ಕಾನತ್ತೂರು ವಡಕ್ಕೇಕೆರೆ ಪರಿಶಿಷ್ಟ ಜಾತಿ, ಪಂಗಡ ಕೇಂದ್ರದಲ್ಲಿ 1 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿ : ಸಚಿವ ಒ.ಆರ್. ಕೇಳು 28ರಂದು ಉದ್ಘಾಟನೆ

ಮುಳಿಯಾರು: ಪಂಚಾಯತ್ ವ್ಯಾಪ್ತಿಯ ಕಾನತ್ತೂರು ವಡಕ್ಕೇಕರೆ ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡ ಕೇಂದ್ರದಲ್ಲಿ ಒಂದು ಕೋಟಿ ರೂ.ಗಳ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲಾಗಿ ದ್ದು, ಇದರ ಉದ್ಘಾಟನೆಯನ್ನು ಈ ತಿಂಗಳ 28ರಂದು ಪರಿಶಿಷ್ಟ ಜಾತಿ ಹಿಂದುಳಿದ ವಿಭಾಗ ಕ್ಷೇಮ ಇಲಾಖೆ ಸಚಿವ ಒ.ಆರ್. ಕೇಳು ನಿರ್ವಹಿಸು ವರು. ಅಂಬೇಡ್ಕರ್ ಗ್ರಾಮ ಅಭಿವೃದ್ಧಿ ಯೋಜನೆಯಂಗವಾಗಿ ಈ ಯೋಜನೆ ಜ್ಯಾರಿಗೊಳಿಸಲಾಗಿದೆ. ೩೫ರಷ್ಟು ಕುಟುಂಬಗಳಿಗೆ ಕುಡಿಯುವ ನೀರಿನ ಸಮಸ್ಯೆ, ಉಪಯೋಗಶೂನ್ಯವಾದ ಬಾವಿಗಳು, ಪೂರ್ತಿಗೊಳ್ಳದ ಮನೆಗಳು ಮೊದಲಾದ ಸಮಸ್ಯೆಗಳು ಈ ಕೇಂದ್ರದಲ್ಲಿ ಕಂಡು ಬರುತ್ತಿತ್ತು. 2021-22ರ …

ಕುಂಬಳೆ ಪಂಚಾಯತ್ ಕುಟುಂಬಶ್ರೀ ಮೊಟ್ಟೆ ಉತ್ಸವ, ಕೃಷಿ ವಿಚಾರಗೋಷ್ಠಿ

ಕುಂಬಳೆ: ಪಂಚಾಯತ್ ಕುಟುಂಬಶ್ರೀ ಮೊಟ್ಟೆ ಉತ್ಸವ ಹಾಗೂ ಕೃಷಿ ವಿಚಾರಗೋಷ್ಠಿ ನಡೆಯಿತು. ಪಂಚಾಯತ್ ಅಧ್ಯಕ್ಷೆ ಯು.ಪಿ. ತಾಹಿರಾ ಉದ್ಘಾಟಿಸಿದರು. ಕುಟುಂಬಶ್ರೀ ಚೆಯರ್‌ಪರ್ಸನ್ ಖದೀಜ ಪಿ.ಕೆ. ಅಧ್ಯಕ್ಷತೆ ವಹಿಸಿದರು. ಮೃಗಾಸ್ಪತ್ರೆಯ ಡಾ. ಅರುಣ್ ರಾಜ್ ತರಗತಿ ನಡೆಸಿದರು. ಪಂ. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಾಯೀ ಸಮಿತಿ ಅಧ್ಯಕ್ಷರಾದ ರಹ್‌ಮಾನ್ ಅರಿಕ್ಕಾಡಿ, ನಸೀಮಾ ಖಾಲಿದ್, ಸದಸ್ಯರು, ಸಿಡಿಎಸ್ ಸದಸ್ಯರು, ವಿನಿಶಾ ಶಾಜಿ, ಆರ್.ಪಿ. ಫಾತಿಮಾ, ಮೆಂಬರ್ ಸೆಕ್ರಟರಿ ಶೈಜು ಮಾತ ನಾಡಿದರು. ಮೊಟ್ಟೆ ಫೆಸ್ಟ್‌ನಂಗವಾಗಿ ಮೊಟ್ಟೆ ಉಪಯೋಗಿಸಿ ತಯಾರಿಸಿದ ವಿವಿಧ …

