ಮೆರವಣಿಗೆ: ಕಾಂಗ್ರೆಸ್ ಮುಖಂಡರ ಸಹಿತ 83 ಮಂದಿ ವಿರುದ್ಧ ಕೇಸು

ಕಾಸರಗೋಡು: ಕಲ್ಯೋಟ್ ಅವಳಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಪರೋಲ್ ಮಂಜೂರು ಮಾಡಿರುವು ದನ್ನು ಪ್ರತಿಭಟಿಸಿ ಅನುಮತಿರಹಿತ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರ ಸಹಿತ 83 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಯುಡಿಎಫ್ ಜಿಲ್ಲಾ ಸಂಚಾಲಕ ಎ. ಗೋವಿಂದನ್ ನಾಯರ್ ಸಹಿತ ಹಲವರ ವಿರುದ್ಧ ಇನ್ಸ್‌ಪೆಕ್ಟರ್ ಎಂ.ವಿ. ಶ್ರೀದಾಸ್‌ರ ದೂರಿನಂತೆ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ.

ನಗರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ: ಯಜ್ಞಕುಂಡ ಮುಹೂರ್ತ

ಕಾಸರಗೋಡು: ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ವಠಾರದಲ್ಲಿ 27ರಿಂದ ಸೆ.6ರವರೆಗೆ ಜರಗುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಯಜ್ಞಕುಂಡ ಮುಹೂರ್ತ ರಮೇಶ್ ಕಾರಂತ ಅವರ ನಿರ್ದೇಶನದಲ್ಲಿ ಜರಗಿತು. ಈ ವೇಳೆ ಕ್ಷೇತ್ರದ ಪ್ರಧಾನ ಅರ್ಚಕ ಶಿವಶಂಕರ ಅಡಿಗ, ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ, ಉಪಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಪಿ. ರಮೇಶ್, ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಕೆ.ಎನ್, ಕಾರ್ಯದರ್ಶಿ ರವಿ ಕೇಸರಿ, ರವಿ ಕೇಳುಗುಡ್ಡೆ, ಕೋಶಾಧಿಕಾರಿ ಅನಿಲ್ ಕುಮಾರ್, ಉಮೇಶ್ ಮೇಸ್ತ್ರಿ, ಲವ ಮೀಪುಗುರಿ ಹಾಗೂ ಭಕ್ತರು ಉಪಸ್ಥಿತರಿದ್ದರು.

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರದ ಬಗ್ಗೆ ಕೇರಳದಲ್ಲೂ ತನಿಖೆ ನಡೆಸಬೇಕು-ಬಿಜೆಪಿ

ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಕಲಿ ಪುರಾವೆಗಳನ್ನು ಸೃಷ್ಟಿಸಿ ಅಪಪ್ರಚಾರಗಳನ್ನು ನಡೆಸಿ ಆ ಮೂಲಕ ಶ್ರೀ ಕ್ಷೇತ್ರದ ನಂಬುಗೆಗೆ ಘಾಸಿ ಉಂಟುಮಾಡಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಯೂಟ್ಯೂಬರ್ ಕೇರಳದ ಮನಾಫ್‌ನನ್ನು ಬಂಧಿಸಿ ತನಿಖೆಯನ್ನು ಕೇರಳಕ್ಕೂ  ವಿಸ್ತರಿಸಿ ಆ ಮೂಲಕ ಇದರ ಹಿಂದಿನ ಷಡ್ಯಂತ್ರವನ್ನು ಪತ್ತೆಹಚ್ಚಬೇಕೆಂದು ಬಿಜೆಪಿ ವಲಯ ಕಾರ್ಯದರ್ಶಿ  ಕೆ. ಶ್ರೀಕಾಂತ್ ಆಗ್ರಹಪಟ್ಟಿದ್ದಾರೆ. ಆಧಾರರಹಿತವಾದ ಗಂಭೀರ ಆರೋಪಗಳನ್ನು ತೋರಿಸಿ ನಕಲಿ ಪುರಾವೆಗಳನ್ನು ಸೃಷ್ಟಿಸಿ ಅಪಪ್ರಚಾರ ನಡೆಸಲಾಗಿದೆ ಎಂಬುವುದು ಖಾತರಿಗೊಂಡ ಕರ್ನಾಟಕದ ಕಾಂಗ್ರೆಸ್ ಸರಕಾರದ ವಿರುದ್ಧ ಜನರ ಆಕ್ರೋಶ …

ಸರಕಾರದ ಅಂಗೀಕಾರವಿಲ್ಲದ ‘ಹೋಮ್ ಸ್ಟೇ’ಗಳಿಗೆ ಶೀಘ್ರ ಬೀಗ

ಕಾಸರಗೋಡು: ಸರಕಾರದ ಅಂಗೀಕಾರವಿಲ್ಲದೆ ಪ್ರವಾಸೀ ಕೇಂದ್ರಗಳಲ್ಲಿ ‘ಹೋಮ್ ಸ್ಟೇ’ಗಳನ್ನು ನಿರ್ಮಿಸಿ ಅದರ ಹೆಸರಲ್ಲಿ ನಡೆಸಲಾಗುವ ವ್ಯಾಪಾರಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ಮುಂದಾಗಿದೆ. ಪ್ರವಾಸಿಗರಿಗೆ ವಾಸ ಸೌಕರ್ಯ ಏರ್ಪಡಿಸುವ ಹೆಸರಲ್ಲಿ ‘ಹೋಮ್ ಸ್ಟೇ’ ಎಂಬ ಹೆಸರನ್ನು ಉಪಯೋಗಿಸಿ ಸರಕಾರದ ಅನುಮತಿ ಇಲ್ಲದೆ ವಸತಿ ಸೌಕರ್ಯಗಳನ್ನು ನಿರ್ಮಿಸುವುದರ ವಿರುದ್ಧ ಇನ್ನು ಕ್ರಮ ಕೈಗೊಳ್ಳಲಾಗುವುದು. ಇಂತಹ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ಪ್ರವಾಸೋದಮ ಇಲಾಖೆಯ ಕ್ಲಾಸಿಫಿಕೇಷನ್ ಸರ್ಟಿಫಿಕೆಟ್‌ನ್ನು ಮೊದಲು ಪಡೆಯಬೇಕು. ಅದನ್ನು ಪಡೆಯದೆ ಹೋಮ್ ಸ್ಟೇ ಹೆಸರಲ್ಲಿ ವಸತಿ ಸೌಕರ್ಯ ಏರ್ಪಡಿಸಿದಲ್ಲಿ …

ಮನೆಗಳಲ್ಲೇ ತ್ಯಾಜ್ಯ ಸಂಸ್ಕರಿಸಿದಲ್ಲಿ ಕಟ್ಟಡ ತೆರಿಗೆಯಲ್ಲಿ ಶೇ. 5ರಷ್ಟು ರಿಯಾಯಿತಿ

ಕಾಸರಗೋಡು: ತ್ಯಾಜ್ಯ ವಸ್ತುಗಳನ್ನು ಸಾರ್ವಜನಿಕ ಪ್ರದೇಶಗಳು, ರಸ್ತೆ ಹಾಗೂ ಉಪಯೋಗ ಶೂನ್ಯ ಹಿತ್ತಿಲುಗಳಲ್ಲಿ ತಂದೆಸೆಯುವವರನ್ನು ಪತ್ತೆಹಚ್ಚಿ ಅವರಿಗೆ ದೊಡ್ಡ ಮಟ್ಟದ ಜುಲ್ಮಾನೆ ವಿಧಿಸುವ  ಕ್ರಮದ ಬೆನ್ನಲ್ಲೇ ಮನೆಗಳು ಮತ್ತು ಇತರ ಕಟ್ಟಡಗಳ ತ್ಯಾಜ್ಯವನ್ನು ಅಲ್ಲೇ ಸಂಸ್ಕರಿಸುವವರಿಗೆ ಕಟ್ಟಡ ತೆರಿಗೆ ಯಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಲಾಗುವುದೆಂದು ರಾಜ್ಯ ಸ್ಥಳೀಯಾಡಳಿತ ಸಚಿವ ಎಂ.ಬಿ. ರಾಜೇಶ್ ತಿಳಿಸಿದ್ದಾರೆ.  ಮನೆಗಳ ತ್ಯಾಜ್ಯವನ್ನು ಅಲ್ಲೇ ಸಂಸ್ಕರಿಸಲು ಸೂಕ್ತ ರೀತಿಯ ಕಿಚನ್ ಬಿನ್, ಹೆಚ್ಚುವರಿ ತ್ಯಾಜ್ಯವನ್ನು ಸಂಸ್ಕರಿಸಬೇಕಾಗಿ  ಬರುವ ಮನೆಗಳಿಗೆ ಬಯೋಗ್ಯಾಸ್ ಸ್ಥಾವರಗಳನ್ನು ಸ್ಥಾಪಿಸಿ …

ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ ಸಮಾವೇಶ

ಕಾಸರಗೋಡು: ಕಾಸರಗೋಡು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ ಇದರ ಜಿಲ್ಲಾ ಸಮಾವೇಶ ಮುಳ್ಳೇರಿಯ ಕಾರಡ್ಕ ಸಹಕಾರಿ ಬ್ಯಾಂಕ್ ಹಾಲ್‌ನಲ್ಲಿ ಜರಗಿತು. ಜಿಲ್ಲಾಧ್ಯಕ್ಷ ಗುಣ ಪಾಲ ಅಮೈ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕೋಶಾಧಿಕಾರಿ ಕುಂಞ್ಞಪ್ಪು ಮಂಞಂಪಾರೆ, ಜಿಲ್ಲಾ ಪದಾಧಿಕಾರಿಗಳಾದ ಶೀನಾ ಮಂಞAಪಾರೆ, ಮುತ್ತಪ್ಪ ದೇವರಡ್ಕ, ಸೌಧಾಮಿನಿ ಕಾಞಂಗಾಡ್, ಗುಲಾಬಿ ಕುಂಬಳೆ, ಬಾಬು ಎಡಪರಂಬು, ಸುಂದರ ನೆಟ್ಟಣಿಗೆ, ರಾಜರಾಮ್ ಪುತ್ರಕಳ, ಸಂತೋಷ್ ಆದೂರ್, ರಾಧಾಕೃಷ್ಣ ಮಂಞಂಪಾರೆ ಭಾಗಿಯಾದರು.ಸಮುದಾಯದ ಏಳಿಗೆಗಾಗಿ, ಬೆಳವಣಿಗೆಗಾಗಿ, ರಕ್ಷಣೆಗಾಗಿ, ಸಂಘಟನಾತ್ಮಕವಾಗಿ ಕಾರ್ಯಪ್ರವೃತಿಗೆ ಬರಲು ಜಿಲ್ಲಾ …

ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ಬೂತ್ ನಿರ್ಮಾಣ ಪೊಲೀಸ್ ಬಂದೋಬಸ್ತುನೊಂದಿಗೆ ಆರಂಭ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ತಾತ್ಕಾಲಿಕ ಟೋಲ್ ಬೂತ್ ನಿರ್ಮಾಣ ಕಾಮಗಾರಿ ಇಂದು ಬೆಳಿಗ್ಗೆ ಪೊಲೀಸ್ ಬಂದೋಬಸ್ತ್ ನೊಂದಿಗೆ ಪುನರಾರಂಭಿಸಲಾಯಿತು. ಕುಂಬಳೆ ಠಾಣೆ ಇನ್ಸ್‌ಪೆಕ್ಟರ್ ಪಿ.ಕೆ. ಜಿಜೀಶ್‌ರ ನೇತೃತ್ವದಲ್ಲಿ ಸ್ಥಳದಲ್ಲಿ ಪೊಲೀ ಸರು ಭಾರೀ ಭದ್ರತೆ ಏರ್ಪಡಿಸಿದ್ದಾರೆ. ಮೊನ್ನೆ ಮಧ್ಯಾಹ್ನ ಟೋಲ್ ಬೂತ್ ನಿರ್ಮಾಣ ಕೆಲಸ ಆರಂಭಿ ಸಲಾಗಿತ್ತು. ಈ ವೇಳೆ ಜನಪರ ಮುಷ್ಕರ ಸಮಿತಿ ಪದಾಧಿಕಾರಿಗಳು ಅಲ್ಲಿಗೆ ತಲುಪಿ ಕಾಮಗಾರಿಗೆ ತಡೆಯೊಡ್ಡಿದ್ದರು. ಈ ಹಿನ್ನೆಲೆಯಲ್ಲಿ ಕೆಲಸ ನಿಲ್ಲಿಸಿ ಸಂಜೆ 3.30ಕ್ಕೆ ಮತ್ತೆ ಪೊಲೀಸರ ಕಾವಲಿನಲ್ಲಿ ಕೆಲಸ …

ಲಂಚ ಸ್ವೀಕಾರ ಆರೋಪ: ಕೆಎಸ್‌ಇಬಿ ಸಬ್ ಇಂಜಿನಿಯರ್ ಬಂಧನ

ಕಾಸರಗೋಡು: ಲಂಚ ಸ್ವೀಕರಿ ಸಿದ ಆರೋಪದಂತೆ ವಿದ್ಯುನ್ಮಂಡ ಳಿಯ ಸಬ್ ಇಂಜಿನಿಯರ್‌ರನ್ನು  ಕಾಸರಗೋ ಡು ಜಾಗ್ರತಾ ದಳ ಬಂಧಿಸಿದೆ. ವಿದ್ಯುನ್ಮಂಡಳಿಯ ಚಿತ್ತಾರಿ  ಕಚೇರಿಯ ಸಬ್ ಇಂಜಿನಿಯರ್ ಕೆ. ಸುರೇಂದ್ರನ್ (55) ಬಂಧಿತ ವ್ಯಕ್ತಿ. ಇವರು ಹೊಸದುರ್ಗ ಕಾರಾಟು ವಯಲ್ ನಿವಾಸಿಯಾಗಿದ್ದಾರೆ. ಪೂಚಕ್ಕಾಡ್ ನಿವಾಸಿಯಿಂದ 3000 ರೂ. ಲಂಚ ಸ್ವೀಕರಿಸಿದ ಆರೋಪ ದಂತೆ ಈತನನ್ನು ಬಂಧಿಸಲಾಗಿದೆ. ಪೂಚಕ್ಕಾಡ್ ನಿವಾಸಿಯಾಗಿರುವ ದೂರುಗಾರ ಮುಕ್ಕುಟಿನಲ್ಲಿ ನಿರ್ಮಿ ಸುತ್ತಿರುವ ಹೊಸ ಮನೆಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಲು ಅವರಿಂದ ಸಬ್ ಇಂಜಿನಿಯರ್ ಲಂಚ …

