ಪಿಕ್ಕಾಸು ಲಭಿಸಿದರೆ ಅಣ್ಣಾಚಿ ರಾಜನ್ ತೆರೆಯದ ಬಾಗಿಲುಗಳಿಲ್ಲ: ಪೂಚಕ್ಕಾಡ್‌ನಲ್ಲಿ ನಡೆದ ಕಳವು ಪ್ರಕರಣದಲ್ಲಿ ಸೆರೆಯಾದ ಈತನ ಬದುಕು ಐಷಾರಾಮಿ
ಕಾಸರಗೋಡು: ಕೇರಳ- ಕರ್ನಾಟಕ ಪೊಲೀಸರಿಗೆ ಬೇಕಾಗಿದ್ದ ಮಾತ್ರವಲ್ಲ ತಮಿಳುನಾಡು ಕೊಯಂಬತ್ತೂರು ಮೇಟು ಪಾಳಯಂ ನಿವಾಸಿಯಾದ ರಾಜನ್ ಅಲಿಯಾಸ್ ಅಣ್ಣಾಚಿ ರಾಜನ್ ವಿವಿಧ ರಾಜ್ಯಗಳಲ್ಲಾಗಿ ೩೦ಕ್ಕೂ ಅಧಿಕ ಕಳವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈತ ಜೈಲಿನಿಂದ ಹೊರಗೆ ಬಂದರೆ ಎಲ್ಲಾದರೂ ಖಂಡಿತವಾಗಿ ಕಳವು ನಡೆಸುವನು ಎಂಬ ವಿಷಯದಲ್ಲಿ ಪೊಲೀಸರಿಗೆ ಸಂಶಯವಿಲ್ಲ. ಯಾವುದೇ ಸಂದರ್ಭದಲ್ಲಿ ಮೊಬೈಲ್ ಫೋನ್ ಉಪಯೋಗಿಸದ ವ್ಯಕ್ತಿಯಾಗಿದ್ದಾನೆ ರಾಜನ್. ಆದುದರಿಂದ ಸೈಬರ್ ಸೆಲ್‌ನ ಸಹಾಯದೊಂದಿಗೆ ಈತನನ್ನು ಪತ್ತೆಹಚ್ಚಲು ಕಷ್ಟ. ಕಳವು ನಡೆಸಲು ಈತನಿಗೆ ಹೆಚ್ಚಿನ ಆಯುಧಗಳು ಅಗತ್ಯವಿಲ್ಲ. ಕೇವಲ …