ಮುಸ್ಲಿಂ ಲೀಗ್ ಅಭ್ಯರ್ಥಿಗಳ ದ್ವಿತೀಯ ಪಟ್ಟಿ ಬಿಡುಗಡೆ
ಕುಂಬಳೆ: ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಗಿರುವ ಎರಡನೇ ಹಂತದ ಅಭ್ಯರ್ಥಿ ಪಟ್ಟಿಯನ್ನು ಮುಸ್ಲಿಂ ಲೀಗ್ ಪ್ರಕಟಿಸಿದೆ. ಜಿಲ್ಲಾ ಪಂಚಾಯತ್‌ನ ಕುಂಬಳೆ ಡಿವಿಶನ್‌ನಿಂದ ಅಸೀಸ್ ಕಳತ್ತೂರು, ಸಿವಿಲ್ ಸ್ಟೇಷನ್ ಡಿವಿಶನ್ ನಲ್ಲಿ ಪಿ.ಬಿ. ಶಫೀಕ್, ಚೆಂಗಳದಲ್ಲಿ ಜಸ್ನಾ ಮನಾಫ್ ಎಡನೀರು, ಬದಿಯಡ್ಕ (ಎಸ್‌ಸಿ)ದಲ್ಲಿ ಲಕ್ಷ್ಮಣ ಪೆರಿಯಡ್ಕ, ಮಂಜೇಶ್ವರದಲ್ಲಿ ಇರ್ಫಾನ ಇಕ್ಬಾಲ್, ಬೇಕಲ್‌ನಲ್ಲಿ ಶಹೀದ ರಾಶಿದ್, ಪೆರಿಯ ದಲ್ಲಿ ಜಿಶಾ ರಾಜು ಸ್ಪರ್ಧಿಸಲಿದ್ದಾರೆ. ಮಂಜೇಶ್ವರ ಬ್ಲೋಕ್ ಪಂಚಾಯತ್ ಡಿವಿಶನ್‌ಗಳು ಹಾಗೂ ಅಭ್ಯರ್ಥಿಗಳು: ಕುಂಜತ್ತೂರು- ಮೊಹಮ್ಮದ್ ಹನೀಫ್ ಕುಚ್ಚಿಕ್ಕಾಡ್, ಬಡಾಜೆ- ಸಯ್ಯಿದ್ ಸೈಫುಲ್ಲಾ …