಮ್ನಾಡ್, ಚೆಂಗಳ,ಬದಿಯಡ್ಕ) ಸರಕಾರಿ ಕಾಲೇಜು ಕಾಸರಗೋಡು, ವಿದ್ಯಾನಗರ ಪೂರ್ವ ಪಶ್ಚಿಮದಲ್ಲಿರುವ ಪ್ರಧಾನ ಕಟ್ಟಡದ ಕೆಳ ಅಂತಸ್ತು, ಇತರ ಕಟ್ಟಡಗಳು ಸ್ವೀಕೃತಿ, ವಿತರಣೆ ಕೇಂದ್ರವಾಗಿ ಮಂಜೂರು ಮಾಡಲಾಗಿದೆ. ಕಾಞಂಗಾಡ್ ಬ್ಲೋಕ್ ಪಂಚಾಯತ್‌ನ ಗ್ರಾಮ ಪಂಚಾಯತ್‌ಗಳಿಗೆ ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ಕಾರಡ್ಕ ಬ್ಲೋಕ್ ಪಂ. ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಿಗೆ (ಕುಂಬ್ಡಾಜೆ, …

ನಗರದಲ್ಲಿ ರಸಮಂಜರಿ ಕಾರ್ಯಕ್ರಮ ವೇಳೆ ಪ್ರೇಕ್ಷಕರ ಭಾರೀ ನೂಕುನುಗ್ಗಲು: ಉಸಿರುಗಟ್ಟುವ ವಾತಾವರಣ; ಕುಸಿದುಬಿದ್ದು 12ಕ್ಕೂ ಹೆಚ್ಚು

ಮಂದಿ ಆಸ್ಪತ್ರೆಯಲ್ಲಿ, ಲಾಠಿ ಪ್ರಯೋಗಿಸಿದ ಪೊಲೀಸರು, ಸಂಘಟಕರ ವಿರುದ್ಧ ಕೇಸು ಕಾಸರಗೋಡು: ಸಂಗೀತ ರಸಮಂಜರಿ ಕಾರ್ಯಕ್ರಮದಲ್ಲಿ  ಪ್ರೇಕ್ಷಕರ ಅಭೂತಪೂರ್ವ ಸಂದಣಿಯಿಂದಾಗಿ ಭಾರೀ ನೂಕುನುಗ್ಗಲು ಹಾಗೂ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿ ೧೨ಕ್ಕೂ ಹೆಚ್ಚು ಮಂದಿ ಕುಸಿದು ಬಿದ್ದು ಆಸ್ಪತ್ರೆಯಲ್ಲಿ ದಾಖಲಾದ ಘಟನೆ ನಗರದ ನುಳ್ಳಿಪ್ಪಾಡಿಯಲ್ಲಿ ನಿನ್ನೆ ಸಂಜೆ ನಡೆದಿದೆ. ನಗರದ ನುಳ್ಳಿಪ್ಪಾಡಿಯ ಶ್ರೀ ಅಯ್ಯಪ್ಪ ದೇವಸ್ಥಾನ ಬಳಿಯ ಖಾಸಗಿ ಸ್ಥಳದಲ್ಲಿ ಎಫ್‌ಎಲ್‌ಇಎ ಎಂಬ ಹೆಸರಲ್ಲಿ  ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಅದರಲ್ಲಿ ೩೦೦೦ ಪ್ರೇಕ್ಷಕರು ಭಾಗವಹಿಸುವ ಸೌಕರ್ಯ ಏರ್ಪಡಿಸಲಾಗಿದೆ. ಆದರೆ …

ಪಂ. ಚುನಾವಣೆ: ಮಂಜೇಶ್ವರ, ಮಂಗಲ್ಪಾಡಿ, ಕುಂಬಳೆ ಪಂಚಾಯತ್‌ಗಳಲ್ಲಿ ಅಭ್ಯರ್ಥಿಗಳ ಮಧ್ಯೆ ಆವೇಶಭರಿತ ಪೈಪೋಟಿ ; ಮುಖ್ಯಸ್ಪರ್ಧೆ ಕಾಂಗ್ರೆಸ್ – ಲೀಗ್ ಮಧ್ಯೆ

ಮಂಜೇಶ್ವರ:  ತ್ರಿಸ್ತರ ಪಂಚಾಯತ್ ಚುನಾವಣೆಯ ಪ್ರಚಾರ  ಬಿರುಸುಗೊಳ್ಳುತ್ತಿರುವಂತೆ ಮಂಜೇಶ್ವರ, ಮಂಗಲ್ಪಾಡಿ, ಕುಂಬಳೆ ಗ್ರಾಮ ಪಂಚಾಯತ್‌ಗಳಲ್ಲಿ  ವಿವಿಧ ಪಕ್ಷಗಳ ಕಾರ್ಯಕರ್ತರಲ್ಲಿ ಕುತೂಹಲ ತೀವ್ರಗೊಂಡಿದೆ.  ಮುಂದೆ ಏನಾಗಲಿದೆಯೆಂದು ತಿಳಿಯಲು  ನಿರೀಕ್ಷೆಯೊಂದಿಗೆ ಮತದಾರರು ಕಾದುಕುಳಿತಿದ್ದಾರೆ.  ಪಂಚಾಯತ್ ಚುನಾವಣೆಯಲ್ಲಿ ಈ ಪಂಚಾಯತ್ ಗಳಲ್ಲಿ ಕಾಂಗ್ರೆಸ್ ನ ಅಡಿಪಾಯ ತಪ್ಪಿಸುವುದಾಗಿ ಲೀಗ್ ಕಾರ್ಯಕ ರ್ತರು ಒಂದೆಡೆ ಹೇಳುತ್ತಿದ್ದರೆ ಲೀಗ್‌ನ ಆಡಳಿತವನ್ನೇ ಇಲ್ಲದಾಗಿಸುವುದಾಗಿ  ಕಾಂಗ್ರೆಸ್ ಮತ್ತೊಂದೆಡೆ  ತಿಳಿಸುತ್ತಿದ್ದಾರೆ.  ಈಮಧ್ಯೆ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಉಪಾಧ್ಯಕ್ಷ ನಾಗೇಶ್ ಮಂಜೇಶ್ವರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ಲೀಗ್‌ಗೆ ಸೇರ್ಪಡೆಗೊಂಡಿದ್ದಾರೆ. …