ಪೆರಡಾಲ ಕ್ಷೇತ್ರ ಬ್ರಹ್ಮಕಲಶೋತ್ಸವ ನಾಳೆಯಿಂದ: ವಾಹನ ಪ್ರಚಾರಕ್ಕೆ ಚಾಲನೆ
ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ನಾಳೆ ಆರಂಭ ವಾಗಲಿದೆ. ಇದರ ಪ್ರಚಾರದಂಗವಾಗಿ ವಾಹನ ಪ್ರಚಾರಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಅವರು ಧ್ವಜ ಹಸ್ತಾಂತರಿಸಿ ಶುಭಕೋರಿದರು. ಅರ್ಚಕ ವೇದಮೂರ್ತಿ ಶಿವರಾಮ ಭಟ್ ಪೆರಡಾಲ ಪ್ರಾರ್ಥನೆ ಸಲ್ಲಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಜಗನ್ನಾಥ ರೈ ಪೆರಡಾಲ, ಕಾರ್ಯ ದರ್ಶಿ ನಿರಂಜನ ರೈ ಪೆರಡಾಲ, ಕೋಶಾಧಿಕಾರಿ ಸೂರ್ಯನಾರಾಯಣ ಬಿ., ಹಸಿರುವಾಣಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಪ್ರಚಾರ ಸಮಿತಿಯ ಡಾ. ಶ್ರೀಶಕುಮಾರ ಪಂಜಿತ್ತಡ್ಕ, …
Read more “ಪೆರಡಾಲ ಕ್ಷೇತ್ರ ಬ್ರಹ್ಮಕಲಶೋತ್ಸವ ನಾಳೆಯಿಂದ: ವಾಹನ ಪ್ರಚಾರಕ್ಕೆ ಚಾಲನೆ”