ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದ ದೈವ ಕಲಾವಿದ ಮೃತ್ಯು

ಕುಂಬಳೆ: ಅರೆಪ್ರಜ್ಞಾವಸ್ಥೆಯಲ್ಲಿ ಕಂಡುಬಂದ ದೈವ ಕಲಾವಿದನೋ ರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ಮೃತಪಟ್ಟ ಘಟನೆ ನಡೆದಿದೆ. ಪೇರಾಲ್ ಕಣ್ಣೂರು ಚೋಡಾಲ ನಿವಾಸಿ ಮಂಚ ಎಂಬವರ ಪುತ್ರ ಉಮೇಶ (31) ಮೃತಪಟ್ಟ ವ್ಯಕ್ತಿ. ಕಳೆದ ಗುರುವಾರ ಬೆಳಿಗ್ಗೆ 11 ಗಂಟೆಗೆ ಉಮೇಶ ಶಿರಿಬಾಗಿಲು ಬಳಿಯ ಮಂಜತ್ತಡ್ಕದಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿತ್ತು. ಸ್ಥಿತಿ ಗಂಭೀರವಾಗಿದ್ದುದರಿಂದ ವೈದ್ಯರ ನಿರ್ದೇಶ ಮೇರೆಗೆ ಪರಿಯಾರಂನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ಬಗ್ಗೆ ಕಾಸರಗೋಡು  …

ಯುವತಿಯರೊಂದಿಗೆ ಅನುಚಿತ ವರ್ತನೆ ಆರೋಪ: ಕಾಂಗ್ರೆಸ್‌ನಿಂದ ರಾಹುಲ್ ಮಾಕೂಟತ್ತಿಲ್ ಅಮಾನತು

ತಿರುವನಂತಪುರ: ಯುವತಿಯ ರೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಕೂಟತ್ತಿಲ್‌ರನ್ನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತನದಿಂದ ಮುಂದಿನ ಆರು ತಿಂಗಳ ತನಕ ಅಮಾನತುಗೊಳಿಸಲಾ ಗಿದೆ. ಆದರೆ ಪಕ್ಷದಿಂದ ಅಮಾನತು ಗೊಂಡರೂ ರಾಹುಲ್ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿಲ್ಲ ವೆಂಬ ನಿಲುವಿಗೆ ಕಾಂಗ್ರೆಸ್ ನೇತೃತ್ವ ಬಂದಿದೆ. ಆ ಮೂಲಕ  ರಾಹುಲ್ ವಿರುದ್ದದ ಕ್ರಮವನ್ನು ಕಾಂಗ್ರೆಸ್ ಅಮಾನತಿಗೆ ಮಾತ್ರವಾಗಿ ಸೀಮಿತಗೊಳಿಸಿದೆ. ಇದರಿಂದಾಗಿ ರಾಹುಲ್ ಇನ್ನು ಕಾಂಗ್ರೆಸ್ ಮತ್ತು ಯುಡಿಎಫ್‌ನ ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ರಾಹುಲ್ ತನ್ನ …

ಕರ್ನಾಟಕ ಮದ್ಯ ವಶ: ಓರ್ವ ಸೆರೆ

ಬದಿಯಡ್ಕ: ಓಣಂ ಸ್ಪೆಷಲ್ ಡ್ರೈವ್ ಕಾರ್ಯಾಚರಣೆಯಲ್ಲಿ ಬದಿಯಡ್ಕ ಎಕ್ಸೈಸ್ ರೇಂಜ್‌ನ ಅಸಿಸ್ಟೆಂಟ್ ಇನ್ಸ್‌ಪೆಕ್ಟರ್ (ಗ್ರೇಡ್) ಬಿಜೋಯ್ ಇ.ಕೆ.ರ ನೇತೃತ್ವದ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ೫.೨೨ ಲೀಟರ್ ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿ ವಶಪಡಿಸಿದೆ. ಇದಕ್ಕೆ ಸಂಬಂಧಿಸಿ ನೆಲ್ಲಿಕಟ್ಟೆ ಅದ್ರ್‌ಕುಳಿ ಅನಿಲ್ ಕುಮಾರ್ ಬಿ. ಎಂ ಬಾತನನ್ನು ಬಂಧಿಸಿ ಕೇಸು ದಾಖಲಿಸ ಲಾಗಿದೆ. ಈತ ಚಲಾಯಿಸುತ್ತಿದ್ದ ಸ್ಕೂಟರನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ. ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ  ಪ್ರಿಷಿ, ಟಿಪ್ಸನ್ ಟಿ.ಜೆ. ಮತ್ತು ಚಾಲಕ ಸಾಗರ್ ಎಂಬವರು ಈ …