ಕನ್ನಡ ಗ್ರಾಮದಲ್ಲಿ ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ 4ರಂದು: ಸಿದ್ಧತಾ ಸಭೆ

ಕಾಸರಗೋಡು: ಕೇರಳ- ಕರ್ನಾಟಕ ಕನ್ನಡ ರಾಜ್ಯೋತ್ಸವ, ಕಾಸರಗೋಡು ಕನ್ನಡ ಗ್ರಾಮೋತ್ಸವ ,ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ ಕಾಸರಗೋಡು ಇದರ 35ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಕನ್ನಡ ಗ್ರಾಮದ ಸಂಸ್ಥಾಪಕ ಶಿವರಾಮ ಕಾಸರಗೋಡು ಅವರ 60ನೇ ವರ್ಷದ ಜನ್ಮದಿನೋತ್ಸವ ಕಾರ್ಯಕ್ರಮ ನವಂಬರ್ 4ರಂದು ನಡೆಯಲಿದೆ. ಅಂದು ಬೆಳಿಗ್ಗೆ 10ಕ್ಕೆ ಧ್ವಜಾರೋಹಣ, ಶಿವರಾಮ ಕಾಸರಗೋಡು 60 ಫೊಟೋ ಗ್ಯಾಲರಿ ಉದ್ಘಾಟನೆ, ಕಾಸರಗೋಡು ಕರ್ನಾಟಕದೊಂದಿಗೆ ವಿಲೀನೀಕರಣಕ್ಕಾಗಿ ಹೋರಾಡಿದ 60 ಮಂದಿ ಕನ್ನಡ ಸತ್ಯಾಗ್ರಹಿಗಳ, ಹೋರಾಟಗಾರರ ಭಾವಚಿತ್ರಕ್ಕೆ ಪುಷ್ಪ ನಮನ, ನುಡಿ …

ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣ: ಮಾಜಿ ಅಡ್ಮಿನಿಸ್ಟ್ರೇಟಿವ್ ಅಧಿಕಾರಿ ಮುರಾರಿಬಾಬು ಬಂಧನ

ತಿರುವನಂತಪುರ: ಶಬರಿಮಲೆ ದೇಗುಲದ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿ ತಿರುವಿದಾಂಕೂರ್ ಮುಜರಾಯಿ ಮಂಡಳಿಯ ಮಾಜಿ ಅಡ್ಮಿನಿಸ್ಟ್ರೇಟಿವ್ ಆಫೀಸರ್ ಬಿ. ಮುರಾರಿ ಬಾಬುರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ಪೆರುನ್ನಾದಲ್ಲಿರುವ ಅವರ ಮನೆಯಿಂದ ಇಂದು ಬೆಳಿಗ್ಗೆ ಬಂಧಿಸಿದೆ. ಆ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಆರೋಪಿಗಳ ಸಂಖ್ಯೆ ಈಗ ೨ಕ್ಕೇರಿದೆ. ಮುರಾರಿಯನ್ನು ತನಿಖಾ ತಂಡ ನಿನ್ನೆ ರಾತ್ರಿಯೇ ವಶಕ್ಕೆ ತೆಗೆದುಕೊಂಡಿತ್ತು. ನಂತರ ಗಂಟೆಗಳ ತನಕ ತೀವ್ರ ವಿಚಾರಣೆಗೊಳಪಡಿಸಿ ಹೇಳಿಕೆಗಳನ್ನು ದಾಖಲಿಸಿಕೊಂಡ ನಂತರ ಇಂದು ಬೆಳಿಗ್ಗೆ ಅವರ ಬಂಧನ …

