ಪಿಗ್ಮಿ ಏಜೆಂಟ್ ಸುರೇಶ್ ಕೆ ಸೂರ್ಲು ನಿಧನ

ಕಾಸರಗೋಡು: ಕಾಸರ ಗೋಡು ಸೂರ್ಲು ಬಟ್ಟಂಪಾರೆ ನಂದಿನಿ ನಿವಾಸದ ಸುರೇಶ್ ಕೆ (73) ಅಸೌಖ್ಯ ನಿಮಿತ್ತ ಮಂ ಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ದೀರ್ಘಕಾಲ ರಾಷ್ಟ್ರೀಕೃತ ಬ್ಯಾಂಕೊಂದರ ಪಿಗ್ಮಿ ಕಲೆಕ್ಷನ್ ಏಜೆಂಟ್ ಆಗಿ ಸೇವೆ ಸಲ್ಲಿಸಿದ್ದರು. ಇವರು ಕಾಸರಗೋಡು ಎ.ಟಿ ರಸ್ತೆಯ ಆನೆಬಾಗಿಲು ತರವಾಡಿನ ಮಾಜಿ ಅಧ್ಯಕ್ಷರು ಹಾಗೂ ಹಾಲಿ  ರಕ್ಷಾಧಿಕಾರಿ, ತಳಂಗರೆ ಪಿಲಿಕುಂಜೆ ಭಗವತೀ ಕ್ಷೇತ್ರದ ಬಟ್ಟಂಪಾರೆ ಪ್ರಾದೇಶಿಕ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಮೃತರು ಪತ್ನಿ ಕೆ.ಟಿ. ಶುಭ, ಮಕ್ಕಳಾದ ಪ್ರಶೋಬ್ ಕೆ.ಟಿ, ಸುಮಾ ಕೆ.ಟಿ, …

ಕಾರಿನಲ್ಲಿ ಸಾಗಿಸುತ್ತಿದ್ದ ಎರಡು ಕಿಲೋ ಗಾಂಜಾ, 28 ಗ್ರಾಂ ಎಂಡಿಎಂಎ ವಶ: ಮೂವರ ಬಂಧನ

ಮಂಜೇಶ್ವರ: ಕಾರಿನಲ್ಲಿ ಸಾಗಿಸುತ್ತಿದ್ದ ಎರಡು ಕಿಲೋ ಗಾಂಜಾ ಹಾಗೂ 28 ಗ್ರಾಂ ಎಂಡಿಎಂಎ ಯನ್ನು ಮಂಜೇಶ್ವರ ಪೊಲೀಸರು ವಶಪಡಿಸಿಕೊಂಡು ಈ ಸಂಬಂಧ ಮೂವರನ್ನು ಬಂಧಿಸಿದ್ದಾರೆ. ಸೆರೆಗೀ ಡಾದವರು ಕರ್ನಾಟಕ ಬಂಟ್ವಾಳ ನಿವಾಸಿಗಳಾಗಿದ್ದಾರೆ.  ಇವರನ್ನು ತನಿಖೆಗೊಳಪಡಿಸಲಾಗುತ್ತಿದೆ. ಇಂದು ಮುಂಜಾನೆ ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಇ. ಅನೂಬ್ ಕುಮಾರ್‌ರ ನೇತೃತ್ವದಲ್ಲಿ ತಲಪಾಡಿಯಲ್ಲಿ ನಡೆಸಿದ ವಾಹನ ತಪಾಸಣೆ ವೇಳೆ ಮಾದಕವಸ್ತು ವಶಪಡಿಸಲಾಗಿದೆ.  ಪೊಲೀಸರು ನಿಲ್ಲಿಸಲು ಸೂಚಿಸಿದಾಗ ಕಾರನ್ನು ನಿಲ್ಲಿಸಿದ ತಂಡದ ಓರ್ವ ಓಡಿ ಪರಾರಿಯಾಗಲು ಯತ್ನಿಸಿದ್ದನು. ಆತನನ್ನು ಬೆನ್ನಟ್ಟಿ ಪೊಲೀಸರು ಸೆರೆಹಿಡಿದಿದ್ದಾರೆ. …

