ನಿವೃತ್ತ ಅಂಚೆ ಅಧಿಕಾರಿ ಬಾಬು ನಾಯ್ಕ ಕೆ. ನಿಧನ

ಪೆರ್ಲ: ಮೂಲತಃ ಪೆರ್ಲ ಕಜಂಪಾಡಿ ನಿವಾಸಿ ಹಾಗೂ ಈಗ ಕಾಸರಗೋಡು ನುಳ್ಳಿಪಾಡಿಯಲ್ಲಿ ವಾಸಿಸುತ್ತಿದ್ದ ಭಾರತೀಯ ಅಂಚೆ ಇಲಾಖೆಯ ಪುಣೆಯ ನಿವೃತ್ತ ಸೀನಿಯರ್ ಸುಪರಿಂಟೆಂಡೆಂಟ್ (ಐಪಿಎಸ್) ಬಾಬು ನಾಯ್ಕ ಕೆ. (84) ನಿಧನ ಹೊಂದಿದರು. ಮೃತರು ಪತ್ನಿ ಕಾಸರಗೋಡು ಸರಕಾರಿ ಹೈಸ್ಕೂಲ್‌ನ ನಿವೃತ್ತ  ಹಿಂದಿ ಅಧ್ಯಾಪಿಕೆ ಸುನಂದ ಭಾ, ಮಕ್ಕಳಾದ ವರ್ಕಾಡಿ ವಿದ್ಯುತ್ ಸೆಕ್ಷನ್ ಕಚೇರಿಯ ಸೀನಿಯರ್  ಸುಪರಿಂಟೆಂಡೆಂಟ್ ಶ್ರೀಮಾ ನಾಯ್ಕ್, ಎಸ್‌ಬಿಐಯ ಚೀಫ್ ಅಸೋಸಿಯೇಟ್ ರೂಪಾಶ್ರೀ ಬಿ, ಅಳಿಯಂದಿರಾದ ವಿಜಯ್ ಕುಮಾರ್ (ಮಂಗಳೂರು ವೆನ್ಲಾಕ್ ಆಸ್ಪತ್ರೆಯ ನಿವೃತ್ತ …

ಟಿ. ರಮಣಿ ನಿಧನ

ಕಾಸರಗೋಡು: ವಿದ್ಯಾನಗರ ಚಿನ್ಮಯಾ ಕಾಲನಿ ಸೋಪಾನ ನಿವಾಸಿ ಟಿ. ರಮಣಿ (74) ನಿಧನ ಹೊಂದಿದರು. ಮೃತರು ಪತಿ ಎ.ಸಿ. ನಾರಾಯಣನ್, ಮಕ್ಕಳಾದ ಮಹೇಂದ್ರನ್, ರನೀಶ್, ಸೊಸೆಯಂ ದಿರಾದ ರಮ್ಯ, ಅಮೃತ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಬಿಎಂಎಸ್ ಮಧೂರು ವಲಯ ಪ್ರತಿನಿಧಿ ಸಮ್ಮೇಳನ

ಮಧೂರು: ಬಿಎಂಎಸ್ ಮಧೂರು ವಲಯ ಪ್ರತಿನಿಧಿ ಸಮ್ಮೇಳನ ಕೂಡ್ಲು ಅಧ್ಯಾಪಕ ಭವನ ಸಭಾಂಗಣದಲ್ಲಿ ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಮಧೂರು ವಲಯ ಅಧ್ಯಕ್ಷ ವಸಂತ ಕೊರುವೈಲು ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಅನಿಲ್ ಬಿ. ನಾಯರ್, ಕೆ. ಗುರುದಾಸ್, ಬಿ. ಮನೀಶ್, ಕೆ. ಸುರೇಶ್, ಎನ್. ನಮಿತ, ಎ. ದೇವಕಿ, ಎ. ತೇಜಸ್, ಕೆ.ಎಸ್. ಶರತ್‌ಕುಮಾರ್, ಪ್ರಭಾಶಂಕರ, ಕೆ.ದಯಾನಂದ, ಕೆ. ಸದಾಶಿವ ಮಾತನಾಡಿದರು. ವಲಯ ಕಾರ್ಯದರ್ಶಿ ಸಿ.ಎಚ್. ಶ್ರೀಧರ ಸ್ವಾಗತಿಸಿ,ವಲಯ ಕೋಶಾಧಿಕಾರಿ ಕೆ. ಅವಿನಾಶ್ ವಂದಿಸಿದರು.

