ಮಡಿಕೈ ವೆಳ್ಳೂಡದಲ್ಲಿ ಚಿರತೆ ಹಟ್ಟಿಯಿಂದ ಕರುವನ್ನು ಕಚ್ಚಿಕೊಂಡು ಹೋಗಿ ಕೊಂದು ತಿಂದ ಸ್ಥಿತಿಯಲ್ಲಿ

ಹೊಸದುರ್ಗ: ಸ್ವಲ್ಪ ಸಮಯದ ವಿರಾಮದ ಬಳಿಕ ಮಡಿಕೈ ಪಂಚಾಯತ್‌ನ ವೆಳ್ಳುಡದಲ್ಲಿ ಚಿರತೆ ಪ್ರತ್ಯಕ್ಷಗೊಂಡಿದೆ. ಹಟ್ಟಿಗೆ ನುಗ್ಗಿದ ಚಿರತೆ ಕರುವನ್ನು ಕಚ್ಚಿಕೊಂಡು ಹೋಗಿ ಕೊಂದುತಿಂದಿದೆ. ಮಡಿಕೈ ಪಂಚಾಯತ್‌ನ ಹೈನುಗಾರ ಸುರೇಶ್‌ರ ಹಟ್ಟಿಯಿಂದ ಚಿರತೆ ಕರುವನ್ನು ಕಚ್ಚಿಕೊಂಡು ಹೋಗಿದೆ. ಹಟ್ಟಿಯಲ್ಲಿ ಸುಮಾರು 40ರಷ್ಟು ದನಗಳಿವೆ. ಎಂದಿನಂತೆ ನಿನ್ನೆ ರಾತ್ರಿ 7 ಗಂಟೆಗೆ ದನಗಳಿಗೆ ಮೇವು ನೀಡಲು ಸುರೇಶ್ ಹಟ್ಟಿಗೆ ತಲುಪಿದಾಗ ಕರು ನಾಪತ್ತೆಯಾದ ಬಗ್ಗೆ ತಿಳಿದು ಬಂದಿದೆ. ಪರಿಸರವೆಲ್ಲ ಹುಡುಕಾಡಿದರೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ರಾತ್ರಿಯಾದ ಕಾರಣ ಹೆಚ್ಚು ಹುಡುಕಾಟ ನಡೆಸಿರಲಿಲ್ಲ. …

ಹಂಗಾಮಿ ಸ್ಪೀಕರ್ ಆಗಿ ಜಿ. ಸುಧಾಕರನ್ ಪ್ರಮಾಣವಚನ ಸ್ವೀಕಾರ: ಖಾತೆ ಹಂಚಿಕೆ ಬಿಕ್ಕಟ್ಟಿಗೆ ಕೊನೆಗೂ ಪರಿಹಾರ

ತಿರುವನಂತಪುರ: ಕೇರಳದ ೧೬ನೇ ವಿಧಾನಸಭೆಯ ಮೊದಲ ಅಧಿವೇಶನ ನಾಳೆ ಆರಂಭಗೊಳ್ಳಲಿ ರುವಂತೆಯೇ ಯುಡಿಎಫ್ ಬೆಂಬಲಿತ ಅಭ್ಯರ್ಥಿ ಯಾಗಿ ಗೆಲುವು ಸಾಧಿಸಿದ ಹಿರಿಯ ರಾಜಕಾರಣಿ ಜಿ. ಸುಧಾಕ ರನ್ ವಿಧಾನಸಭೆಯ ಹಂಗಾಮಿ ಸ್ಪೀಕರ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ಲೋಕ್ ಭವನದಲ್ಲಿ ಇಂದು ಬೆಳಿಗ್ಗೆ ನಡೆದ ಸಮಾರಂಭದಲ್ಲಿ ರಾಜ್ಯಪಾಲ ರಾಜೇಂದ್ರ ಅರ್ಲೇಕರ್    ಅವರು ಜಿ. ಸುಧಾಕರನ್‌ರಿಗೆ ಪ್ರಮಾಣವಚನ ಬೋಧಿಸಿದರು. ಮುಖ್ಯಮಂತ್ರಿ ವಿ.ಡಿ. ಸತೀಶನ್ ಕೂಡಾ ಈ ಸಂದರ್ಭದಲ್ಲಿ ಹಾಜರಿದ್ದರು. ನೂತನವಾಗಿ ಆಯ್ಕೆಯಾಗಿರುವ ಎಲ್ಲಾ ನಿಯುಕ್ತ ಶಾಸಕರು ನಾಳೆ ಶಾಸಕರಾಗಿ ಪ್ರಮಾಣವಚನ …

