ಕೂಲಿ ಕಾರ್ಮಿಕ ನಿಧನ

ಪೈವಳಿಕೆ: ಚಿಪ್ಪಾರು ಶಾಲೆ ಬಳಿಯ ನಿವಾಸಿ ನಾರಾಯಣ ಸಿ. ಮೂಲ್ಯ (73) ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಕೂಲಿ ಕಾರ್ಮಿಕನಾಗಿದ್ದರು. ಇವರ ಪತ್ನಿ ಚಂದ್ರಾವತಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ರೋಹಿಣಿ, ಮಮತಾ, ಜಯಶ್ರೀ, ಅಳಿಯಂದಿರಾದ ಸೀತಾರಾಮ, ಶೇಖರ, ಜಗದೀಶ, ಸಹೋದರ ಚಂದಪ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಸಹೋದರ ಕೃಷ್ಣ, ಸಹೋದರಿ ಕಮಲ ಈ ಹಿಂದೆ ನಿಧನರಾಗಿದ್ದಾರೆ. ಬ್ಲೋಕ್ ಪಂಚಾಯತ್ ಸದಸ್ಯ ಅಬ್ದುಲ್ ರಜಾಕ್ ಚಿಪ್ಪಾರು, …

ಹೃದಯಾಘಾತ: ನಿಧನ

ನೀರ್ಚಾಲು: ಬೇಳ ನಿವಾಸಿ ರಾಘವ (58) ನಿಧನ ಹೊಂದಿದರು. ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಕುಂಬಳೆಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತರು ಪತ್ನಿ ಸುಜಾತ, ಮಕ್ಕಳಾದ ಹರೀಶ್, ರೋಹಿತ್ (ಇಬ್ಬರೂ ಕೊಲ್ಲಿಯಲ್ಲಿ), ಚೈತ್ರ, ಸಹೋದರರಾದ ಕೃಷ್ಣ ಪಳ್ಳತ್ತಡ್ಕ, ರಾಮಚಂದ್ರ ಪಳ್ಳತ್ತಡ್ಕ, ಸಹೋದರಿಯರಾದ ದೇವಕಿ, ಸುಶೀಲ, ಬೇಬಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ದೇಶವನ್ನು ಬೆಚ್ಚಿ ಬೀಳಿಸಿದ ಮಂಗಳೂರು ವಿಮಾನ ದುರಂತಕ್ಕೆ 16 ವರ್ಷ

ಕಾಸರಗೋಡು: ದೇಶದ ಜನತೆಯನ್ನು ಬೆಚ್ಚಿಬೀಳಿಸಿದ ಮಂಗಳೂರು ವಿಮಾನ ದುರಂತ ಸಂಭವಿಸಿ ಇಂದಿಗೆ 16 ವರ್ಷಗಳಾ ಯಿತು. 2010 ಮೇ ೨೨ರಂದು ಬೆಳಿಗ್ಗೆ 6.30 ಕ್ಕೆ ಸಂಭವಿಸಿದ ವಿಮಾನ ದುರಂತದಲ್ಲಿ ಆರು ಮಂದಿ ನೌಕರರು ಸಹಿತ 158 ಮಂದಿ  ಮೃತಪಟ್ಟಿದ್ದರು. ಈ ಪೈಕಿ ೫೨ ಮಂದಿ ಕೇರಳೀಯರಾ ಗಿದ್ದಾರೆ. ಇವರಲ್ಲೂ ಬಹುಪಾಲು ಮಂದಿ ಕಾಸರಗೋಡು ಜಿಲ್ಲೆಯವರಾಗಿದ್ದಾರೆ.  ದುಬಾಯಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 152 ಮಂದಿ ಪ್ರಯಾಣಿಕರ ಸಹಿತ  ಸಂಚರಿಸಿದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿತ್ತು. ರನ್‌ವೇಯ ನಿರ್ಧಿಷ್ಟ  ಸ್ಥಾನದಿಂದ …

ಅನಂತಪುರ ಉದ್ದಿಮೆ ವಲಯದಲ್ಲಿ ವಾಯು ಮಲಿನೀಕರಣ ಕೋಳಿತ್ಯಾಜ್ಯ ಫ್ಯಾಕ್ಟರಿ ಮುಚ್ಚುಗಡೆಗೊಳಿಸಲು ಪಂಚಾಯತ್ ನಿರ್ದೇಶ