ಶಿರಿಯ, ಬಂಗ್ರಮಂಜೇಶ್ವರ ಕರಾವಳಿ ಯೋಜನೆಗಳ ಉದ್ಘಾಟನೆ ನಾಳೆ

ಮಂಜೇಶ್ವರ: ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮೂಲಕ ನವೀಕರಿಸುವ ಸಂಯೋಜಿತ ಆಧುನಿಕ ಕರಾವಳಿ ಮತ್ಸ್ಯ ಗ್ರಾಮ ಯೋಜನೆ ಅಂಗವಾಗಿ ಶಿರಿಯ, ಬಂಗ್ರಮಂಜೇಶ್ವರಗಳ ವಲಯಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನಾಳೆ ಸಂಜೆ 3 ಗಂಟೆಗೆ ಮಂಜೇಶ್ವರ ಹಾರ್ಬರ್ ಪರಿಸರದಲ್ಲಿ ನಡೆಯಲಿದೆ. ರಾಜ್ಯ ಸರಕಾರದ ನೂರು ದಿನ ಕ್ರಿಯಾ ಯೋಜನೆಯಲ್ಲಿ ಒಳಪಡಿಸಿ ನಡೆಸುವ ಕಾರ್ಯಕ್ರಮದಲ್ಲಿ ಮೊಬೈಲ್ ಫಿಶ್ ಲೆಂಡಿಂಗ್ ಕಿಯೋಸ್ಕ್‌ಗಳು, ಮೊಬೈಲ್ ಫಿಶ್, ಪ್ರೊಸೆಸಿಂಗ್ ಕಿಯೋಸ್ಕ್‌ಗಳ ವಿತರಣೆ ಹಾಗೂ ಒ.ಬಿ.ಎಂ. ದುರಸ್ತಿ ಕೇಂದ್ರದ ಚಟುವಟಿಕೆ ಉದ್ಘಾಟನೆಯನ್ನು ಹಾರ್ಬರ್ ಇಂಜಿನಿಯರಿಂಗ್, ಸಾಮಾಜಿಕ …

62 ವರ್ಷ ಹಳೆಯದಾದ ಭಜನಾ ಮಂದಿರ ಮೇಲ್ಛಾವಣಿ ನಿರ್ಮಾಣಕ್ಕೆ ತಡೆ: ಬಿಜೆಪಿ ಖಂಡನೆ

ಮಂಗಲ್ಪಾಡಿ: ಪಂಚಾಯತ್ ವ್ಯಾಪ್ತಿಯ ಸುಭಾಶ್ ನಗರದಲ್ಲಿ ಕಳೆದ 62 ವರ್ಷಗಳಿಂದ ಕಾರ್ಯಾಚರಿಸುವ ಭಜನಾ ಮಂದಿರದ ಮೇಲ್ಛಾವಣಿ ನಿರ್ಮಾಣಕ್ಕೆ ತಡೆವೊಡ್ಡುತ್ತಿರುವುದು ಸರಿಯಲ್ಲವೆಂದು ಬಿಜೆಪಿ ತಿಳಿಸಿದ್ದು, ಸ್ಥಳಕ್ಕೆ ಮುಖಂಡರು ಭೇಟಿ ನೀಡಿ ಪದಾಧಿಕಾರಿಗಳಿಗೆ ಬೆಂಬಲ ಘೋಷಿಸಿದ್ದಾರೆ. ಮುಸ್ಲಿಂಲೀಗ್ ಆಡಳಿತದ ಮಂಗಲ್ಪಾಡಿ ಪಂಚಾಯತ್ ಅಧ್ಯಕ್ಷ ಗೋಲ್ಡನ್ ಅಬ್ದುಲ್ ರಹಿಮಾನ್, ಲೋಕೋಪಯೋಗಿ ಅಸಿಸ್ಟೆಂಟ್ ಇಂಜಿನಿಯರ್ ಶೋಭ ಅವರ ಸೂಚನೆ ಮೇರೆಗೆ ಬಿಜೆಪಿ ಪಂಚಾಯತ್‌ಗೆ ಈ ಬಗ್ಗೆ ಸೂಕ್ತ ಮಾಹಿತಿ ನೀಡಿದೆ. ಅಲ್ಲದೆ ಮಂದಿರ ಪದಾಧಿಕಾರಿಗಳು, ಸ್ಥಳೀಯರು ಸ್ಥಳದಲ್ಲಿ ನಡೆಸುತ್ತಿದ್ದ ಶ್ರಮದಾನದಲ್ಲಿಯೂ ಬಿಜೆಪಿ ಮುಖಂಡರು …

ಸುಭಾಶ್‌ನಗರ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರದ ಮೇಲ್ಛಾವಣಿ ನಿರ್ಮಾಣಕ್ಕೆ ತಡೆ: ಮಂದಿರ ಪದಾಧಿಕಾರಿಗಳಿಂದ ಡಿವೈಎಸ್‌ಪಿಗೆ ಮನವಿ