ಮಧ್ಯರಾತ್ರಿ ಯುವಕ, ಸಂಬಂಧಿಕರನ್ನು ಮನೆಯಿಂದ ಹೊರಗೆ ಕರೆದು ಬಂದೂಕು ತೋರಿಸಿ ಬೆದರಿಕೆ: ನಾಲ್ಕು ಮಂದಿ ವಿರುದ್ಧ ಕೇಸು

ಮಂಜೇಶ್ವರ: ಯುವಕ ಹಾಗೂ ಸಂಬಂಧಿಕರನ್ನು ಮಧ್ಯರಾತ್ರಿ ವೇಳೆ ಮನೆಯಿಂದ ಹೊರಗೆ ಕರೆದು  ಬಂದೂಕ ತೋರಿಸಿ ಬೆದರಿಕೆಯೊಡ್ಡಿದ ಬಗ್ಗೆ ಆರೋಪವುಂಟಾಗಿದೆ. ಈ ಘಟನೆಗೆ ಸಂಬಂಧಿಸಿ  ನಾಲ್ಕು ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ರಾತ್ರಿ ೧೧.೪೫ರ ವೇಳೆ ಘಟನೆ ನಡೆದಿದೆ. ಬಂಗ್ರಮಂಜೇಶ್ವರ ಕಾಡಿಯಾರ್‌ನ ಬಸನ್ ಬಾವ ಮಂಜಿಲ್‌ನ ಮುಹಮ್ಮದ್ ಸಮೀರ್ (20) ನೀಡಿದ ದೂರಿನಂತೆ ಬಂಗ್ರಮಂ ಜೇಶ್ವರದ ರಶೀದ್ ಹಾಗೂ ಕಂಡರೆ ಪತ್ತೆಹಚ್ಚಬಹುದಾದ ಇತರ ಮೂವರ ವಿರುದ್ಧ ಕೇಸು ದಾಖಲಿಸಲಾಗಿದೆ. ರಾತ್ರಿ ಮನೆಗೆ ತಲುಪಿದ ತಂಡ …

30 ಪವನ್ ಚಿನ್ನಾಭರಣ 4 ಲಕ್ಷ ರೂ. ಕಳವು ನಡೆದ ಮನೆಯ ಸೊಸೆ ಸಾಲಿಗ್ರಾಮದಲ್ಲಿ ಮೃತಪಟ್ಟ ಘಟನೆ ಕೊಲೆಯೆಂದು ಸಾಬೀತು: ಗೆಳೆಯ ಸೆರೆ

ಕಣ್ಣೂರು: ಇತ್ತೀಚೆಗೆ 30 ಪವನ್ ಚಿನ್ನಾಭರಣ, 4 ಲಕ್ಷ ರೂ. ಕಳವು ಹೋದ ಮನೆಯ ಸೊಸೆಯನ್ನು ಕರ್ನಾ ಟಕದ ಸಾಲಿಗ್ರಾಮದ ವಸತಿಗೃಹದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದ್ದು, ಇದು ಕೊಲೆ ಕೃತ್ಯವೆಂದು ಪೊಲೀಸರು ತಿಳಿಸಿದ್ದಾರೆ. ಕಲ್ಯಾಟ್ ಚುಂಗಸ್ತಾನಂ ನಿವಾಸಿ ಎ.ಪಿ. ಸುಭಾಷ್‌ರ ಪತ್ನಿ ದರ್ಶಿತ (22) ಕೊಲೆಗೀಡಾಗಿರುವುದು. ಜೊತೆಗಿದ್ದ ಗೆಳೆಯ ಕರ್ನಾಟಕ ಪಿರಿಯಾಪಟ್ಟಣ ನಿವಾಸಿ ಸಿದ್ಧರಾಜು (22)ನನ್ನು ಸಾಲಿಗ್ರಾಮದಿಂದ ಪೊಲೀಸರು ಬಂಧಿಸಿದ್ದಾರೆ. ವಸತಿಗೃಹದಲ್ಲಿ ದರ್ಶಿತ ಹಾಗೂ ಸಿದ್ಧರಾಜು ಮಧ್ಯೆ ವಾಗ್ವಾದವುಂಟಾಗಿದ್ದು, ಸಿದ್ಧರಾಜು ದರ್ಶಿತಳ ಬಾಯಿಗೆ ಇಲೆಕ್ಟ್ರಿಕ್ ಡಿಟಾನೇಟರ್ ತುರುಕಿಸಿ …