ಹುಂಜಕೋಳಿ ಕುಕ್ಕಿ ವೃದ್ದೆಗೆ ಗಾಯ:ಮುಖಕ್ಕೆ 12 ಹೊಲಿಗೆ ಹಾಕಿ ಚಿಕಿತ್ಸೆ

ಕೊಲ್ಲಂ: ಹುಂಜಕೋಳಿ ಕುಕ್ಕಿ ವೃದ್ದೆ ಗಂಭೀರವಾಗಿ ಗಾಯಗೊಂಡಿ ದ್ದಾರೆ. ಕುಯಪ್ಪಳ್ಳಿ ಮರುದಮನ್ ಪಳ್ಳಿ ಸುಜಿತ್ ಭವನ ನಿವಾಸಿ ಜೋಯ್ಸ್ (74) ಹುಂಜ ಕೋಳಿ ಕುಕ್ಕಿ ಗಾಯಗೊಂಡಿರುವ ವೃದ್ದೆ. ನಿನ್ನೆ ಅಂಗಡಿಗೆ ಹೋಗಿ ಮನೆಗೆ ಮರಳುತ್ತಿ ರುವ ಮಧ್ಯೆ ಇವರದೇ ಕೋಳಿ ಕುಕ್ಕಿದೆ. ಹಾರಿ ಬಂದು ತಲೆಯಮೇಲೆ ಕುಳಿತ ಕೋಳಿ ಮೂಗಿನ ಬದಿ, ಹುಬ್ಬಿಗೆ ಕುಕ್ಕಿ ಗಾಯಗೊಳಿಸಿದೆ. ಜೋಯ್ಸ್‌ರ ಬೊಬ್ಬೆ ಕೇಳಿ ನೆರೆಮನೆಯ ಮಹಿಳೆಯೋರ್ವೆ ತಲುಪಿ ಕೋಳಿಯನ್ನು ಓಡಿಸಿದ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಕ್ಕೆ 12 ಹೊಲಿಗೆ ಹಾಕಿರುವುದಾಗಿ …

ಫ್ಯಾಶನ್ ಶೋ ಹೆಸರಲ್ಲಿ ಯುವತಿಯರನ್ನು ದುಬಾಯಿಗೆ ತಲುಪಿಸಿ ಸೆಕ್ಸ್ ರ‍್ಯಾಕೆಟ್‌ಗೆ ಹಸ್ತಾಂತರ: ಮೂವರ ಬಂಧನ

ಕೊಚ್ಚಿ: ಫ್ಯಾಶನ್ ಶೋನಲ್ಲಿ ಭಾಗವಹಿಸಲು ಅವಕಾಶವೊದಗಿಸವು ದಾಗಿ ತಿಳಿಸಿ ಯುವತಿಯರನ್ನು ದುಬಾಯಿಗೆ ತಲುಪಿಸಿ ವೇಶ್ಯಾವಾಟಿಕೆ ಜಾಲಕ್ಕೆ ಒಪ್ಪಿಸುವ ಯುವತಿಯರ  ತಂಡ ಸೆರೆಗೀಡಾಗಿದೆ. ಆಲುವ  ತೈನೋತ್‌ನ ಕಡವಿಲ್ ರೋಡ್‌ನ ಮನೆಯೊಂದರಲ್ಲಿ  ವಾಸಿಸುವ ಗುರುವಾಯೂರು ತೈಕ್ಕಾಡ್ ನಿವಾಸಿ ಸ್ಟೋಯಿಸಿಟಿ ಮುಟ್ಟತ್ತ್  ಯಾನೆ ಸಿಂಧು (56), ತಿರುವನಂತಪುರ ಕುನ್ನತ್ತುಕಾಲ್ ಮಣ್ಣಂಕೋಡ್ ಪೊಂಙವಿಳ ಜೆಸಿ ವೀಟಿಲ್‌ನ ಅಲೀನ ಎಬ್ರಹಾಂ (23), ಮಲಪ್ಪುರಂ ಪೊನ್ನಾನಿ ಬಿಎಂ ಪುಕ್ಕಯಿಲ್ ವೀಟಿಲ್‌ನ ಮಂಜಿಮ (25) ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಫ್ಯಾಶನ್ ಶೋ ಹೆಸರಲ್ಲಿ ಯುವತಿಯರನ್ನು ದುಬಾಯಿಗೆ ಕರೆದೊಯ್ದು  …

