ರಾಪರ್ ವೇಡನ್‌ನಿಂದ ವಶಪಡಿಸಿದ್ದು ಯಥಾರ್ಥ ಹುಲಿ ಹಲ್ಲು: ಅರಣ್ಯ ಇಲಾಖೆಯಿಂದ ದೋಷಾರೋಪ ಪಟ್ಟಿ ಸಲ್ಲಿಸಲು ನಿರ್ಧಾರ
ಕೊಚ್ಚಿ: ಹುಲಿಯ ಹಲ್ಲು ವಶಪಡಿಸಿದ ಪ್ರಕರಣದಲ್ಲಿ ರಾಪರ್‌ವೇಡನ್‌ಗೆ ತಿರುಗೇಟು ಲಭಿಸಿದೆ. ವಶಪಡಿಸಿರುವುದು ನಿಜವಾದ ಹುಲಿಹಲ್ಲು ಆಗಿದೆ ಎಂದು ಖಚಿತಪಡಿಸಲಾಗಿದೆ. ಕೊಲ್ಕತ್ತದ ಜುವೋಲಜಿ ಲ್ಯಾಬ್‌ನಲ್ಲಿ ನಡೆಸಿದ ತಪಾಸಣೆಯಲ್ಲಿ ಹುಲಿ ಹಲ್ಲು ಎಂದು ಖಚಿತಪಡಿಸಲಾಗಿದೆ. ಪ್ರಕರಣದಲ್ಲಿ ಆರಣ್ಯ ಇಲಾಖೆ ಕೂಡಲೇ ದೋಷಾರೋಪ ಪಟ್ಟಿ ಸಲ್ಲಿಸಲಿದೆ. ಅನಧಿಕೃತವಾಗಿ ಹುಲಿ ಹಲ್ಲು ಕೈವಶವಿರಿಸಿಕೊಂಡಿರುವುದಕ್ಕೆ, ಮೃಗ ಬೇಟೆ ನಡೆಸಿರುವುದಾಗಿ ಆರೋಪಿಸಿ ವೇಡನ್ ವಿರುದ್ಧ ಈ ಮೊದಲೇ ಅರಣ್ಯ ಇಲಾಖೆ ಕೇಸು ದಾಖಲಿಸಿತ್ತು. ಆದರೆ ನಿಜವಾದ ಹುಲಿ ಹಲ್ಲು ಅಲ್ಲವೆಂದು ತಮಿಳುನಾಡಿನಿಂದ ಅಭಿಮಾನಿಯೋರ್ವ ಕೊಡುಗೆಯಾಗಿ ನೀಡಿರುವುದಾಗಿಯೂ …