ಗೂಂಡಾ,ಹೊಯ್ಗೆ ಮಾಫಿಯಾಗಳಿಗೆ ಕುಂಬಳೆ ಠಾಣೆ ವ್ಯಾಪ್ತಿಯಲ್ಲಿ ಸ್ಥಾನವಿಲ್ಲ-ಇನ್‌ಸ್ಪೆಕ್ಟರ್ ಮುಕುಂದನ್

ಕುಂಬಳೆ: ಗೂಂಡಾಗಳಿಗೆ ಹಾಗೂ  ಹೊಯ್ಗೆ ಮಾಫಿಯಾಗಳಿಗೆ ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸ್ಥಾನವಿಲ್ಲವೆಂದು  ಕುಂಬಳೆಯ ನೂತನ ಪೊಲೀಸ್ ಇನ್‌ಸ್ಪೆಕ್ಟರ್ ಟಿ.ಕೆ.ಮುಕುಂದನ್ ತಿಳಿಸಿದ್ದಾರೆ.  ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಚಟುವಟಿಕೆ ನಡೆಸಲು ಯಾರಿಗೂ ಅವಕಾಶವಿಲ್ಲ. ಅಂತಹವರ ವಿರುದ್ಧ ಕಠಿಣ ಕ್ರಮ  ಕೈಗೊಳ್ಳುವುದಾಗಿ ಇನ್‌ಸ್ಪೆಕ್ಟರ್ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ಪತ್ರಕರ್ತರೊಂದಿಗೆ ತಿಳಿಸಿದ್ದಾರೆ. ಹೊಯ್ಗೆ ಸಾಗಾಟ,ಜೂಜಾಟ, ಮಾಫಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.ಶಾಂತಿ-ಸುವ್ಯವಸ್ಥೆಗೆ ಭಂಗ ಸೃಷ್ಟಿಸಿದರೆ ನಿರ್ದಾಕ್ಷಿಣ್ಯವಾಗಿ  ಕ್ರಮ ಕೈಗೊಳ್ಳ ಲಾಗುವುದು.  ಶಾಂತಿಸುವ್ಯವಸ್ಥೆ ಕಾಪಾಡಿಕೊಳ್ಳಲು ಸಾರ್ವಜನಿಕರ ಸಹಾಯ ಅಗತ್ಯವಿದೆಯೆಂದು …

1 ಲಕ್ಷ ರೂ. ಪೂಜಿಸಿದರೆ 10 ಲಕ್ಷ ಲಭಿಸುವುದಾಗಿ ನಂಬಿಸಿ ವಂಚನೆ : ಖೋಟಾನೋಟುಗಳ ಸಹಿತ ಸೆರೆಯಾದ ತಂಡ ಪೊಲೀಸರಿಗೆ ವಂಚಿಸಿ ಪರಾರಿ

ಬೆಂಗಳೂರು: 1 ಲಕ್ಷ ರೂ. ನೀಡಿದರೆ 10 ಲಕ್ಷ ಲಭಿಸುವುದಾಗಿ ನಂಬಿಸಿ ತಂಡ ಲಕ್ಷಾಂತರ ರೂ. ಅಪಹರಿಸಿದೆ. ವಂಚನೆ ಬಗ್ಗೆ ತಿಳಿದುಕೊಂಡ ಸ್ಥಳೀಯರು ಸನ್ಯಾಸಿ ವೇಷದಲ್ಲಿ ತಲುಪಿದವರನ್ನು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿದರು. ಪೊಲೀಸರಿಗೆ ಲಕ್ಷಾಂತರ ರೂ.ಗಳ ಖೋಟಾನೋಟುಗಳನ್ನು ನೀಡಿ ತಂಡ ಪರಾರಿಯಾಗಿದೆ. ಬೆಂಗಳೂರು, ಯಾದ್‌ಹಿರ್ ಸುರಪುರದಲ್ಲಿ ಘಟನೆ ನಡೆದಿದೆ. ಸನ್ಯಾಸಿಗಳ ವೇಷದಲ್ಲಿ ತಲುಪಿದ ತಂಡವೊಂದು ವಂಚನೆ ನಡೆಸಿದೆ. 1 ಲಕ್ಷ ರೂ.ವನ್ನು ಇಟ್ಟು ಪ್ರತ್ಯೇಕ ಪೂಜೆ ನಡೆಸಿ ಮಂತ್ರ ಹೇಳಿದರೆ 10 ಲಕ್ಷ ರೂ. ಕೈಗೆ …

