ಕೋ-ಓಪರೇಟಿವ್ ಎಂಪ್ಲೋಯೀಸ್ ಯೂನಿಯನ್ ಜಿಲ್ಲಾ ಸಮ್ಮೇಳನ ನಾಳೆಯಿಂದ

ಕಾಸರಗೋಡು: ಕೇರಳ ಕೋ-ಆಪರೇಟಿವ್ ಎಂಪ್ಲೋಯೀಸ್ ಯೂನಿಯನ್ (ಸಿಐಟಿಯು) ಜಿಲ್ಲಾ ಸಮ್ಮೇಳನ ನಾಳೆ ಹಾಗೂ ಆದಿತ್ಯವಾರ ಮುನ್ನಾಡ್‌ನಲ್ಲಿ ನಡೆಯಲಿದೆ ಎಂದು ಪದಾಧಿಕಾರಿಗಳು ತಿಳಿಸಿದ್ದಾರೆ. ಸಿಐಟಿಯು ರಾಜ್ಯ ಸಮಿತಿ ಸದಸ್ಯ ಎಂ.ವಿ. ಜಯರಾಜನ್ ಉದ್ಘಾಟಿ ಸುವರು. ಇದರಂಗವಾಗಿ ನಡೆಯುವ ಸಹಕಾರಿ ಸಮ್ಮೇಳನವನ್ನು ಶಾಸಕ ಸಿ.ಎಚ್. ಕುಂಞಂಬು ಉದ್ಘಾಟಿಸುವರು. ಸೇವೆಯಿಂದ ನಿವೃತ್ತರಾದವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ. ಸಹಕಾರಿ ಠೇವಣಿ ಗ್ಯಾರಂಟಿ ಫಂಡ್ ಬೋರ್ಡ್ ಉಪಾಧ್ಯಕ್ಷ ಕೆ.ಪಿ. ಸತೀಶ್ಚಂದ್ರನ್ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸುವರು.  ಸಹಕಾರಿ ವಲಯವನ್ನು ನಾಶಪಡಿಸಲಿರುವ ಕೇಂದ್ರ ಸರಕಾರದ ನೀತಿ ವಿರುದ್ಧ …

ಗುತ್ತಿಗೆದಾರನ ಮನೆ ಕಳವಿಗೆತ್ನ: ಕುಖ್ಯಾತ ಆರೋಪಿ ಸೆರೆ

ಕಾಸರಗೋಡು: ಕುಖ್ಯಾತ ಕಳವು ಆರೋಪಿಯನ್ನು ಗುತ್ತಿಗೆದಾರನ ಮನೆ ಕಳವು ಯತ್ನ ವೇಳೆ ಸೆರೆ ಹಿಡಿಯ ಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಖಾಯಂ ವಾಸಿಸುವ ಮೂವಾಟುಪುಳ ನಿವಾಸಿ ನೌಫಲ್ ಎಂಬಾತನನ್ನು ಇಂದು ಮುಂಜಾನೆ ನರಿಮಾಳದಲ್ಲಿ  ಸೆರೆಹಿಡಿಯಲಾಗಿದೆ.  ನೀಲೇಶ್ವರ ಚಾಯೋಂನ ನರಿಮಾಳ ಎಂಬಲ್ಲಿನ ಗುತ್ತಿಗೆದಾರ ಸುರೇಶ್ ಪೆರಿಂಗುಳ ಎಂಬವರ ಮನೆಯಲ್ಲಿ ಕಳವಿಗೆತ್ನಿಸಿದ ವೇಳೆ ಈತನನ್ನು ಬಂಧಿಸಲಾಗಿದೆ. ಇಂದು ಮುಂಜಾನೆ 3 ಗಂಟೆ ವೇಳೆ ಶಬ್ದ ಕೇಳಿ ಮನೆಯವರು ಎಚ್ಚೆತ್ತಾಗ ವ್ಯಕ್ತಿಯೋರ್ವ ಕಳವಿಗೆತ್ನಿಸಿ ಕಳ್ಳ ಪರಾರಿ ಯಾಗಿರುವುದು ಕಂಡು ಬಂದಿದೆ. ಮನೆಯ ಹಿಂಬದಿಯ …

