ವಿಷ ಸೇವಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ಉಪ್ಪಳ: ವಿಷ ಸೇವಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಯುವಕ ಮೃತಪಟ್ಟನು. ಜೋಡುಕಲ್ಲು ನವೋದಯನಗರದ  ಕೃಷ್ಣ ಎಂಬವರ ಪುತ್ರ ಮೋಹನ ಎನ್ (28) ಮೃತಪಟ್ಟ ವ್ಯಕ್ತಿ.  ಇವರು ಕೂಲಿ ಕಾರ್ಮಿಕನಾಗಿದ್ದರು. ಮಾರ್ಚ್ 30ರಂದು ಮುಂಜಾನೆ ಇವರಿಗೆ ಮನೆಯಲ್ಲಿ ಅಸ್ವಸ್ಥತೆ ಉಂಟಾಗಿತ್ತು. ಇದರಿಂದ  ಕೂಡಲೇ ಉಪ್ಪಳದ ಆಸ್ಪತ್ರೆಗೂ, ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ತಲುಪಿಸಿ ದಾಖಲಿಸಲಾಗಿತ್ತು. ವೈದ್ಯ ಕೀಯ ತಪಾಸಣೆಯಲ್ಲಿ  ಮೋಹನ ಇಲಿ ವಿಷ ಸೇವಿಸಿರುವುದಾಗಿ ತಿಳಿದುಬಂದಿದೆ. ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಮೋಹನ ಚಿಕಿತ್ಸೆ ಮಧ್ಯೆ ನಿನ್ನೆ ಸಂಜೆ ಸಾವಿಗೀಡಾಗಿದ್ದಾರೆ. ಘಟನೆ ಬಗ್ಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ಮೃತರು ತಂದೆ, ತಾಯಿ ಗಿರಿಜ, ಪತ್ನಿ ಚೈತ್ರ, ಪುತ್ರ ಅನ್ವಿತ್, ಸಹೋದರಿಯರಾದ ಬೇಬಿ, ಸುಮಿತ್ರ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page