ಮಾನ್ಯದ ಕೃಷಿಕ ನಿಧನ

ಮಾನ್ಯ: ಕಲ್ಲಕಟ್ಟ ನಿವಾಸಿ, ಕೃಷಿಕ ನಾರಾಯಣ ಭಟ್ (75) ನಿಧನ ಹೊಂದಿದರು. ಉತ್ತಮ ಕೃಷಿಕನಾಗಿದ್ದರು. ಮೃತರು ಪತ್ನಿ ವಿಜಯಲಕ್ಷ್ಮಿ, ಮಕ್ಕಳಾದ ಗಿರೀಶ್ ಕೆ.ಎನ್, ರೂಪರೇಖ, ರಶ್ಮಿ, ಅಳಿಯಂದಿರಾದ ಸುರೇಶ್, ಗಿರೀಶ್, ಸೊಸೆ ಶ್ವೇತ, ಸಹೋದರ- ಸಹೋದರಿಯರಾದ ಶ್ಯಾಂ ಭಟ್, ಸುಬ್ರಹ್ಮಣ್ಯ ಭಟ್, ಕೃಷ್ಣ ಭಟ್, ಲಕ್ಷ್ಮಿ, ವೆಂಕಟೇಶ್ವರಿ, ತಿರುಮಲೇಶ್ವರಿ, ಸಾವಿತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಆಟೋ ಚಾಲಕ ನೇಣುಬಿಗಿದು ಆತ್ಮಹತ್ಯೆ

ಹೊಸದುರ್ಗ: ನೀಲೇಶ್ವರದ ಆಟೋ ಚಾಲಕನಾದ ಯುವಕ ಮನೆ ಬಳಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಚಾಯೋತ್ ಶಾಲೆಯ ಸಮೀಪದ ನಿವಾಸಿಯಾದ ದಿ| ಅಂಬುಞಿ- ನಾರಾಯಣಿ ದಂಪತಿಯ ಪುತ್ರ ಕಾರಂಗೋಡ್ ದಿನೇಶ್ (41) ಮನೆ ಸಮೀಪದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದ ಯುವಕ. ನಿನ್ನೆ ಸಂಜೆ ಘಟನೆ ನಡೆದಿದೆ. ಅಸೌಖ್ಯ ತಗಲಿ ಕಳೆದ ಕೆಲವು ಸಮಯಗಳಿಂದ ಚಿಕಿತ್ಸೆಯಲ್ಲಿದ್ದರು. ಈ ಮನೋವೇದನೆಯಿಂದ ಆತ್ಮಹತ್ಯೆಗೈದಿರಬೇಕೆಂದು ಶಂಕಿಸಲಾಗಿದೆ. ಅವಿವಾಹಿತನಾಗಿದ್ದಾರೆ. ಮೃತರು ತಾಯಿ, ಸಹೋದರರಾದ ಪ್ರಕಾಶನ್, ಶ್ರೀಧರನ್, ಸಹೋದರಿಯರಾದ ಲಲಿತ, …

