ಉದ್ಯೋಗ ನೀಡುವುದಾಗಿ ನಂಬಿಸಿ 3,50,000 ರೂ. ಪಡೆದು ವಂಚನೆ ಆರೋಪ: ಇಬ್ಬರ ವಿರುದ್ಧ ಕೇಸು

ಬದಿಯಡ್ಕ: ಉದ್ಯೋಗ ಕೊಡಿಸು ವುದಾಗಿ ನಂಬಿಸಿ 3,5೦,೦೦೦ ರೂ.ವನ್ನು ಮುಂಗಡವಾಗಿ ಪಡೆದು ನಂತರ ಆ ಉದ್ಯೋಗವನ್ನಾಗಲೀ, ನೀಡಿದ ಹಣವನ್ನಾಗಲೀ ಹಿಂತಿರುಗಿಸದೆ ವಂಚನೆ ಗೈದಿರುವುದಾಗಿ ಆರೋಪಿಸಿ ಯುವಕ ನೀಡಿದ ದೂರಿನಂತೆ ಇಬ್ಬರ ವಿರುದ್ಧ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮುಗು ಪಳ್ಳ ಹೌಸಿನ ಜೋಯಲ್ ಡಿಸೋಜಾ (22) ಎಂಬ ಯುವಕ ನೀಡಿದ ದೂರಿನಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಪ್ರತೀಶ್ ಸಿ. ಸೋಮನ್ ಮತ್ತು  ನೋರ್ತ್ ದೆಹಲಿಯ ಸೋಮ್ ಪ್ರಕಾಶ್ ಎಂಬಿಬ್ಬರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. …

ಪೆರ್ಲದಲ್ಲಿ ವ್ಯಾಪಾರಿಯಾಗಿದ್ದ ಕೃಷ್ಣ ಪೈ ನಿಧನ

ಪೆರ್ಲ: ಪೇಟೆಯಲ್ಲಿ ಹಲವಾರು ವರ್ಷಗಳ ಕಾಲ ಹಾರ್ಡ್‌ವೇರ್ ಅಂಗಡಿ ನಡೆಸುತ್ತಿದ್ದ ಪೆರ್ಲ ನಿವಾಸಿ  ಕೃಷ್ಣ ಪೈ ಬಜಕೂಡ್ಲು (68) ನಿಧನ ಹೊಂದಿದರು. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪೆರ್ಲ ಘಟಕದ ಅಧ್ಯಕ್ಷರಾಗಿದ್ದರು. ಇವರ ಪತ್ನಿ ಮಮತ ಪೈ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ದೇವಾ ನಂದ, ಜಯದೇವ, ಆದಿತ್ಯ, ಸೊಸೆ ಯಂದಿರಾದ ಆಬಾ, ರಾಧಿಕ, ಸಹೋದರಿ ವಿದ್ಯಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ನಿಧನದ ಶೋಕಾರ್ಥ ನಿನ್ನೆ ಪೆರ್ಲ ಪೇಟೆಯಲ್ಲಿ ಬೆಳಿಗ್ಗೆ 10 …

ಮುಸ್ಲಿಂಲೀಗ್ ಸದಸ್ಯೆಯ ಮತ: ಪೈವಳಿಕೆಯಲ್ಲಿ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಿಜೆಪಿಗೆ

ಪೈವಳಿಕೆ: ಪಂಚಾಯತ್‌ನಲ್ಲಿ ಮುಸ್ಲಿಂಲೀಗ್ ಸದಸ್ಯೆಯ ಬೆಂಬಲದೊಂದಿಗೆ ಬಿಜೆಪಿ ಜಯಗಳಿಸಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ಚುನಾವಣೆಯಲ್ಲಿ ಮುಸ್ಲಿಂ ಲೀಗ್ ಸದಸ್ಯೆ ಬಿಜೆಪಿಗೆ ಮತ ನೀಡಿದರು. ಲೀಗ್‌ನ ಮತ ಲಭಿಸಿದ ಹಿನ್ನೆಲೆಯಲ್ಲಿ ಆರೋಗ್ಯ- ಶಿಕ್ಷಣ ಸ್ಥಾಯಿ ಸಮಿತಿಯ ಚೆಯರ್ ಪರ್ಸನ್ ಆಗಿ ಬಿಜೆಪಿಯ ಸುಮನ ಜಿ. ಭಟ್ ಆಯ್ಕೆಯಾದರು. ಸಿಪಿಎಂನ ದಿನೇಶ್ವರಿ ನಾಗೇಶ್‌ರನ್ನು ಸುಮನ ಜಿ. ಭಟ್ ಸೋಲಿಸಿದ್ದಾರೆ. ಮುಸ್ಲಿಂ ಲೀಗ್‌ನ ಸದಸ್ಯೆ ಮೈಮೂನತುಲ್ ಮಿಸ್ರಿಯ ಬಿಜೆಪಿ ಸದಸ್ಯೆ ಸುಮನ ಜಿ. ಭಟ್‌ಗೆ ಮತ ನೀಡಿದ್ದಾರೆ. ಇದರಿಂದ ಸುಮನ ಭಟ್ …

ಬಿ.ಎಂ.ಎಸ್ ನೇತಾರ ನ್ಯಾ. ಸುಹಾಸ್ ಕೊಲೆ ಪ್ರಕರಣ: ಸ್ಪೆಷಲ್ ಪ್ರೋಸಿಕ್ಯೂಟರ್ ಆಗಿ ನ್ಯಾ. ಪಿ. ಪ್ರೇಮರಾಜನ್ ನೇಮಕ

ಕಾಸರಗೋಡು: ಕಾಸರಗೋಡು ನಗರದಲ್ಲಿ ೨೦೦೮ರಲ್ಲಿ   ನಡೆದ ಮತೀಯ ಗಲಭೆಯಲ್ಲಿ ಬಿಎಂಎಸ್‌ನ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷರಾಗಿದ್ದ ಕಾಸರಗೋಡು ತಾಲೂಕು ಕಚೇರಿ ಪರಿಸರ ನಿವಾಸಿ ನ್ಯಾಯವಾದಿ ಪಿ. ಸುಹಾಸ್ (38)ರನ್ನು ಕೊಲೆಗೈದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಪ್ರೋಸಿಕ್ಯೂಷನ್ ಪರ ವಾದಿಸಲು ನ್ಯಾಯವಾದಿ  ತಲಶ್ಶೇರಿಯ ಪಿ. ಪ್ರೇಮರಾಜನ್ ರನ್ನು ಸರಕಾರ ಸ್ಪೆಷಲ್ ಪ್ರೋಸಿಕ್ಯೂಟರನ್ನಾಗಿ ನೇಮಿಸಿದೆ. ಈ ಹಿಂದೆ ಬಿಜೆಪಿ ನೇತಾರ ನ್ಯಾಯವಾದಿ ಪಿ.ಎಸ್. ಶ್ರೀಧರನ್ ಪಿಳ್ಳೆಯವರನ್ನು ಈ ಪ್ರಕರಣದ  ಪರ ವಾದಿಸಲು ಸ್ಪೆಷಲ್ ಪ್ರೋಸಿಕ್ಯೂ ಟರನ್ನಾಗಿ ನೇಮಿಸಲಾಗಿತ್ತು. ಬಳಿಕ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲ್ಪಟ್ಟ …

ಕುಂಬಳೆ: ಟೋಲ್ ಸಂಗ್ರಹ ವಿರುದ್ಧ ಚಳವಳಿ ಎರಡನೇ ದಿನಕ್ಕೆ: ಇನ್ನಷ್ಟು ಮಂದಿಯ ಬೆಂಬಲ

ಕುಂಬಳೆ: ಕಾಸರಗೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ವಾಹನಗಳಿಂದ ಟೋಲ್  ವಸೂಲು ಮಾಡುವುದರ ವಿರುದ್ಧ ಕ್ರಿಯಾ ಸಮಿತಿ  ಆರಂಭಿಸಿದ ಅನಿರ್ದಿಷ್ಟಾವಧಿ ಚಳವಳಿ ಇಂದು ಎರಡನೇ ದಿನ ಮುಂದುವರಿಯುತ್ತಿದೆ. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಚಳವಳಿಯಲ್ಲಿ ಸಕ್ರಿಯನಾಗಿ ಪಾಲ್ಗೊಳ್ಳುತ್ತಿದ್ದು ಸಮಸ್ಯೆಗೆ ಪರಿಹಾರ ಕಾಣದೆ ಇದರಿಂದ ಹಿಂಜರಿಯುವು ದಿಲ್ಲವೆಂದು ತಿಳಿಸಿದ್ದಾರೆ.  ಇದೇ ವೇಳೆ ಚಳವಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಿದ್ದು ಇದ ಅಧಿಕಾರಿಗಳನ್ನು ಆತಂಕಕ್ಕೆ ಸಿಲುಕಿಸಿದೆ. ಇದರಿಂದ ನಿನ್ನೆ ಶುಲ್ಕ ಸಂಗ್ರಹವನ್ನು ನಾಲ್ಕು ಗಂಟೆ ನಿಲ್ಲಿಸಲಾಗಿತ್ತು. ನಿನ್ನೆ ಬೆಳಿಗ್ಗೆ 10ರಿಂದ ಮಧ್ಯಾಹ್ನ …