ಅಕ್ರಮವಾಗಿ ಹಿತ್ತಿಲಿಗೆ ನುಗ್ಗಿ ಕಲ್ಲೆಸೆದು ಗಾಯಗೊಳಿಸಿದ ಪ್ರಕರಣ: ಆರೋಪಿಗೆ 3 ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಅಕ್ರಮವಾಗಿ ಹಿತ್ತಿಲಿಗೆ ನುಗ್ಗಿ ದಂಪತಿಗೆ ಕಲ್ಲೆಸೆದು, ಕಲ್ಲಿನಿಂದ ಹೊಡೆದು ಗಾಯಗೊಳಿಸಿದ ಪ್ರಕರಣದ ಒಂದನೇ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (2) ನ್ಯಾಯಾಧೀಶೆ ಪ್ರಿಯಾ ಕೆ. ಅವರು ೩ ವರ್ಷ ಸಜೆ ಹಾಗೂ 35,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕಳ್ಳಾರ್ ನೀಲಿಮಲ ನಿವಾಸಿ ಶಿಜು ಬೇಬಿ (44) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 4 ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಶಿಕ್ಷಿಸಲ್ಪಟ್ಟ ಆರೋಪಿಯ …

ನಿಧನ

ಕಾಸರಗೋಡು: ನೆಲ್ಲಿಕುಂಜೆ ಬೀಚ್ ನಿವಾಸಿ ರತ್ನಾಕರ ಎಂಬವರ ಪತ್ನಿ ಬಿ. ಪ್ರೇಮ (70) ನಿಧನ ಹೊಂದಿದರು. ಮೃತರು ಪತಿ, ಪುತ್ರ ರೂಪೇಶ್, ಸಹೋದರರಾದ ಕೃಷ್ಣನ್, ವತ್ಸಲನ್, ಬಾಬು, ಸಹೋದರಿಯರಾದ ನಳಿನಿ, ಲಕ್ಷ್ಮಿ, ಪುಷ್ಪ, ಅನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ರಾಜಧಾನಿಯಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ: ಬಹುಭಾಷಾ ಸಂಸ್ಕೃತಿಯ ಕಾಸರಗೋಡು ಜಿಲ್ಲೆಯಿಂದ ಬಂದು ರಾಜಧಾನಿಯಲ್ಲಿ ನಡೆಸಿದ ಕಾರ್ಯಕ್ರಮ ಶ್ಲಾಘನೀಯ- ಸಚಿವ ಜಿ.ಆರ್. ಅನಿಲ್

ತಿರುವನಂತಪುರ: ಬಹುಭಾಷೆ ಯಿಂದ ಕೂಡಿದ ಸಂಸ್ಕೃತಿಯನ್ನು ಹೊಂದಿರುವ ಜಿಲ್ಲೆ ಕಾಸರಗೋಡು. ಅಲ್ಲಿಂದ ಬಂದು ರಾಜಧಾನಿಯಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು ಶ್ಲಾಘನೀಯ. ಮನುಷ್ಯ ಜಾತಿಯಲ್ಲಿರುವ ನಾವೆಲ್ಲ ಒಂದೇ ಎಂಬ ಭಾವನೆ ಎಲ್ಲರಲ್ಲಿರ ಬೇಕು. ಸಂಪೂರ್ಣ ಸಾಕ್ಷರತೆಯನ್ನು ಹೊಂದಿದ ರಾಜ್ಯದಲ್ಲಿ ಇಂದು 105 ವರ್ಷದ ವ್ಯಕ್ತಿಯೂ ಆಧುನಿಕ ಕಾಲಕ್ಕೆ ಒಗ್ಗಿಕೊಂಡಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಿ.ಆರ್. ಅನಿಲ್ ನುಡಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ಭಾರತ್ ಭವನ ತಿರುವನಂತಪುರ ಕೇರಳ ಸರಕಾರಗಳ …

