ಯುವಕ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಶೇಂದಿ ಸಂಗ್ರಹ ನೌಕರನಾದ ಯುವಕ ಕಾಡಿನೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬಿರಿಕುಳ ಪರಪ್ಪ ಓಮಂಙಾನಂ ನಿವಾಸಿ ಎ. ವಿನೋದ್ (41) ಮೃತ ಯುವಕ. ಮನೆ ಸಮೀಪದ ಕಾಡಿನೊಳಗೆ ಇವರ ಮೃತದೇಹ ನಿನ್ನೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೊನ್ನೆ ಸಂಜೆ ಸ್ನಾನಕ್ಕೆಂದು ತಿಳಿಸಿ ತೋಡಿಗೆ ತೆರಳಿದ್ದ ಇವರು ಮರಳಿ ಬಂದಿರಲಿಲ್ಲ. ಇದರಿಂದ  ಶೋಧ ನಡೆಸುತ್ತಿದ್ದಂತೆ ನಿನ್ನೆ ಬೆಳಿಗ್ಗೆ ಮೃತದೇಹ ಕಂಡು ಬಂದಿದೆ.

ದಿ| ಅಂಬಾಡಿ- ಲಕ್ಷ್ಮಿ ದಂಪತಿ ಪುತ್ರನಾದ ಮೃತರು ಸಹೋದರರಾದ ರಾಘವನ್, ಚಂದ್ರನ್, ಸುಧಾಕರನ್, ಜಯನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page