ಒಂದೇ ಕುಟುಂಬದ ಮೂರು ಮಂದಿ ಆಸಿಡ್ ಸೇವಿಸಿ ಸಾವು: ಒಬ್ಬನ ಸ್ಥಿತಿ ಗಂಭೀರ

ಕಾಸರಗೋಡು: ಒಂದೇ ಕುಟುಂಬದ ಮೂರು ಮಂದಿ ಆಸಿಡ್ ಸೇವಿಸಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಅಂಬಲತ್ತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಒಬ್ಬರ ಸ್ಥಿತಿ ಅತೀ ಗಂಭೀರವಾಗಿದೆ ಎಂದು ಮಾಹಿತಿಯಿದೆ. ಅಂಬಲತ್ತರ ಪರಕ್ಕಳಾಯಿ ಒಂಡಂಪುಳಿಕ್ಕಾಲ್ ನಿವಾಸಿ ಗೋಪಿ (60), ಪತ್ನಿ ಇಂದಿರ (57), ಪುತ್ರ ರಾಜೇಶ್ (22) ಎಂಬಿವರು ಮೃತಪಟ್ಟ ವ್ಯಕ್ತಿಗಳಾಗಿದ್ದಾರೆ. ಇನ್ನೋರ್ವ ಪುತ್ರ ರಾಕೇಶ್‌ನನ್ನು ಗಂಭೀರ ಸ್ಥಿತಿಯಲ್ಲಿ ಪರಿಯಾರಂನ ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇಂದು ಮುಂಜಾನೆ 4 ಗಂಟೆ ವೇಳೆಗೆ ಈ …

ರೈಲು ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ಕಳವು: ಗಲ್ಫ್‌ಗೆ ಪರಾರಿಯಾದ ಆರೋಪಿ ಕಣ್ಣೂರಿನಿಂದ ಸೆರೆ

ಕುಂಬಳೆ: ಕುಂಬಳೆ ರೈಲು ನಿಲ್ದಾಣ ಸಮೀಪ ನಿಲ್ಲಿಸಿದ್ದ ಬೈಕ್‌ನಿಂದ ಪೆಟ್ರೋಲ್ ಕಳವುಗೈದ ಪ್ರಕರಣದಲ್ಲಿ ಆರೋಪಿಯಾಗಿ ತಲೆಮರೆಸಿಕೊಂಡಿದ್ದ ಯುವಕನನ್ನು ಕಣ್ಣೂರು ವಿಮಾನ ನಿಲ್ದಾಣದಿಂದ ಸೆರೆ ಹಿಡಿಯಲಾಗಿದೆ. ಮೇಲ್ಪರಂಬ ನಿವಾಸಿ ರಿಸ್ವಾನ್ (23) ಎಂಬಾತ ಬಂಧಿತ ಆರೋಪಿಯಾಗಿ ದ್ದಾ ನೆಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಜುಲೈ 13ರಂದು ಕುಂಬಳೆ ರೈಲು ನಿಲ್ದಾಣ ಪರಿಸರದಲ್ಲಿ ನಿಲ್ಲಿಸಿದ್ದ ಬೈಕ್‌ನಿಂದ ರಿಸ್ವಾನ್ ಹಾಗೂ ಕುಂಬಳೆ ನೀರೋಳಿಯ ರುಮೈಸ್ ಎಂಬವರು ಪೆಟ್ರೋಲ್ ಕಳವುಗೈದಿದ್ದರು. ಕಳವುಗೈಯ್ಯುತ್ತಿರು ವುದನ್ನು ತಿಳಿದ ವಾಹನ ಪಾರ್ಕಿಂಗ್ ಸ್ಥಳದ ಕಾವಲುಗಾರ ಪೊಲೀಸರಿಗೆ ಮಾಹಿತಿ …

ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಾಟಪರಾರಿಯಾದ ಆರೋಪಿ ಬಂಧನ

ಬದಿಯಡ್ಕ: ಆಟೋ ರಿಕ್ಷಾದಲ್ಲಿ ಗಾಂಜಾ ಸಾಗಿಸುತ್ತಿದ್ದಾಗ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಪರಾರಿಯಾದ ಆರೋಪಿಯನ್ನು ಬಂಧಿಸಲಾಗಿದೆ.  ಬಾಪಾಲಿಪೊನ ನಿವಾಸಿ ಬಿ.ಎಂ. ಸಹದ್ ಯಾನೆ ಅದ್ದು ಎಂಬಾತನನ್ನು ನಿನ್ನೆ ರಾತ್ರಿ ಕಾಸರಗೋಡು ಅಣಂಗೂರಿನಿಂದ ಬದಿಯಡ್ಕ ಎಸ್‌ಐ ಅಖಿಲ್ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಮೊನ್ನೆ ರಾತ್ರಿ ಚೆರ್ಲಡ್ಕ ಬಸ್ ನಿಲ್ದಾಣ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬಂದ ಆಟೋ ರಿಕ್ಷಾದಲ್ಲಿ 1.312 ಗ್ರಾಂ ಗಾಂಜಾ ಪತ್ತೆಯಾಗಿತ್ತು. ಈವೇಳೆ ರಿಕ್ಷಾದಲ್ಲಿದ್ದ ಅಂಗಡಿಮೊಗರು ಪೆರ್ಲಾಡಂ ನಿವಾಸಿ ರಿಫಾಯಿ ಬಿ.ಎಂ. ಎಂಬಾತನನ್ನು ಬಂಧಿಸಲಾಗಿತ್ತು. …