ಹಣ ಸಹಿತ ಹೊರಗೆ ತೆರಳಿದ ವ್ಯಕ್ತಿ ನಾಪತ್ತೆ

ಕುಂಬಳೆ: ಕಟ್ಟಡ ನಿರ್ಮಾಣ ಕಾರ್ಮಿಕನೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕುಂಬಳೆ ದೇವೀನಗರ ನಿವಾಸಿ ಸೆಲ್ವರಾಜ್ (61) ನಾಪತ್ತೆಯಾದ ವ್ಯಕ್ತಿಯಾಗಿ ದ್ದಾರೆ. ಈ ತಿಂಗಳ 16ರಂದು ಸಂಜೆ ಇವರು ಮನೆಯಿಂದ ಹೊರಗೆ ತೆರಳಿದವರು ಮರಳಿ ಬಂದಿಲ್ಲ. ವಿವಿಧೆಡೆ ಹುಡುಕಾ ಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಪುತ್ರ ಮಣಿಕಂಠನ್ ನಿನ್ನೆ ಕುಂಬಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮನೆಯಿಂದ ಹೊರಗೆ ತೆರಳುವ ವೇಳೆ ಸೆಲ್ವರಾಜ್‌ರ ಕೈಯಲ್ಲಿ 20 ಸಾವಿರ ರೂಪಾಯಿ ನಗದು ಇತ್ತೆಂದು ದೂರಿನಲ್ಲಿ ತಿಳಿಸಲಾ ಗಿದೆ. ಮೊಬೈಲ್ ಫೋನ್ ಮನೆಯಲ್ಲೇ ಇರಿಸಿ …

ಸುಬ್ರಹ್ಮಣ್ಯದಲ್ಲಿ ಅಂಗಡಿ ಕಳವು: ಮಂಜೇಶ್ವರ ನಿವಾಸಿ ಸೆರೆ

ಮಂಜೇಶ್ವರ: ಸುಬ್ರಹ್ಮಣ್ಯ ಬಳಿ ಅಂಗಡಿಗಳಲ್ಲಿ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರ ನಿವಾಸಿಯಾದ ಯುವಕನನ್ನು ಬಂಧಿಸಲಾಗಿದೆ. ಸತೀಶ್ (40) ಎಂಬಾತನನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ. ಸುಬ್ರಹ್ಮಣ್ಯದ ಐನೆಕಿದು ಬಸ್ ನಿಲ್ದಾಣದಲ್ಲಿರುವ ಹಾಲು ಉತ್ಪಾದಕ ಸಹಕಾರಿ ಸಂಘದ ಕಚೇರಿ ಹಾಗೂ ಸಮೀಪದ ಅಂಗಡಿಗಳಲ್ಲಿ ಕಳವು ನಡೆದಿತ್ತೆನ್ನಲಾಗಿದೆ. ಸೋಮವಾರ ಇದು ಅರಿವಿಗೆ ಬಂದಿತ್ತು. ಈ ಬಗ್ಗೆ ಲಭಿಸಿದ ದೂರಿನಂತೆ ಸುಬ್ರಹ್ಮಣ್ಯ ಎಸ್‌ಐ ಕಾರ್ತಿಕ್ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ಬಂಧಿಸಿದೆ. ಆರೋಪಿ ಯ ಕೈಯಿಂದ 3057 ರೂ. ವಶಪಡಿಸ ಲಾಗಿದೆ. …

ಕುಂಬಳೆ ಟೋಲ್ ಬೂತ್ ನಿರ್ಮಾಣಕ್ಕೆ ತಡೆಯೊಡ್ಡಲೆತ್ನ: ಆರು ಮಂದಿ ಬಂಧನ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ  ಕುಂಬಳೆಯಲ್ಲಿ ಟೋಲ್ ಬೂತ್ ನಿರ್ಮಾಣ ವಿರುದ್ಧ ಪ್ರತಿಭಟನೆ ನಡೆಸಿದ  ಜನಪರ ಮುಷ್ಕರ ಸಮಿತಿ ಪದಾಧಿಕಾರಿಗಳಾದ ಆರು ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಎ.ಕೆ. ಆರಿಫ್, ಅಶ್ರಫ್ ಕಾರ್ಳೆ, ಸಿ.ಎ ಸುಬೈರ್, ಅನ್ವರ್ ಆರಿಕ್ಕಾಡಿ, ಲಕ್ಷ್ಮಣ ಪ್ರಭು, ನಾಸರ್ ಮೊಗ್ರಾಲ್ ಎಂಬಿವರ ವಿರುದ್ದ ಕೇಸು ದಾಖಲಿಸಿ ಬಂಧಿಸಲಾಗಿದೆ. ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡ ಇವರಿಗೆ ಕಾರ್ಯಕರ್ತರು ಮೆರವಣಿಗೆ ಮೂಲಕ ಸ್ವಾಗತ ನೀಡಿದರು. ನಿನ್ನೆ ಮಧ್ಯಾಹ್ನ 1 ಗಂಟೆಗೆ ಟೋಲ್ ಬೂತ್ ನಿರ್ಮಾಣ ಕಾಮಗಾರಿ ಆರಂಭಿಸಲಾಗಿತ್ತು. …