ಕಾಂಗ್ರೆಸ್‌ನಲ್ಲೇ ಅಸಂತೃಪ್ತಿ: ರಾಹುಲ್ ಮಾಕೂಟತ್ತಿಲ್‌ರ ಶಾಸಕ ಸ್ಥಾನಕ್ಕೆ ಕುತ್ತು ಸಾಧ್ಯತೆ

ತಿರುವನಂತಪುರ: ಯುವತಿಯ ರೊಂದಿಗೆ ಅನುಚಿತ ರೀತಿಯಲ್ಲಿ ವರ್ತಿ ಸಿದ ಗಂಭೀರ ಆರೋಪ ಎದುರಿಸುತ್ತಿ ರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಕೂಟತ್ತಿಲ್‌ರ ವಿಷಯದಲ್ಲಿ ಕಾಂಗ್ರೆಸ್ ರಾಜ್ಯ ಘಟಕದಲ್ಲೇ ಅಸಂತೃಪ್ತಿ ಹೊಗೆಯಾಡತೊಡಗಿದೆ.  ಕೇವಲ ತಾಂತ್ರಿಕತೆಯ ಹೆಸರಲ್ಲಿ ರಾಹುಲ್‌ರ ಸಂರಕ್ಷಣೆ ನೀಡುವುದು ಪಕ್ಷಕ್ಕೆ ಪ್ರತಿ ಕೂಲಕರವಾಗಿ ಪರಿಣಮಿಸಲಿದೆಯೆಂದು ಕಾಂಗ್ರೆಸ್ ರಾಜ್ಯ ಘಟಕದ ಒಂದು ವಿಭಾಗ ಪ್ರಶ್ನಿಸತೊಡಗಿದೆ. ರಾಹುಲ್ ವಿರುದ್ಧ ಈಗ ಯಾವುದೇ ಪ್ರಕರಣಗಳಾಗಲೀ, ದೂರು ಗಳಾಗಲೀ ಸಲ್ಲಿಸಲ್ಪಡದ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ಅವರ ವಿರುದ್ಧ ಕಠಿಣ ನಿಲುವು ಕೈಗೊಳ್ಳುವ ಅಗತ್ಯವಿದೆಯೇ ಎಂದು …

ಕರ್ತವ್ಯ ವೇಳೆ ಕೆಎಸ್‌ಆರ್‌ಟಿಸಿ ಬಸ್‌ನೊಳಗೆ ನಿರ್ವಾಹಕ ಕುಸಿದು ಬಿದ್ದು ಮೃತ್ಯು

ಕಾಸರಗೋಡು: ಕರ್ತವ್ಯದ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಅದರ ನಿರ್ವಾಹಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಪಾಣತ್ತೂರು ಚಿರಂಕಡವು ನಿವಾಸಿ ಸುನೀಶ್ ಅಬ್ರಹಾಂ (50) ಸಾವನ್ನಪ್ಪಿದ ವ್ಯಕ್ತಿ. ಇವರು ಪಾಣತ್ತೂರಿನ ಹೊಸದುರ್ಗ ರೂಟ್‌ನ ಕೆಎಸ್‌ಆರ್‌ಟಿಸಿ ಬಸ್‌ನ ನಿರ್ವಾಹಕನಾಗಿದ್ದಾರೆ. ಬಸ್ ಇಂದು ಬೆಳಿಗ್ಗೆ ಪಾಣತ್ತೂರಿನಿಂದ ಹೊಸದುರ್ಗಕ್ಕೆ ಹೋಗುತ್ತಿದ್ದ ದಾರಿ ಮಧ್ಯೆ ಕೋಳಿಚ್ಚಾಲ್ ತಲುಪಿದಾಗ ಸುನೀಶ್‌ರಿಗೆ ಎದೆನೋವು ಅನುಭವಗೊಂಡಿದೆ. ಅದನ್ನು ಕಂಡ ಚಾಲಕ ಬಸ್‌ನ್ನು ಅಲ್ಲೇ ರಸ್ತೆ ಬದಿಯಲ್ಲಿ ನಿಲ್ಲಿಸಿ ಪ್ರಯಾಣಿಸುತ್ತಿದ್ದ ಸಮಾಜಸೇವಕ ಶಿಬು ಪಾಣತ್ತೂರು ಮತ್ತಿತರರು …