10ರ ಬಾಲಕ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

ಕೊಚ್ಚಿ: ಹತ್ತರ ಹರೆಯದ ಬಾಲಕನ ಮೃತದೇಹ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಲಯಾಟೂರ್ ಚೆರಿಯಂಪರಂಬಿಲ್ ರಮೇಶನ್- ದಿವ್ಯಾ ದಂಪತಿ ಪುತ್ರ ಆಗತ್ (10) ಮೃತಪಟ್ಟ ಬಾಲಕ. ದಿವ್ಯರ ಮನೆಯ ಮಲಗುವ ಕೊಠಡಿಯ ಫ್ಯಾನ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆಗತ್‌ನ ಮೃತದೇಹ ಪತ್ತೆಯಾಗಿದೆ. ಕೂಡಲೇ ಆಸ್ಪತ್ರೆಗೆ ತಲುಪಿಸಿದರಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. 5ನೇ ತರಗತಿ ವಿದ್ಯಾರ್ಥಿಯಾದ ಆಗತ್  ನೇಣು ಬಿಗಿಯಲು ಕಾರಣವೇನೆಂಬುದು ಸ್ಪಷ್ಟಗೊಂಡಿಲ್ಲ.  ಆತ್ಮಹತ್ಯೆಯಾ ಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮಾತ್ರವೇ ಸಾವಿನ ಕಾರಣ …

ಕಲ್ಲಡ್ಕ-ಚೆರ್ಕಳ ರಸ್ತೆಗೆ ಟೆಂಡರ್ 29.83 ರೂ.ಗಳ ಕಾಮಗಾರಿಗೆ ಅಂಗೀಕಾರ

ತಿರುವನಂತಪುರ: ಶಾಸಕರಾಗಿ ಆಯ್ಕೆಯಾದ ಕಲ್ಲಟ್ರ ಮಾಹಿನ್ ಹಾಜಿಯವರ ವಿನಂತಿ ಮೇರೆಗೆ ಮುಖ್ಯಮಂತ್ರಿ ವಿ.ಡಿ.ಸತೀಶನ್ ನೇರವಾಗಿ ಮಧ್ಯಪ್ರವೇಶಿಸಿ ಕಲ್ಲಡ್ಕ-ಚೆರ್ಕಳ ರಸ್ತೆ ಅಭಿವೃದ್ಧಿಗೆ 29.83 ಕೋಟಿ ರೂ.ಗಳ ಟೆಂಡರ್ ಕ್ರಮಗಳನ್ನು ಅಂಗೀಕರಿಸಲಾಗಿದೆ. ಈ ಮೊದಲು ಆಡಳಿತಾನುಮತಿ ಲಭಿಸಿಯೂ ತಾಂತ್ರಿಕ ಕಾರಣ ಹೇಳಿ ಕೈ ಬಿಡಲಿರುವ ಯತ್ನ ನಡೆಯುತ್ತಿದ್ದ ಮಧ್ಯೆ ಮುಖ್ಯಮಂತ್ರಿಯ ಈ ಮಧ್ಯಪ್ರವೇಶದಿಂದಾಗಿ ಅನುಕೂಲ ಕ್ರಮ ಉಂಟಾಗಿದೆ. ಕಿಲೋ ಮೀಟರ್ 33/000, 52/190 ವರೆಗಿರುವ ಭಾಗದಲ್ಲಿ ಮೊದಲ ಹಂತದಲ್ಲಿ ಕಾಮಗಾರಿ ಪೂರ್ತಿಗೊಳಿ ಸಲಾಗಿತ್ತು. ಪ್ರಸ್ತುತ ರಸ್ತೆಯ ಬಿಸಿ ಕಾಮಗಾರಿಗೆ ಬೇಕಾಗಿ …

