ಮೀನುಗಾರಿಕೆ ವೇಳೆ ದೋಣಿಯ ಇಂಜಿನ್ ಹಾನಿ: ಸಮುದ್ರ ಮಧ್ಯೆ ಸಿಲುಕಿಕೊಂಡ ಕಾರ್ಮಿಕರನ್ನು ರಕ್ಷಿಸಿದ ಪೊಲೀಸ್, ನಾಗರಿಕರು

ಕಾಸರಗೋಡು: ಇಂಜಿನ್ ಹಾನಿಗೀಡಾದ ಹಿನ್ನೆಲೆಯಲ್ಲಿ ಸಮುದ್ರದ ಮಧ್ಯೆ ಸಿಲುಕಿಕೊಂಡ ದೋಣಿಯಲ್ಲಿದ್ದ ಮೀನು ಕಾರ್ಮಿಕರನ್ನು ಕುಂಬಳೆ ಪೊಲೀಸರು ಹಾಗೂ ನಾಗರಿಕರು ಸೇರಿ ಸುರಕ್ಷಿತವಾಗಿ ದಡಕ್ಕೆ ತಲುಪಿಸಿ ಅಪಾಯದಿಂದ ಪಾರು ಮಾಡಿದ್ದಾರೆ. ತಮಿಳುನಾಡು ನಿವಾಸಿ ಮೈಕಲ್ (31), ಕರ್ನಾಟಕ ನಿವಾಸಿ ಸತೀಶ್ (39) ಎಂಬಿವರನ್ನು ಅಪಾಯದಿಂದ ಪಾರು ಮಾಡಲಾಗಿದೆ. ಇವರು ಮಂಗಳೂರಿನ ಶಾಹುಲ್ ಹಮೀದ್ ಎಂಬವರ ಮಾಲ ಕತ್ವದ ದೋಣಿಯ ಕಾರ್ಮಿಕರಾಗಿ ದ್ದಾರೆ. ಮೀನುಗಾರಿಕೆ ನಡೆಸುತ್ತಿದ್ದಂತೆ ದೋಣಿಯ ಇಂಜಿನ್ ಹಾನಿಗೀಡಾಗಿ ರುವುದಾಗಿ ತಿಳಿದು ಬಂದಿದೆ. ಇದರಿಂದ ಕಾಸರಗೋಡು ಭಾಗಕ್ಕೆ ಸಾಗತೊಡಗಿದ …

ನ್ಯಾಯಮೂರ್ತಿ ಆರ್.ಎನ್. ಪ್ರಸಾದ್ ಆಯೋಗದ ವರದಿಯನ್ನು ಜ್ಯಾರಿಗೆ ತರಬೇಕು-ಒಬಿಸಿ ಮೋರ್ಛಾ

ಕಾಸರಗೋಡು: ಸಾಂಪ್ರದಾ  ಯಿಕ ಕೆಲಸಗಳನ್ನು ನಿರ್ವಹಿಸುವ ಸಮುದಾಯಗಳನ್ನು ಕ್ರಿಮಿಲೇಯ ರ್‌ನಿಂದ ಹೊರಗಿಡಬೇಕೆಂಬ ನ್ಯಾಯಮೂರ್ತಿ ಆರ್.ಎನ್. ಪ್ರಸಾದ್ ಆಯೋಗದ ವರದಿಯನ್ನು ಜ್ಯಾರಿಗೆ ತರಲು  ಸರಕಾರ ಸಿದ್ಧವಾಗ ಬೇಕೆಂದು ಒಬಿಸಿ ಮೋರ್ಛಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಶೈಬು ಒತ್ತಾಯಿಸಿದ್ದಾರೆ. ಒಬಿಸಿ ಮೋರ್ಛಾ ಕಾಸರಗೋಡು ಜಿಲ್ಲಾ ಸಮಿತಿ  ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಕಚೇರಿಯ ಮುಂದೆ ಆಯೋಜಿಸಲಾದ ಧರಣಿಯಲ್ಲಿ ಮುಖ್ಯ ಭಾಷಣ ಮಾಡಿ ಈ ಬೇಡಿಕೆ ಮುಂದಿರಿಸಿದ್ದಾರೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮುರಳೀಧರ ಯಾದವ್  ಧರಣಿ ಉದ್ಘಾಟಿಸಿದರು. ಒಬಿಸಿ  ಮೋರ್ಛಾ …

ಕಲ್ಯೋಟ್‌ನಲ್ಲಿ ಕೊಲೆಗೈಯ್ಯಲ್ಪಟ್ಟ ಕೃಪೇಶ್, ಶರತ್‌ಲಾಲ್‌ರ ಹೆಸರಲ್ಲಿ ಸ್ಮಾರಕ ಮಂಟಪ ನಿರ್ಮಾಣದ ಪೂರ್ಣ ವೆಚ್ಚ ಕರ್ನಾಟಕ ವಹಿಸಲಿದೆ- ಗೃಹ ಸಚಿವ ಜಿ. ಪರಮೇಶ್ವರ

ಪೆರಿಯ: ಪೆರಿಯಾಕ್ಕೆ ಸಮೀಪದ ಕಲ್ಯೋಟ್‌ನಲ್ಲಿ ರಾಜಕೀಯ ದ್ವೇಷದಿಂದ ಕೊಲೆಗೈಯ್ಯಲ್ಪಟ್ಟ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಮತ್ತು  ಶರತ್‌ಲಾಲ್‌ರ ಹೆಸರಲ್ಲಿ ಕಲ್ಯೋಟ್ ಪೇಟೆಯಲ್ಲಿ ಸ್ಮಾರಕ ಮಂ ಟಪ ನಿರ್ಮಿಸಲು ಕಾಂಗ್ರೆಸ್ ತೀರ್ಮಾ ನಿಸಿದ್ದು, ಅದರ ಪೂರ್ಣ ವೆಚ್ಚವನ್ನು ಕರ್ನಾಟಕದ ಕಾಂಗ್ರೆಸ್  ಘಟಕವೇ ವಹಿಸಲಿದೆ ಎಂದು ಕರ್ನಾಟಕ ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ. ಕಾಂಗ್ರೆಸ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಪೆರಿಯಾದಲ್ಲಿ ನಿನ್ನೆ ನಡೆದ ಕೃಪೇಶ್ ಮತ್ತು ಶರತ್‌ಲಾಲ್‌ರ ಏಳನೇ ವರ್ಷದ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡು …

ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್‌ರಿಗೆ ಸೋಲಿನ ಭೀತಿ- ಎಂ.ಎಲ್. ಅಶ್ವಿನಿ

ಕಾಸರಗೋಡು: ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್‌ರಿಗೆ ಮುಂದಿನ ಚುನಾವಣೆಯಲ್ಲಿ ಸೋಲಬಹುದೆಂಬ ಭೀತಿ ಉಂಟಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆರೋಪಿಸಿದ್ದಾರೆ. ಬಿಜೆಪಿ ಜಿಲ್ಲಾ ಸಮಿತಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿ ಯಲ್ಲಿ ಅವರು ಮಾತನಾಡುತ್ತಿದ್ದರು. ಎಕೆಎಂ ಅಶ್ರಫ್ ಸೋಲನ್ನು ಖಚಿತಪಡಿಸಿದುದರಿಂದ ಬಿಜೆಪಿ ವಿರುದ್ಧ ಸುಳ್ಳು ಆರೋಪಗಳನ್ನು ಪ್ರಚಾರ ಮಾಡುತ್ತಿದ್ದಾರೆ. ಸೋಲಿನ ಭೀತಿಯಲ್ಲಿ ರುವ ಅವರು ದೊಡ್ಡ ನಾಟಕಗಳನ್ನು ಆಡತೊಡಗಿದ್ದಾರೆ. ಟೋಲ್ ಬೂತ್ ನಲ್ಲಿ ನಡೆಸಿದ ನಾಟಕಗಳೆಲ್ಲ ವಿಫಲ ಗೊಂಡಿದೆ. ಮಂಜೇಶ್ವರ ಮಂಡಲದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು …

ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್ ವಠಾರದಲ್ಲಿ ಕಾವೇರಿ ನರ್ಸರಿ ಆರಂಭ

ಸೀತಾಂಗೋಳಿ: ಎಡನಾಡು ಕಣ್ಣೂರು ಸೇವಾ ಸಹಕಾರಿ ಬ್ಯಾಂಕ್‌ನ ಅಂಗಸಂಸ್ಥೆ ಕಾವೇರಿ ನರ್ಸರಿಯನ್ನು ಬ್ಯಾಂಕ್‌ನ ವಠಾರದಲ್ಲಿ  ಉದ್ಘಾಟಿಸ ಲಾಯಿತು. ವಿವಿಧ ರೀತಿಯ ಅಡಿಕೆ, ತೆಂಗು, ಹಣ್ಣಿನ ಗಿಡಗಳು, ವಾರದ ಎಲ್ಲಾ ದಿನಗಳಲ್ಲಿ ಲಭಿಸಲಿದೆ. ಸಹಕಾರಿ ಇಲಾಖೆಯ ಸಹಾಯಕ ರಿಜಿಸ್ಟ್ರಾರ್ ರವೀಂದ್ರನ್ ಮಂಜೇಶ್ವರ ಉದ್ಘಾಟಿಸಿದರು. ಬ್ಯಾಂಕ್‌ನ ಅಧ್ಯಕ್ಷ ಶ್ಯಾಮರಾಜ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದರು. ಕ್ಯಾಂಪ್ಕೋ ಉಪಾಧ್ಯಕ್ಷ ಪದ್ಮರಾಜ ಪಟ್ಟಾಜೆ ಮುಖ್ಯ ಅತಿಥಿಯಾಗಿದ್ದರು. ಎಡನಾಡು ಕ್ಷೀರೋತ್ಪಾದಕ ಸಹಕಾರ ಸಂಘದ ಅಧ್ಯಕ್ಷ ಎಸ್.ಎನ್.ರಾವ್ ಮನ್ನಿಪ್ಪಾಡಿ, ವಾರ್ಡ್ ಸದಸ್ಯೆ ಲಕ್ಷ್ಮಿ ವಿ ಭಟ್ ಉಪಸ್ಥಿತರಿದ್ದರು. …

ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಪ್ರತಿಷ್ಠಾ ವರ್ಧಂತ್ಯುತ್ಸವ, ನಿಧಿ ಸಮರ್ಪಣೆ

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ವೇದಮಾತೆ ಶ್ರೀ ಗಾಯತ್ರಿ ದೇವಿ ಹಾಗೂ ಭಗವಾನ್ ಶ್ರೀ ನಿತ್ಯಾನಂದ ಗುರುದೇವರ ಪ್ರತಿಷ್ಟಾ ವರ್ಧಂತ್ಯುತ್ಸವ ನವ ಚಂಡಿಕಾಯಾಗ , ಗಾಯತ್ರೀ ದೇವಿಯ ನೂತನ ಗರ್ಭಗೃಹಕ್ಕೆ ನಿಧಿ ಸಮರ್ಪಣೆ ಹಾಗೂ 20ನೇ ವರ್ಷದ ಅಖಂಡ ಭಜನಾ ಸಪ್ತಾಹ ಫೆ.22ರಂದು ನಡೆಯಲಿದೆ. ಪ್ರಾತಕಾಲ 7ರಿಂದ ಪ್ರಾರ್ಥನೆ, ಪುಣ್ಯಾಹ, ಗಣಯಾಗ, ವಿವಿಧ ವೈಧಿಕ ಕಾರ್ಯಕ್ರಮಗಳು, 7.30ಕ್ಕೆ ಚಂಡಿಕಾ ಯಾಗ ಪ್ರಾರಂಭ, ಪೂರ್ವಹ್ನ 10.30ಕ್ಕೆ ಪೂರ್ಣಾಹುತಿ, 11ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಯೋಗಾನಂದ …

ತೂಮಿನಾಡು ದೈವಸ್ಥಾನ ಬ್ರಹ್ಮಕಲಶೋತ್ಸವ ಆಮಂತ್ರಣ ಬಿಡುಗಡೆ

ಮಂಜೇಶ್ವರ: ಕುಂಜತ್ತೂರು ತೂಮಿನಾಡು ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ಬ್ರಹ್ಮಶ್ರೀ ಮುಗೇರ, ಮಹಾಕಾಳಿ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮತ್ತು ನೇಮೋತ್ಸವ ಎಪ್ರಿಲ್ 2ರಿಂದ 6ರ ತನಕ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ದೈವಸ್ಥಾನದಲ್ಲಿ ನಡೆಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಶಿವಕೃಪ ಕುಂಜತ್ತೂರು ಅಧ್ಯಕ್ಷತೆ ವಹಿಸಿದರು.ಕಾರ್ಯಾಧ್ಯಕ್ಷ ಮೋಹನ್ ಶೆಟ್ಟಿ ತೂಮಿನಾಡು, ಪ್ರಧಾನ ಸಂಚಾಲಕ ಹರೀಶ್ ಶೆಟ್ಟಿ ಮಾಡ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ, ಕೆ.ಕಿಟ್ಟ, ಸದಾಶಿವ ಕಣ್ವತೀರ್ಥ, ಈಶ್ವರ ಮಾಸ್ತರ್ ಕಿದೂರು ಮೊದಲಾದವರು …

ಶಬರಿಮಲೆಗೆ ಯುವತಿಯರ ಪ್ರವೇಶನಿಲುವು ಬದಲಾವಣೆಯತ್ತ ರಾಜ್ಯ ಸರಕಾರ

ನವದೆಹಲಿ: ಶಬರಿಮಲೆ ದೇವ ಸ್ಥಾನಕ್ಕೆ ಯುವತಿಯ ಪ್ರವೇಶಕ್ಕೆ ಅನುಕೂಲಕರವಾಗಿ  2018ರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿರುವ  ಅರ್ಜಿಗಳ ಮೇಲಿನ ವಿಚಾರಣೆಯನ್ನು ಮುಖ್ಯ ನ್ಯಾಯ ಮೂರ್ತಿ ಸೂರ್ಯಕಾಂತ್ ನೇತೃತ್ವದ ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀ ಶರ ಪೀಠ ಎಪ್ರಿಲ್ 7ರಂದು  ಕೈಗೆತ್ತ ಲಿರುವಂತೆಯೆ   ಕೇರಳ ಸರಕಾರ ಆಸ್ತಿಕರ ಜತೆಗೆ ನಿಲ್ಲಲಿದೆ ಎಂದು  ರಾಜ್ಯದ ಕಾನೂನು ಸಚಿವ ಪಿ. ರಾಜೀವ್ ಹೇಳಿದ್ದಾರೆ. ಆ ಮೂಲಕ ಎಡರಂಗ ಸರಕಾರ ಯುವತಿಯರಿಗೆ ಶಬರಿಮಲೆ ಪ್ರವೇಶ ವಿಷಯದಲ್ಲಿ ಈ ಹಿಂದೆ ಹೊಂದಿದ್ದ್ದ …

ಶಬರಿಮಲೆ ದೇಗುಲದಿಂದ ಕದ್ದು ಸಾಗಿಸಿದ್ದು 1.7 ಕಿಲೋ ಚಿನ್ನ

ತಿರುವನಂತಪುರ: ಶಬರಿಮಲೆ ದೇಗುಲದ  ಗರ್ಭಗುಡಿಯ ಬಾಗಿಲು ಹಾಗೂ ದ್ವಾರಪಾಲಕ ಮೂರ್ತಿಗಳ ಕವಚ ಇತ್ಯಾದಿ ಗಳಿಂದಾಗಿ ಒಟ್ಟಾರೆಯಾಗಿ 1.7 ಕಿಲೋ ಗ್ರಾಂ ಚಿನ್ನ ಕದ್ದು  ಸಾಗಿಸಲಾಗಿದೆಯೆಂದು ಈ ಪ್ರಕರಣದ ತನಿಖೆ ನಡೆಸುವ ವಿಶೇಷ  ತನಿಖಾ ತಂಡ ತಿಳಿಸಿದೆ.   ವಿಎಸ್‌ಎಸ್‌ಸಿಯಲ್ಲಿ ನಡೆಸಲಾದ ವೈಜ್ಞಾನಿಕ ಪರೀಕ್ಷೆಯ ವರದಿಯ ಆಧಾರದಲ್ಲಿ ಈ ಲೆಕ್ಕಾಚಾರ ನೀಡಲಾಗಿದೆ. ಆದರೆ ಇದು ಅಂತಿಮ ಲೆಕ್ಕಾಚಾರವಲ್ಲವೆಂದೂ ಶ್ರೀ ಕ್ಷೇತ್ರದಿಂದ ಅದೆಷ್ಟು ಪ್ರಮಾಣದ ಚಿನ್ನ ಕದ್ದು ಸಾಗಿಸಲಾಗಿದೆಯೆಂಬುವುದರ  ಬಗ್ಗೆ  ಜಂಶದ್‌ಪುರ್‌ನಲ್ಲಿರುವ ನೇಶನಲ್ ಮೆಟಲಜಿಕಲ್  ಲ್ಯಾಬ್‌ನಲ್ಲಿ    ಪರೀಕ್ಷಿಸಲಾಗುತ್ತಿದ್ದು ಅದರ ವರದಿ ಕೈಸೇರಿದ …

ಮತದಾರರ ಪಟ್ಟಿ ನವೀಕರಣೆ: ಸುಳ್ಳು ದೂರು ನೀಡುವವರ ವಿರುದ್ಧ ಕೇಸು-ಜಿಲ್ಲಾಧಿಕಾರಿ

ಕಾಸರಗೋಡು:  ಮತದಾರರ ಪಟ್ಟಿಯ ಕುರಿತು ಉದ್ದೇಶಪೂರ್ವಕ ವಾಗಿ ತಪ್ಪಾದ ಮಾಹಿತಿಗಳನ್ನು ಸೇರಿಸಿ ದೂರು ನೀಡುವುದು ಕಾನೂನುಪ್ರಕಾರ ಶಿಕ್ಷಾರ್ಹವಾದ ಅಪರಾಧವಾಗಿದೆ ಯೆಂದು ಪರಿಗಣಿಸಿ ದೂರುಗಾರನ ವಿರುದ್ಧ ಕೇಸು ದಾಖಲಿಸಿ ಕಾನೂನುಕ್ರಮ ಕೈಗೊಳ್ಳಲಾಗುವುದೆಂದು ಚುನಾವಣಾ ರಿಜಿಸ್ಟ್ರೇಶನ್ ಆಫೀಸರ್   ತಿಳಿಸಿದ್ದಾರೆ. ಆರೋಪ ಸಾಬೀತುಗೊಂಡಲ್ಲಿ ಒಂದು ವರ್ಷ ವರೆಗೆ ಸಜೆ, ದಂಡ ಅಥವಾ ಅವೆರಡೂ ಸೇರಿ ಶಿಕ್ಷೆ ಲಭಿಸುವು ದೆಂದು ಅಧಿಕೃತ ವರದಿಯಲ್ಲಿ ತಿಳಿಸಲಾಗಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಪೈವಳಿಕೆ ಪ್ರದೇಶಕ್ಕೆ ಸಂಬಂಧಪಟ್ಟು  ಭಾರತೀಯ ಪೌರತ್ವವಿಲ್ಲ ಎಂದು ಆರೋಪಿಸಿ ಮುಹಮ್ಮದ್ ಎಂಬ ಮತ …