ಪೆರಡಾಲ ಕ್ಷೇತ್ರದಲ್ಲಿ ಶ್ರೀಶಕ್ತಿ ಪಂಚಾಕ್ಷರಿ ಯಾಗ ಸಮಾಪ್ತಿ

ಬದಿಯಡ್ಕ: ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದಲ್ಲಿ ಶ್ರೀಶಕ್ತಿ ಪಂಚಾಕ್ಷರಿ ಹೋಮ ಸಮಾಪ್ತಿಗೊಂಡಿತು. ಹಲವಾರು ಮಂದಿ ಭಕ್ತರು ಭಾಗವಹಿಸಿದ್ದರು. ಇದೇ ವೇಳೆ ಗರ್ಭಗುಡಿಯ ನವೀಕರಣಕ್ಕೆ ದೇವರ ಬಾಲಾಲಯ ಪ್ರತಿಷ್ಠೆ ಕೈಗೊಳ್ಳಲಾಯಿತು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಪೌರೋಹಿತ್ಯ ವಹಿಸಿದರು. ಶಿಲ್ಪಿ ಕೃಷ್ಣ ಪ್ರಸಾದ ಮುನಿಯಂಗಳ, ವಸಂತ ಪೈ ಬದಿಯಡ್ಕ, ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಚಂಬಲ್ತಿಮಾರ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಿರಂಜನ ರೈ, ಕೋಶಾಧಿಕಾರಿ ಸೂರ್ಯನಾರಾಯಣ, ವಿವಿಧ ಸಮಿತಿ ಪದಾಧಿಕಾರಿಗಳು ಭಾಗವಹಿಸಿದರು.

ಮಜೀರ್ಪಳ್ಳದಿಂದ ಯುವಕರ ಅಪಹರಣ: ಹೊಸಬೆಟ್ಟಿನಲ್ಲಿ ಕಳ್ಳ ಬಂದೂಕು, ಮದ್ದುಗುಂಡುಗಳು ವಶ; ಹಲವು ಪ್ರಕರಣಗಳ ಆರೋಪಿ ಸಹಿತ ಏಳು ಮಂದಿ ಬಂಧನ

ಮಂಜೇಶ್ವರ: ಕಾಪಾ ಸಹಿತ ಹಲವು ಪ್ರಕರಣಗಳಲ್ಲಿ ಆರೋಪಿಯಾದ ಕುಖ್ಯಾತ ಕ್ರಿಮಿನಲ್ ಸಹಿತ ಏಳು ಮಂದಿಯನ್ನು ಮಂಜೇಶ್ವರ ಪೊಲೀಸರು ಸೆರೆಹಿಡಿದಿದ್ದಾರೆ. ತಂಡದ ಕೈಯಿಂದ ಬಂದೂಕು ಹಾಗೂ 5 ಮದ್ದುಗುಂಡುಗಳನ್ನು ವಶಪಡಿಸಲಾಗಿದೆ. ಅಂಗಡಿಪದವಿನ  ಸೈಫುದ್ದೀನ್ ಯಾನೆ ಪೂಚ ಸೈಫುದ್ದೀನ್ (29), ಬೇಡಗಂ ಕುತ್ತಿಕ್ಕೋಲ್ ಅಳಕ್ಕಾವ್ ಹೌಸ್‌ನ ನಿತಿನ್‌ರಾಜ್ (25), ಕುತ್ತಿಕ್ಕೋಲ್ ವೆಳ್ಳಾಲ ಹೌಸ್‌ನ ಎಚ್. ರತೀಶ್ (26), ಚೆಮ್ನಾಡ್ ಕೊಂಬನಡ್ಕದ ಪ್ರವಿತ್ ಸಿ.ಆರ್ (20) ಎಂಬಿವರನ್ನು ಮಂಜೇಶ್ವರ ಠಾಣೆ ಇನ್‌ಸ್ಪೆಕ್ಟರ್ ಇ. ಅನೂಬ್ ಕುಮಾರ್ ಹಾಗೂ ತಂಡ  ಕಳ್ಳಬಂದೂಕು ಪ್ರಕರಣದಲ್ಲಿ …

ಮುಖ್ಯೋಪಾಧ್ಯಾಯ ವಿದ್ಯಾರ್ಥಿ ಕೆನ್ನೆಗೆ ಹೊಡೆದು ಕರ್ಣ ತಮ್ಮಟೆಗೆ ಹಾನಿವುಂಟಾದ ಪ್ರಕರಣ: ಸಮಗ್ರ ತನಿಖೆಗೆ ಶಿಕ್ಷಣ ಸಚಿವ ನಿರ್ದೇಶ