ಮಹಿಳೆಯ ಕುತ್ತಿಗೆಯಿಂದ ಎಗರಿಸಿದ ಚಿನ್ನದ ಸರ ಕಾಸರಗೋಡಿನ ಜ್ಯುವೆಲ್ಲರಿಯಲ್ಲಿ ಪತ್ತೆ

ಕಾಸರಗೋಡು: ತಳಿಪರಂಬ ಮುಯ್ಯತ್ ಎಂಬಲ್ಲಿನ ಮಹಿಳೆಯ ಕುತ್ತಿಗೆಯಿಂದ ಎಗರಿಸಿದ ಒಂದೂ ಕಾಲು ಪವನ್ ತೂಕದ ಚಿನ್ನದ ಸರವನ್ನು ಕಾಸರಗೋಡಿನ ಜ್ಯುವೆಲ್ಲರಿಯೊಂದರಿಂದ ಪೊಲೀಸರು ಪತ್ತೆಹಚ್ಚಿ ವಶಕ್ಕೆ ತೆಗೆದಿದ್ದಾರೆ. ಪ್ರಕರಣದಲ್ಲಿ ಸೆರೆಗೀಡಾಗಿ ರಿಮಾಂಡ್‌ನಲ್ಲಿರುವ ಬೇಕಲ ಉದುಮ ವೆಡಿತ್ತರಕ್ಕಾಲ್ ಪಾಕ್ಯಾರ ಹೌಸ್‌ನ ಮುಹಮ್ಮದ್ ಇಜಾಸ್ (23), ಸುಳ್ಯದ ಅಬ್ದುಲ್ ರಹ್ಮಾನ್ (30) ಎಂಬಿವರನ್ನು ಕಸ್ಟಡಿಗೆ ತೆಗೆದು ತನಿಖೆ ನಡೆಸಿದಾಗ ಚಿನ್ನದ ಸರವನ್ನು ಕಾಸರಗೋಡಿನ ಜ್ಯುವೆಲ್ಲರಿಯಲ್ಲಿ ಮಾರಾಟ ನಡೆಸಿರುವುದಾಗಿ ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಸೇರಿಸಿಕೊಂಡು ಕಾಸರಗೋಡಿಗೆ ತಲುಪಿದ ತಳಿಪರಂಪ  ಪೊಲೀಸರು …

ಕಾರು-ಸ್ಕೂಟರ್ ಢಿಕ್ಕಿ: ಓರ್ವ ಮೃತ್ಯು

ಮಂಜೇಶ್ವರ: ಉಪ್ಪಳ ರೈಲ್ವೇ ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಹಾಗೂ ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಪ್ರಯಾಣಿಕ ಮೃತಪಟ್ಟ ಘಟನೆ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯ ಅಬ್ದುಲ್ ಹಮೀದ್ (48) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಸ್ಕೂಟರ್ ಚಲಾಯಿಸುತ್ತಿದ್ದ ಅಜಾಸ್ ಅಹಮ್ಮದ್ (41) ಎಂಬವರನ್ನು ಗಾಯಗಳೊಂದಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ೬.೩೦ರ ವೇಳೆ ಅಪಘಾತ ಸಂಭವಿಸಿದೆ. ತಲಪಾಡಿ ಭಾಗದಿಂದ ಉಪ್ಪಳ ಭಾಗಕ್ಕೆ ಬರುತ್ತಿದ್ದ ಸ್ಕೂಟರ್ ಹಾಗೂ ಹೊಸಂಗಡಿ ಭಾಗದಿಂದ ಉಪ್ಪಳಕ್ಕೆ ಬಂದ ಕಾರು ಪರಸ್ಪರ …

