ಪೆರ್ಲ ಬಳಿ ಮನೆಯಿಂದ ನಾಡಕೋವಿ, ಮದ್ದುಗುಂಡು ವಶ: ಬಂಧಿತ ಆರೋಪಿಗೆ ರಿಮಾಂಡ್
ಕಾಸರಗೋಡು: ಪೆರ್ಲ ಬಳಿಯ ಕುರಿಯಡ್ಕದಲ್ಲಿ ಮನೆಯಿಂದ ಕಳ್ಳಕೋವಿ ಹಾಗೂ ಮದ್ದುಗುಂಡುಗಳ ಸಹಿತ ಸೆರೆಗೀಡಾದ ವ್ಯಕ್ತಿಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಕುರಿಯಡ್ಕ ನಿವಾಸಿ ಕೃಷ್ಣಪ್ಪ ನಾಯ್ಕ್‌ಗೆ ನ್ಯಾಯಾಲಯ ರಿಮಾಂಡ್ ವಿಧಿಸಿದೆ. ಬದಿಯಡ್ಕ ಪೊಲೀಸರು ಮೊನ್ನೆ ನಡೆಸಿದ ದಾಳಿ ವೇಳೆ ಕೃಷ್ಣಪ್ಪ ನಾಯ್ಕನ ಮನೆಯಿಂದ ಕಳ್ಳಕೋವಿ, ಎರಡು ಮದ್ದುಗುಂಡುಗಳು ಹಾಗೂ ೪೨ ಖಾಲಿ ಕೇಸ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಕೃಷ್ಣಪ್ಪ ನಾಯ್ಕ್‌ನನ್ನು ಬಂಧಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯ ಭರತ್ ರೆಡ್ಡಿಗೆ ಲಭಿಸಿದ ಗುಪ್ತ ಮಾಹಿತಿಯಂತೆ ಬದಿಯಡ್ಕ ಪೊಲೀಸ್ ಇನ್‌ಸ್ಪೆಕ್ಟರ್ …
Read more “ಪೆರ್ಲ ಬಳಿ ಮನೆಯಿಂದ ನಾಡಕೋವಿ, ಮದ್ದುಗುಂಡು ವಶ: ಬಂಧಿತ ಆರೋಪಿಗೆ ರಿಮಾಂಡ್”