ಕಾಸರಗೋಡು: ಮುಖ್ಯೋ ಪಾಧ್ಯಾಯರು ವಿದ್ಯಾರ್ಥಿಯ ಕೆನ್ನೆಗೆ ಹೊಡೆದ ಪರಿಣಾಮ ಆತನ ಕರ್ಣ ತಮಟೆಗೆ ಹಾನಿಯುಂಟಾದ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ  ರಾಜ್ಯ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಇಂದು ಬೆಳಿಗ್ಗೆ ನಿರ್ದೇಶ ನೀಡಿದ್ದಾರೆ.  ಇದೇ ವೇಳೆ ಈ ಘಟನೆಗೆ  ಸಂಬಂಧಿಸಿ ರಾಜ್ಯ ಮಕ್ಕಳ ಹಕ್ಕು ಆಯೋಗ  ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಕುಂಡಂಕುಳಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗೆ  ಮುಖ್ಯೋಪಾಧ್ಯಾಯರು ಕೆನ್ನೆಗೆ ಹೊಡೆದಿರು ವುದಾಗಿ ಆರೋಪಿಸ ಲಾಗಿದೆ.  ಆ ವಿಷಯ  ತಿಳಿದ ಅದೇ …

ಪೊದೆಗಳಿಂದ ಆವರಿಸಿರುವ ಕೆರೆಯಲ್ಲಿ ಮಾನವ ಅಸ್ತಿ ಪಂಜರ ಪತ್ತೆ: ಉನ್ನತ ಮಟ್ಟದ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜಿಗೆ ರವಾನೆ

ಕಾಸರಗೋಡು: ಪೊದೆಗಳಿಂದ ಆವರಿಸಿರುವ ಕೆರೆಯಲ್ಲಿ ಮಾನವ ಅಸ್ತಿಪಂಜರ ಪತ್ತೆಯಾಗಿದೆ. ಚೆರ್ಕಳಕ್ಕೆ ಸಮೀಪದ ಪಡಿಞ್ಞಾರಮೂಲೆ ಕುಂಞಿಕಾನದ ಅಬ್ದುಲ್ಲ ಎಂಬವರ ಹಿತ್ತಿಲಲ್ಲಿ ಪೊದೆಗಳಿಂದ ಆವರಿಸಿರುವ ಕೆರೆಯಲ್ಲಿ ಈ ಅಸ್ತಿ ಪಂಜರ ಪತ್ತೆಯಾಗಿದೆ. ಮಕ್ಕಳು ನಿನ್ನೆ ಅಪರಾಹ್ನ ಮೀನು ಹಿಡಿಯಲೆಂದು  ಆ ಕೆರೆಗೆ ಹೋದಾಗ ಅವರು ಮೊದಲು ಅಸ್ತಿಪಂಜರ ಪತ್ತೆಹಚ್ಚಿದ್ದಾರೆ. ಆ ಬಗ್ಗೆ ನೀಡಲಾದ ಮಾಹಿತಿಯಂತೆ ವಿದ್ಯಾನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಯು.ಪಿ. ವಿಪಿನ್, ಎಸ್.ಐ.ಗಳಾದ ವಿಜಯನ್ ಮೇಲೋತ್ತ್, ಕೆ. ಉಮೇಶನ್‌ರ ನೇತೃತ್ವದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಇದು …

ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿ ಸೆರೆ

ಕಾಸರಗೋಡು: 13ರ ಹರೆಯದ ವಿದ್ಯಾರ್ಥಿನಿಯನ್ನು ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ ಪೋಕ್ಸೋ ಪ್ರಕರಣದ ಆರೋಪಿಯನ್ನು ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯ ಠಾಣಾಧಿಕಾರಿಯಾದ ಎಸ್‌ಐ ಅಜಿತಾ ಕೆ. ಬಂಧಿಸಿದ್ದಾರೆ. ಮೂಲತಃ ಕಾಸರಗೋಡು ಚೇರಂಗೈ ಕಡಪ್ಪುರ ನಿವಾಸಿ ಹಾಗೂ ಈಗ ಅಡ್ಕತ್ತಬೈಲು ಅರ್ಜಾಲ್ ರಸ್ತೆ ಬಳಿ ವಾಸಿಸುತ್ತಿರುವ ಅಬ್ದುಲ್ ಮುನೀರ್ (31) ಬಂಧಿತ ಆರೋಪಿ. 13ರ ಹರೆಯದ ವಿದ್ಯಾರ್ಥಿನಿಯನ್ನು ಪ್ರೀತಿಸಿ ಆಕೆಯನ್ನು ಬೈಕ್‌ನಲ್ಲಿ ಬೇಕಲ ಪೋರ್ಟ್‌ಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ನೀಡಲಾದ ದೂರಿನಂತೆ ಕಾಸರಗೋಡು ಮಹಿಳಾ ಪೊಲೀಸ್ …

