ಐತಿಹಾಸಿಕ ಮಸೂದೆ ಇಂದು ಸಂಸತ್‌ನಲ್ಲಿ ಮಂಡನೆ: ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಬಂಧನವಾದಲ್ಲಿ ಹುದ್ದೆಯಿಂದ ವಜಾ
ನವದೆಹಲಿ: ಗಂಭೀರ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಮತ್ತು ಸಚಿ ವರುಗಳು (ಕೇಂದ್ರಾಡಳಿತ ಪ್ರದೇಶಗಳೂ ಸೇರಿ) ಬಂಧಿಸಲ್ಪಟ್ಟಲ್ಲಿ ಅವರನ್ನು ಪದಚ್ಯುತಿಗೊಳಿಸುವ ಮಸೂದೆಯನ್ನು ಇಂದು ಲೋಕಸಭೆಯಲ್ಲಿ ಕಂದ್ರ ಗೃಹ ಸಚಿವ ಅಮಿತ್ ಷಾ ಮಂಡಿಸಲಿದ್ದಾರೆ. ಇದರ ಜೊತೆಗೆ ಸಂವಿಧಾನದ (130ನೇ ತಿದ್ದುಪಡಿ) ಮಸೂದೆ-೨೦೨೫, ಕೇಂದ್ರಾ ಡಳಿತ ಸರಕಾರ (ತಿದ್ದುಪಡಿ) ಮಸೂದೆ ಮತ್ತು ಜಮ್ಮು ಕಾಶ್ಮೀರ ಪುನರ್ ರಚನೆ (ತಿದ್ದುಪಡಿ) ಮಸೂದೆ 2025ಗಳನ್ನೂ ಗೃಹ ಸಚಿವರು ಲೋಕಸಭೆಯಲ್ಲಿ ಇಂದು ಮಂಡಿಸಲಿದ್ದಾರೆ. ಆಡಳಿತದಲ್ಲಿ ಹೊಣೆಗಾರಿಕೆ ಯನ್ನು ಸರಿಯಾದ ರೀತಿಯಲ್ಲಿ …