ಮಗನ ಸಾವಿನಿಂದ ಮನನೊಂದಿದ್ದ ತಂದೆ ಬಾವಿಗೆ ಹಾರಿ ಆತ್ಮಹತ್ಯೆ

ಕಾಸರಗೋಡು: ಪುತ್ರ ನೇಣುಬಿಗಿದು ಸಾವಿಗೀಡಾದ ಘಟನೆಯಿಂದ ತೀವ್ರವಾಗಿ  ನೊಂದು ಕೊಂಡಿದ್ದ ತಂದೆ ಬಾವಿಗೆ ಹಾರಿ ಆತ್ಮಹತ್ಯೆಗೈದ ಘಟನೆ ನಡೆದಿದೆ.   ಬೇಡಗಂ ಪೊಲೀಸ್ ಠಾಣೆ ವ್ಯಾಪ್ತಿಯ ಶಂಕರಂಪಾಡಿ ಕೊರಂಬಾರ ಎಂಬಲ್ಲಿನ ಎ. ಬಾಲಕೃಷ್ಣನ್ ನಾಯರ್ (70) ಸಾವಿಗೀಡಾದ ವ್ಯಕ್ತಿಯಾಗಿದ್ದಾರೆ.  ಬಾಲಕೃಷ್ಣನ್ ನಾಯರ್ ಬಾವಿಗೆ ಬಿದ್ದ ವಿಷಯ ತಿಳಿದು ತಲುಪಿದ ಅಗ್ನಿಶಾಮಕದಳ ಮೃತದೇಹವನ್ನು ಮೇಲಕ್ಕೆತ್ತಿದೆ. ಬಳಿಕ ಬೇಡಗಂ ಪೊಲೀಸರು ಮೃತದೇಹವನ್ನು ಪಂಚನಾಮೆ ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಯಿತು. ಜನವರಿ 31ರಂದು ಬಾಲಕೃಷ್ಣನ್ ನಾಯರ್‌ರ ಪುತ್ರ ಮಣಿಕಂಠನ್ (47) ಅಡೂರು …

ಶೋಚನೀಯ ಸ್ಥಿತಿಯಲ್ಲಿರುವ ಶಿಕ್ಷಣ, ಆರೋಗ್ಯ ಕೇಂದ್ರಗಳ ಮುಚ್ಚುಗಡೆ: ಬದಲಿ ವ್ಯವಸ್ಥೆಯಿಲ್ಲದೆ ಸಮಸ್ಯೆ

ಕುಂಬಳೆ: ಕಳೆದ ಮಳೆಗಾಲದಲ್ಲಿ ಕೋಟ್ಟಯಂನಲ್ಲಿ ಸರಕಾರಿ ಆಸ್ಪತ್ರೆ ಕಟ್ಟಡವೊಂದು ಕುಸಿದುಬಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೋಚನೀಯ ಸ್ಥಿತಿಯಲ್ಲಿರುವ ಹಲವು ಆರೋಗ್ಯ ಕೇಂದ್ರಗಳು ಹಾಗೂ ಶಿಕ್ಷಣ ಸಂಸ್ಥೆಗಳನ್ನು ಮುಚ್ಚುಗಡೆಗೊಳಿಸಲಾಗಿತ್ತು. ಆದರೆ ಅವುಗಳನ್ನು ದುರಸ್ತಿಗೊಳಿಸಲು  ಕ್ರಮ ಉಂಟಾಗಲಿಲ್ಲ. ಇದು  ರೋಗಿಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಭಾರೀ ಸಮಸ್ಯೆ ಸೃಷ್ಟಿಸುತ್ತಿದೆ. ಹಲವು ವರ್ಷಗಳ ಹಿಂದೆ ನಿರ್ಮಿಸಿದ ಶೋಚನೀಯ ಸ್ಥಿತಿಯಲ್ಲಿದ್ದ ಕಟ್ಟಡಗಳನ್ನು ಮುಚ್ಚುಗಡೆಗೊಳಿಸ ಲಾಗಿತ್ತು. ಇದರಂತ ಕಾಸರಗೋಡು ಜಿಲ್ಲೆಯಲ್ಲೂ ಕೆಲವು ಕಟ್ಟಡಗಳಿಗೆ ಬೀಗ ಜಡಿಯಲಾಗಿದೆ. ಕುಂಬಳೆಯಲ್ಲಿ ಕಾರ್ಯಾಚರಿಸುತ್ತಿದ್ದ ಸರಕಾರಿ ಬ್ಲೋಕ್ ಫ್ಯಾಮಿಲಿ ಹೆಲ್ತ್ ಸೆಂಟರ್ (ಬಿಎಫ್‌ಎಚ್‌ಸಿ) …

ಶುದ್ದ ಜಲ ಪೋಲಾಗಿ ಹೊಳೆಯಂತಾದ ರಸ್ತೆ: ಸೂರ್ಲುನಲ್ಲಿ ಕಟ್ಟಿ ನಿಲ್ಲುವ ನೀರಿಗೆ ಪರಿಹಾರವಿಲ್ಲ

ಕಾಸರಗೋಡು: ‘ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು’ ಇದೊಂದು ಹಳೆಯ ಪ್ರಸಿದ್ಧ ಚಿತ್ರಗೀತೆ. ಆದರೆ ಬಟ್ಟಂಪಾರೆ ಸೂರ್ಲು ರಸ್ತೆಯಲ್ಲಿ ನೆಲದ ಮೇಲೆಯೂ ದೋಣಿ ಸಾಗುವಂತಹ ಪರಿಸ್ಥಿತಿಯನ್ನು ಜಲಪ್ರಾಧಿಕಾರ ನಿರ್ಮಿಸಿದೆ. ಇಲ್ಲಿ ಕಳೆದ ಕೆಲವು ತಿಂಗಳುಗಳಿಂದ ರಸ್ತೆಯಲ್ಲಿ ನೀರು ಕಟ್ಟಿ ನಿಂತು ಹೊಳೆಯಂತಾಗಿದೆ. ಈ ಪರಿಸರದಲ್ಲಿ ಸಾಗಿದ ಪೈಪ್ ಎಲ್ಲೋ ಹಾನಿಗೊಂಡು ನೀರು ಪೋಲಾಗಿ ರಸ್ತೆಯಲ್ಲಿರುವ ಹೊಂಡಗಳಲ್ಲಿ ತುಂಬಿಕೊಳ್ಳುತ್ತಿದೆ. ತೀವ್ರ ನೀರಿನ ಕ್ಷಾಮ ಉಂಟಾಗಬಹುದಾದ ಬೇಸಿಗೆ ಸಮೀಪದಲ್ಲೇ ಇದ್ದು, ಆದರೆ ಅಧಿಕಾರಿಗಳು ನೀರು ಪೋಲಾಗುವುದನ್ನು ತಡೆಯಲು ಯಾವುದೇ …

ವಿವಿಧೆಡೆ ಕಡಲ್ಕೊರೆತದಿಂದ ಹಾನಿಗೊಂಡ ರಸ್ತೆ: ದುರಸ್ತಿಗೆ ಸ್ಥಳೀಯರ ಒತ್ತಾಯ

ಉಪ್ಪಳ: ಕಳೆದ ವರ್ಷ ಮಳೆಗಾಲದ ಸಂದರ್ಭದಲ್ಲಿ ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ವಿವಿಧ ಪ್ರದೇಶಗಳದಲ್ಲಿ ವ್ಯಾಪಕ ಕಡಲ್ಕೊರೆತ ಉಂಟಾಗಿ ಸಮುದ್ರ ತೀರ ಪ್ರದೇಶದ ರಸ್ತೆಗಳು ಸಮುದ್ರ ಪಾಲಾಗಿ ನಾಶಗೊಂಡಿವೆ. ಆದರೆ ಇದುವರೆಗೂ ರಸ್ತೆ ಮರು ನಿರ್ಮಿಸದೆ ಇರುವುದರಿಂದ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ಪಂಚಾಯತ್‌ನ ಹನುಮಾನಗರ, ಶಿವಾಜಿನಗರ, ಕುದುಪುಳು, ಬಂಗ್ಲ, ಪೆರಿಂಗಡಿ, ಬೇರಿಕೆ ಸಹಿತ ವಿವಿಧ ಭಾಗಗಳಲ್ಲಿ ರಸ್ತೆಗಳು ಹಾನಿಗೊಂಡು ಸ್ಥಳೀಯ ಮೀನು ಕಾರ್ಮಿಕರ ಕುಟುಂಬಗಳ ಸಂಚಾರಕ್ಕೆ ಸಮಸ್ಯೆಯಾಗಿರುವುದಾಗಿ ದೂರಲಾಗಿದೆ. ರೋಗಿಗಳನ್ನು ಕೊಂಡೊಯ್ಯಲು ಕೂಡಾ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗಿರುವುದಾಗಿ ದೂರಲಾಗಿದೆ. …

ಆದೂರು ಗೇರು ಸಂತತಿ ತೋಟದಲ್ಲಿ ಫಾರ್ಮ್ ಫೆಸ್ಟ್: ಸಾರ್ವಜನಿಕರಿಗೆ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಅವಕಾಶ

ಅಡೂರು: ಗಾಳಿಮುಖ ಗೇರುಬೀಜ ಸಂತತಿ ತೋಟದಲ್ಲಿ ಹಸಿರು ಉಡುಗೆ ತೊಟ್ಟ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ನಾಗರಿಕರಿಗೆ ಸುವರ್ಣಾವಕಾಶ ಒದಗಿಸಲಾಗುತ್ತಿದೆ. ಸರಕಾರದ ಅಧೀನದಲ್ಲಿರುವ ಫಾರ್ಮ್‌ಗಳನ್ನು ಜನಪರಗೊಳಿಸಬೇಕೆಂಬ ಕೃಷಿ ಸಚಿವರ ನಿರ್ದೇಶ ಪ್ರಕಾರ ಈ ತಿಂಗಳ 28, ಮಾರ್ಚ್ 1, 2ರಂದು ವಿಪುಲವಾದ ಫಾರ್ಮ್ ಫೆಸ್ಟ್ ನಡೆಯಲಿದೆ. ಮೂರು ದಿನಗಳಲ್ಲಾಗಿ ನಡೆಯುವ ಈ ಕೃಷಿ ಪ್ರದರ್ಶನ ಮಾರಾಟಮೇಳ ಆದೂರು ಗಾಳಿಮುಖ ಪ್ರದೇಶಗಳಲ್ಲಾಗಿ ವ್ಯಾಪಿಸಿರುವ ಗೇರುತೋಟದ ಸೌಂದರ್ಯವನ್ನು ಸಾರ್ವಜನಿಕರಿಗೆ ಸಮೀಪದಿಂದ ಸವಿಯಲು ಅವಕಾಶ ಒದಗಿಸಲಿದೆ. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಎಬ್ರಹಾಂ …

ಕಾರ್ಮಿಕಶ್ರೇಷ್ಠ ಪುರಸ್ಕಾರ ಜಿಲ್ಲೆಯ 3 ಮಂದಿಗೆ 27ರಂದು ಪ್ರದಾನ

ಕಾಸರಗೋಡು: ರಾಜ್ಯದ 20 ವಿಭಿನ್ನ ಉದ್ಯೋಗ ವಲಯಗಳ ಉತ್ತಮ ಕಾರ್ಮಿಕರಿಗಿರುವ ೨೦೨೪ನೇ ವರ್ಷದ ಉದ್ಯೋಗ ಶ್ರೇಷ್ಠ ಪುರಸ್ಕಾರಗಳಲ್ಲಿ ಮೂರು ಪುರಸ್ಕಾರಗಳು ಕಾಸರಗೋಡಿಗೆ ಲಭಿಸಿದೆ. ಮೇರಿಮೆಲ್ಡ (ಅಡುಗೆ), ಶಿಬು ಎ. (ಶೇಂದಿ ಕಾರ್ಮಿಕ), ಬಬಿತ ಬೇಬಿ (ಬಾರ್ಬರ್, ಬ್ಯೂಟೀಷ್ಯನ್) ಎಂಬಿವರಿಗೆ ಈ ಪುರಸ್ಕಾರ ಲಭಿಸಿದೆ. 1 ಲಕ್ಷ ರೂ. ಹಾಗೂ ಪ್ರಶಸ್ತಿ ಪತ್ರ ಅಡಕವಾಗಿರುವ ಪುರಸ್ಕಾರವನ್ನು ಈ ತಿಂಗಳ 27ರಂದು ತಿರುವನಂತಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವ ವಿ. ಶಿವನ್ ಕುಟ್ಟಿ ಪ್ರದಾನ ಮಾಡುವರು. ಚೆರುವತ್ತೂರು ಮಡಕ್ಕರದ ರೆಸ್ಟೋರೆಂಟ್ ನಲ್ಲಿ …

ಬಿಜೆಪಿ ಬಜಕೂಡ್ಲು ಬೂತ್ ಸಮಿತಿ ರಚನಾ ಸಭೆ

ಪೆರ್ಲ: ಬಿಜೆಪಿ ಎಣ್ಮಕಜೆ ಪಂ. 12ನೇ ವಾರ್ಡು ಬಜಕೂಡ್ಲು 210ನೇ ಬೂತ್ ಸಮಿತಿ ಸಭೆ ಬಜಕೂಡ್ಲಿನ ಪದ್ಮನಾಭ ಸುವರ್ಣ ಅವರ ನಿವಾಸದಲ್ಲಿ ಜರುಗಿತು. ಪಂಚಾಯತ್ ಸಮಿತಿ ಅಧ್ಯಕ್ಷ ರಮಾನಂದ ಎಡಮಲೆ ಅಧ್ಯಕ್ಷತೆ ವಹಿಸಿದ್ದರು. ಮಂಡಲ ಸಮಿತಿ ಕಾರ್ಯದರ್ಶಿ ಸುಮಿತ್‌ರಾಜ್, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಭಟ್ ಪತ್ತಡ್ಕ, ಕ್ಯಾಂಪ್ಕೋ ಮಾಜಿ ಉಪಾಧ್ಯಕ್ಷ ಶಂ.ನಾ ಖಂಡಿಗೆ, ಮಂ ಜೇಶ್ವರ ಬ್ಲಾಕ್ ಪಂ. ಸದಸ್ಯೆ ವಿದ್ಯಾ ಕುಮಾರಿ, ಗ್ರಾಮ ಪಂ. ಸದಸ್ಯ ಕೃಷ್ಣಪ್ಪ ಬಜಕೂಡ್ಲು, ಹಿರಿಯ ಕಾರ್ಯಕರ್ತ ಸದಾಶಿವ ಭಟ್ ಹರಿನಿಲಯ, …

ಸಜಿಪ ಕುಡೂರು ತರವಾಡಿನಲ್ಲಿ ಕೃಷ್ಣ ಕಾರ್ನವರ್ ಸಹಿತ ಹಿರಿಯರಿಗೆ ಸನ್ಮಾನ

ಉಪ್ಪಳ: ತೆನೆಕುಡಿಯ [ಸಾಲಿಯಾನ್] ಕುಟುಂಬಸ್ಥರ ವಯನಾಡು ಕುಲವನ್ ವಿಷ್ಣು ಮೂರ್ತಿ ಹಾಗೂ ಪರಿವಾರ ದೈವಗಳ ಕ್ಷೇತ್ರ ಸಜಿಪ ಕುಡೂರು ಇದರ ಮಾರ್ಗದರ್ಶಕ, ಶಿರಿಯ ಮಾವಿನಡಿ ಕೊಪ್ಪಳ ತರವಾಡು ಅಡ್ಕ ಶ್ರೀ ಭಗವತೀ ಕ್ಷೇತ್ರದ ಕೃಷ್ಣ ಕಾರ್ನ ವರ್‌ರಿಗೆ ಗೌರವರ್ಪಣೆ ನಡೆಯಿತು. ಇದೇ ಸಂದರ್ಭದಲ್ಲಿ ಅಡ್ಕ ಶ್ರೀ ಭಗವತೀ ಕ್ಷೇತ್ರದ ಪುಲ್ಲೂರಾಳಿ ತಂಬುರಾಟಿ ಪಾತ್ರಿ ಮೋನಪ್ಪ ಬೆಳ್ಚಪ್ಪಾಡ, ತರವಾಡಿನ ಹಿರಿಯ ಕೊಗ್ಗು ಬೆಳ್ಚಾಡ ಇವರನ್ನು ಸನ್ಮಾನಿಸ ಲಾಯಿತು. ಕಾರ್ಯಕ್ರಮದಲ್ಲಿ ತರವಾಡಿನ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು, ಉಪ್ಪಳ ಶ್ರೀ ಭಗವತೀ …

ಕಾರಿನಲ್ಲಿ ಸಾಗಿಸುತ್ತಿದ್ದ 29 ಲಕ್ಷ ರೂ., 97 ಗ್ರಾಂ ಚಿನ್ನ ವಶ: ಇಬ್ಬರು ಕಸ್ಟಡಿಗೆ

ಕಾಸರಗೋಡು: ನಗರದಲ್ಲಿ ಕಾಸರಗೋಡು ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸರಿಯಾದ ದಾಖಲುಪತ್ರಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 29 ಲಕ್ಷ ರೂಪಾಯಿ ಹಾಗೂ 97 ಗ್ರಾಂ ಚಿನ್ನ ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿ ಮೂಲತಃ ಮಹಾರಾಷ್ಟ್ರ ನಿವಾಸಿಗಳಾದ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಅವರ ಹೇಳಿಕೆಗಳನ್ನು ದಾಖಲಿಸಿ ಕೊಂಡಿದ್ದಾರೆ. ಕಾಸರಗೋಡು ಪೊಲೀಸ್ ಠಾಣೆ ಪರಿಸರದಲ್ಲಿ ನಿನ್ನೆ ಸಂಜೆ ಪೊಲೀಸ್ ಕಾರ್ಯಾಚರಣೆ ನಡೆದಿದೆ. ನಗ-ನಗದು ಸಾಗಿಸುತ್ತಿದ್ದ ಬಗ್ಗೆ ಲಭಿಸಿದ ಗುಪ್ತ ಮಾಹಿತಿಯಂತೆ ಪೊಲೀಸರು ನಿನ್ನೆ ಸಂಜೆ ಠಾಣೆ ಪರಿಸರದಲ್ಲಿ ವಾಹನ ತಪಾಸಣೆಯಲ್ಲಿ …

ಕನ್ನಡ ಹೋರಾಟಗಾರ ಕೆ.ಎಂ. ಗೋಪಾಲಕೃಷ್ಣ ಭಟ್ ನಿಧನ

ಮುಳ್ಳೇರಿಯ: ಕಾರಡ್ಕ ಸಮೀಪದ ಪೊನ್ನಂಪಲ ನಿವಾಸಿ ಕೆ.ಎಂ. ಗೋಪಾಲಕೃಷ್ಣ ಭಟ್ (84) ನಿಧನ ಹೊಂದಿದರು. ಕಳೆದ ಕೆಲವು ಸಮಯದಿಂದ ಅಸೌಖ್ಯ ತಗಲಿ ಕಾಸರಗೋಡಿನ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆಯಲ್ಲಿದ್ದ ಇವರು ನಿನ್ನೆ ಮಧ್ಯಾಹ್ನ ನಿಧನ ಹೊಂದಿದ್ದಾರೆ. ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ, ಕನ್ನಡ ಹೋರಾಟಗಾರ, ಕನ್ನಡ ಅಂಕಣ ಬರಹಗಾರರಾಗಿ ಗುರುತಿಸಿ ಕೊಂಡಿದ್ದರು.  ಕೃಷಿ, ಶಿಕ್ಷಣ, ಸಾಂ ಸ್ಕೃತಿಕ, ಧಾರ್ಮಿಕ ವಲಯಗಳಲ್ಲಿ ಸಕ್ರಿಯರಾಗಿ ದುಡಿದಿದ್ದರು. ಇವರ ಪತ್ನಿ ಭಾಗ್ಯಲಕ್ಷ್ಮಿ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಪುತ್ರನಾದ ಕವಿ, …