ಉಪ್ಪಳ: ಬೇಕೂರು ಸುಭಾಶ್ ನಗರದಲ್ಲಿನ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಮಂದಿರದ ಕಟ್ಟಡಕ್ಕೆ ಮೇಲ್ಛಾವಣಿ ನಿರ್ಮಾಣಕ್ಕೆ ತಡೆಯೊಡ್ಡು ತ್ತಿರುವುದಾಗಿ ದೂರಿ ಎಸ್.ಎಂ.ಎಸ್. ಘಟಕ ಡಿವೈಎಸ್‌ಪಿಗೆ ಮಂದಿರದ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಹಲವು ವರ್ಷಗಳಿಂದ ಕಾರ್ಯಾಚರಿ ಸುತ್ತಿರುವ ಈ ಮಂದಿರ ಜಿಲ್ಲಾ ರಿಜಿಸ್ಟ್ರರ್ ಕಚೇರಿಯಲ್ಲಿ ನೋಂದಾಯಿಸಿದ್ದು, ಮಂಗಲ್ಪಾಡಿ ಪಂಚಾಯತ್‌ನ ಟ್ಯಾಕ್ಸ್ ಅಸಸ್‌ಮೆಂಟ್ ಲಿಸ್ಟ್‌ನಲ್ಲಿ ಒಳಗೊಂ ಡಿದೆ. ಕುಬಣೂರು ವಿಲ್ಲೇಜ್‌ನ ರಿ ಸರ್ವೇ ನಂಬ್ರ 56/1 ಎ ಎಂಬ ಸ್ಥಳದಲ್ಲಿರುವ ಮಂಗಲ್ಪಾಡಿ ಪಂಚಾಯತ್‌ನ 187/ಎ ಎಂಬ ನಂಬ್ರ ಒಳಗೊಂಡ ಈ …

ಹೊಸಂಗಡಿ ಬಳಿ ಕರ್ನಾಟಕ ನಿವಾಸಿ ಕಾರ್ಮಿಕನ ಕೊಲೆ: ಸ್ಥಳದಿಂದ ನಾಪತ್ತೆಯಾದ ವ್ಯಕ್ತಿಗಾಗಿ ಶೋಧ

ಮಂಜೇಶ್ವರ: ಹೊಸಂಗಡಿ ಬಳಿಯ ಅಂಗಡಿಪದವಿನಲ್ಲಿ ಕರ್ನಾಟಕ ನಿವಾಸಿಯಾದ ಯುವಕ ನಿಗೂಢರೀತಿಯಲ್ಲಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರ. ಕರ್ನಾಟಕದ ಹೊಸಪೇಟೆ ಲಿಂಗನಾಯಕನಹಳ್ಳಿ ನಿವಾಸಿ ದಿ| ಪಿರಾ ನಾಯ್ಕ್‌ರ ಪುತ್ರ ರಮೇಶ (38) ಕೊಲೆಗೀಡಾದ ವ್ಯಕ್ತಿ.  ಅಂಗಡಿಪದವಿನಲ್ಲಿರುವ ಹಳೆಯ ಎರಡಂತಸ್ತಿನ ಮನೆಯೊಳಗೆ ನಿನ್ನೆ ರಾತ್ರಿ 7 ಗಂಟೆ ವೇಳೆ ರಮೇಶ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಈ ಮನೆಯಲ್ಲಿ ಬಾಡಿಗೆಗೆ ವಾಸಿಸುವ  ಕೃಷ್ಣಪ್ಪ ಎಂಬವರು ಮೃತದೇಹವನ್ನು ಮೊದಲು ಕಂಡಿದ್ದಾರೆ.  ಬಳಿಕ ಈ ವಿಷಯವನ್ನು  ಮನೆಯ ಮಾಲಕನಾದ ನರಸಿಂಹ ಮೂರ್ತಿಗೆ  ತಿಳಿಸಲಾಯಿತು. ಅವರು ಮನೆಗೆ …

