ಅಕ್ರಮ ಹೊಯ್ಗೆ ಸಾಗಾಟದ ಬಗ್ಗೆ ಮಾಹಿತಿ ನೀಡಿದ ಶಂಕೆಯಿಂದ : ಯುವಕನಿಗೆ ಹಲ್ಲೆ: ಮೂವರ ವಿರುದ್ಧ ನರಹತ್ಯಾಯತ್ನ ಪ್ರಕರಣ ದಾಖಲು
ಕುಂಬಳೆ: ಅಕ್ರಮವಾಗಿ ಹೊಯ್ಗೆ ಸಾಗಾಟದ ಬಗ್ಗೆ ಪೊಲೀಸರಿಗೆ ಗುಪ್ತ ಮಾಹಿತಿ ನೀಡಿದ ಶಂಕೆಯ ಹೆಸರಲ್ಲಿ ತಂಡವೊಂದು ಯುವಕನಿಗೆ ಹಲ್ಲೆ ನಡೆಸಿದ ದೂರಿನಂತೆ ಮೂವರ ವಿರುದ್ಧ ಕುಂಬಳೆ ಪೊಲೀಸರು ನರಹತ್ಯಾ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊಗ್ರಾಲ್ ಮುಸ್ಲಿಂ ಲೀಗ್ ಕಚೇರಿ ಬಳಿಯ ಬೈತುಲ್ ಸುರೂಲ್ ನಿವಾಸಿ ಅಬ್ದುಲ್ಲ ಅರ್ಶಾದ್ (35) ಎಂಬವರು ನೀಡಿದ ದೂರಿನಂತೆ ಮೊಗ್ರಾಲ್ ನಿವಾಸಿಗಳಾದ ಗಫೂರ್, ತನ್ಸೀಫ್ ಮತ್ತು ಸನದ್ ಎಂಬವರ ವಿರುದ್ಧ ಈ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಹೊಯ್ಗೆ ಸಾಗಾಟದ ಬಗ್ಗೆ ಪೊಲೀಸರಿಗೆ ಮಾಹಿತಿ …