ಸಚಿವೆ ವೀಣಾ ಜೋರ್ಜ್ ವಿರುದ್ಧ ಆಕ್ರಮಣ: ಪೈವಳಿಕೆಯಲ್ಲಿ ಸಿಪಿಎಂ ಪ್ರತಿಭಟನಾ ಮೆರವಣಿಗೆ

ಪೈವಳಿಕೆ: ಆರೋಗ್ಯ ಸಚಿವೆ ವೀಣಾ ಜೋರ್ಜ್‌ರ ವಿರುದ್ಧ ಕಾಂಗ್ರೆಸ್ ಹಾಗೂ ಕೆಎಸ್‌ಯು ನಡೆಸಿದ ಆಕ್ರಮಣದ ವಿರುದ್ಧ ಸಿಪಿಎಂ ಪೈವಳಿಕೆ ಲೋಕಲ್ ಸಮಿತಿ ವತಿಯಿಂದ ಪೈವಳಿಕೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಆರೋಗ್ಯರಂಗದಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದ್ದು ಇದಕ್ಕೆ ಕಾರಣಕರ್ತೆಯಾದ ವೀಣಾ ಜೋರ್ಜ್‌ರ ವಿರುದ್ಧ ಕಾಂಗ್ರೆಸ್ ಇಲ್ಲಸಲ್ಲದ ಆರೋಪಗಳನ್ನು ಹೊರಿಸುತ್ತಿರುವುದರ ಬಗ್ಗೆ ಜನರಿಗೆ ತಿಳಿದಿದೆ ಎಂದು ಸಿಪಿಎಂನ ಮೆರವಣಿಗೆಯಲ್ಲಿ ಮಾತನಾಡಿದ ಮುಖಂಡರು ತಿಳಿಸಿದರು. ಹುಸೈನ್ ಮಾಸ್ತರ್ ಅಧ್ಯಕ್ಷತೆ ವಹಿಸಿದರು. ಲೋಕಲ್ ಕಾರ್ಯದರ್ಶಿ ಎಂ. ಚಂದ್ರ ನಾಯ್ಕ್ ಉದ್ಘಾಟಿಸಿದರು. ಬಾಬು ವಾದ್ಯಪಡ್ಪು, …

ಕೊಯಿಪಾಡಿ ಪುನರ್‌ಗೇಹಂ ವಸತಿ ಸಮುಚ್ಚಯ: ಮೊದಲ ಬ್ಲೋಕ್‌ನ ಕೀಲಿಕೈ ಹಸ್ತಾಂತರ ಮಾರ್ಚ್ 4ರಂದು

ಕುಂಬಳೆ: ತೀರ ನಿವಾಸಿಗಳಿಗಾಗಿ ರಾಜ್ಯ ಸರಕಾರ ಜ್ಯಾರಿಗೊಳಿಸುವ ಪುನರ್‌ಗೇಹಂ ಯೋಜನೆ ಯಂಗವಾಗಿ ಕೊಯಿಪಾಡಿಯಲ್ಲಿ ನಿರ್ಮಿಸಿದ ವಸತಿ ಸಮುಚ್ಚಯದ ಮೊದಲ ಬ್ಲೋಕ್‌ನ ಕೀಲಿಕೈ ಹಸ್ತಾಂತರ ಮಾರ್ಚ್ 4ರಂದು ಫಿಶರೀಸ್ ಇಲಾಖೆ ಸಚಿವ ಸಜಿ ಚೆರಿಯಾನ್ ನಿರ್ವಹಿಸುವರು.  ಸಮುದ್ರಕೊರೆತ ಬೆದರಿಕೆ ಎದುರಿಸುವ ಮೀನು ಕಾರ್ಮಿಕರ ಕುಟುಂಬ ಗಳಿಗೆ ಸುರಕ್ಷಿತವಾದ ಹಾಗೂ ಶಾಶ್ವತವಾದ ವಾಸ ಸ್ಥಳ ಖಚಿತಗೊಳಿ ಸುವುದು ಎಂಬ ಉದ್ದೇಶದೊಂದಿಗೆ ಜ್ಯಾರಿಗೊಳಿಸುವ ಯೋಜನೆಯಾಗಿದೆ ಪುನರ್‌ಗೇಹಂ. ಕುಂಬಳೆ ಪಂಚಾಯತ್‌ನ ಕೊಪಾಡಿಯಲ್ಲಿ 1.96 ಎಕ್ರೆ ಸ್ಥಳದಲ್ಲಿ ಐದು ಬ್ಲೋಕ್‌ಗಳಲ್ಲಾಗಿ ಒಟ್ಟು 120 ಫ್ಲ್ಯಾಟ್‌ಗಳನ್ನು …