ಹಿರಿಯ ಕೃಷಿಕ ನಿಧನ

ಉಪ್ಪಳ: ಮಂಗಲ್ಪಾಡಿ ಪಂಜಗುತ್ತು ನಿವಾಸಿ, ಹಿರಿಯ ಕೃಷಿಕ ದೂಮಣ್ಣ ಶೆಟ್ಟಿ (90) ನಿನ್ನೆ ನಿಧನ ಹೊಂದಿದರು. ಅಂಬಾರು ಶ್ರೀ ಸದಾಶಿವ ದೇವಸ್ಥಾನದ ಸೇವಾ ಸಮಿತಿಯಲ್ಲಿ ೩೫ ವರ್ಷ ವಿವಿಧ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಪಂಜಗುತ್ತು ತರವಾಡಿನ ಹಿರಿಯರಾಗಿದ್ದಾರೆ. ಇವರ ಪತ್ನಿ ಮುತ್ತಕ್ಕೆ ಶೆಟ್ಟಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಹೇಮರಾಜ್ ಶೆಟ್ಟಿ, ಸೋಮನಾಥ ಶೆಟ್ಟಿ, ವಿಮಲ, ಉಮಾವತಿ, ಪದ್ಮಾವತಿ, ಸೊಸೆಯಂ ದಿರಾದ ನವ್ಯ, ವಿದ್ಯಾ, ಅಳಿಯಂದಿರಾದ ಚಂದ್ರಹಾಸ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ಸುರೇಶ ಶೆಟ್ಟಿ, …

ರಂಗಶಂಕರ ಬೆಂಗಳೂರು ನೇತೃತ್ವದಲ್ಲಿ ಕಾಸರಗೋಡಿನಲ್ಲಿ ಕನ್ನಡ ನಾಟಕೋತ್ಸವ ನಾಳೆಯಿಂದ

ಕಾಸರಗೋಡು: ಭಾರತ ಸರಕಾರದ ಸಂಸ್ಕೃತಿ ಸಚಿವಾಲಯ, ಸವಾಕ್ ಮತ್ತು ಥಿಯೇಟ್ರಿಕ್ಸ್ ಕಾಸರಗೋಡು ಇವುಗಳ ಸಹಕಾರದೊಂದಿಗೆ ರಂಗಶಂಕರ ಬೆಂಗಳೂರು ಹಮ್ಮಿಕೊಳ್ಳುವ ಈ ಬಾರಿಯ ಕನ್ನಡ ನಾಟಕೋತ್ಸವ ಕಾಸರಗೋಡಿನಲ್ಲಿ ನಡೆಯಲಿದೆ. ವಿವಿಧ ಜಿಲ್ಲೆಗಳಿಂದ ನಾಲ್ವರು ನಿರ್ದೇಶಕರು ಹಾಗೂ ನಾಲ್ಕು ತಂಡಗಳನ್ನೊಳಗೊಂಡ ನಾಟಕೋತ್ಸವ ನಾಳೆಯಿಂದ ೨೪ರವರೆಗೆ ಸಂಜೆ ೭ಕ್ಕೆ ಕಾಸರಗೋಡು ಪಿಲಿಕುಂಜೆ ಟೌನ್‌ಹಾಲ್‌ನಲ್ಲಿ ಪ್ರದರ್ಶನಗೊಳ್ಳಲಿದೆ. ನಾಳೆ ನಿಸರ್ಗಪ್ರಿಯ ರಚಿಸಿ ಮಂಜುನಾಥ ಎಲ್ ಬಡಿಗೇರ ನಿರ್ದೇಶಿಸಿದ  ‘ಶುನಶ್ಯೇಪ’ ನಾಟಕವನ್ನು ಒಡ್ಡೋಲಗ ರಂಗಪರ್ಯಟನೆ ಹಿತ್ತಲಕೈ (ಸಿದ್ಧಾಪುರ) ತಂಡ ಪ್ರದರ್ಶಿಸಲಿದೆ. ೨೨ರಂದು ವಿವೇಕ ಶಾನಭಾಗ ರಚಿಸಿ …

