ಬೆಳ್ಳೂರು ಪಂಚಾಯತ್‌ನಲ್ಲಿ ಬಿಜೆಪಿ ನಾಯಕತ್ವ-ಕಾರ್ಯಕರ್ತರ ಮಧ್ಯೆ ಸ್ಪರ್ಧೆ: ಸ್ವತಂತ್ರ ಅಭ್ಯರ್ಥಿಯಾಗಿ ಉಪಾಧ್ಯಕ್ಷೆ ನಾಮಪತ್ರ ಸಲ್ಲಿಕೆ
ಮುಳ್ಳೇರಿಯ: ಬಿಜೆಪಿಗೆ ಅಡಿ ಪಾಯ ಭದ್ರವಾಗಿರುವ ಪಂಚಾ ಯತ್‌ಗಳಲ್ಲಿ ಒಂದಾಗಿರುವ ಬೆಳ್ಳೂರಿ ನಲ್ಲಿ ಈ ಬಾರಿ ಪಕ್ಷ ತೀವ್ರ ಸವಾಲನ್ನು ಎದುರಿಸುತ್ತಿದೆಯೆಂದು ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ. ಚುನಾವಣೆಯಲ್ಲಿ ಈ ಪಂಚಾಯತ್ ನಲ್ಲಿ ಪಕ್ಷದ ಮುಖಂ ಡರು ಹಾಗೂ ಕಾರ್ಯಕರ್ತರ ಮಧ್ಯೆ ಪ್ರಧಾನ ಸ್ಪರ್ಧೆಯೆಂದು ಇಲ್ಲಿನವರು ತಿಳಿಸುತ್ತಾರೆ. ಅಭ್ಯರ್ಥಿ ನಿರ್ಣಯದಲ್ಲಿ ಉಂಟಾಗಿ ರುವ ವೈಮನಸ್ಸಿನ ಹಿನ್ನೆಲೆಯಲ್ಲಿ ಪಂಚಾಯತ್‌ನಲ್ಲಿ ಈ ಬಾರಿ ಉಪಾ ಧ್ಯಕ್ಷೆಯಾಗಿರುವ ಗೀತಾ ಸ್ವತಂತ್ರೆಯಾಗಿ ಸ್ಪರ್ಧಿಸುತ್ತಿದ್ದಾರೆ. ಇದು ಪಕ್ಷದಲ್ಲಿ ಇರಿಸುಮುರಿಸಿಗೆ ಕಾರಣವಾಗಿದೆ. ತನಗಾಗಿ ಅಲ್ಲ ಕಾರ್ಯಕರ್ತರಿಗಾಗಿ ತಾನು …