ವೃದ್ಧೆ ಏಕಾಂಗಿಯಾಗಿ ವಾಸಿಸುವ ಮನೆಯಿಂದ 5 ಪವನ್ ಚಿನ್ನ, 50 ಸಾವಿರ ರೂ. ಕಳವು

ಪೆರ್ಲ:  ವೃದ್ಧೆಯೊಬ್ಬರು ಏಕಾಂಗಿಯಾಗಿ  ವಾಸಿಸುವ ಮನೆಯ ಬಾಗಿಲು ಮುರಿದು  ಒಳನುಗ್ಗಿದ ಕಳ್ಳರು 2 ಪವನ್ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ದೋಚಿದ್ದಾರೆ.  ಏಳ್ಕಾನ ಬಳಿಯ ಬಾಳೆಗುಳಿ ನಿವಾಸಿ  ಪಾರ್ವತಿ (73) ಎಂಬವರ ಮನೆಯಿಂದ ಕಳವು ನಡೆದಿದೆ. ಮೊನ್ನೆ ರಾತ್ರಿ ಕಳವು ನಡೆದಿದ್ದು ನಿನ್ನೆ ಬೆಳಿಗ್ಗೆ ಈ ಬಗ್ಗೆ ತಿಳಿದುಬಂದಿದೆ. ಪಾರ್ವತಿಯವರ ಪುತ್ರಿ ನೀಲೇಶ್ವರದಲ್ಲಿ ವೈದ್ಯೆಯಾಗಿದ್ದಾರೆ. ಆದ್ದರಿಂದ ಮನೆಯಲ್ಲಿ ಬೇರೆ ಯಾರೂ ಇಲ್ಲದುದರಿಂದ  ಪಾರ್ವತಿ ಪ್ರತಿದಿನ ಸಂಜೆ ಸಮೀಪದಲ್ಲಿರುವ ತರವಾಡು ಮನೆಗೆ ತೆರಳಿ ಮರುದಿನ ಬೆಳಿಗ್ಗೆ ಸ್ವಂತ …

ನಿಂತಿದ್ದ ಲಾರಿಗೆ ಕಾರು ಢಿಕ್ಕಿ: ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಎಂಟು ಮಂದಿ ಮೃತ್ಯು

ತೃಶೂರು: ರಸ್ತೆ ಬದಿ ನಿಲ್ಲಿಸಿದ್ದ ಸರಕು ಲಾರಿಯ ಹಿಂಬದಿಗೆ ಕಾರು ಢಿಕ್ಕಿ ಹೊಡೆದು  ತಮಿಳುನಾಡಿನ ಇಂಜಿನಿಯರಿಂಗ್ ವಿದ್ಯಾರ್ಥಿಗಳಾದ ಎಂಟು ಮಂದಿ ಸಾವನ್ನಪ್ಪಿದ ದಾರುಣ ಘಟನೆ ನಿನ್ನೆ ತಡರಾತ್ರಿ ತೃಶೂರು ಕೈಪಮಂಗಲ ಪನಂಬಕುನ್ನು ಸೆಂಟರ್ ಬಳಿ ನಡೆದಿದೆ. ತಮಿಳುನಾಡು ದಿಂಡಿಗಲ್‌ನ ಪಿ.ಎಸ್.ಎನ್.ಎ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಾದ ಸೇಲಂನ ವಿಶ್ವ (21), ದಿಂಡಿಗಲ್‌ನ ಸೂರ್ಯ (20), ಮಧುರೈ ನಿವಾಸಿಗಳಾದ ಸಂತೋಷ್ (20), ಪ್ರಸನ್ನ (20), ದಿಂಡಿಗಲ್ ನಿವಾಸಿಗಳಾದ ಯುವಂಜಿತ್ (20), ಜೋಷ್ವ (20) ಎಂಬವರು ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು. ದುರಂತದಲ್ಲಿ …

ಖ್ಯಾತ ನ್ಯಾಯವಾದಿ ಸುಧೀರ್ ಮೇಲತ್‌ ನಿಧನ

ಕಾಸರಗೋಡು: ಕಾಸರಗೋಡು ಬಾರ್‌ನ ಖ್ಯಾತ ನ್ಯಾಯವಾದಿ ಮಾಲಕಲ್ ಸುಧೀರ್ ಮೇಲತ್ (56) ನಿಧನ ಹೊಂದಿದರು. ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ರಾತ್ರಿ ಎರ್ನಾಕುಳಂ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಹೆಚ್ಚುವರಿ ಸರಕಾರಿ ಪ್ಲೀಡರ್, ಪಬ್ಲಿಕ್ ಪ್ರೋಸಿಕ್ಯೂಟರ್ ಆಗಿದ್ದರು. ವಿದ್ಯಾನಗರ ಲಯನ್ಸ್‌ಕ್ಲಬ್‌ನ ಸ್ಥಾಪಕ ಕಾರ್ಯದರ್ಶಿ, ಮಾಜಿ ಅಧ್ಯಕ್ಷನಾಗಿದ್ದರು. ಕೇರಳ ಕಾಂಗ್ರೆಸ್ (ಎಂ) ಜಿಲ್ಲಾ ಕಾರ್ಯದರ್ಶಿಯಾಗಿಯೂ ದುಡಿದಿದ್ದರು. ಮೃತರು ಪತ್ನಿ ರಮ್ಯ, ಮಕ್ಕಳಾದ ನಿಹಾಲ್, ಅಂಕಿತ್, ಸಹೋದರಿ ಯರಾದ ಲಲಿತ ಮೇಲತ್, ಪ್ರೀತಿ ಮೇಲತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.