ಸಿಪಿಐ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್. ಸುಧಾಕರ ರೆಡ್ಡಿ ನಿಧನ

ದೆಹಲಿ: ಸಿಪಿಐಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಸ್. ಸುಧಾಕರ ರೆಡ್ಡಿ (83) ನಿಧನ ಹೊಂದಿದರು. ಅಸೌಖ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದರು. 2012ರಿಂದ 19ರ ವರೆಗೆ ಇವರು ಸಿಪಿಐ ಪ್ರಧಾನ ಕಾರ್ಯದರ್ಶಿ ಆಗಿದ್ದರು. ಎರಡು ಬಾರಿ ಆಂಧ್ರದಿಂದ ಲೋಕಸಭಾ ಸದಸ್ಯರಾ ಗಿದ್ದರು.  ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯಾಚರಿಸಿದ್ದರು.

ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ಗೇಟ್ ನಿರ್ಮಾಣ: ಬಿಜೆಪಿ ಮಂಡಲ ಸಮಿತಿಯಿಂದ ಕೇಂದ್ರ ಸಚಿವರಿಗೆ ಮನವಿ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪ್ರಗತಿಯಲ್ಲಿರುವಂತೆ ಕುಂಬಳೆಯಲ್ಲಿ ನಡೆಯುತ್ತಿರುವ ತಾತ್ಕಾಲಿಕ ಟೋಲ್‌ಗೇಟ್ ನಿರ್ಮಾಣದ ವಿರುದ್ಧ ಬಿಜೆಪಿ ಕುಂಬಳೆ ಮಂಡಲ ಸಮಿತಿ ಕೇಂದ್ರ ಸಾರಿಗೆ ಇಲಾಖೆ ಸಚಿವರಿಗೆ ದೂರು ನೀಡಿದೆ. ನ್ಯಾಯಾಲಯದ ತೀರ್ಪಿನ ಮೂಲಕ ಟೋಲ್‌ಗೇಟ್ ಜ್ಯಾರಿಗೆ ಬಂದರೆ ಪ್ರಸ್ತುತ ಟೋಲ್‌ಗೇಟ್ ವ್ಯಾಪ್ತಿಯಲ್ಲಿರುವ ಕುಂಬಳೆ, ಪುತ್ತಿಗೆ, ಮಂಗಲ್ಪಾಡಿ ಪಂಚಾಯತ್‌ಗಳ ಹಾಗೂ ಇತರ ಭಾಗಗಳ ಖಾಯಂ ಪ್ರಯಾಣಿಕರ ವಾಹನಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕೆಂದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಸಾರಿಗೆ ಇಲಾಖೆ ಸಚಿವ ನಿತಿನ್ ಗಡ್ಕರಿ ಯವರಲ್ಲಿ …

ಸೇವಾ ಮನೋಭಾವದಿಂದ ಸಮಾಜಕ್ಕೆ ಕೊಟ್ಟರೆ ಪುಣ್ಯಪ್ರಾಪ್ತಿ- ಒಡಿಯೂರು ಶ್ರೀ

ಮಂಜೇಶ್ವರ: ಗಳಿಸಿದ ಸಂಪತ್ತನ್ನು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿ ಸಮಾಜಕ್ಕೆ ಕೊಡುವ ಸೇವಾ ಮನೋಭಾವದಿಂದ ಪುಣ್ಯಪ್ರಾಪ್ತಿಯಾ ಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿ ದರು. ಕೊಣಿಬೈಲು ಉಳಿಪಾಡಿ ಗುತ್ತು ಮಲ್ಲಿಕಾ ಆರ್. ಚೌಟ ನಿರ್ಮಿಸಿಕೊಟ್ಟ ವೆಂಕಟೇಶ ವೈಭವ ಹಾಗೂ ಆಸ್ಟ್ರೇಲಿಯಾದ ನ್ಯೂಜರ್ಸಿಯ ಡಾ. ಬೆಳ್ಳೆ ದಿನಕರ ರೈ, ಶಕೀಲಾ ಡಿ. ರೈ ಉಳಿಪಾಡಿಗುತ್ತು ದಂಪತಿ ನಿರ್ಮಿಸಿಕೊಟ್ಟ ಶ್ರೀ ವೈಷ್ಣವಿ ಸದನದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಸ್ವಾಮೀಜಿ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭದಲ್ಲಿ …

ಬೆಳ್ಳೂರು: ನಾಕೂರು ಕಾಲನಿಯ ಕುಡಿಯುವ ನೀರು ಸಮಸ್ಯೆಗೆ ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ

ಬೆಳ್ಳೂರು: ಪಂಚಾಯತ್‌ನ ಮೂರನೇ ವಾರ್ಡ್ ಕುಳದಪಾರೆಯ ನಾಕೂರು ಎಸ್‌ಸಿ ಕಾಲನಿಯಲ್ಲಿ ಕುಡಿ ಯುವ ನೀರು ಸಮಸ್ಯೆ ತಲೆದೋರಿದೆ.  ಪದೇ ಪದೇ ವಿದ್ಯುತ್ ಮೊಟಕುಗೊಳ್ಳು ತ್ತಿರುವುದರಿಂದ ಇಲ್ಲಿನ 30ರಷ್ಟು ಕುಟುಂಬಗಳು ನೀರಿಗಾಗಿ ಪರದಾಡಬೇಕಾಗುತ್ತಿದೆ. ಇಲ್ಲಿನ ಕುಡಿಯುವ ನೀರು ವಿತರಣೆ ಯೋಜನೆಗೆ ತ್ರಿಫೇಸ್ ವಿದ್ಯುತ್ ಲೈನ್‌ನ ಅಗತ್ಯವಿದೆ. ಇದೀಗ ವಿದ್ಯುತ್ ಸಂಪರ್ಕವಿದ್ದರೂ  ವಿದ್ಯುತ್ ಲೈನ್ ತೋಟದ ಮೂಲಕ ಸಾಗುತ್ತಿದೆ. ಇದರಿಂದ ತಂತಿಗಳ ಮೇಲೆ ಸೋಗೆ, ಮಡಲು ಬೀಳುತ್ತಿರುವುದರಿಂದ ಪದೇ ಪದೇ ವಿದ್ಯುತ್ ಮೊಟಕುಗೊಳ್ಳುತ್ತಿ ರುವುದು ನೀರು ವಿತರಣೆಗೆ ಬಾಧಿಸುತ್ತಿದೆ. ಈ …

ಮಂಜೇಶ್ವರ ಠಾಣೆ ಎಎಸ್‌ಐ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣೆಯ ಎಎಸ್‌ಐ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಕುತ್ತಿಕ್ಕೋಲ್ ನಿವಾಸಿಯಾದ ಮಧುಸೂದನ(50) ಎಂಬವರು ಮೃತಪಟ್ಟ ವ್ಯಕ್ತಿ. ಇಂದು ಬೆಳಿಗ್ಗೆ ಪೊಲೀಸ್ ಕ್ವಾರ್ಟರ್ಸ್‌ನಲ್ಲಿ  ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ  ಇವರ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ತಲುಪಿದ್ದಾರೆ.  ಆತ್ಮಹತ್ಯೆಗೈಯ್ಯಲು ಕಾರಣವೇನೆಂದು ತಿಳಿದುಬಂದಿಲ್ಲ. ಇದೇ ವೇಳೆ ಕ್ವಾರ್ಟರ್ಸ್‌ನೊಳಗಿನಿಂದ ಒಂದು ಪತ್ರ ಪತ್ತೆಯಾಗಿರುವುದಾಗಿ ಸೂಚನೆಯಿದೆ. ಪೊಲೀಸ್ ಠಾಣೆಗೆ ತಲುಪುವವರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸುವ ಅಧಿಕಾರಿಯಾಗಿದ್ದ ಇವರು   ತನಿಖೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರೆಂದು ಹೇಳಲಾಗುತ್ತಿದೆ. …

ಹೊಸ ಬಸ್ ನಿಲ್ದಾಣದ ಸರ್ಕಲ್ ಅಭಿವೃದ್ಧಿ ಹೊಂದುತ್ತಿರುವಂತೆಯೇ ಹೆಚ್ಚುತ್ತಿರುವ ಸಂಚಾರ ತಡೆ

ಕಾಸರಗೋಡು: ರಸ್ತೆ ಎಷ್ಟೇ ಅಭಿವೃದ್ಧಿ ಹೊಂದಿದರೂ ಕಾಸರಗೋಡು ಪೇಟೆಯ ಸಾರಿಗೆ ಸಂಚಾರ ತಡೆಗೆ ಪರಿಹಾರ ವಾಗುವುದಿಲ್ಲ. ಕಾಸರಗೋಡು ಹೊಸ ಬಸ್ ನಿಲ್ದಾಣದ ಸರ್ಕಲ್‌ನಲ್ಲಿ ತೀವ್ರ ರೀತಿಯ ಸಾರಿಗೆ ಸಂಚಾರ ತಡೆ ಎದುರಿಸಲಾಗುತ್ತಿದೆ. ನಾಲ್ಕೂ ಕಡೆಗಳಿಂದಿರುವ ವಾಹನಗಳು ಜಂಕ್ಷನ್‌ಗೆ ತಲುಪುವಾಗ ಇಲ್ಲಿ ಭಾರೀ ಮಟ್ಟದ ಸಂಚಾರ ತಡೆ ಉಂಟಾಗುತ್ತಿದೆ. ಪೊಲೀಸರಿಗೆ ಕೂಡಾ ಇದನ್ನು ನಿಯಂತ್ರಿಸಲು ಸಾಧ್ಯವಾಗದಿರುವಾಗ ಆಟೋ ಕಾರ್ಮಿಕರು, ವ್ಯಾಪಾರಿಗಳು ಜೊತೆ ಗೂಡಿ ಸಂಚಾರ ನಿಯಂತ್ರಿಸಲಾಗುತ್ತಿದೆ. ಅಷ್ಟಕ್ಕೂ ತೀವ್ರಗೊಂಡ ಸಂಚಾರ ತಡೆ ಬೆಳಿಗ್ಗೆ ಮತ್ತು ಸಂಜ ಹೊತ್ತುಗಳಲ್ಲಿ ತಾರಕಕ್ಕೇರುತ್ತಿದೆ. …

ಮಹಿಳೆಯರೊಂದಿಗೆ ಅನುಚಿತ ವರ್ತನೆ: ಶಾಸಕ ಸ್ಥಾನಕ್ಕೆ ರಾಹುಲ್ ಮಾಕೂಟ್ಟತ್ತಿಲ್ ರಾಜೀನಾಮೆಗೆ ಬಿಜೆಪಿ, ಸಿಪಿಎಂ ಪಟ್ಟು

ತಿರುವನಂತಪುರ: ಮಹಿಳೆಯರೊಂ ದಿಗೆ ಅನುಚಿತ ರೀತಿಯಲ್ಲಿ ವರ್ತಿಸಿದ ಆರೋಪ ಉಂಟಾದ ಬೆನ್ನಲ್ಲೇ ಯೂತ್ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಕೂಟತ್ತಿಲ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇ ಕೆಂಬ ಪಟ್ಟು ಹಿಡಿದು ಬಿಜೆಪಿ ಮತ್ತು ಸಿಪಿಎಂ ಪ್ರತ್ಯಕ್ಷ ಹೋರಾಟ ಆರಂಭಿಸಿದೆ. ಇದೇ ಸಂದರ್ಭದಲ್ಲಿ ಇನ್ನೊಂದೆಡೆ ಕಾಂಗ್ರೆಸ್‌ನ ಕೇರಳ ಘಟಕವೂ ರಾಹುಲ್‌ರ ವಿರುದ್ಧ ಉಂಟಾಗಿರುವ ಆರೋಪದ ಬಗ್ಗೆ ಸಮಗ್ರ ತನಿಖೆ ಆರಂಭಿಸಿದೆ. ಆರೋಪದ ಹಿನ್ನೆಲೆಯಲ್ಲಿ ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ನಾನು …

ಬಾಲಕನಿಗೆ ಸಲಿಂಗರತಿ ಕಿರುಕುಳ: ಆಟೋ ಚಾಲಕ ಸೆರೆ

ಮಂಜೇಶ್ವರ: 17ರ ಹರೆಯದ ಬಾಲಕನನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ದು ಹಲವು ಬಾರಿ ಸಲಿಂಗರತಿ ಕಿರುಕುಳ ನೀಡಿದ ಆರೋಪದಂತೆ ಆಟೋ ಚಾಲಕನನ್ನು ಮಂಜೇಶ್ವರ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ಬಂಧಿಸಿದ್ದಾರೆ.  ಬಾಯಿ ಕಟ್ಟೆಯ ಇಬ್ರಾಹಿಂ ಖಲೀಲ್(25) ಎಂಬಾತ ಬಂಧಿತ ಆರೋಪಿಯಾ ಗಿದಾ ನೆ. ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು ಈ ವೇಳೆ  ರಿಮಾಂಡ್ ವಿಧಿಸಿದೆ. 2023ರಿಂದ 2025ರ ವರೆಗಿನ ಕಾಲಾವಧಿಯಲ್ಲಿ ಬಾಲಕನಿಗೆ ಆರೋಪಿ ಕಿರುಕುಳ ನೀಡಿರುವುದಾಗಿ ದೂರಲಾಗಿದೆ.

ಮೀನು ಕಾರ್ಮಿಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಮೀನು ಕಾರ್ಮಿಕ ನೋರ್ವ ಮನೆಯೊಳಗೆ ನೇಣುಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಕುಂಬಳೆ ದೇವೀನಗರ ತ್ಸುನಾಮಿ ಕಾಲನಿಯ ಅಬ್ದುಲ್ಲ (55) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಇವರು ಊಟಮಾಡಿ ನಿದ್ರಿಸಿದ್ದರು. ಇಂದು ಮುಂಜಾನೆ 5 ಗಂಟೆಗೆ  ಮನೆಯವರು ಎಚ್ಚೆತ್ತಾಗ ಅಬ್ದುಲ್ಲ ಅಡುಗೆ ಕೋಣೆಯಲ್ಲಿ ನೇಣುಬಿಗಿದು ಮೃತಪಟ್ಟಿರುವುದು ಕಂಡುಬಂದಿದೆ. ಈ ಬಗ್ಗೆ ಮನೆಯವರು ನೀಡಿದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹವನ್ನು ಕೆಳಕ್ಕಿಳಿಸಿದ್ದಾರೆ. ಇದೇ ವೇಳೆ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಒಂದು ಬ್ಲೇಡ್ ಹಾಗೂ ರಕ್ತದ ಕಲೆಗಳು …