ಕಾಸರಗೋಡು ಮೆಡಿಕಲ್ ಕಾಲೇಜ್‌ಗೆ ಪ್ರಥಮ ಪರಿಗಣನೆ- ಮುಖ್ಯಮಂತ್ರಿ

ಕಾಸರಗೋಡು: ಕಾಸರಗೋಡು ಮೆಡಿಕಲ್ ಕಾಲೇಜು ಪೂರ್ಣ ಮಟ್ಟ ದಲ್ಲಿ ಸಜ್ಜುಗೊಳಿಸಲು ಪ್ರಥಮ ಪರಿಗಣನೆ ನೀಡುವುದಾಗಿ ಮುಖ್ಯಮಂತ್ರಿ ವಿ.ಡಿ. ಸತೀಶನ್ ಕಾಸರಗೋಡು ಶಾಸಕರಾಗಿ ಆಯ್ಕೆಯಾದ ಕಲ್ಲಟ್ರ ಮಾಹಿನ್ ಹಾಜಿಯವರಿಗೆ ಭರವಸೆ ನೀಡಿದ್ದಾರೆ. ಅಭಿವೃದ್ಧಿರಂಗದಲ್ಲಿ ಕಾಸರಗೋಡಿನ ಲೋಪವನ್ನು ಹಾಗೂ ಬೇಡಿಕೆಗಳನ್ನು ಮುಖ್ಯಮಂತ್ರಿ ವಿ.ಡಿ. ಸತೀಶನ್ ಹಾಗೂ ಕೈಗಾರಿಕಾ ಸಚಿವ ಪಿ.ಕೆ. ಕುಂಞಾಲಿಕುಟ್ಟಿ ಅವರ ಗಮನಕ್ಕೆ ತರಲಾಯಿತು. ಮಾಜಿ ಶಾಸಕ ಎನ್.ಎ. ನೆಲ್ಲಿಕುನ್ನು, ನ್ಯಾಯವಾದಿ ಎ. ಗೋವಿಂ ದನ್ ನಾಯರ್, ಮಾಹಿನ್ ಕೇಳೋಟ್, ಎಂ.ಎ.ಎಚ್. ಮಹಮ್ಮೂದ್, ಅನ್ವರ್ ಕೋಳಿಯಡ್ಕ, ಸಿದ್ದಿಕ್ ಪಳ್ಳಿಪುಳ …

ಕಟ್ಟಿನಿಂತ ಕಪ್ಪು ನೀರು: ಕಲ್ಮಾಡಿ ತೋಡು ಪರಿಸರದ ಜನರಿಗೆ ದುರ್ವಾಸನೆ ಬದುಕು

ಕಾಸರಗೋಡು: ನೆಲ್ಲಿಕುಂಜೆ- ಬಂಗರಗುಡ್ಡೆ- ಕಡಪ್ಪುರ ಈ ಭಾಗ ದಲ್ಲಿ ಹರಿದುಹೋಗುವ ಕಲ್ಮಾಡಿ ತೋಡು ಈಗ ದುರ್ವಾಸನೆ ಕೇಂದ್ರವಾಗಿದೆ. ಬಂಗರಗುಡ್ಡೆ ಹಾಗೂ ಕಡಪ್ಪುರವನ್ನು ಜೋಡಿಸುವ ಅಣೆಕಟ್ಟಿನಿಂದ ಪಳ್ಳಂ ಭಾಗಕ್ಕಿರುವ ಸೇತುವೆವರೆಗಿನ ಈಸ್ಥಳದಲ್ಲಿ ದುರ್ಗಂ ಧದಿಂದ ಪರಿಸರ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಪ್ಪಗಿನ ನೀರು ತೋಡಿನಲ್ಲಿ ಕಟ್ಟಿ ನಿಂತಿದ್ದು, ಈ ಪರಿಸರದ ಬಾವಿ ಹಾಗೂ ಕೊಳವೆ ಬಾವಿಗಳಿಗೆ ಒರತೆಯಾಗಿ ಈ ಮಲಿನಜಲ ಸೇರಲು ಸಾಧ್ಯವಿದೆ. ಕುಡಿಯಲು ಅಥವಾ ಸ್ನಾನ ಮಾಡಲು, ಬಟ್ಟೆ ತೊಳೆಯಲು ಕೂಡಾ  ಉಪಯೋ ಗಿಸಲಾಗದಷ್ಟು ತೋಡಿನ ನೀರು …