ನೆಕ್ರಾಜೆ ಸಹಕಾರಿ ಬ್ಯಾಂಕ್ ನಿರ್ದೇಶಕಿ ಮೆಹಾರುನ್ನೀಸ ನಿಧನ

ನೆಕ್ರಾಜೆ: ನೆಕ್ರಾಜೆ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕಿ ಪೈಕ ನಿವಾಸಿ ಮೆಹಾರುನ್ನೀಸ (44) ನಿಧನ ಹೊಂದಿದರು. ಹೃದಯ ಸಂಬಂಧವಾದ ಅಸೌಖ್ಯದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು. ಮೈತ್ರಿ ಪೈಕ ಮಹಿಳಾ ವೇದಿಯ ಸಂಚಾಲಕಿಯಾಗಿಯೂ, ಸಾರ್ವಜನಿಕ ರಂಗದಲ್ಲಿ ಸಕ್ರಿಯರಾಗಿದ್ದರು. ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತೆಯಾಗಿದ್ದಾರೆ. ಮೃತರು ಪತಿ ಚೆಂಗಳ ಪಂಚಾಯತ್ ೭ನೇ ವಾರ್ಡ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಜೆ.ಪಿ. ಬಷೀರ್, ಮಕ್ಕಳಾದ ಮುಹಮ್ಮದ್ ಸಿನಾನ್ , ಅನಾನ್ ಅಬ್ಬಾಸ್, ಆಯಿಷ ಹಾದಿಯ, ಸಹೋದರರಾದ ನಾಸರ್, …

ಎಂಡಿಎಂಎ ಪ್ರಕರಣ ಮಧ್ಯವರ್ತಿ ಉಪ್ಪಳ ನಿವಾಸಿ ಸೆರೆ

ಮಂಜೇಶ್ವರ: ಕಾರಿನಲ್ಲಿ ಬೆಂಗಳೂರಿಗೆ ಮಾದಕ ವಸ್ತುವಾದ 405 ಗ್ರಾಂ ಎಂಡಿ ಎಂಎ ಸಾಗಿಸಿದ ಪ್ರಕರಣದಲ್ಲಿ ಮಧ್ಯವರ್ತಿಯಾಗಿ ಕಾರ್ಯವೆಸಗಿದ ಆರೋಪದಂತೆ ಉಪ್ಪಳ ನಿವಾಸಿಯನ್ನು ಪೆರಿಂದಲ್‌ಮಣ್ಣ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುಮೇಶ್ ಸುಧಾಕರನ್ ನೇತೃತ್ವದ ಪೊಲೀಸರು ಬಂಧಿಸಿದ್ದಾರೆ. ಉಪ್ಪಳ ಮಣ್ಣಂಗುಳಿ ನಿಜಾಮ್ ಮಂಜಿಲ್‌ನ ಸಯ್ಯಿದ್ ಮುಹಮ್ಮದ್ ನವಾಜ್ (33) ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ದಿನಗಳ ಹಿಂದೆ ಕೆಲವರನ್ನು ಬಂಧಿಸಿದ್ದರು. ಈಗ ಬಂಧಿತನಾದವನ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ  ಮಾದಕದ್ರವ್ಯ ಪ್ರಕರಣ ಹಾಗೂ ಹಲ್ಲೆ ಪ್ರಕರಣಗಳಿವೆ. ಮಾತ್ರವಲ್ಲ ಕಾಪಾ …

ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕ್  ಓಣಂ ಮಾರುಕಟ್ಟೆಗೆ ಚಾಲನೆ

ಮಂಜೇಶ್ವರ: ಕನ್ಸ್ಯೂಮರ್ ಫೆಡ್ ಹಾಗೂ ಮಂಜೇಶ್ವರ ಸಹಕಾರಿ ಬ್ಯಾಂಕಿನ ಸಂಯುಕ್ತಾಶ್ರಯದಲ್ಲಿ ಮಂಜೇಶ್ವರದ ಎಂ.ಕೆ. ಫಾತಿಮಾ ಕಾಂಪ್ಲೆಕ್ಸ್ನಲ್ಲಿ ಓಣಂ ಸಹಕಾರಿ ಮಾರುಕಟ್ಟೆಗೆ ಚಾಲನೆ ದೊರಕಿತು. ನಿನ್ನೆ ಬೆಳಿಗ್ಗೆ ಬ್ಯಾಂಕ್ ಅಧ್ಯಕ್ಷ ಎಸ್. ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಬ್ಯಾಂಕ್‌ನ ಹಿರಿಯ ಗ್ರಾಹಕ ಹರೀಶ್ ಭಟ್‌ರಿಗೆ ಸಾಮಗ್ರಿ ವಿತರಿಸುವ ಮೂಲಕ ಮಂಜೇಶ್ವರ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಚಾಲನೆ ನೀಡಿದರು. ಬ್ಯಾಂಕ್ ಅಧ್ಯಕ್ಷ ಎಸ್. ರಾಮಚಂದ್ರ ಅವರು ಸಹಕಾರಿ ಸಂಸ್ಥೆಗಳು ಯಾವಾಗಲೂ ಗ್ರಾಹಕರ ಮತ್ತು ಸಮಾಜದ ಹಿತಾಸಕ್ತಿಗೆ ಬದ್ಧವಾಗಿ ಕಾರ್ಯನಿರ್ವಹಿಸುತ್ತವೆ. ಹಬ್ಬದ …

ಶಾಸಕರಿಂದ ಆರೋಗ್ಯ ಸಚಿವರ ಭೇಟಿ: ಕಾಸರಗೋಡು ಮೆಡಿಕಲ್ ಕಾಲೇಜ್ ಸಂಬಂಧ ಸಭೆ 9ರಂದು

ಕಾಸರಗೋಡು: ಮೆಡಿಕಲ್ ಕಾಲೇಜ್‌ನ ನಿರ್ಮಾಣ ಚಟುವಟಿಕೆಗಳನ್ನು ಸಮಯಾನುಸಾರ ಪೂರ್ತಿಗೊಳಿಸಲು, ಜಿಲ್ಲೆಯ ಆರೋಗ್ಯ ವಲಯ ಎದುರಿಸುತ್ತಿರುವ ತುರ್ತು ಸಮಸ್ಯೆಗಳಿಗೆ ಪರಿಹಾರ ಕಾಣಲು ಸೆಪ್ಟಂಬರ್ 9ರಂದು ತಿರುವನಂತಪುರದಲ್ಲಿ ಆರೋಗ್ಯ ಸಚಿವ ಕೆ. ಮುರಳೀಧರನ್‌ರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಭೆ ನಡೆಯಲಿದೆ. ವಿಷಯದಲ್ಲಿ ತುರ್ತು ಮಧ್ಯಪ್ರವೇಶ ಮಾಡಬೇಕೆಂದು ಶಾಸಕ ಕಲ್ಲಟ್ರ ಮಾಹಿನ್‌ರ ಮನವಿ ಹಿನ್ನೆಲೆಯಲ್ಲಿ ಸಚಿವರು ಈ ನಿರ್ದೇಶ ನೀಡಿದ್ದಾರೆ. ಮೆಡಿಕಲ್ ಕಾಲೇಜ್‌ನ ಬಾಕಿ ಉಳಿದಿರುವ ನಿರ್ಮಾಣ ಕಾಮಗಾರಿಗಳನ್ನು ವೇಗದಲ್ಲಿ ಪೂರ್ತಿಗೊಳಿಸುವುದು, ಆಸ್ಪತ್ರೆಯ ಪೂರ್ಣ ಮಟ್ಟದ ಚಟುವಟಿಕೆಗಳನ್ನು ಆದಷ್ಟು ಬೇಗ ಆರಂಭಿಸುವುದು, ಜಿಲ್ಲೆಯ …

ಸೋಂಕಾಲು ಜಂಕ್ಷನ್ ಬಸ್ ತಂಗುದಾಣ ಬಳಿ ಅಪಾಯ ಭೀತಿಯೊಡ್ಡುವ ಒಣಗಿದ ಮರ: ತೆರವಿಗೆ ಒತ್ತಾಯ

ಉಪ್ಪಳ: ಸೋಂಕಾಲು ಜಂಕ್ಷನ್‌ನಲ್ಲಿ ಬಾಯಾರು ಭಾಗಕ್ಕೆ ತೆರಳುವ ಬಸ್ ತಂಗುದಾಣ ಪರಿಸರದಲ್ಲಿ ಒಣಗಿದ ಮರವೊಂದು ಯಾವುದೇ ಕ್ಷಣದಲ್ಲಿ ಮುರಿದು ಬೀಳುವ ಆತಂಕ ಕಾಡುತ್ತಿದೆ. ಒಂದು ತಿಂಗಳಿAದ ಮರ ಒಣಗಿ ಶೋಚನೀಯಾವಸ್ಥೆಯಲ್ಲಿ ಕಂಡು ಬರುತ್ತಿದ್ದು, ಮಳೆ, ಗಾಳಿಗೆ ಮುರಿದು ಬೀಳುವ ಸಾಧ್ಯತೆ ಇದೆ. ಇಲ್ಲಿನ ಬಸ್ ತಂಗುದಾಣದಲ್ಲಿ ನಿತ್ಯ ಪ್ರಯಾಣಿಕರು ಬಸ್‌ಗಾಗಿ ಕಾಯುತ್ತಿದ್ದು, ಅಲ್ಲದೆ ಗೂಡಂಗಡಿ, ದ್ವಿಚಕ್ರ ವಾಹನಗಳನ್ನು ನಿಲುಗಡೆ ಗೊಳಿಸಲಾಗುತ್ತಿದೆ. ಈ ಪರಿಸರ ಜನನಿಬಿಡ ಪ್ರದೇಶವಾಗಿದ್ದು, ಮರ ಮುರಿದು ಬಿದ್ದಲ್ಲಿ ಭಾರೀ ಅಪಾಯಕ್ಕೆ ಕಾರಣವಾಗಬಹುದೆಂದು ಸ್ಥಳೀಯರು ತಿಳಿಸಿದ್ದಾರೆ. …

ಏಮ್ಸ್ ಆಸ್ಪತ್ರೆಗೆ ಸೂಕ್ತವಾದ 274.69 ಎಕ್ರೆ ಸ್ಥಳ ಸರಕಾರಕ್ಕೆ ಜಿಲ್ಲಾಧಿಕಾರಿ ಸಮಗ್ರ ಪ್ರಸ್ತಾವನೆ ಸಲ್ಲಿಕೆ

ಕಾಸರಗೋಡು: ಜಿಲ್ಲೆಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ (ಎಮ್ಸ್) ಆಸ್ಪತ್ರೆ ಸ್ಥಾಪಿಸಲು ಪೆರಿಯಾದಲ್ಲಿರುವ  ಪ್ಲಾಂಟೇಶನ್ ಕಾರ್ಪೋರೇಶನ್ ಆಫ್ ಕೇರಳ (ಪಿಸಿಕೆ) ಸೂಕ್ತ ಸ್ಥಳವೆಂದು ಸ್ಪಷ್ಟಪಡಿಸಿ ಕಾಸರಗೋಡು ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್  ರಾಜ್ಯ ಆರೋಗ್ಯ ಇಲಾಖೆಯ ಕಾರ್ಯದರ್ಶಿಗೆ  ಸಮಗ್ರ ಪ್ರಸ್ತಾಪನಾ ವರದಿ ಸಲ್ಲಿಸಿದ್ದಾರೆ. ಪೆರಿಯಾದಲ್ಲಿರುವ ತೋಟಗಾರಿಕಾ ನಿಗಮಕ್ಕೆ  ಸೇರಿದ 274.69 ಎಕ್ರೆ ಪ್ರದೇಶ ಏಮ್ಸ್ ಆಸ್ಪತ್ರೆ ಸ್ಥಾಪಿಸಲು ಸೂಕ್ತ ಸ್ಥಳವಾಗಿದೆ. ಮಾತ್ರವಲ್ಲ ಸಂಪರ್ಕ ರಸ್ತೆ, ಅಗತ್ಯದಷ್ಟು ಜಲವಿದ್ಯುತ್ ಹಾಗೂ ಇತರ ಮೂಲ ಸೌಕರ್ಯಗಳು ಈ ಪ್ರದೇಶದಲ್ಲಿವೆ. …

ಟಿ.ವಿ ಕೆಟ್ಟುಹೋದ ವ್ಯಥೆ: ಗೃಹಿಣಿ ದೇಹಕ್ಕೆ ಕಿಚ್ಚಿಟ್ಟು ಆತ್ಮಹತ್ಯೆ

ಉಪ್ಪಳ: ಮನೆಯ ಟಿ.ವಿ ಕೆಟ್ಟುಹೋದ ಚಿಂತೆಯಲ್ಲಿದ್ದ  ಗೃಹಿಣಿ ದೇಹಕ್ಕೆ ಸೀಮೆ ಎಣ್ಣೆ ಸುರಿದು ಕಿಚ್ಚಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.  ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ  ಕಾಶಿಮಠ ಗುಡ್ಡೆ ನಿವಾಸಿ ದಿ| ಯೋಗೀಶ್ ಪ್ರಭು ಎಂಬವರ ಪತ್ನಿ ಸಾವಿತ್ರಿ ಪ್ರಭು (65) ಸಾವಿಗೀಡಾದ ಮಹಿಳೆ.  ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಸಾವಿತ್ರಿ ಊಟಮಾಡಿ ನಿದ್ರಿಸಿದ್ದರು. ಇಂದು ಬೆಳಿಗ್ಗೆ ಏಳು ಗಂಟೆಗೆ  ಮಗ ಗುರುಪ್ರಸಾದ್ ಪ್ರಭು ಎದ್ದು ಕೊಠಡಿಯಿಂದ ಹೊರಗೆ ಬಂದಾಗ ಅಡುಗೆ ಕೋಣೆಯಲ್ಲಿ  …

ಪೊಲೀಸರಿಂದ ಸಿನಿಮಾ ಸೆಲ್ ಕಾರ್ಯಾಚರಣೆ: 3.355 ಗ್ರಾಂ ಎಂಡಿಎಂಎ ಸಹಿತ ಮೂವರ ಸೆರೆ, ಕಾರು ವಶ

ಕುಂಬಳೆ:  ಕುಂಬಳೆ ಪೊಲೀಸರು   ಸಿನಿಮೀಯ ಸ್ಟೈಲ್ ರೀತಿಯಲ್ಲಿ ನಡೆ ಸಿದ ಕಾರ್ಯಾಚ ರಣೆಯಲ್ಲಿ ಮಾದಕ ವಸ್ತುವಾದ 3.355 ಗ್ರಾಂ ಎಂಡಿಎಂಎ ಸಹಿತ ಮೂವರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಲ್ಪಾಡಿ ಅಡ್ಕ ಹೌಸ್  ನಿವಾಸಿ ಅಬ್ದುಲ್ ಅಸೀಸ್ (42), ನೆಕ್ರಾಜೆ ಆಲಂಗೋಲ್ ಹೌಸ್ ನಿವಾಸಿ ಅಬೂಬಕ್ಕರ್ ಕೆ.ವಿ (32), ಮೊಗ್ರಾಲ್‌ನ ಮುಸ್ತಫ (44) ಬಂಧಿತ ಆರೋಪಿಗಳಾಗಿದ್ದಾರೆ.  ಕುಂಬಳೆ ಪೊಲೀಸ್ ಠಾಣೆ ಎಸ್‌ಐ ಅನೂಪ್  ನೇತೃತ್ವದ ಪೊಲೀಸ್ ತಂಡ ನಿನ್ನೆ ರಾತ್ರಿ ಮಂಗಲ್ಪಾಡಿ ಅಡ್ಕ ರಸ್ತೆ ರೋಯಲ್ ಸ್ಟ್ರೀಟ್‌ನಲ್ಲಿ ಗಸ್ತು …

ಆನ್‌ಲೈನ್ ವಂಚನೆ: 17 ಲಕ್ಷ ಕಳೆದುಕೊಂಡ ವೃದ್ದ

ಕಾಸರಗೋಡು: ಅಮಿತ ಲಾಭ ನೀಡುವುದಾಗಿ ನಂಬಿಸಿ ಆನ್‌ಲೈನ್ ಮೂಲಕ 17.31 ಲಕ್ಷ ರೂ. ಪಡೆದು ವಂಚಿಸಿದ ಬಗ್ಗೆ ವೃದ್ದರೊಬ್ಬರು ನೀಡಿದ ದೂರಿನಂತೆ ಕಾಸರಗೋಡು ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ. ಪಡನ್ನ ಕಡಪ್ಪುರ ನಿವಾಸಿ ವೃದ್ದ ನೀಡಿದ ದೂರಿನಂತೆ ಈ ಪ್ರಕರಣ ದಾಖಲಿಸಲಾಗಿದೆ. ವಂಚನೆಗಾರರು ಇನ್‌ಸ್ಟಾ ಗ್ರಾಮ್, ವಾಟ್ಸಪ್ ಇತ್ಯಾದಿ ಸಾಮಾಜಿಕ ಮಾಧ್ಯಮಗಳ ಮೂಲಕ ನನ್ನನ್ನು ಪರಿಚಯ ಗೊಂಡು ಶೇರ್ ಮಾರ್ಕೆಟ್‌ನಲ್ಲಿ ಹಣ ಹೂಡಿದ್ದಲ್ಲಿ ಅಮಿತ ಲಾಭ ನೀಡುವುದಾಗಿ ನಂಬಿಸಿ ಆ ಬಗ್ಗೆ ಆನ್‌ಲೈನ್ ಮೂಲಕ ತರಗತಿಯನ್ನು …

ಮನೆಯ ಫ್ಯೂಸ್ ಕಳಚಿದ ವಿದ್ಯುನ್ಮಂಡಳಿ : ರಾತ್ರಿ ಮನೆಯೊಳಗೆ ಮಹಿಳೆಗೆ ಹಾವು ಕಡಿತ

ಕಾಸರಗೋಡು:  ಸಕಾಲದಲ್ಲಿ ವಿದ್ಯುತ್ ಬಿಲ್ ಪಾವತಿಸದ ಹೆಸರಲ್ಲಿ ವಿದ್ಯುನ್ಮಂಡಳಿಯ ಸಿಬ್ಬಂದಿಗಳು ಮನೆಯ ಫ್ಯೂಸ್ ತೆಗೆದು ವಿದ್ಯುತ್ ಸಂಪರ್ಕ ವಿಚ್ಛೇಧಿಸಿದ್ದು, ಅದೇ ದಿನ ರಾತ್ರಿ ಮಹಿಳೆಗೆ ಮನೆಯೊಳಗೆ ವಿಷಪೂರಿತ ಹಾವು ಕಚ್ಚಿದ ಘಟನೆ ನಡೆದಿದೆ. ಮೇಲ್ಪರಂಬ ನಿವಾಸಿಯಾದ ೪೩ರ ಹರೆಯದ ಮಹಿಳೆಗೆ ಹಾವು ಕಚ್ಚಿದ್ದು, ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇವರು ಕಳೆದ ಆರು ತಿಂಗಳಿಂದ ಮೇಲ್ಪರಂಬದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದಾರೆ.  ಇವರಿಗೆ ದಿನಗಳ ಹಿಂದೆ ವಿದ್ಯುತ್ ಬಿಲ್ ನೀಡಲಾಗಿತ್ತು. ಆದರೆ ಮೊತ್ತ ಹೆಚ್ಚಾಗಿದ್ದುದರಿಂದ  ಅದನ್ನು ಸಕಾಲದಲ್ಲಿ …