ಮಂಜೇಶ್ವರ ಮಂಡಲ ಲೀಗ್ ಪದಾಧಿಕಾರಿಗಳು ಸ್ಪರ್ಧಾ ಕಣಕ್ಕೆ: ಮಂಡಲ ಕಮಿಟಿಯನ್ನು ಶೀಘ್ರ ವಿಸರ್ಜಿಸುವಂತೆ ಒತ್ತಾಯ
ಮಂಜೇಶ್ವರ: ಮುಸ್ಲಿಂಲೀಗ್‌ನ ಅಭ್ಯರ್ಥಿ ಪಟ್ಟಿ ಪೂರ್ತಿಗೊಳ್ಳುತ್ತಿ ರುವಂತೆಯೇ ಮಂಜೇಶ್ವರ ಮಂಡಲ ಮುಸ್ಲಿಂ ಲೀಗ್ ಕಮಿಟಿಯ ಎಲ್ಲಾ ಪದಾಧಿಕಾರಿಗಳು ಅಭ್ಯರ್ಥಿಗಳಾಗಿ ಸ್ಪರ್ಧಾ ಕಣಕ್ಕಿಳಿದಿದ್ದಾರೆ. ಇದರಿಂದ ಚುನಾವಣೆ ಸಂದರ್ಭದಲ್ಲೂ, ಅನಂತರವೂ ಪಕ್ಷಕ್ಕೆ ಮಂಜೇಶ್ವರ ಮಂಡಲದಲ್ಲಿ ಯಾರು ನೇತೃತ್ವ ನೀಡುವರೆಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಮಂಜೇಶ್ವರ ಮಂಡಲ ಲೀಗ್ ಕಮಿಟಿಯನ್ನು ಕೂಡಲೇ ವಿಸರ್ಜಿಸಿ ಅಡ್‌ಹೋಕ್ ಕಮಿಟಿ ರೂಪೀಕರಿಸಬೇಕೆಂದು ಒತ್ತಾಯವೂ ಕೇಳಿ ಬಂದಿದೆ. ಇದೇ ವೇಳೆ ಅಸೀಸ್ ಮರಿಕ್ಕೆ ಅವರನ್ನು ಮಂಡಲ ಲೀಗ್ ಅಧ್ಯಕ್ಷ ಸ್ಥಾನದಿಂದ ಅತೀ ಶೀಘ್ರವಾಗಿ ತೆರವುಗೊಳಿಸಬೇಕೆಂದು ಮಂಗಲ್ಪಾಡಿ ಪಂಚಾಯತ್ ಲೀಗ್ …