ರಾಜ್ಯ ಶಾಲಾ ಕಲೋತ್ಸವಕ್ಕೆ ದೀಪ ಪ್ರಜ್ವಲನೆ: 15,000ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ

ತೃಶೂರು: 64ನೇ ರಾಜ್ಯ ಶಾಲಾ ಕಲೋತ್ಸವಕ್ಕೆ ಇಂದು ಬೆಳಿಗ್ಗೆ ಚಾಲನೆ ನೀಡಲಾಯಿತು. ತೇಕಿನ್‌ಕ್ಕಾಡ್ ಮೈದಾನದಲ್ಲಿರುವ ಪ್ರಧಾನ ವೇದಿಕೆ ಯಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಲೋತ್ಸವವನ್ನು ಉದ್ಘಾಟಿ ಸಿದರು. ಶಿಕ್ಷಣ ಇಲಾಖೆ ಸಚಿವ ವಿ.ಎಸ್. ಶಿವನ್ ಕುಟ್ಟಿ ಅಧ್ಯಕ್ಷತೆ ವಹಿಸಿದರು. ಇಂದಿನಿಂದ ಈ ತಿಂಗಳ 18ರವರೆಗೆ ಶಾಲಾ ಕಲೋತ್ಸವ ಮುಂದು ವರಿಯಲಿದೆ. 25 ವೇದಿಕೆಗಳಲ್ಲಿಗಾಗಿ 249 ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. 15,000 ಕ್ಕೂ ಮಿಕ್ಕು ಕಲಾ ಪ್ರತಿಭೆಗಳು ಸ್ಪರ್ಧಿಸುವರು. ಬೆಳಿಗ್ಗೆ ಶಿಕ್ಷಣ ಇಲಾಖೆ ನಿರ್ದೇಶಕ ಎನ್.ಎಸ್.ಕೆ. ಉಮೇಶ್ ಧ್ವಜಾರೋಹಣಗೈದರು. …

ಗೃಹಿಣಿಗೆ ಲೈಂಗಿಕ ಕಿರುಕುಳ ಆರೋಪ: ಸಿಪಿಎಂ ನೇತಾರ ಸುಧಾಕರ ವಿರುದ್ಧ ಕೇಸು ದಾಖಲು

ಕಾಸರಗೋಡು: 48ರ ಹರೆಯದ ಗೃಹಿಣಿಗೆ ಲೈಂಗಿಕ ಕಿರುಕುಳ ನೀಡಲಾಯಿತೆಂಬ ಆರೋಪದ ಹಿನ್ನೆಲೆಯಲ್ಲಿ ಕೊನೆಗೂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸಿಪಿಎಂ ಮಾಜಿ ಕುಂಬಳೆ ಏರಿಯಾ ಕಾರ್ಯದರ್ಶಿ, ಪ್ರಸ್ತುತ ಎಣ್ಮಕಜೆ ಪಂಚಾಯತ್ ಸದಸ್ಯನಾದ ಇಚ್ಲಂಪಾಡಿ ಶಾಲೆ ಅಧ್ಯಾಪಕ ಎಸ್. ಸುಧಾಕರನ ವಿರುದ್ಧ ಕಾಸರಗೋಡು ಮಹಿಳಾ ಪೊಲೀಸರು ಅತ್ಯಾಚಾರ ಕೇಸು ದಾಖಲಿಸಿಕೊಂಡಿದ್ದಾರೆ. ಡಿಜಿಪಿಯವರ ನಿರ್ದೇಶ ಪ್ರಕಾರ ಕೇಸು ದಾಖಲಿಸಿ ಕೊಂಡಿರುವುದಾಗಿ ಸೂಚನೆಯಿದೆ. ಕಿರುಕುಳಕ್ಕೆ ಸಂಬಂಧಿಸಿ ಗೃಹಿಣಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಹಾಗೂ ಡಿಜಿಪಿಗೆ ದೂರು ನೀಡಿದ್ದರು. ಆರೋಪದ ಹಿನ್ನೆಲೆಯಲ್ಲಿ ಸುಧಾಕರನನ್ನು ಪಕ್ಷದಿಂದ …

ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್ ಶುಲ್ಕ ಸಂಗ್ರಹ ವಿರುದ್ಧ ಅನಿರ್ಧಿಷ್ಟಾವಧಿ ಚಳವಳಿ ಆರಂಭ

ಕುಂಬಳೆ: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳಿಂದ ಟೋಲ್ ಶುಲ್ಕ ಸಂಗ್ರಹಿಸುವುದರ ವಿರುದ್ಧ  ಕ್ರಿಯಾ ಸಮಿತಿ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಚಳವಳಿ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಟೋಲ್ ಸಂಗ್ರಹ ಕೇಂದ್ರದ ಸಮೀಪ ಹೆದ್ದಾರಿ ಬದಿ ಚಪ್ಪರ ನಿರ್ಮಿಸಿ ಚಳವಳಿ ನಡೆಸಲಾಗುತ್ತಿದೆ.  ಇಂದು ಬೆಳಿಗ್ಗೆ  ವಾಹನಗಳಿಂದ ಟೋಲ್ ಸಂಗ್ರಹಿಸುತ್ತಿರುವುದನ್ನು ಕ್ರಿಯಾ ಸಮಿತಿ ಪದಾಧಿಕಾರಿಗಳು ಅಧಿಕಾರಿಗಳೊಂದಿಗೆ ಪ್ರಶ್ನಿಸಿದ್ದು, ಈ ವೇಳೆ ವಾಗ್ವಾದ ಉಂಟಾಯಿತೆನ್ನಲಾಗಿದೆ. ಸ್ಥಳದಲ್ಲಿ ಪೊಲೀಸರು ಬಿಗು ಬಂದೋಬಸ್ತ್ ಏರ್ಪಡಿಸಿದ್ದಾರೆ. ಚಳವಳಿಗೆ ಶಾಸಕರಾದ ಎಕೆಎಂ ಅಶ್ರಫ್, ಎನ್.ಎ. ನೆಲ್ಲಿಕುನ್ನು, ಜಿಲ್ಲಾ ಪಂಚಾಯತ್ ಸದಸ್ಯರಾದ …

ಹೃದಯಾಘಾತ: ಚಾಲಕ ನಿಧನ

ಮಾನ್ಯ: ಕಾರ್ಮಾರು ಬಳಿಯ ಚೆಡೇಕಲ್ಲು ನಿವಾಸಿ ವಿನ್ಸೆಂಟ್ ಡಿಸೋಜಾ (63) ಇಂದು ಮುಂ ಜಾನೆ ಹೃದಯಾಘಾತದಿಂದ ನಿಧನ ಹೊಂದಿದರು. ಇವರು ವಾಹನ ಚಾಲಕನಾಗಿ ಕೆಲಸ ನಿರ್ವಹಿಸುತ್ತಿ ದ್ದರು. ಮೃತರು ಪತ್ನಿ ಅಲಿಸ್ ಡಿಸೋಜಾ, ಮಕ್ಕಳಾದ ಪ್ರವೀಣ್ ಡಿಸೋಜಾ, ಪವಿತಾ ಡಿಸೋಜಾ, ಪ್ರಮಿತಾ ಡಿಸೋಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿ ದ್ದಾರೆ. ಮೃತರ ಅಂತ್ಯ ಸಂಸ್ಕಾರ ನಾಳೆ ಕೊಲ್ಲಂಗಾನ ಸಂತ ಥೋಮಸ್‌ರ ದೇವಾಲಯದಲ್ಲಿ ನಡೆಯಲಿದೆ.

ಮನೆಯಿಂದ ವಿದೇಶಿ ಕರೆನ್ಸಿ ಸೇರಿ 4೦೦೦ ರೂ.ಕಳವು

ಬದಿಯಡ್ಕ: ಕಳ್ಳರು ಮನೆಗೆ ನುಗ್ಗಿ ವಿದೇಶಿ ಕರೆನ್ಸಿ ಹಾಗೂ 4೦೦೦ ರೂ. ಕಳವು ಗೈದ ಬಗ್ಗೆ ಬದಿಯಡ್ಕ ಪೊಲೀಸರಿಗೆ ದೂರು ನೀಡಲಾಗಿದೆ. ಶೇಣಿ ಮಣಿಯಂಪಾರ ಹೌಸ್‌ನ ಮುಹಮ್ಮೂದ್ ಮೂಸಾನ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಆ ಬಗ್ಗೆ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಜನವರಿ 12ರಂದು ಸಂಜೆ 6 ಗಂಟೆ ಮತ್ತು 7.30 ರ ನಡುವೆ ತಮ್ಮ ಮನೆಯ ಬಾಗಿಲ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಮನೆಯೊಳಗಿನ ಕಪಾಟ್‌ನಲ್ಲಿ …