ಧರ್ಮಸ್ಥಳ ಸಹಿತ ಕ್ಷೇತ್ರಗಳ ನಕಲಿ ಆರೋಪದ ಹಿಂದೆ ಗೂಢಾಲೋಚನೆ- ಬಾಬುರಾಜ್

ಬದಿಯಡ್ಕ: ಹಿಂದೂ ಸಂಸ್ಕೃತಿಯನ್ನು ಹಾಳು ಮಾಡುವ ಉದ್ದೇಶದಿಂದ ಧರ್ಮಸ್ಥಳ ಸಹಿತ ಕ್ಷೇತ್ರಗಳ ಮೇಲೆ ಸುಳ್ಳು ಆರೋಪ ಹೊರಿಸುತ್ತಿರುವುದರ ಹಿಂದೆ ದೊಡ್ಡ ಗೂಢಾಲೋಚನೆ ಇದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬುರಾಜ್ ನುಡಿದರು. ಕುಂಬ್ಡಾಜೆ ಪಂಚಾಯತ್ ಅಗಲ್ಪಾಡಿ ವಾರ್ಡ್ ಸಮಾವೇಶವನ್ನು ಪಡುಮೂಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸುಳ್ಳು ದೂರು ಆರೋಪ ಹೊರಿಸಿದ್ದು, ಈ ಹಿಂದೆ ಶಬರಿಮಲೆಯಲ್ಲೂ ಇದೇ ರೀತಿಯಲ್ಲಿ ಗಲಭೆ ಸೃಷ್ಟಿಸಿ ಹಿಂದುಗಳ ಧಾರ್ಮಿಕ ಭಾವನೆಯನ್ನು ಹಾಳುಗೆಡಹುವ ಕೆಲಸ ಮಾಡಿದ್ದಾರೆ. ಮುಂದಿನ ಸ್ಥಳೀಯಾಡಳಿತ ಚುನಾವಣೆಯಲ್ಲಿ …

ಖ್ಯಾತ ಚಲನಚಿತ್ರ ನಟ,ನಿರ್ದೇಶಕ ನಿಧನ

ಮಂಗಳೂರು: ಹಿರಿಯ ಕನ್ನಡ ಚಲನಚಿತ್ರ ನಟ, ಕಲಾ ನಿರ್ದೇಶಕ ಮಂಗಳೂರು ದಿನೇಶ್ ನಿಧನ ಹೊಂದಿದರು. ಇಂದು ಬೆಳಿಗ್ಗೆ ಕುಂದಾಪುರದ ವಸತಿಗೃಹದಲ್ಲಿ ನಿಧನ ಸಂಭವಿಸಿದೆ. ಹಲವು ಕಾಲದಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ನಾಟಕರಂಗದ ಮೂಲಕ ಸಿನಿಮಾವಲಯಕ್ಕೆ ಪ್ರವೇಶಿಸಿದ್ದರು. ಚಿನ್ನಾರಿಮುತ್ತ ಸಹಿತ ಹಲವಾರು ಸಿನಿಮಾಗಳಿಗೆ ಕಲಾ ನಿರ್ದೇಶನ ನೀಡಿದ ಶಶಿಧರ ಅಡಪರ ಸಹಾಯಿಯಾಗಿ ದುಡಿದಿದ್ದರು. ಮೃತರು ಪತ್ನಿ ಭಾರತಿ, ಮಕ್ಕಳಾದ ಪವನ್, ಸಂಜನ್ ಹಾಗೂ ಅಪಾರರ ಬಂಧು-ಬಳಗವನ್ನು ಅಗಲಿದ್ದಾರೆ.