ದಾರಿ ತರ್ಕ: ಘರ್ಷಣೆಯಲ್ಲಿ ನಾಲ್ಕು ಮಂದಿಗೆ ಗಾಯ

ಕುಂಬಳೆ: ದಾರಿ ತರ್ಕದ ಹಿನ್ನೆಲೆಯಲ್ಲಿ ಉಂಟಾದ ಘರ್ಷ ಣೆಯಲ್ಲಿ ಮಹಿಳೆಯರ ಸಹಿತ ನಾಲ್ಕು ಮಂದಿ ಗಾಯಗೊಂಡ ಘಟನೆ ನಡೆದಿದೆ. ಕೊಡ್ಲಮೊಗರು ಪಲ್ಲೆದಪಡ್ಪು ನಿವಾಸಿಗಳಾದ ವಿಶ್ವನಾಥ ಶೆಟ್ಟಿ (65), ಇವರ ಪತ್ನಿ ಶಾರದ (64), ನೆರೆಮನೆ ನಿವಾಸಿಗಳಾದ ಸದಾಶಿವರ ಪತ್ನಿ ಪುಷ್ಪ (54), ನಾರಾಯಣ ಶೆಟ್ಟಿಯವರ ಪತ್ನಿ ಲೀಲ 62) ಎಂಬಿವರು ಗಾಯಗೊಂಡಿದ್ದು, ಇವರನ್ನು ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ನಿನ್ನೆ ಸಂಜೆ ಎರಡು ತಂಡಗಳ ಮಧ್ಯೆ ಘರ್ಷಣೆ ನಡೆದಿರುವು ದಾಗಿ ದೂರಲಾಗಿದೆ.

ಯುವತಿಗೆ ಕಿರುಕುಳ ಆರೋಪಿಯ ಪತ್ತೆಗಾಗಿ ಪೊಲೀಸ್ ಶೋಧ

ಕಾಸರಗೋಡು: ಯುವತಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಯನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಬಂದಡ್ಕ ಏಣಿಯಾಡಿಯ ಆದಂ ಎಂಬಾತನನ್ನು ಪತ್ತೆಹಚ್ಚಲು ಬೇಡಗಂ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಈತ ಬಂದಡ್ಕ ದಲ್ಲಿ ವ್ಯಾಪಾರಿಯಾಗಿದ್ದಾನೆಂದು ಹೇಳಲಾಗುತ್ತಿದೆ. ಅಗೋಸ್ತ್ 15, 16ರಂದು ಪ್ರಕರಣಕ್ಕೆ ಕಾರಣವಾದ ಘಟನೆ ನಡೆದಿದೆ.  ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಸೈಬರ್ ಸೆಲ್‌ನ ಸಹಾಯ ಯಾಚಿಸಿದ್ದಾರೆ.

ಎರಡು ದಿನಗಳಲ್ಲಿ ಮಂಜೇಶ್ವರದಲ್ಲಿ ಒಟ್ಟು 152 ಪವನ್ ಚಿನ್ನಾಭರಣ, 4 ಲಕ್ಷ ರೂ. ವಶ

ಮಂಜೇಶ್ವರ: ಮಂಗಳೂರು ಭಾಗ ದಿಂದ ಕಾಸರಗೋಡಿಗೆ ಅನಧಿಕೃತವಾಗಿ ಚಿನ್ನ ಸಾಗಾಟ ಮತ್ತೆ ತೀವ್ರಗೊಂಡಿದೆ. ಮಂಜೇಶ್ವರ ಅಬ ಕಾರಿ ಚೆಕ್ ಪೋಸ್ಟ್‌ನ ಅಧಿಕಾರಿಗಳು ನಿನ್ನೆ ಹಾಗೂ ಮೊನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 152 ಪವನ್ ಚಿನ್ನವನ್ನು ವಶಪಡಿಸ ಲಾಗಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ನಿನ್ನೆ ಸಂಜೆ ಮಂಗಳೂರಿನಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ಬಸ್‌ನಲ್ಲಿ  ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 96 ಪವನ್ (762 ಗ್ರಾಂ) ಚಿನ್ನಾಭರಣ ಗಳನ್ನು ವಶಪಡಿಸಲಾಗಿದೆ.  ಚಿನ್ನ ಸಾಗಿಸುತ್ತಿದ್ದ ಮುಂಬೈ ಸಿಟಿಯ ತವಕ್ಕಲ್ ಬಿಲ್ಡಿಂಗ್‌ನಲ್ಲಿ …

