ಕುಂಬಳೆಯಲ್ಲಿ ಚರಂಡಿಯ ಸ್ಲ್ಯಾಬ್ ಕುಸಿದು ಸಿಲುಕಿಕೊಂಡ ಲಾರಿ

ಕುಂಬಳೆ: ಕುಂಬಳೆ ಪೇಟೆಯಲ್ಲಿ ಬದಿಯಡ್ಕ ಭಾಗಕ್ಕೆ ತೆರಳುವ  ಕೆಎಸ್‌ಟಿಪಿ ರಸ್ತೆ ಬದಿಯ ಚರಂಡಿಗೆ  ನಿರ್ಮಿಸಿದ ಸ್ಲ್ಯಾಬ್ ಕುಸಿದು ಲಾರಿಯೊಂದು ಸಿಲುಕಿಕೊಂಡಿದೆ. ನಿನ್ನೆ ಮಧ್ಯಾಹ್ನ ಸರಕು ಹೇರಿ ಬಂದ ಲಾರಿ ಸ್ಲ್ಯಾಬ್‌ನ ಮೇಲೆ ಹತ್ತುತ್ತಿದ್ದಂತೆ ಸ್ಲ್ಯಾಬ್ ಕುಸಿದು ಲಾರಿಯ ಟಯರ್ ಹೂತುಹೋಗಿದೆ. ಬಳಿಕ ಕ್ರೇನ್ ಮೂಲಕ ಲಾರಿಯನ್ನು ಮೇಲಕ್ಕೆತ್ತಲಾ ಯಿತು. ಚರಂಡಿ ನಿರ್ಮಿಸಿದ ಬಳಿಕ ಇದು ಮೂರನೇ ಬಾರಿ ಲಾರಿ  ಸ್ಲ್ಯಾಬ್ ಕುಸಿದು ಹಾನಿಗೀಡಾದ ಘಟನೆ ನಡೆದಿದೆ.  ಸ್ಲ್ಯಾಬ್ ನಿರ್ಮಿಸಿ ರುವುದರಲ್ಲಿ ಲೋಪವುಂಟಾ ಗಿದೆಯೆಂದು ಈಮೊದಲೇ ನಾಗರಿಕರು ಆರೋಪಿಸಿದ್ದರು.

ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿಗಳ ಮಹಾಸಭೆ, ಲಾಂಛನ ಬಿಡುಗಡೆ

ಬದಿಯಡ್ಕ: ಜನವರಿ 19ರಿಂದ 26ರವರೆಗೆ ನಡೆಯಲಿರುವ ಮೋಪಾಲ ಶ್ರೀ ಮಹಾವಿಷ್ಣು ಕ್ಷೇತ್ರದ ನವೀಕರಣ, ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಯಾಗಿ ಉಪಸಮಿತಿ ಹಾಗೂ ಸರ್ವ ಸಮಿತಿಗಳ ಮಹಾಸಭೆ ಕುಂಜರಕಾನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಿದ್ಧತೆಗಳು, ವಿವಿಧ ಸಮಿತಿಗಳ ಕಾರ್ಯಯೋಜನೆಗಳು ಹಾಗೂ ವಹಿಸಲಾಗಿರುವ ಜವಾಬ್ದಾರಿಗಳ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು. ಇದೇ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಲಾಂಛನ ಅನಾ ವರಣಗೊಳಿಸಲಾಯಿತು. ಬ್ರಹ್ಮಕಲ ಶೋತ್ಸವ ಸಮಿತಿ ಅಧ್ಯಕ್ಷ, ಧಾರ್ಮಿಕ ಮುಂದಾಳು ಮಧುಸೂಧನ ಆಯರ್ ಅಧ್ಯಕ್ಷತೆ …

