ಕಟ್ಟಿನಿಂತ ಕಪ್ಪು ನೀರು: ಕಲ್ಮಾಡಿ ತೋಡು ಪರಿಸರದ ಜನರಿಗೆ ದುರ್ವಾಸನೆ ಬದುಕು
ಕಾಸರಗೋಡು: ನೆಲ್ಲಿಕುಂಜೆ- ಬಂಗರಗುಡ್ಡೆ- ಕಡಪ್ಪುರ ಈ ಭಾಗ ದಲ್ಲಿ ಹರಿದುಹೋಗುವ ಕಲ್ಮಾಡಿ ತೋಡು ಈಗ ದುರ್ವಾಸನೆ ಕೇಂದ್ರವಾಗಿದೆ. ಬಂಗರಗುಡ್ಡೆ ಹಾಗೂ ಕಡಪ್ಪುರವನ್ನು ಜೋಡಿಸುವ ಅಣೆಕಟ್ಟಿನಿಂದ ಪಳ್ಳಂ ಭಾಗಕ್ಕಿರುವ ಸೇತುವೆವರೆಗಿನ ಈಸ್ಥಳದಲ್ಲಿ ದುರ್ಗಂ ಧದಿಂದ ಪರಿಸರ ನಿವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಪ್ಪಗಿನ ನೀರು ತೋಡಿನಲ್ಲಿ ಕಟ್ಟಿ ನಿಂತಿದ್ದು, ಈ ಪರಿಸರದ ಬಾವಿ ಹಾಗೂ ಕೊಳವೆ ಬಾವಿಗಳಿಗೆ ಒರತೆಯಾಗಿ ಈ ಮಲಿನಜಲ ಸೇರಲು ಸಾಧ್ಯವಿದೆ. ಕುಡಿಯಲು ಅಥವಾ ಸ್ನಾನ ಮಾಡಲು, ಬಟ್ಟೆ ತೊಳೆಯಲು ಕೂಡಾ ಉಪಯೋ ಗಿಸಲಾಗದಷ್ಟು ತೋಡಿನ ನೀರು …
Read more “ಕಟ್ಟಿನಿಂತ ಕಪ್ಪು ನೀರು: ಕಲ್ಮಾಡಿ ತೋಡು ಪರಿಸರದ ಜನರಿಗೆ ದುರ್ವಾಸನೆ ಬದುಕು”