ಕೋಳಿತ್ಯಾಜ್ಯ ಫ್ಯಾಕ್ಟರಿ ಮುಚ್ಚುಗಡೆಗೊಳಿಸಲು ಪಂಚಾಯತ್ ನಿಕುಂಬಳೆ: ಅನಂತಪುರ ಉದ್ದಿಮೆ ವಲಯದ  ಕೋಳಿ ತ್ಯಾಜ್ಯ ಫ್ಯಾಕ್ಟರಿ ಯಿಂದ ಉಂಟಾಗುವ ವಾಯು ಮಲಿ ನೀಕರಣ ಹಾಗೂ ದುರ್ನಾತ ತೀವ್ರ ಗೊಂಡ ಹಿನ್ನೆಲೆಯಲ್ಲಿ ಫ್ಯಾಕ್ಟರಿಯನ್ನು ಮುಚ್ಚುಗಡೆಗೊಳಿಸಲು ಪುತ್ತಿಗೆ ಗ್ರಾಮ ಪಂಚಾಯತ್ ನಿರ್ದೇಶಿಸಿದೆ. ಫ್ಯಾಕ್ಟರಿ ಯಿಂದ ಉಂಟಾಗುವ ಅಸಹನೀಯ ದುರ್ನಾತದಿಂದ  ನೌಕರರಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಉಸಿರಾಟ ತೊಂದರೆ, ವಾಂತಿ ಸಹಿತ  ಸಾಂಕ್ರಾಮಿಕ  ರೋಗಕ್ಕೆ ಕಾರಣವಾಗುವ ಹಿನ್ನೆಲೆಯಲ್ಲಿ ಫ್ಯಾಕ್ಟರಿಯ ಚಟು ವಟಿಕೆಗಳನ್ನು ನಿಲುಗಡೆಗೊಳಿಸುವಂತೆ  ಅದರ ಮಾಲಕರಿಗೆ  ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ. ಫ್ಯಾಕ್ಟರಿಯಿಂದ ಉಂಟಾಗುವ …

ಅಂತಾರಾಜ್ಯ ಸರಕಾರಿ ಬಸ್‌ಗಳಲ್ಲೂ ಉಚಿತ  ಪ್ರಯಾಣಕ್ಕೆ ಅವಕಾಶ ನೀಡಲು ಮಣಿಕಂಠ ರೈ ಆಗ್ರಹ

ಕುಂಬಳೆ: ಕೇರಳ ಸರಕಾರ ಮಹಿಳೆಯರಿಗೆ ಸರಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದು, ಆದರೆ ಇದರಿಂದ ಕಾಸರಗೋಡು ಜಿಲ್ಲೆಯ ಜನರು ವಂಚಿತರಾಗÀಲು ಸಾಧ್ಯತೆ ಇದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಮಣಿಕಂಠ ರೈ ತಿಳಿಸಿದ್ದಾರೆ. ಅಂತಾರಾಜ್ಯ ಪ್ರಯಾಣದ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲದಿರುವುದು ಇದಕ್ಕೆ ಕಾರಣ. ಆದ್ದರಿಂದ ಕಾಸರಗೋಡು ಜಿಲ್ಲೆ ಭಾಗದ ಜನರಿಗೆ ಅನುಕೂಲವಾಗು ವಂತೆ, ಅವರು ಹೆಚ್ಚು ಬಳಸುವ ಕಾಸರಗೋಡು – ಮಂಗಳೂರು ನಡುವಿನ ಬಸ್‌ಗಳಲ್ಲಿ ಕನಿಷ್ಠ ಗಡಿಭಾಗದವರೆಗಾದರೂ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು …

ಕಾಸರಗೋಡಿನ ರೈಲ್ವೇ ಪ್ರಯಾಣಿಕರ ಸಂಕಷ್ಟ ಪರಿಹರಿಸಲು ಜಿಲ್ಲಾಡಳಿತದ ಮಾಸ್ಟರ್‌ಪ್ಲಾನ್

ಕಾಸರಗೋಡು: ಕಾಸರಗೋಡಿ ನವರ ರೈಲ್ವೇ ಪ್ರಯಾಣ ಸಮಸ್ಯೆ ಪರಿಹ ರಿಸುವುದಕ್ಕೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ರೈಲ್ವೇಗೆ ಸಮಗ್ರ ನಿರ್ದೇಶ ಅಡಕವಾದ ವರದಿಯನ್ನು ಹಸ್ತಾಂತರಿಸಿ ದ್ದಾರೆ. ಕಣ್ಣೂರು, ಮಂಗಳೂರು ಸೆಂ ಟ್ರಲ್, ಮಂಗಳೂರು ಜಂಕ್ಷನ್ ಎಂಬೆ ಡೆಗಳಲ್ಲಿ ಸಂಚಾರ ಕೊನೆಗೊಳಿಸುವ ಪ್ರಧಾನ ರೈಲುಗಳನ್ನು ಕಾಸರಗೋಡಿಗೂ ಮುಂದುವರಿಸಬೇಕೆಂದು, ನಿಲುಗಡೆ ಗೊಳಿಸಿದ ಪ್ಯಾಸೆಂಜರ್ ಸರ್ವೀಸ್ ಗಳನ್ನು ಪುನರಾರಂಭಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಪತ್ರ ರವಾನಿಸಿದ್ದಾರೆ. ಪಾಲಕ್ಕಾಡ್ ಡಿವಿಶನಲ್ ರೈಲ್ವೇ ಮೆನೇಜರ್ ಮಧುಕರ್ ರಾವತ್‌ರಿಗೆ ಕಳುಹಿಸಿದ ಪತ್ರದಲ್ಲಿ ಕಾಸರಗೋಡು ಜಿಲ್ಲೆ ಎದುರಿಸುವ ತೀವ್ರ ಪ್ರಯಾಣ …