ಕರ್ನಾಟಕದ ಬಾಲಕನನ್ನು ಕುತ್ತಿಗೆ ಹಿಚುಕಿ ಕೊಂದ ಪ್ರಕರಣ: ಜಾಮೀನಿನಲ್ಲಿ ಬಿಡುಗಡೆಗೊಂಡು ತಲೆಮರೆಸಿಕೊಂಡ ಆರೋಪಿ 13 ವರ್ಷಗಳ ಬಳಿಕ ಸೆರೆ

ಕಾಸರಗೋಡು:  ಕರ್ನಾಟಕ ನಿವಾಸಿಯಾದ ಹತ್ತರ ಹರೆಯ ಬಾಲಕನನ್ನು ಕುತ್ತಿಗೆ ಹಿಚುಕಿ ಕೊಲೆಗೈದ ಪ್ರಕರಣದಲ್ಲಿ ಬಂಧಿತನಾಗಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಂಡ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು 13 ವರ್ಷಗಳ ಬಳಿಕ ನಂತರ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಭಾಗಪ್ಪ ಜುವಲ್ ಪಾಳಿಯ ನಿವಾಸಿ ಸಹೀರ್ ಅಹಮ್ಮದ್ (48) ಬಂಧಿತ ಆರೋಪಿ. ನಂತರ ಆತನನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕರ್ನಾಟಕದಿಂದ ಹೂ ಮಾರಾಟಕ್ಕಾಗಿ ಹೊಸದುರ್ಗಕ್ಕೆ ಬಂದು ಹೊಸದುರ್ಗದ ವಸತಿಗೃಹವೊಂದರಲ್ಲಿ ವಾಸಿಸುತ್ತಿದ್ದ ಕುಟುಂಬದ ಹತ್ತು ವರ್ಷ ಪ್ರಾಯದ  ಸುನಿಲ್ ಎಂಬ ಹೆಸರಿನ ಬಾಲಕನನ್ನು ಆ ವಸತಿ …

ಪೆರಿಯದಲ್ಲಿ ಮತ್ತೆ ಚಿರತೆ ಭೀತಿ: ಜಾಗ್ರತಾ ನಿರ್ದೇಶ

ಕಾಸರಗೋಡು: ಪೆರಿಯ ಕೇಂದ್ರ ವಿಶ್ವವಿದ್ಯಾಲಯ ಸಮೀಪ ಮತ್ತೆ ಚಿರತೆಯ ಭೀತಿ ಉಂಟಾಗಿದೆ.  ಇಲ್ಲಿನ ತನ್ನೋಟ್ ಭಾಗದಲ್ಲಿ ಚಿರತೆ ಕಂಡುಬಂದಿರುವುದಾಗಿ ತಿಳಿದುಬಂದಿದೆ.  ವಿಷಯ ತಿಳಿದು ಆರ್‌ಆರ್‌ಟಿ ಸ್ಥಳಕ್ಕೆ ತಲುಪಿ ಶೋಧ ನಡೆಸಿದೆ  ಈ ವೇಳೆ ಚಿರತೆಯ ಕಾಲಿನ ಹೆಜ್ಜೆಗಳ ಗುರುತು ಕಂಡುಬಂದಿದೆ.  ಚಿರತೆ ಈ ಭಾಗಕ್ಕೆ ತಲುಪಿರುವುದಾಗಿ ಸೂಚನೆ ಲಭಿಸಿದ ಹಿನ್ನೆಲೆಯಲ್ಲಿ  ಇಲ್ಲಿ ಕ್ಯಾಮರಾ ಸ್ಥಾಪಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಇದೇ ವೇಳೆ  ಜಾಗ್ರತೆ ವಹಿಸುವಂತೆಯೂ ಅಧಿಕಾರಿಗಳು ಜನರಿಗೆ ಕರೆ ನೀಡಿದ್ದಾರೆ.