ಕೇರಳವನ್ನು ಮತೀಯ ರಾಜ್ಯವನ್ನಾಗಿ ಮಾಡಲು ಯತ್ನ-ಸಿಪಿಎಂ
ಮಂಜೇಶ್ವರ: ದೇವರ ರಾಜ್ಯ ವೆಂದು ಹೆಸರು ಪಡೆದ ಕೇರಳವನ್ನು ಯುಡಿಎಫ್ ಮತ್ತು ಬಿಜೆಪಿ ಮತೀಯ ರಾಜ್ಯವನ್ನಾಗಿಸಲು ಶ್ರಮಿಸುತ್ತಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎಂ ರಾಜಗೋಪಾಲನ್ ನುಡಿದರು. ಸಿಪಿಎಂ ನೇತಾರ, ರೈತ ಮುಖಂಡ ಬಿಎಂ ರಾಮಯ್ಯ ಶೆಟ್ಟಿಯವರ 23ನೇ ಸಂಸ್ಮರಣೆ ದಿನಾಚರಣೆಯನ್ನು ಹೊಸಂಗಡಿಯಲ್ಲಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಬಿಜೆಪಿ ಆಡಳಿತದ ಉತ್ತರ ಪ್ರದೇಶ, ದೆಹಲಿ ರಾಜ್ಯಗಳಲ್ಲಿ ಮತೀಯ ಅಲ್ಪಸಂಖ್ಯಾತರ ನಿವಾಸಗಳ ಮೇಲೆ ಬುಲ್ಡೋಸರ್ ಹತ್ತಿಸಿದಾಗ ಅದಕ್ಕೆದುರಾಗಿ ಹೋರಾಟ ನಡೆಸಿದ್ದು ಸಿಪಿಎಂ ಆಗಿದೆ. ಸಿಪಿಎಂನ ಪೋಲೀಟ್ ಬ್ಯೂರೋ ಸದಸ್ಯೆ …