ಅಂಗಡಿಗೆ ನುಗ್ಗಿ ವ್ಯಾಪಾರಿಗೆ ಹಲ್ಲೆ: ಮೂವರ ವಿರುದ್ಧ ಕೇಸು ದಾಖಲು

ಬದಿಯಡ್ಕ: ಅಂಗಡಿಗೆ ನುಗ್ಗಿ ವ್ಯಾಪಾರಿಗೆ ಹಲ್ಲೆ ನಡೆಸಿ 65,000 ರೂ. ನಷ್ಟಗೊಳಿಸಿದ ದೂರಿನಂತೆ ಮೂವರ ವಿರುದ್ದ ಬದಿಯಡ್ಕ ಪೊಲೀ ಸರು ಪ್ರಕರಣ ದಾಖಲಿಸಿಕೊಂ ಡಿದ್ದಾರೆ. ದ.ಕ. ಜಿಲ್ಲೆಯ ಪುತ್ತೂರು ಬೆಟ್ಟಂ ಪಾಡಿ ಕುಟ್ಟತ್ತನ ಹೌಸ್‌ನ ಮೊಹ ಮ್ಮದ್ ಅಶ್ರಫ್ ಕೆ.ಎಂ  ಎಂಬವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಗಣೇಶನ್, ಅವಿನಾಶ್ ಮತ್ತು ಇನ್ನೋರ್ವ ಸೇರಿದಂತೆ ಮೂರು ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ದೂರುಗಾರ ವಹಮ್ಮದ್ ಅಶ್ರಫ್ ಪೆರ್ಲದಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಮೇ 19ರಂದು …

ಅನಧಿಕೃತ ಹೊಯ್ಗೆ ಸಾಗಾಟ: ಮಫ್ತಿ ವೇಷದಲ್ಲಿ ಪೊಲೀಸ್ ಕಾರ್ಯಾಚರಣೆ; ಲಾರಿ ಚಾಲಕ ಸೆರೆ: ಇಬ್ಬರ ವಿರುದ್ಧ ಕೇಸು

ಕುಂಬಳೆ: ಅನಧಿಕೃತವಾಗಿ ಹೊಯ್ಗೆ ಸಂಗ್ರಹಿಸಿ ಸಾಗಾಟ ನಡೆಸುವುದರ ವಿರುದ್ಧ ಕುಂಬಳೆ ಪೊಲೀಸರು ಕಾರ್ಯಾಚರಣೆ ಇನ್ನಷ್ಟು ಬಿಗಿಗೊಳಿಸಿದ್ದಾರೆ. ಇದರಂತೆ ಅನಧಿಕೃತವಾಗಿ ಸಾಗಿಸುತ್ತಿದ್ದ ಹೊಯ್ಗೆ ಹಾಗೂ ಸಾಗಾಟಕ್ಕೆ ಬಳಸಿದ ಟಿಪ್ಪರ್ ಲಾರಿಯನ್ನು  ಕುಂಬಳೆ ಎಸ್‌ಐ ಅನಂತಕೃಷ್ಣನ್ ಆರ್ ಮೆನೋನ್ ವಶಪಡಿಸಿದ್ದಾರೆ. ಟಿಪ್ಪರ್ ಲಾರಿ ಚಾಲಕನನ್ನು ಸೆರೆಹಿಡಿದಿದ್ದು, ವಾಹನದ ಮಾಲಕನ ಸಹಿತ ಇಬ್ಬರ ವಿರುದ್ಧ ಕೇಸು ದಾಖಲಿಸಲಾಗಿದೆ. ನಿನ್ನೆ ಮಧ್ಯರಾತ್ರಿ ಶಿರಿಯ ಹೊಳೆಯ ಪಾಚಾಣಿಯಿಂದ ಹೊಯ್ಗೆ ಸಂಗ್ರಹಿಸಿ ಸಾಗಿಸುತ್ತಿರುವ ಮಾಹಿತಿ ಲಭಿಸಿದ ಎಸ್‌ಐ ಅನಂತಕೃಷ್ಣನ್ ಮಫ್ತಿ ವೇಷದಲ್ಲಿ  ಕಾರಿನಲ್ಲಿ ತಲುಪಿ ಶಿರಿಯ …

