ಮನೆಯ ಎರಡಂತಸ್ತಿನಿಂದ ಬಿದ್ದು ಪೈಂಟಿಂಗ್ ಕಾರ್ಮಿಕ ಮೃತ್ಯು
ಕುಂಬಳೆ: ಪೈಂಟಿಂಗ್ ಕೆಲಸದ ವೇಳೆ ಮನೆಯ ಎರಡಂತಸ್ತಿನಿಂದ ಬಿದ್ದ ಕಾರ್ಮಿಕ ಮೃತಪಟ್ಟ ಘಟನೆ ನಡೆದಿದೆ. ಉತ್ತರಪ್ರದೇಶ ನಿವಾಸಿ ಶಂಸಾದ್ (30) ಮೃತಪಟ್ಟ ದುರ್ದೈವಿ. ನಿನ್ನೆ ಮಧ್ಯಾಹ್ನ ಪೆರ್ಮುದೆಯಲ್ಲಿ ದುರ್ಘಟನೆ ಸಂಭವಿಸಿದೆ. ಪೆರ್ಮುದೆಯ ರಾಮಚಂದ್ರ ಎಂಬವರ ಮನೆಯ ಎರಡಂತಸ್ತಿನಲ್ಲಿ ಪೈಂಟಿಂಗ್ ನಡೆಸುತ್ತಿದ್ದಂತೆ ಶಂಸಾದ್ ಕಾಲು ಜಾರಿ ಕೆಳಕ್ಕೆ ಬಿದ್ದಿದ್ದರು. ಅಲ್ಲಿದ್ದವರು ಕೂಡಲೇ ಮಂಗಲ್ಪಾಡಿ ತಾಲೂಕು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಘಟನೆ ಬಗ್ಗೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.