ಕಳಿಯಾಟ ನೋಡಲೆಂದು ಹೋದ ಸಮಯದಲ್ಲಿ ಮನೆಯಲ್ಲಿ ಕಳವು: ಕಳಿಯಾಟ ನೋಡಲೆಂದು ಹೋದ ಸಮಯದಲ್ಲಿ ಮನೆಯಲ್ಲಿ ಕಳವು; ಇನ್ನೋರ್ವ ಆರೋಪಿಬಸ್ ಪ್ರಯಾಣ ಮಧ್ಯೆ ಸೆರೆ
ಕಾಸರಗೋಡು: ಚೀಮೇನಿಯಲ್ಲಿ ನಡೆದ ಕಳಿಯಾಟಂಗೆ ಕುಟುಂಬ ತೆರಳಿದ ಸಮಯದಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವುಗೈದ ಪ್ರಕರಣದ ದ್ವಿತೀಯ ಆರೋಪಿಯನ್ನು ಬಸ್ ಪ್ರಯಾಣ ಮಧ್ಯೆ ಪೊಲೀಸರು ಸೆರೆ ಹಿಡಿದಿದ್ದಾರೆ. ತೈತಪ್ರಂ ಪಾಣತ್ತನಡಿಯ ಎ.ಪಿ. ಹರಿದಾಸ್ (42)ನನ್ನು ಚೀಮೇನಿ ಪೊಲೀಸರು ಅರಮಂಙತ್‌ನಲ್ಲಿ ಸೆರೆ ಹಿಡಿದಿದ್ದಾರೆ. ತಲೆಮರೆಸಿಕೊಂಡಿದ್ದ ಹರಿದಾಸ್ ಬಸ್‌ನಲ್ಲಿ ಪ್ರಯಾಣಿಸು ತ್ತಿದ್ದಾನೆಂಬ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ದಾವಿಸಿ ಸೆರೆ ಹಿಡಿದ್ದಾರೆ. ಪ್ರಕರಣದ ಪ್ರಧಾನ ಆರೋಪಿಯಾದ ಕಾನಾಯಿ ತಂಬಾನ್ ಇತ್ತೀಚೆಗೆ ಸೆರೆಯಾಗಿದ್ದನು. ಚೀಮೇನಿ ಪೇಟೆಯ ಚೇತನ …