ಮನೆಯಿಂದ ಐದೂವರೆ ಪವನ್ ಚಿನ್ನಾಭರಣ ಕಳವು

ಕಾಸರಗೋಡು: ಚಂದೇರ ಪೊಲೀಸ್ ಠಾಣೆ ವ್ಯಾಪ್ತಿಯ ಮಾಣಿ ಯಾಟ್ ತಿರುವಳ್ಳೂರು ಶಿವ ಕ್ಷೇತ್ರ ಬಳಿಯ ಮನೆಯಿಂದ ಐದೂವರೆ  ಪವನ್ ಚಿನ್ನಾಭರಣ ಕಳವಿಗೀಡಾಗಿದೆ. ಕಳೆದ ಗುರುವಾರದಿಂದ ಮಂಗಳವಾರದ ಮಧ್ಯೆ  ಕಳವು ನಡೆದಿರುವುದಾಗಿ ಮನೆ ಮಾಲಕ ಸಿ.ಎಂ. ರವೀಂದ್ರನ್ ಚಂದೇರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.ಸೂಟ್ ಕೇಸ್‌ನಲ್ಲಿ ಇರಿಸಿದ್ದ  ಮೂರು ಬಳೆಗಳ  ಸಹಿತ ಚಿನ್ನವನ್ನು ಕಳ್ಳರು ದೋಚಿದ್ದಾರೆ.ಈ ಬಗ್ಗೆ ಚಂದೇರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

ನಿಯಂತ್ರಣ ತಪ್ಪಿ ಬಿದ್ದ ಬೈಕ್‌ನ ಮೇಲೆ ಬಸ್ ಹರಿದು ಸವಾರ ಮೃತ್ಯು

ಕಾಸರಗೋಡು: ಸಂಚರಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಾಗ ಅದರ ಮೇಲೆ ಬಸ್ ಹರಿದು ಸವಾರ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ಪಾಲಕುನ್ನು ಏರೋಲ್ ಚಂದ್ರಾಪುರದ ವಿಶ್ವನಾಥನ್- ಯು.ಕೆ. ಸಜನಿ ದಂಪತಿ ಪುತ್ರ ವಿಷ್ಣು (29) ಸಾವನ್ನಪ್ಪಿದ ದುರ್ದೈವಿ. ಕೂತುಪರಂಬ- ತಲಶ್ಶೇರಿ ರಸ್ತೆ ನಗರಸಭಾ ಕಚೇರಿಯ ಎದುರುಗಡೆ ನಿನ್ನೆ ಈ ದುರ್ಘಟನೆ ನಡೆದಿದೆ. ಕೂತುಪರಂಬದ ಪಾರಾಲಿಲ್‌ನ ಆರ್‌ಸಿಬಿ ಗ್ರೂಪ್ ಸಂಸ್ಥೆಯಲ್ಲಿ ದುಡಿಯುತ್ತಿರುವ ವಿಷ್ಣು ಆ ಸಂಸ್ಥೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದರು. ಕ್ಷೌರ ನಡೆಸಲೆಂದು ಅವರು ನಿನ್ನೆ ಸಂಜೆ ಬೈಕ್‌ನಲ್ಲಿ …

ಕೇಂದ್ರ ಸಚಿವ ಗಡ್ಕರಿ ಬಂಗಲೆಯಲ್ಲಿ ಕಳವಿಗೆತ್ನ ಸೆಕ್ಯುರಿಟಿ ಗಾರ್ಡ್ ಬಂಧನ

ನಾಗ್ಪುರ: ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರ  ನಾಗ್ಪುರದಲ್ಲಿರುವ ಪಿ.ಎ. ಬಂಗಲೆಯಲ್ಲಿ ಕಳವಿಗೆತ್ನಿಸಲಾಗಿದೆ. ಅದಕ್ಕೆ ಸಂಬಂಧಿಸಿ ಪ್ರಸ್ತುತ ಬಂಗಲೆಯ ಸೆಕ್ಯುರಿಟಿ ಗಾರ್ಡ್ ರತನ್ ಕಾರ್ತಿಕ್ ಕಸ್ತೂರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗಡ್ಕರಿಯ ಆಪ್ತ ಸಹಾಯಕ  ಕೌಸ್ತುಭ್ ನೀಡಿದ ದೂರಿನಂತೆ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೋಮವಾರ ರಾತ್ರಿ ೧೦.೫೫ರ ವೇಳಗೆ ಆರೋಪಿ  ಸಚಿವರ ಬಂಗಲೆಯ  ಕೊಠಡಿಗೆ ಅಕ್ರಮ ವಾಗಿ ಪ್ರವೇಶಿಸಿ ಕಳವುಗೈಯ್ಯ ಲೆತ್ನಿಸಿ ರುವುದಾಗಿ  ಪೊಲೀಸರಿಗೆ ನೀಡಲಾದ ದೂರಿನಲ್ಲಿ ಹೇಳಲಾಗಿದೆ.

ಸ್ಥಳೀಯಾಡಳಿತ ಚುನಾವಣೆ ಡಿಸೆಂಬರ್‌ನಲ್ಲಿ ಸಾಧ್ಯತೆ

ತಿರುವನಂತಪುರ: ರಾಜ್ಯದಲ್ಲಿ ಸ್ಥಳೀಯಾಡಳಿತ ಚುನಾವಣೆ ಡಿಸೆಂಬರ್ 10ರ ಮೊದಲು ನಡೆ ಯುವ ಸಾಧ್ಯತೆ ಇದೆ. ನವೆಂಬರ್ 10ರ ಮುಂಚೆ ಈ ಸಂಬಂಧ ಘೋಷಣೆ ಉಂಟಾಗಲಿದೆ ಎಂದು ತಿಳಿದು ಬಂದಿದೆ. 1200 ಸ್ಥಳೀಯಾ ಡಳಿತ ಸಂಸ್ಥೆಗಳ ಪೈಕಿ ಮಟ್ಟನ್ನೂರು ನಗರಸಭೆಯನ್ನು ಹೊರತುಪಡಿಸಿ  ಚುನಾವಣೆ ನಡೆಯಲಿದೆ. ಮೀಸ ಲಾತಿ ವಾರ್ಡ್‌ಗಳ ಆಯ್ಕೆ ಈಗಾ ಗಲೇ ಪೂರ್ಣಗೊಂಡಿದೆ.  ಸ್ಥಳೀ ಯಾಡಳಿತ ಸಂಸ್ಥೆಗಳ ಅಧ್ಯಕ್ಷ, ಅಧ್ಯಕ್ಷೆ ಮೀಸಲಾತಿ ನಿರ್ಧಾರ ಹಾಗೂ ಅಂತಿಮ ಮತದಾರರ ಪಟ್ಟಿ ಬಿಡುಗಡೆ ಇನ್ನಷ್ಟೇ ನಡೆಯಬೇಕಾಗಿದೆ. ಅಧ್ಯಕ್ಷರ ನಿರ್ಧಾರ ಈ …