ಪ್ರೇಮದಲ್ಲಿದ್ದಾಗಿನ ಫೋಟೋ ಇನ್‌ಸ್ಟಾಗ್ರಾಮ್ ಪ್ರೊಪೈಲ್‌ಗೆ ಬಳಕೆ: ಬೇರೊಬ್ಬನನ್ನು ಮದುವೆಯಾಗಲು ಬಿಡಲಾರೆನೆಂಬ ಬೆದರಿಕೆ ; ಪದವಿ ವಿದ್ಯಾರ್ಥಿ ದೂರಿನಂತೆ ಯುವಕ, ತಂದೆ ವಿರುದ್ಧ ಕೇಸು ದಾಖಲು

ಕಾಸರಗೋಡು: ಪ್ರೇಮದಲ್ಲಿದ್ದಾಗ ತೆಗೆದ ಫೋಟೋಗಳನ್ನು ಸೋಶ್ಯಲ್ ಮೀಡಿಯಾಗಳಲ್ಲಿ  ಪ್ರಚಾರಮಾಡಿ, ಬೇರೊಬ್ಬನನ್ನು ಮದುವೆಯಾಗಲು ಬಿಡಲಾರೆನೆಂದು ಬೆದರಿಕೆಯೊಡ್ಡು ತ್ತಿರುವುದಾಗಿ  ನೀಡಿದ ದೂರಿನಂತೆ ಬೇಕಲ ಪೊಲೀಸರು ಇಬ್ಬರ ವಿರುದ್ಧ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾದ 22ರ ಹರೆಯದ ಯುವತಿ ನೀಡಿದ ದೂರಿನಂತೆ ಚೆರ್ವತ್ತೂರು ಕಾಡಂಕೋಡ್‌ನ ಶೆರಿನ್ ಮೆರ್ಷಾದ್ (30), ಈತನ ತಂದೆ ಶಂಸುದ್ದೀನ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಒಂದು ಮದುವೆ ಕಾರ್ಯಕ್ರಮದಲ್ಲಿ ಫೋಟೋ ತೆಗೆಯುತ್ತಿದ್ದ ವೇಳೆ ದೂರುದಾತೆ …

ಪಿಲಿಕುಂಜೆ ಕಳಿಯಾಟ ಮಹೋತ್ಸವಕ್ಕೆ ಭಕ್ತರ ಪ್ರವಾಹ

ಕಾಸರಗೋಡು:  ಪಿಲಿಕುಂಜೆ ಶ್ರೀ ಐವರ್ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಕ್ಕೆ ನಾಡಿನ ವಿವಿಧ ಭಾಗಗಳಿಂದ ಭಾರೀ ಸಂಖ್ಯೆಯಲ್ಲಿ ಭಕ್ತರು ತಲುಪಿ ದೈವಗಳ ದರ್ಶನ ಪಡೆಯುತ್ತಿದ್ದಾರೆ. ಈ ತಿಂಗಳ 22ರಂದು ಕಳಿಯಾಟ ಮಹೋತ್ಸವ ಕಾರ್ಯಕ್ರಮಗಳು ಆರಂಭಗೊಂಡಿದ್ದು, 27ರ ವರೆಗೆ ಮುಂದುವರಿಯಲಿದೆ. ಇಂದು ಮುಂಜಾನೆ 4.30ಕ್ಕೆ ಆಯಿರತ್ತಿರಿ  ದೀಪೋತ್ಸವ ಆರಂಭಗೊಂಡಿದ್ದು, ಶ್ರೀ ಪುಳ್ಳಿ ಕರಿಂಗಾಳಿ ಯಮ್ಮನವರ ದರ್ಶನ, ತುಲಾಭಾರ,  ಕಾರ್ಯಕಾರನ್ ದೈವ (ಆಲಿದೈವ), ಕಾಳಪುಲಿಯನ್, ಪುಲಿಕಂಡನ್ ದೈವಗಳ ಆಗಮನ, ಪುಲಿಕಂಡನ್ ದೈವ ಕೊಲ್ಲಂಪಾಡಿ ದೈವರ ಸನ್ನಿಧಿಗೆ  ಭೇಟಿ ನಡೆಯಿತು. …

ರಾಜ್ಯದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಇನ್ನು ಧರ್ಮ ಆಧಾರಿತ ಹೆಸರಿಡುವಂತಿಲ್ಲ

ತಿರುವನಂತಪುರ: ಕೇರಳದಲ್ಲಿ ಶಿಕ್ಷಣ ಸಂಸ್ಥೆಗಳಿಗೆ ಇನ್ನು ಧರ್ಮದ ಆಧಾರದಲ್ಲಿ ಹೆಸರು ಇಡುವಂತಿಲ್ಲವೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.  ಇದರಂತೆ ರಾಜ್ಯದಲ್ಲಿ ಇನ್ನು ಮುಂದೆ ಹೊಸದಾಗಿ ಸ್ಥಾಪಿಸಲಾಗುವ ಯಾವುದೇ ಸರಕಾರಿ ಹಾಗೂ ಸರಕಾರಿ ಸಾಮ್ಯದ  ವಿಶ್ವವಿದ್ಯಾಲಯಗಳು, ಸರಕಾರಿ ಶಾಲೆಗಳು, ಕಾಲೇಜುಗಳು ಮತ್ತು ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಇನ್ನು ಧರ್ಮ ಆಧಾರಿತ ಹೆಸರು ಇಡಬಾರದೆಂದು ಸರಕಾರ ನಿರ್ದೇಶ ನೀಡಿದೆ. ಆದರೆ ಸದ್ಯ ಅಸ್ತಿತ್ವದಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ಈ ಹೊಸ …

ಬೇಕರಿಯಲ್ಲಿ ಬೆಂಕಿ ಅನಾಹುತ

ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ಕಟ್ಟಡದಲ್ಲಿರುವ ಬೇಕರಿಯೊಂದರಲ್ಲಿ ನಿನ್ನೆ ರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು ಅಗ್ನಿಶಾಮಕದಳ ನಡೆಸಿದ ಕಾರ್ಯಾಚರಣೆಯಿಂದ ಭಾರೀ ಅನಾಹುತ ತಪ್ಪಿಹೋಗಿದೆ.  ಸತೀಶ್ ಕೋಟೆಕಣಿ ಎಂಬವರ ಮಾಲಕತ್ವದ ಶ್ರೀಲಕ್ಷ್ಮಿ ಬೇಕರಿಯಲ್ಲಿ ನಿನ್ನೆ ರಾತ್ರಿ ಸುಮಾರು 1 ಗಂಟೆ ವೇಳೆ ಬೆಂಕಿ ಕಾಣಿಸಿಕೊಂಡಿದೆ. ವಿಷಯ ತಿಳಿದು ಅಗ್ನಿಶಾಮಕದಳ ತಕ್ಷಣ ತಲುಪಿ ಬೆಂಕಿ ನಂದಿಸಿದೆ. ಬೆಂಕಿ ತಗಲಿದ ಪರಿಣಾಮ ಬೇಕರಿಯೊಳಗಿದ್ದ  ಭಾರೀ ಪ್ರಮಾಣದ ಸಾಮಗ್ರಿಗಳು ಉರಿದು ನಾಶಗೊಂಡಿವೆ. ಬೆಂಕಿ ತಗಲಲು ಕಾರಣ ತಿಳಿದುಬಂದಿಲ್ಲ. ಇದೇ ಬೇಕರಿ  ಕ್ಯಾಂಟೀನ್ ಆಗಿಯೂ …

ವಿದ್ಯುತ್ ಚಾಲಿತ ಸ್ಕೂಟರ್ ಬೆಂಕಿಗಾಹುತಿ

ಕಾಸರಗೋಡು: ವಿದ್ಯುತ್ ಚಾಲಿತ ಸ್ಕೂಟರ್ ಬೆಂಕಿಗಾಹುತಿ ಯಾಗಿ ಭಾರೀ ನಷ್ಟ ಉಂಟಾದ ಘಟನೆ ನಗರದ ಅಣಂಗೂರಿನಲ್ಲಿ ನಿನ್ನೆ ನಡೆದಿದೆ. ಪರವನಡ್ಕ ನಿವಾಸಿ ಕೆ. ಸುರೇಶ್ ಎಂಬವರ ಸ್ಕೂಟರ್ ಬೆಂಕಿಗಾಹುತಿ ಯಾಗಿದೆ. ಸ್ಕೂಟರಿನ ಬ್ಯಾಟರಿ ಸರಿಯಾಗಿ ಕಾರ್ಯಾಚರಿಸದೇ ಇರುವುದರಿಂದಾಗಿ ಸುರೇಶ್ ನಿನ್ನೆ ಅಣಂಗೂರಿನ ಸರ್ವೀಸ್ ಸೆಂಟರೊಂದಕ್ಕೆ ದುರಸ್ತಿಗಾಗಿ ತಂದಿದ್ದರು. ಅದಾದ ಸ್ವಲ್ಪ ಹೊತ್ತಿನಲ್ಲಿ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲೇ ಪಕ್ಕದ ಅಂಗಡಿಯೊಂದರ ಸಿಬ್ಬಂದಿಗಳು ತಕ್ಷಣ ನೀಡಿದ ಮಾಹಿತಿಯಂತೆ ಸೀನಿಯರ್ ಫಯರ್ ಆಂಡ್ ರೆಸ್ಕ್ಯೂ ಆಫೀಸರ್ ಪಿ.ಎನ್. ವೇಣುಗೋಪಾಲನ್ ನೇತೃತ್ವದ …

ಯುವತಿ ಪ್ರಿಯತಮನೊಂದಿಗೆ ಪರಾರಿ

ಕಾಸರಗೋಡು: ಯುವತಿ ಯೋರ್ವೆ ಪ್ರಿಯತಮನೊಂದಿಗೆ ಪರಾರಿಯಾಗಿರುವುದಾಗಿ ದೂರಲಾಗಿದೆ. ಈ ಬಗ್ಗೆ ತಂದೆ ನೀಡಿದ ದೂರಿನಂತೆ ವೆಳ್ಳರಿಕುಂಡ್ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮಾಲೋಂ ಅದಿರುಮಾವು ಎಂಬಲ್ಲಿನ ಪಿ.ಕೆ. ಮಧು ಎಂಬವರ ಪುತ್ರಿ ಬೀನ (19) ಪ್ರಿಯತಮನಾದ ವೆಸ್ಟ್ ಎಳೇರಿ ಕೂಳಿಪ್ಪಾರದ ರಂಜಿತ್‌ನ ಜೊತೆ  ತೆರಳಿರುವುದಾಗಿ ಹೇಳಲಾಗುತ್ತಿದೆ.  ಬೀನ ತಾಯಿಯ ಸಹೋದರಿಯ ಕೂಳಿಪ್ಪಾರದ ಮನೆಯಲ್ಲಿ ವಾಸಿಸುತ್ತಿ ದ್ದರು. ಈಮಧ್ಯೆ ರಂಜಿತ್‌ನೊಂದಿಗೆ ಸ್ನೇಹದಲ್ಲಿದ್ದಳೆನ್ನಲಾಗಿದೆ. ನಿನ್ನೆ ಸಂಜೆ ೭ ಗಂಟೆ ವೇಳೆ ಅಲ್ಲಿನ ಮನೆಯಿಂದ ನಾಪತ್ತೆಯಾಗಿದ್ದಾಳೆಂದು ಪೊಲೀಸರಿಗೆ ನೀಡಿದ ದೂರಿನಲ್ಲಿ …