ಓಣಂ ಆಚರಣೆಯ ವಿರುದ್ಧ ಮತೀಯ ವಿದ್ವೇಷ ಪರಾಮರ್ಶೆ: ಅಧ್ಯಾಪಿಕೆ ವಿರುದ್ಧ ಕೇಸು, ಅಮಾನತು

ತೃಶೂರು: ಓಣಂ ಹಬ್ಬಾಚರಣೆಯ ವಿರುದ್ಧ ಮತೀಯ ವಿದ್ವೇಷ ಪರಾಮರ್ಶೆ ನಡೆಸಿದ ಶಾಲಾ ಅಧ್ಯಾಪಿಕೆಯ ವಿರುದ್ಧ ಕುನ್ನಂಕುಳಂ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕುನ್ನಂಕುಳಂ ಪೆರುಂಬಿಲಾವ್ ಕಲ್ಲುಂಪ್ಪುರದ ಮೆನೇಜ್‌ಮೆಂಟ್ ಶಾಲೆಯೊಂದರ ಅಧ್ಯಾಪಿಕೆ ಖದೀಜ ಎಂಬವರ ವಿರುದ್ದ ಈ ಕೇಸು ದಾಖಲಿಸಲಾಗಿದೆ. ಅದಾದ ಬೆನ್ನಲ್ಲೇ ಪ್ರಸ್ತುತ ಶಾಲಾ ಮೆನೇಜ್‌ಮೆಂಟ್ ಖದೀಜರನ್ನು ಸೇವೆಯಿಂದ ಅಮಾನತುಗೊಳಿಸಿದೆ. ಮಾತ್ರವಲ್ಲ ಖದೀಜ ನಡೆಸಿದ ಪರಾಮರ್ಶೆಯಲ್ಲಿ ತಮ್ಮದೇನೂ ಪಾತ್ರವಿಲ್ಲವೆಂದು ಶಾಲಾ  ಮೆನೇಜ್‌ಮೆಂಟ್ ಸ್ಪಷ್ಟಪಡಿಸಿದೆ. ಓಣಂ ಹಬ್ಬಾಚರಣೆ ಒಂದು ಹಿಂದೂ ಧರ್ಮದ ಆಚರಣೆಯಾಗಿದೆ. ಆದ್ದರಿಂದ ಅಂತಹ ಕಾರ್ಯಕ್ರಮದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು …

ಮನೆಯ ಹೆಂಚು ಸರಿಸಿ ಒಳನುಗ್ಗಿ ಕಳವಿಗೆತ್ನ: ತನಿಖೆ ಆರಂಭ

ಉಪ್ಪಳ: ಮಂಜೇಶ್ವರ ವಾಮಂಜೂರು ಚೆಕ್‌ಪೋಸ್ಟ್ ಸಮೀಪ ಮನೆಯೊಂದರಿಂದ ನಡೆದ ಕಳವು ಯತ್ನ ಪ್ರಕರಣ ದಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ವಾಮಂಜೂರು ಚೆಕ್‌ಪೋಸ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ ಸಮೀಪವಿರುವ ಸಫಿ ಮುಮ್ತಾಜ್ ಎಂಬವರ ಮನೆಯಿಂದ ಸೋಮವಾರ ರಾತ್ರಿ ಕಳವು ಯತ್ನ ನಡೆದಿದೆ. ಮನೆಯ ಹೆಂಚು ತೆಗೆದು ಒಳ ನುಗ್ಗಿದ ಕಳ್ಳರು ಕಳವಿಗೆತ್ನಿಸಿದ್ದಾರೆ. ಮಂಗಳವಾರ ಬೆಳಿಗ್ಗೆ ಈ ಘಟನೆ ಅರಿವಿಗೆ ಬಂದಿದೆ. ಈ ಬಗ್ಗೆ ಮನೆಯವರು ನೀಡಿದ ದೂರಿ ನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಕನಿಖೆ …

ಗಾಂಜಾ ಸಹಿತ ಯುವತಿ ಸೆರೆ

ಹೊಸದುರ್ಗ: ಮಾರಾಟಕ್ಕಾಗಿ ಸಾಗಿಸುತ್ತಿದ್ದ ಗಾಂಜಾ ಸಹಿತ ಯುವತಿಯನ್ನು ಅಬಕಾರಿ ತಂಡ ಬಂಧಿಸಿದೆ. ಪಯ್ಯನ್ನೂರು ಎಡಾಟ್ ನಿವಾಸಿ ಪಿ. ಪ್ರಜಿತ (29) ಎಂಬಾಕೆ ಬಂಧಿತ ಯುವತಿ.  ಓಣಂ ಸ್ಪೆಷಲ್ ಡ್ರೈವ್‌ನಂಗವಾಗಿ ಅಬಕಾರಿ ತಂಡ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಸಂಶಯಗೊಂಡು ಯುವತಿಯನ್ನು ತಪಾಸಣೆ ನಡೆಸಿದಾಗ 12 ಗ್ರಾಂ ಗಾಂಜಾ ಪತ್ತೆಯಾಗಿದೆ.