ಎಂಡೋಸಲ್ಫಾನ್ ಸಂತ್ರಸ್ತರಾದ 35೦ ಮಂದಿಗೆ 17 ಕೋಟಿ 5೦ ಲಕ್ಷ ರೂ. ವಿತರಣೆ- ಜಿಲ್ಲಾಧಿಕಾರಿ

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತರಿಗಿರುವ ಧನಸಹಾಯವಾಗಿ 17 ಕೋಟಿ 5೦ ಲಕ್ಷ ರೂ. ವಿತರಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. 2017ರಲ್ಲಿ ನಡೆಸಿದ ಎಂಡೋಸಲ್ಫಾನ್ ಸಂತ್ರಸ್ತರಿಗಿರುವ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿ ಯಾದಿಯಲ್ಲಿ ಒಳಗೊಂಡ 35೦ ಮಂದಿಗೆ ನಷ್ಟ ಪರಿಹಾರ ಮೊತ್ತವಾದ 5 ಲಕ್ಷ ರೂ.ನಂತೆ ಧನಸಹಾಯ ನೀಡಲಾಗಿದೆ. ಇದುವರೆಗೆ 17 ಕೋಟಿ 5೦ ಲಕ್ಷ ರೂ. ವಿತರಿಸಿದ್ದು, ಒಟ್ಟು 977 ಮಂದಿ ಯಾದಿಯಲ್ಲಿ ಒಳಗೊಂಡಿದ್ದಾರೆ. ಇದರ ಹೊರತಾಗಿ 201 ಅರ್ಜಿಗಳಲ್ಲಿ ಧನ ಸಹಾಯ ಮಂಜೂರು ಮಾಡುವುದಕ್ಕಿರುವ ಕ್ರಮಗಳು ಪ್ರಗತಿಯಲ್ಲಿದೆ. 2017ರ ಶಿಬಿರದಲ್ಲಿ …

ಡಾ. ಕಯ್ಯಾರರ ಹೆಸರಲ್ಲಿ ಸಂಶೋಧನಾ ಕೇಂದ್ರ: ಜಿಲ್ಲಾ ಪಂ. ಸಭೆಯಲ್ಲಿ ಪ್ರಸ್ತಾಪ : ಎರಡು ತಿಂಗಳೊಳಗೆ ಅಧ್ಯಯನ ವರದಿ ಸಲ್ಲಿಸಲು ಉಪಸಮಿತಿ ನೇಮಕ

ಕಾಸರಗೋಡು: ಸ್ವಾತಂತ್ರ‍್ಯ ಹೋರಾಟಗಾರ, ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಅವರ ಹೆಸರಲ್ಲಿ ಎಂಟು ವರ್ಷಗಳ ಹಿಂದೆಯೇ ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಸಂಶೋಧನಾ ಕೇಂದ್ರ ಸ್ಥಾಪಿಸಲು ಬಿಟ್ಟುಕೊಟ್ಟ 3೦ ಸೆಂಟ್ಸ್ ಸ್ಥಳದಲ್ಲಿ ಕೇಂದ್ರ ಆರಂಭಿಸುವ ಕುರಿತು ಸಮಗ್ರ ಅಧ್ಯಯನ ನಡೆಸಿ ಎರಡು ತಿಂಗಳೊಳಗೆ ವರದಿ ನೀಡುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಾಹಂ ಉಪಸಮಿತಿಗೆ ರೂಪು ನೀಡಿದ್ದಾರೆ. ನಿನ್ನೆ ಜಿಲ್ಲಾ ಪಂ. ಆಡಳಿತ ಸಮಿತಿ ಸಭೆಯಲ್ಲಿ ಸದಸ್ಯ ಸೋಮಶೇಖರ ಜೆ.ಎಸ್. ನೀಡಿದ ನೋಟೀಸ್‌ನ ಅಧಾರದಲ್ಲಿ ಈ ನಿರ್ಧಾರ …

ವಿದ್ಯುತ್ ತಂತಿಗೆ ಸ್ಪರ್ಶಿಸಿ ಕಂಟೈನರ್ ಲಾರಿ ಬೆಂಕಿಗಾಹುತಿ

ಹೊಸದುರ್ಗ: ಬೇಕಲ ಮವ್ವಲ್‌ನಲ್ಲಿ ವಿದ್ಯುತ್ ತಂತಿಗೆ ಸ್ಪರ್ಶಿಸಿ ಕಂಟೈನರ್ ಲಾರಿಗೆ ಬೆಂಕಿ ತಗಲಿದೆ. ಉಡುಪಿಯಿಂದ ಕೊಚ್ಚಿಗೆ ತೆರಳುತ್ತಿದ್ದ ಫ್ರಿಡ್ಜ್ ಹೇರಿಕೊಂಡು ಬಂದ ಲಾರಿಗೆ ಬೆಂಕಿ ತಗಲಿದೆ. ಬೇಕಲ ರೈಲ್ವೇ ಮೇಲ್ಸೇತುವೆಯಲ್ಲಿ ವಾಹನಗಳು ಸಂಚರಿಸುವುದಕ್ಕೆ ನಿಯಂತ್ರಣ ಏರ್ಪಡಿಸಿದ ಹಿನ್ನೆಲೆಯಲ್ಲಿ ಮವ್ವಲ್ ಮೂಲಕ ವಾಹನಗಳು ಸಂಚರಿಸುತ್ತಿವೆ. ಇಂದು ಬೆಳಿಗ್ಗೆ 6 ಗಂಟೆ ವೇಳೆಗೆ ಕಂಟೈನರ್ ಲಾರಿ ಸಂಚರಿಸುವಾಗ ವಿದ್ಯುತ್ ತಂತಿಗೆ ಸ್ಪರ್ಶಿಸಿ ಬೆಂಕಿ ತಗಲಿದೆ. ಮಾಹಿತಿ ತಿಳಿದು ಕಾಸರ ಗೋಡು ಹಾಗೂ ಕಾಞಂಗಾಡ್‌ನಿಂದ ಅಗ್ನಿಶಾಮಕದಳ ಸ್ಥಳಕ್ಕೆ ತಲುಪಿದೆ. ಬಳಿಕ ಬೆಂಕಿ …

ಪೆರಿಯ ಕಲ್ಯೋಟ್ ಅವಳಿ ಕೊಲೆ ಸಿಪಿಎಂ ಕಾರ್ಯಕರ್ತನ ಮನೆಗೆ ಆಕ್ರಮಿಸಿದ ಪ್ರಕರಣದಲ್ಲಿ 7 ಆರೋಪಿಗಳಿಗೆ ಸಜೆ, ದಂಡ

ಕಾಸರಗೋಡು: 2019 ಮೇ 5ರಂದು ಸಂಭವಿಸಿದ ಪೆರಿಯ ಅವಳಿ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಕಲ್ಯೋ ಟ್ ಬಲಿಕ್ಕಳದ ಸಿಪಿಎಂ ಕಾರ್ಯಕರ್ತ ವತ್ಸರಾಜ್‌ರ ಮನೆ ಹಾಗೂ ಅಲ್ಲಿದ್ದ ಪೊಲೀಸ್‌ನನ್ನು ಆಕ್ರಮಿಸಿ ಕಲ್ಯೋಟ್ ಪರಿಸರಗಳಲ್ಲಿ ಆಕ್ರಮಣಗಳನ್ನು ನಡೆಸಿರುವುದಾಗಿ ನೀಡಿದ ದೂರಿನಲ್ಲಿ ಆರೋಪಿಗಳಾದ ಕಾಂಗ್ರೆಸ್ ಕಾರ್ಯಕರ್ತರಿಗೆ ನ್ಯಾಯಾಲಯ 8 ವರ್ಷ ಸಜೆ ಹಾಗೂ 91,೦೦೦ ರೂ. ದಂಡ  ತೀರ್ಪು ನೀಡಿದೆ. ಕಾಸರಗೋಡು ಹೆಚ್ಚುವರಿ ಜಿಲ್ಲಾ ಮತ್ತು ಶೆಷನ್ಸ್ ನ್ಯಾಯಾಲಯ (3) ಇದರ ನ್ಯಾಯಾಧೀಶ ಅಚಿಂತ್ಯರಾಜ್ ಉಣ್ಣಿ ಈ ತೀರ್ಪು ನೀಡಿದ್ದಾರೆ. ವತ್ಸರಾಜ್‌ರ …

ಜನರ ಜೀವ ಸಂರಕ್ಷಿಸಬೇಕೆಂದು ಒತ್ತಾಯಿಸಿ ಬಿಜೆಪಿ ಸದಸ್ಯೆಯರಿಂದ ಮೊಗ್ರಾಲ್ ಪುತ್ತೂರು ಪಂ. ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ

ಕಾಸರಗೋಡು: ಜನರ ಜೀವ ಸಂರಕ್ಷಿಸಬೇಕೆಂದು ಒತ್ತಾಯಿಸಿ ಜನಪ್ರತಿನಿಧಿಗಳು  ಮೊಗ್ರಾಲ್ ಪುತ್ತೂರು ಪಂಚಾಯತ್  ಕಚೇರಿ ಮುಂದೆ ಅನಿರ್ಧಿಷ್ಟಾವಧಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪಂಚಾಯತ್‌ನ ಬಿಜೆಪಿ ಸದಸ್ಯೆಯರಾದ ಶ್ರೀವಿದ್ಯಾ, ವಸಂತಿ, ಮಲ್ಲಿಕ, ಪ್ರಮೀಳ ಎಂಬಿವರು  ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪಂಚಾಯತ್ ವ್ಯಾಪ್ತಿಯಲ್ಲಿ ಅಲೆದಾಡುತ್ತಿರುವ ಹುಚ್ಚು ನಾಯಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ವಿವಿಧೆಡೆ ಅಲೆದಾಡುತ್ತಿರುವ ಜಾನುವಾರುಗಳನ್ನು ಪಂಚಾಯತ್‌ನ ದೊಡ್ಡಿಯಲ್ಲಿ  ಕಟ್ಟಿಹಾಕಬೇಕು, ಪಂಚಾಯತ್ ವ್ಯಾಪ್ತಿಯಲ್ಲಿ ಹುಚ್ಚು ನಾಯಿಗಳು ಹಾಗೂ ಜಾನುವಾರುಗಳ ಉಪಟಳ ಕುರಿತು ಧ್ವನಿವರ್ಧಕ ಮೂಲಕ ಜನರಿಗೆ ತಿಳಿಸಿ ಜಾಗ್ರತೆ ಮೂಡಿಸಬೇಕು, ಪಂಚಾಯತ್ ಆಡಳಿತ …

ಮೊಯ್ದೀನ್ ನಿಧನ

ಕುಂಬಳೆ: ಮೊಗ್ರಾಲ್ ಪುತ್ತೂರು ಕುನ್ನಿಲ್‌ನಲ್ಲಿ  ವಾಸಿಸುವ ಕುಂಬಳೆಯ ಮೊಯ್ದೀನ್ (66) ನಿಧನ ಹೊಂದಿದರು.  ಇವರು ಮೊಗ್ರಾಲ್ ಪುತ್ತೂರು ಪಂಚಾಯತ್ ಮುಸ್ಲಿಂ ಲೀಗ್ ಪ್ರಧಾನ ಕಾರ್ಯದರ್ಶಿ ಸಿದ್ದಿಕ್ ಬೇಕಲ್‌ರ ಸಹೋದರಿಯ ಪತಿಯಾಗಿದ್ದಾರೆ. ಮೃತರು ಪತ್ನಿ ಮರಿಯಂ, ಮಕ್ಕಳಾದ ಬುಶ್ರಾ, ಸಫಾನ, ಅಳಿಯಂದಿರಾದ ಫಸಲ್, ಅಸ್ಲಾಂ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವೆ ಪುತ್ರಿ ನೌಫೀನ ಈ ಹಿಂದೆ ನಿಧನರಾಗಿದ್ದಾರೆ.

ಪಾವಲುಕೋಡಿಸರಸ್ವತಿ ಅಮ್ಮ

ಕುಂಬಳೆ: ಕುಡಾಲುಮೇರ್ಕಳ ಪಾವಲುಕೋಡಿ ದಿ| ಶಿವರಾಮ ಭಟï‌ರ ಪತ್ನಿ ಸರಸ್ವತಿ ಅಮ್ಮ (85) ಸ್ವ-ಗೃಹದಲ್ಲಿ ನಿಧನ ಹೊಂದಿದರು. ಮೃತರು È್ಣ್ನಔ್ಣಕ್ಠ್ತಿದ ಬಾಲಕೃಷ್ಣ ಮುರಳಿ, ಗಣರಾಜ್, ಜಲಜ, ವಸಂತಿ, ಅಳಿಯಂದಿರಾದ ಶಂಕರ ಪ್ರಸಾದ್, ನಾರಾಯಣ ಭಟ್, ವಿಘ್ನರಾಜ, ಸೊಸೆಯಂದಿರಾದ ಗೀತಾ ಸಾವಿತ್ರಿ, ಪ್ರಮೀಳಾ, ಸಹೋದರರಾದ ಶಂಕರನಾರಾಯಣ ಭಟ್, ಪರಮೇಶ್ವರ ಭಟ್, ಸಹೋದರಿಯರಾದ ಸುಂದರಿ, ಮಾಲತಿ, ನಳಿನಿ ್ಝ್ತಗ್ಣ್ಪಿ @ಲ್ತÁ್ಣ ಷಿಒ¨್ಣ್ನ-ೆ್ನ}್ಣÃÁ್ಣವ್ಣ್ನಿ­ ಅಗಲಿದ್ದಾರೆ.

ನಿವೃತ್ತ ಮುಖ್ಯೋಪಾಧ್ಯಾಯರ ಮನೆಯಿಂದ ಚಿನ್ನಾಭರಣ ಕಳವು

ಕುಂಬಳೆ: ಓಣಂ ಆಚರಣೆಗಾಗಿ ಊರಿಗೆ ತೆರಳಿದ್ದ ನಿವೃತ್ತ ಮುಖ್ಯೋ ಪಾಧ್ಯಾಯರ ಮನೆಗೆ  ಕಳ್ಳರು ನುಗ್ಗಿ ಚಿನ್ನಾಭರಣ ದೋಚಿದ ಘಟನೆ ನಡೆದಿದೆ. ಕುಂಬಳೆ ಕೃಷ್ಣನಗರದಲ್ಲಿ ವಾಸಿಸುವ ಕೊಡ್ಯಮ್ಮೆ ಜಿಎಚ್ ಎಸ್‌ಎಸ್‌ನ ನಿವೃತ್ತ ಮುಖ್ಯೋಪಾ ಧ್ಯಾಯ ಥೋಮಸ್  ಟಿ.ಜೆ ಅವರ ಮನೆಯಿಂದ  ಕಳವು ನಡೆದಿದೆ. ಮನೆಯ ಮುಂಭಾಗದ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಕೊಠಡಿಯೊಳಗೆ ಕಪಾಟಿನಿಂದ ಮುಕ್ಕಾಲುಪವನ್‌ನ ಬೆಂಡೋಲೆ ಹಾಗೂ ಅರ್ಧ ಪವನ್‌ನ ಉಂಗುರ ದೋಚಿದ್ದಾರೆ.  ಥೋಮಸ್ ಟಿ.ಜೆ ಹಾಗೂ ಪತ್ನಿ  ಸೋಫಿಯಮ್ಮ ( ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ …