ಆವೇಶದ ಚುನಾವಣಾ ಪ್ರಚಾರಕ್ಕೆ ತೆರೆ
ಕಾಸರಗೋಡು: ಕೇರಳ ವಿಧಾನಸಭೆಗೆ ನಾಳೆ ನಡೆಯಲಿರುವ ಚುನಾವಣೆಯ ಆವೇಶಭರಿತ ಅಬ್ಬರದ ಪ್ರಚಾರಕ್ಕೆ ನಿನ್ನೆ ಸಂಜೆ 6 ಗಂಟೆಗೆ ತೆರೆಬಿದ್ದಿದೆ. ಕೊನೆಯ ದಿನವಾದ ನಿನ್ನೆ ಸಂಜೆ ಯುಡಿಎಫ್, ಎಲ್‌ಡಿಎಫ್ ಮತ್ತು ಎನ್‌ಡಿಎ ಅಭ್ಯರ್ಥಿಗಳ ನೇತೃತ್ವದಲ್ಲಿ ಕಾಸರಗೋಡು ನಗರದಲ್ಲಿ ಆವೇಶಭರಿತ ಹಾಗೂ ಆಕರ್ಷಕ ರೀತಿಯ ರೋಡ್‌ಶೋಗಳು ನಡೆದವು. ಕಾರ್ಯಕರ್ತರು ಭಾರೀ ಆವೇಶಭರಿತವಾಗಿ ತಮ್ಮ ಅಭ್ಯರ್ಥಿಗಳ ಪರ ಮುಗಿಲು ಮುಟ್ಟುವ ಘೋಷಣೆ ಗಳೊಂದಿಗೆ ಪ್ರಚಾರದ ಕೊನೆಯ ಘಳಿಗೆ ತನಕ ಮತಯಾಚನೆ ನಡೆಸಿದರು. ಎಲ್ಲವೂ ಶಾಂತಿಯುತವಾದ ರೀತಿಯಲ್ಲೇ ನಡೆಯಿತು. ಪೊಲೀಸರು ಹಾಗೂ ಕೇಂದ್ರ …