ಮನೆಯಲ್ಲಿ ಬಚ್ಚಿಡಲಾಗಿದ್ದ 2526 ಪ್ಯಾಕೆಟ್ ತಂಬಾಕು ಉತ್ಪನ್ನ ಪತ್ತೆ

ಕಾಸರಗೋಡು: ಮನೆಯಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ 2526 ಪ್ಯಾಕೆಟ್ ನಿಷೇಧಿತ ತಂಬಾಕು ಉತ್ಪನ್ನ ಗಳನ್ನು ವಿದ್ಯಾನಗರ ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಮಧೂರು ಸಮೀಪದ ಕೋಟೆ ಕಣಿ ಕುಕ್ಕಂಬಾಡಿನ ಮನೆಯೊಂ ದರಿಂದ ಈ ಮಾಲು ಪತ್ತೆಹಚ್ಚಲಾ ಗಿದೆ. ವಿದ್ಯಾನಗರ ಎಸ್‌ಐ ಅಬ್ಬಾಸ್ ನೇತೃತ್ವದ ಪೊಲೀಸರ ತಂಡ ನಿನ್ನೆ ಈ ಕಾರ್ಯಾಚರಣೆ ನಡೆಸಿದೆ. ಇದಕ್ಕೆ ಸಂಬಂಧಿಸಿ ಪಟ್ಲ ತನ್ನಿಕೋಡ್ ಹೌಸ್‌ನ ಮೊಹಮ್ಮದ್ ಶೆರೀಫ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೀದಿನಾಯಿ ಹಾವಳಿಯಿಂದ ತತ್ತರಿಸಿದ ಜನತೆ: ಮಂಜೇಶ್ವರ ಪಂ.ಗೆ ಪ್ರತಿಭಟನಾ ಮಾರ್ಚ್

ಮಂಜೇಶ್ವರ: ಬೀದಿ ನಾಯಿಗಳ ದಾಳಿಯಿಂದ ಸಂಕಷ್ಟವನ್ನು ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಮಂಜೇ ಶ್ವರದ ಜನತೆ ಗುರುವಾರ ಪಂಚಾ ಯತ್ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಈ ಸಮಸ್ಯೆಯ ಬಗ್ಗೆ ವರ್ಷಗಳ ಹಿಂದೆಯೇ ಹಲವಾರು ಬಾರಿ ದೂರು ನೀಡಿದರೂ ಕೂಡ ಕ್ರಮ ಕೈಗೊಳ್ಳದೆ ಇದ್ದ ಪಂಚಾಯತ್ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಬೆಳಿಗ್ಗೆ ಮಂಜೇಶ್ವರ ರಿಜಿಸ್ಟ್ರಾರ್ ಕಚೇರಿ ಪರಿಸರದಿಂದ ಆರಂಭವಾದ ಪ್ರತಿ ಭಟನಾ ಮೆರವಣಿಗೆ, ಘೋಷಣೆ ಗಳೊಂದಿಗೆ ಕಚೇರಿ ಕಡೆಗೆ ಸಾಗಿತು. ನಂತರ …