ಬೆಂಗಳೂರಿನಲ್ಲಿ ಯುವತಿ ಮೇಲೆ ದೌರ್ಜನ್ಯ: ಬತ್ತೇರಿ ನಿವಾಸಿ ವಿರುದ್ಧ ಕೇಸು

ಬೆಂಗಳೂರು: ಬೆಂಗಳೂರಿನಲ್ಲಿ ವಾಸಿಸಿ ಕೆಲಸ ನಿರ್ವಹಿಸುತ್ತಿರುವ ಕೇರಳೀಯಳಾದ ಯುವತಿ ಲೈಂಗಿಕ ದೌರ್ಜನ್ಯಕ್ಕೊಳಗಾದ ಬಗ್ಗೆ ದೂರಲಾಗಿದೆ. ಬೆಂಗಳೂರಿನ ಕೆಫೆಯಲ್ಲಿ ಪಾರ್ಟ್‌ಟೈಂ ಕೆಲಸ ನಿರ್ವಹಿಸುವ ಕೋಟ್ಟಯಂ ನಿವಾಸಿಯಾದ ೨೦ರ ಹರೆಯದ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ.  ಪಡಿವಾಳದಲ್ಲಿ ವಾಸಿಸುವ ಬತ್ತೇರಿ ನಿವಾಸಿ ಹೈನಸ್ ಎಂಬಾತ ದೌರ್ಜನ್ಯವೆಸಗಿರುವುದಾಗಿ ಯುವತಿ ಆರೋಪಿಸಿದ್ದಾಳೆ.  ಈ ತಿಂಗಳ 12ರಂದು ಯುವತಿ ವಾಸಿಸುವ ಸ್ಥಳಕ್ಕೆ ತಲುಪಿ ಹೈನಸ್ ದೌರ್ಜನ್ಯ ನಡೆಸಿದ್ದಾನೆನ್ನಲಾಗಿದೆ. ಅದರ ಮರುದಿನವೇ ಪೊಲೀಸ್ ಠಾಣೆಗೆ ತಲುಪಿ ಯುವತಿ ದೂರು ನೀಡಿದರೂ ಪೊಲೀಸರು ಅದನ್ನು ಸ್ವೀಕರಿಸಿಲ್ಲ. ಇದರಿಂದ …

ಯುವತಿಯರನ್ನು ದುಬಾಯಿಗೆ ತಲುಪಿಸಿ ಸೆಕ್ಸ್ ರ‍್ಯಾಕೆಟ್ :ಸಿನಿಮಾ, ಸೀರಿಯಲ್ ಕಲಾವಿದರು, ಗೂಂಡಾ ತಂಡಗಳನ್ನು ಕೇಂದ್ರೀಕರಿಸಿ ತನಿಖೆ

ಕೊಚ್ಚಿ: ಫ್ಯಾಶನ್ ಶೋಗೆಂದು ತಿಳಿಸಿ ಕೇರಳೀಯರಾದ ಕೆಲವು ಯುವತಿಯರನ್ನು ದುಬಾಯಿಗೆ ಕರೆದೊಯ್ದು ಅವರನ್ನು ವೇಶ್ಯಾವಾಟಿಕೆ  ಜಾಲಕ್ಕೆ ಹಸ್ತಾಂತರಿಸಿದ ಪ್ರಕರಣದಲ್ಲಿ ಸಿನಿಮಾ, ಸೀರಿಯಲ್‌ನ ಕೆಲವು ಕಲಾವಿದರು ಹಾಗೂ ಗೂಂಡಾ ತಂಡಗಳನ್ನು ಕೇಂದ್ರೀಕರಿಸಿ ತನಿಖೆ ಆರಂಭಿಸಲಾಗಿದೆ. ಯುವತಿಯರನ್ನು ದುಬಾಯಿಗೆ ತಲುಪಿಸಿ ಸೆಕ್ಸ್ ರ‍್ಯಾಕೆಟ್‌ಗೆ ಹಸ್ತಾಂತರಿಸಿದ ಪ್ರಕರಣದಲ್ಲಿ  ಸೆರೆಗೀಡಾದ ಮುಖ್ಯ ಆರೋಪಿ ಆಲುವ ತೈನೋತ್ ಕಡವಿನಲ್ಲಿ ವಾಸಿಸುವ ಗುರುವಾಯೂರು ನಿವಾಸಿ ಸಿಂಧು ಯಾನೆ  ಸ್ಟೋಯ್‌ಸಿ (56) ಎಂಬಾಕೆಯ ಮಗ ಹಾಗೂ ಮಗಳು ನಡೆಸುವ ಕಂಪೆನಿಯೊಂದಿಗೆ ಕೆಲವು ಸಿನಿಮಾ, ಸೀರಿಯಲ್ ಕಲಾವಿದರಿಗೆ  ನಂಟಿದೆಯೆಂದು  …