ಶಬರಿಮಲೆ ಚಿನ್ನ ಕಳವು: ನಟ ಜಯರಾಮ್‌ರಿಂದ ಹೇಳಿಕೆ ದಾಖಲಿಸಿಕೊಂಡ ಎಸ್‌ಐಟಿ

ಚೆನ್ನೈ: ಶಬರಿಮಲೆ ದೇಗುಲದಿಂದ ಚಿನ್ನ ಕಳವು ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಲೆಯಾಳ ಸಿನಿಮಾ ನಟ ಜಯರಾಮ್‌ರನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಸಮಗ್ರ ವಿಚಾರಣೆ ಗೊಳಪಡಿಸಿ  ಹೇಳಿಕೆ ದಾಖಲಿಸಿಕೊಂಡಿದೆ. ಶಬರಿಮಲೆ ಚಿನ್ನ ಕಳವು ಪ್ರಕರಣದ ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋತ್ತಿಯೊಂದಿಗೆ ಜಯರಾಮ್ ನಿಕಟ ಸಂಬಂಧ ಹೊಂದಿದ್ದು ಆ ಬಗ್ಗೆ  ಮಾಹಿತಿ ಸಂಗ್ರಹಿಸಲು ಎಸ್‌ಐಟಿ ಚೆನ್ನೈಯಲ್ಲಿರುವ  ಜಯರಾಮ್‌ರ ನಿವಾಸಕ್ಕೆ ತೆರಳಿ ಅವರಿಂದ ಹೇಳಿಕೆ ದಾಖಲಿಸಿಕೊಂಡಿದೆ.  ಹಲವು ಪೂಜೆಗಳಿಗಾಗಿ ಉಣ್ಣಿಕೃಷ್ಣನ್ ಪೋತ್ತಿ ತನ್ನ ಮನೆಗೆ ಬಂದಿದ್ದನು. ಅಲ್ಲದೆ ಪೋತ್ತಿ ಹೊಂದಿರುವ ಆರ್ಥಿಕ …

ಹಲವು ವರ್ಷಗಳಿಂದ ಧಾರಾಳ ಮಾವಿನಹಣ್ಣು ಲಭಿಸುತ್ತಿದ್ದ ಮರದಲ್ಲಿ ಈ ಬಾರಿ ಹೂವುಗಳೇ ಬಿಟ್ಟಿಲ್ಲ…!

ಕಾಸರಗೋಡು: ನಾಡಿನಾದ್ಯಂತ ಮಾವಿನ ಮರಗಳು ಹೂವು ಬಿಟ್ಟು ಜನರ ಕಣ್ಮನ ಸೆಳೆಯುತ್ತಿರುವಾಗ ಇಲ್ಲೊಂದೆಡೆ ಹೂವು ಬಿಡದೆ ಮರ ಆಶ್ಚರ್ಯ ಮೂಡಿಸುತ್ತಿದೆ. ಪ್ರತೀ ವರ್ಷ ಈ ಕಾಲಾವಧಿಯಲ್ಲಿ ಹೂವು ಅರಳಿ ಮಾವಿನ ಮಿಡಿಗಳು ತುಂಬಿ ತುಳುಕುತ್ತಿದ್ದ ಈ ಮರದಲ್ಲಿ ಈಗ ಎಲೆಗಳು ಮಾತ್ರವೇ ಕಂಡುಬರುತ್ತಿದೆ.  ಮಧೂರು ಪಂಚಾಯತ್ ಮಾಜಿ ಅಧ್ಯಕ್ಷ ಕೆ. ಗೋಪಾಲಕೃಷ್ಣರ ಕೂಡ್ಲುನಲ್ಲಿರುವ ಮನೆ ಮುಂದೆ ಇರುವ ಮಾವಿನ ಮರದಲ್ಲಿ ಈ ಬಾರಿ ಮಾವಿನ ಕಾಯಿ ಇಲ್ಲ. ಮಧೂರು-ಕಾಸರಗೋಡು ರಸ್ತೆ ಬದಿಯಲ್ಲೇ ಇರುವ ಈ ಮಾವಿನ ಮರದಲ್ಲಿ …

ಎಡರಂಗದ ಅಭಿವೃದ್ಧಿ ಮುನ್ನಡೆ ಯಾತ್ರೆ ಮುಖ್ಯಮಂತ್ರಿ ಫೆ.1ರಂದು ಕುಂಬಳೆಗೆ

ಕಾಸರಗೋಡು: ಎಡರಂಗ ರಾಜ್ಯ ಸಮಿತಿ ನೇತೃತ್ವದಲ್ಲಿ ಉತ್ತರವಲಯ ಅಭಿವೃದ್ಧಿ ಮುನ್ನಡೆ ಜಾಥಾ ಫೆ.1ರಂದು ಸಂಜೆ 3 ಗಂಟೆಗೆ ಕುಂಬಳೆಯಿಂದ ಆರಂಭಗೊಳ್ಳಲಿದೆ. ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಮಾಸ್ತರ್ ಜಾಥಾ ನಾಯಕರಾಗಿರುವ ಯಾತ್ರೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು ಎಂದು ಈ ಬಗ್ಗೆ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಎಡರಂಗ ಸಂಚಾಲಕ ಕೆ.ಪಿ. ಸತೀಶ್ಚಂದ್ರನ್ ತಿಳಿಸಿದ್ದಾರೆ. ಸಿಪಿಐ ರಾಷ್ಟ್ರೀಯ ಎಕ್ಸಿಕ್ಯೂಟಿವ್ ಸದಸ್ಯ, ಸಂಸದ ಪಿ. ಸಂತೋಷ್ ಕುಮಾರ್ ಜಾಥಾ ಮೆನೇಜರ್ ಆಗಿರುವರು. ಮೊದಲ ದಿನದ ಪ್ರಚಾರ ನುಳ್ಳಿಪ್ಪಾಡಿಯಲ್ಲಿ …

ಯುಡಿಎಫ್‌ನಿಂದ ಕುಂಬಳೆ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ: ಪೊಲೀಸರು ಗೂಂಡಾ ನೀತಿಯನ್ನು ಕೊನೆಗೊಳಿಸಬೇಕು- ಸುಬ್ಬಯ್ಯ ರೈ

ಕುಂಬಳೆ: ಜನಸಾಮಾನ್ಯರೊಂದಿಗೆ ಪೊಲೀಸರು ಗೂಂಡಾಗಳಂತೆ ವರ್ತಿಸುತ್ತಿದ್ದಾರೆ. ಇಂತಹ ನೀತಿಯನ್ನು ಪೊಲೀಸರು ಕೊನೆಗೊಳಿಸಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ಬಿ. ಸುಬ್ಬಯ್ಯ ರೈ ತಿಳಿಸಿದ್ದಾರೆ. ಪೊಲೀಸರು ಅಕ್ರಮಣ ನೀತಿಯನ್ನು ವಿರೋಧಿಸಿ ಯುಡಿಎಫ್ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ನಿನ್ನೆ ಕುಂಬಳೆ ಪೊಲೀಸ್ ಠಾಣೆ ಮುಂದೆ ನಡೆದ ಪ್ರತಿಭಟನಾ ಧರಣಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕುಂಬಳೆ ಟೋಲ್ ಗೇಟ್‌ನಲ್ಲಿ ಮೊನ್ನೆ ಕಾರುಚಾಲಕನನ್ನು ಪೊಲೀಸರು ಬಲಪ್ರಯೋಗಿಸಿ ಕಾರಿನಿಂದಿಳಿಸಿ, ಪುಟ್ಟಮಕ್ಕಳು ದೀರ್ಘ ಹೊತ್ತು ರಸ್ತೆಯಲ್ಲೇ ಉಳಿಯಬೇಕಾದ ಸ್ಥಿತಿಯನ್ನು ಪ್ರತಿಭಟಿಸಿ ಯುಡಿಎಫ್  ನಿನ್ನೆ ಧರಣಿ ಹಮ್ಮಿಕೊಂಡಿತ್ತು. ಕಾರ್ಯಕ್ರಮದಲ್ಲಿ …

ಸಹಕಾರಿ ಪಿಂಚಣಿದಾರರ ಅನಿರ್ದಿಷ್ಟ ಹೋರಾಟ ವಾಹನ ಜಾಥಾಕ್ಕೆ ಹೊಸಂಗಡಿಯಲ್ಲಿ ಚಾಲನೆ

ಮಂಜೇಶ್ವರ: ಸಹಕಾರಿ ಪಿಂಚಣಿದಾರರ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೇರಳ ಕೋ-ಆಪರೇಟಿವ್ ಸರ್ವೀಸ್ ಪೆನ್ಶನರ್ಸ್ ಅಸೋಸಿಯೇಶÀನ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅನಿಶ್ಚಿತಾವಧಿ ಹೋರಾಟಕ್ಕೆ ಚಾಲನೆ ನೀಡಲಾಯಿತು. ಇದರಂಗವಾಗಿ ರಾಜ್ಯ ಸಮರ ಪ್ರಚಾರ ವಾಹನ ಜಾಥಾ ನಿನ್ನೆ ಹೊಸಂಗಡಿಯಲ್ಲಿ ಉದ್ಘಾಟನೆಗೊಂಡಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಮುಂಡೂರು ರಾಮಕೃಷ್ಣನ್ ನೇತೃತ್ವದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಕೆ.ಆರ್. ಜಯಾನಂದ ಅಧ್ಯಕ್ಷತೆ ವಹಿಸಿದ್ದರು. ಎ.ಎಂ. ಮೇರಿ ಟೀಚರ್ ಜಾಥಾ ಉದ್ಘಾಟಿಸಿದರು. ಸಹಕಾರ ಜನತಾಂತ್ರಿಕ ವೇದಿಕೆ ಜಿಲ್ಲಾ ಅಧ್ಯಕ್ಷ ಕೆ. ನೀಲಕಂಠನ್, ಮಂಜೇಶ್ವರ ಬ್ಲಾಕ್ …

ಪಯ್ಯೋಳಿ ಎಕ್ಸ್‌ಪ್ರೆಸ್ ಪಿ.ಟಿ. ಉಷಾರ ಪತಿ ನಿಧನ

ಕಲ್ಲಿಕೋಟೆ: ರಾಜ್ಯಸಭಾ ಸದಸ್ಯೆ ಹಾಗೂ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷೆಯಾಗಿರುವ ಡಾ. ಪಿ.ಟಿ. ಉಷಾರ ಪತಿ ಶ್ರೀನಿವಾಸನ್ (64) ನಿಧನ ಹೊಂದಿದರು. ಪಯ್ಯೋಳಿ ತಿಕ್ಕೋಡಿ ಪೆರುಮಾಳ್‌ಪುರಂನ ಮನೆಯಲ್ಲಿ ಕುಸಿದು ಬಿದ್ದ ಇವರನ್ನು ಕೂಡಲೇ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇಂದು ಮುಂಜಾನೆ 1 ಗಂಟೆ ವೇಳೆ ಘಟನೆ ನಡೆದಿದೆ. ಪಾರ್ಲಿಮೆಂಟ್ ಸಮ್ಮೇಳನ ದಲ್ಲಿ ಭಾಗವಹಿಸಲು ತೆರಳಿದ್ದ ಪಿ.ಟಿ. ಉಷಾ ಊರಿಗೆ ಮರಳಿದ್ದಾರೆ. ಶ್ರೀನಿವಾಸನ್ ಕೇಂದ್ರ ಕೈಗಾರಿಕಾ ಭದ್ರತಾ ಸೇನೆಯ ಡಿವೈಎಸ್‌ಪಿಯಾ ಗಿದ್ದರು. ಮೃತರು ಪತ್ನಿ, ಪುತ್ರ …

ಪ್ರಯಾಣಿಕನ ವಿರುದ್ಧ ಕುಂಬಳೆ ಟೋಲ್‌ಗೇಟ್‌ನಲ್ಲಿ ಪೊಲೀಸ್ ಕ್ರಮ: ಶಾಸಕರಿಂದ ಮುಖ್ಯಮಂತ್ರಿಗೆ ದೂರು

ಕುಂಬಳೆ: ತಲಪಾಡಿಯಲ್ಲಿ ಟೋಲ್ ಬೂತ್ ಇರುವಾಗ ದೂರ ಮಿತಿಯನ್ನು ಉಲ್ಲಂಘಿಸಿ 22 ಕಿಲೋ ಮೀಟರ್‌ನೊಳಗೆ ಕುಂಬಳೆ ಆರಿಕ್ಕಾಡಿ ಯಲ್ಲಿ ಎರಡನೇ ಟೋಲ್ ಸ್ಥಾಪಿಸಲಾ ಗಿದ್ದು, ಅಲ್ಲಿಯೂ ಹಣ ಪಾವತಿಸಿದರೂ ವಾಹನಗಳನ್ನು ತಡೆದು ನಿಲ್ಲಿಸುವ ರಾಡ್ ಕಾರಿನ ಮೇಲೆ ಗುದ್ದಿರುವುದನ್ನು ಪ್ರಶ್ನಿಸಿದ ಪ್ರಯಾಣಿಕನನ್ನು ಕುಂಬಳೆ ಸಿಐಯ ನೇತೃತ್ವದಲ್ಲಿ ಕಾರಿನಿಂದ ಇಳಿಸಿ ಕುಟುಂಬದ ಮುಂದೆಯೇ ಅಪರಾಧಿ ಯಂತೆ ಕೊಂಡುಹೋಗಿರುವುದು ಖಂಡನೀಯವೆಂದು ಶಾಸಕ ಎಕೆಎಂ ಅಶ್ರಫ್ ನುಡಿದಿದ್ದಾರೆ. ಈ ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಈ …

ಮುಂಗಡಪತ್ರದಲ್ಲಿ ಸರಕಾರಿ ನೌಕರರನ್ನು ಅವಗಣಿಸಿರುವುದಾಗಿ ಆರೋಪಿಸಿ ಎನ್‌ಜಿಒ ಅಸೋಸಿಯೇಶನ್ ಪ್ರತಿಭಟನೆ

ಕಾಸರಗೋಡು: ನಾಲ್ಕು ತಿಂಗಳ ಒಳಗೆ ಕಾಲಾವಧಿ ಮುಗಿಸುವ ಸರಕಾರ ವೇತನ ಆಯೋಗವನ್ನು ನೇಮಕಗೊಳಿಸಿ ಮೂರು ತಿಂಗಳೊಳಗೆ ವೇತನ ಪರಿಷ್ಕರಣೆ ನಡೆಸುವುದಾಗಿ ಬಜೆಟ್‌ನಲ್ಲಿ ಘೋಷಿಸಿರುವುದು ನೌಕರರ ಕಣ್ಣಿಗೆ ಮಣ್ಣು ಹಾಕಲಿರುವ ಯತ್ನವಾಗಿದೆ ಎಂದು ಎನ್‌ಜಿಒ ಅಸೋಸಿಯೇಶನ್ ಆರೋಪಿಸಿದೆ. ವೇತನ ಪರಿಷ್ಕರಣೆಯನ್ನು ಕಳೆದ ೫ ವರ್ಷದಿಂದ ಸರಕಾರ ಬುಡಮೇಲುಗೊಳಿಸಲು ಯತ್ನ ನಡೆಸಿರುವುದಾಗಿಯೂ ಎನ್‌ಜಿಒ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಎ.ಟಿ. ಶಶಿ ನುಡಿದರು. ರಾಜ್ಯ ಮುಂಗಡ ಪತ್ರದಲ್ಲಿ ನೌಕರರನ್ನು ಅವಗಣಿಸಿರುವು ದನ್ನು ಪ್ರತಿಭಟಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಕೇರಳ ಎನ್‌ಜಿಒ ಅಸೋಸಿ ಯೇಶನ್ …

ಉಪ್ಪಳ ಶ್ರೀ ಭಗವತೀ ಕ್ಷೇತ್ರದಲ್ಲಿ ಕಳಿಯಾಟ ಮಹೋತ್ಸವ ಆರಂಭ

ಉಪ್ಪಳ: ಉಪ್ಪಳ ಶ್ರೀ ಭಗವತೀ ಕ್ಷೇತ್ರದಲ್ಲಿ ವರ್ಷಾವಧಿ ಕಳಿಯಾಟ ಮಹೋತ್ಸವ ಆರಂಭಗೊಂಡಿದೆ. ಬೆಳಿಗ್ಗೆ ಭಂಡಾರ ಕ್ಷೇತ್ರದಲ್ಲಿ ಗಣಹೋಮ, ಕಳಿಯಾಟ ಮಹೋತ್ಸವಕ್ಕೆ ಗೊನೆ ಮುಹೂರ್ತ, ಚಪ್ಪರ ಮುಹೂರ್ತ, ಶ್ರೀ ನಾಗ ಸನ್ನಿಧಿಯಲ್ಲಿ ನಾಗತಂಬಿಲ, ಭಜನೆ, ಭಂಡಾರ ಆಗಮನ, ನಡಾವಳಿ ಉತ್ಸವದೊಂದಿಗೆ ನಿನ್ನೆ ಮೊದಲ ಕಳಿಯಾಟ ನಡೆಯಿತು. ಇಂದು ನಡು ಕಳಿಯಾಟ ಆರಂಭಗೊಂಡಿದೆ. ಫೆ.1ರಂದು ರಾತ್ರಿ 12ರಿಂದ ಹೂ ಮುಡಿ ದೈವ, ಭಗವತೀ ದರ್ಶನ, ಕೆಂಡಸೇವೆ, ಬಲಿ ಉತ್ಸವ, ವಿಷ್ಣುಮೂರ್ತಿ ದೈವ, ಭಂಡಾರ ನಿರ್ಗಮನದೊಂದಿಗೆ ಕಳಿಯಾಟ ಮಹೋತ್ಸವ ಸಮಾಪ್ತಿಗೊಳ್ಳಲಿದೆ.

ಪ್ರತಾಪನಗರ ಒಳ ರಸ್ತೆಯಲ್ಲಿ ಚರಂಡಿ, ಸ್ಲ್ಯಾಬ್ ನಿರ್ಮಾಣ: ಸ್ಥಳೀಯರಿಗೆ ನೆಮ್ಮದಿ

ಮಂಗಲ್ಪಾಡಿ: ಮಂಗಲ್ಪಾಡಿ ಪಂಚಾಯತ್‌ನ 7ನೇ ವಾರ್ಡ್ ಪ್ರತಾಪನಗರ ಒಳ ರಸ್ತೆಯಲ್ಲಿ ವ್ಯವಸ್ಥಿತ ಚರಂಡಿ ಹಾಗೂ ಸ್ಲಾಬ್ ನಿರ್ಮಿಸಲಾಗಿದ್ದು, ಸ್ಥಳೀಯರಲ್ಲಿ ಆತಂಕ ದೂರವಾಗಿದೆ. ಈ ಪರಿಸರದಲ್ಲಿ ಮಳೆ ನೀರು ರಸ್ತೆಯಲ್ಲಿ ಹರಿದು ಶೋಚನೀಯÁವಸ್ಥೆ ಉಂಟಾಗುತ್ತಿತ್ತು. ತೆರೆದ ಸ್ಥಿತಿಯಲ್ಲಿದ್ದ ಚರಂಡಿಯಿAದ ವಾಹನ ಸಂಚಾರಕ್ಕೆ ಸಮಸ್ಯೆ ಹಾಗೂ ಅಪಘಾತಕ್ಕೆ ಕಾರಣವಾಗುತ್ತಿತ್ತು. ಸೂಕ್ತ ಚರಂಡಿ ನಿರ್ಮಾಣಕ್ಕೆ ಈ ಹಿಂದೆ ಊರವರು ಒತ್ತಾಯಿಸಿದ್ದರು. ಇದಕ್ಕೆ ಸ್ಪಂದಿಸಿದ ಈ ಹಿಂದಿನ ವಾರ್ಡ್ ಸದಸ್ಯೆ ಸುಧಾ ಗಣೇಶ್‌ರ ಮುತುವರ್ಜಿಯಿಂದ ಪಂಚಾಯತ್ ನಿಂದ ಮಂಜೂರುಗೊAಡ ಸುಮಾರು 5ಲಕ್ಷ ರೂ …