ಕೆಲಸದ ಮಧ್ಯೆ ಕುಸಿದು ಬಿದ್ದು ತಲೆಹೊರೆ ಕಾರ್ಮಿಕ ಮೃತ್ಯು

ಕಾಸರಗೋಡು: ನಗರದ ಎಸ್‌ಟಿಯು ಕಾರ್ಯಕರ್ತ, ತಲೆಹೊರೆ ಕಾರ್ಮಿಕ ಕೆಲಸದ ಮಧ್ಯೆ ಕುಸಿದು ಬಿದ್ದು ಮೃತಪಟ್ಟರು. ಕೇಳುಗುಡ್ಡೆ ಸೀದಿ ಕಂಪೌಂಡ್‌ನ ದಿ| ಸಿ.ಬಿ. ಅಬ್ದುಲ್ಲ- ಆಚಿಬಿ ದಂಪತಿ ಪುತ್ರ ಸಿ.ಎ. ಹನೀಫ್ (52) ನಿಧನ ಹೊಂದಿದರು. ನಿನ್ನೆ ಮಧ್ಯಾಹ್ನ ಕೆಲಸದ ಮಧ್ಯೆ ಇವರು ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯ ವೇರ್ ಹೌಸ್‌ನಲ್ಲಿ ತಲೆಹೊರೆ ಕಾರ್ಮಿಕನಾಗಿದ್ದರು. ಮೃತರು ಪತ್ನಿ ಮುಮ್ತಾಜ್, ಮಕ್ಕಳಾದ ಸೈಯ್ಯಾಫ್ (ದುಬೈ), ಸಿರಾ, ಸಾಜುವಾ, ಸಹೋದರರಾದ …

ಕೇರಳ ಸರಕಾರದ ಜನವಿರೋಧಿ ನೀತಿ ವಿರುದ್ಧ ಬಿಎಂಎಸ್ ಹೋರಾಟ

ಕುಂಬಳೆ: ಕೇರಳ ಸರಕಾರದ ಜನವಿರೋಧಿ ನೀತಿ ವಿರುದ್ಧ ಸೆ.17ರ ಕಾರ್ಮಿಕ ದಿನಾಚರಣೆಯನ್ನು ಬಿಎಂಎಸ್ ರಾಜ್ಯದಾದ್ಯಂತ ಹೋರಾಟ ನಡೆಸಲು ತೀರ್ಮಾನಿಸಿದ್ದು, ಇದರಂತೆ ಕುಂಬಳೆ ವಲಯಸಮಿತಿ ಸಭೆ ಪಾದಯಾತ್ರೆ ಹೋರಾಟ ನಡೆಸಲು ತೀರ್ಮಾನಿಸಿದೆ. ಇಲ್ಲಿನ ಜಯಮಾರುತಿ ವ್ಯಾಯಾಮಶಾಲೆಯ ವಠಾರದಲ್ಲಿ ನಡೆದ ಸಭೆಯಲ್ಲಿ ವಲಯಾಧ್ಯಕ್ಷ ವೇಣುಗೋಪಾಲ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಕೆ. ಬಂಬ್ರಾಣ ಉದ್ಘಾಟಿಸಿದರು. ಜಿಲ್ಲಾ ಜೊತೆ ಕಾರ್ಯದರ್ಶಿ ಹರೀಶ್ ಕುದ್ರೆಪ್ಪಾಡಿ, ಕುಂಬಳೆ ಬಿಎಂಎಸ್ ಪಂ. ಸಮಿತಿ ಅಧ್ಯಕ್ಷ ಶಿವಾನಂದ ರಾವ್, ಐತ್ತಪ್ಪ ನಾರಾಯಣಮಂಗಲ ಮಾತನಾಡಿದರು.

ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಕೆ.ಪಿ. ವಲ್ಸರಾಜ್ ಆಯ್ಕೆ

ಉಪ್ಪಳ: ಬಿಜೆಪಿ ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾಗಿ ಕೆ.ಪಿ. ವಲ್ಸರಾಜ್ ಆಯ್ಕೆಯಾಗಿದ್ದಾರೆ. ಯುವಮೋರ್ಚ ಮಂಗಲ್ಪಾಡಿ ಪಂಚಾಯತ್ ಪ್ರಧಾನ ಕಾರ್ಯದರ್ಶಿಯಾಗಿ 1992 ರಲ್ಲಿ ಅಧಿಕಾರ ವಹಿಸಿದ್ದರು. ಬಳಿಕ ಯುವಮೋರ್ಚ ಮಂಗಲ್ಪಾಡಿ ಪಂಚಾಯತ್ ಪ್ರಧಾನ ಕಾರ್ಯದರ್ಶಿ, ಮಂಜೇಶ್ವರ ಮಂಡಲ ಪ್ರಧಾನ ಕಾರ್ಯದರ್ಶಿ, ಮಂಜೇಶ್ವರ ಮಂಡಲ ಅಧ್ಯಕ್ಷ, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಬಿಜೆಪಿ ಮಂಡಲ ಅಧ್ಯಕ್ಷ, ಜಿಲ್ಲಾ ಕಾರ್ಯದರ್ಶಿ ಎಂಬೀ ಪದವಿಗಳನ್ನು ವಹಿಸಿದ್ದರು. ಪ್ರಸ್ತುತ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ.