ನಿಡ್ಡಂಬಾಡಿ ರಾಮ ನಿಧನ
ಕುಂಬಳೆ: ಕಳತ್ತೂರು ಇಚ್ಲಂಪಾಡಿ ಶಾಲಾ ಪರಿಸರ ನಿವಾಸಿ ನಿಡ್ಡಂಬಾಡಿ ರಾಮ (57) ನಿಧನ ಹೊಂದಿದರು. ಮತರು ಪತ್ನಿ ಜಯಂತಿ, ಮಕ್ಕಳಾದ ದೇವಿಕ, ಜಯಲಕ್ಷಮಿ, ಅಳಿಯ ಸುಧೀರ್, ಸಹೋದರಿ ಸುಶೀಲ, ಸಹೋದರ ಸೇಸಪ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಕುಂಬಳೆ: ಕಳತ್ತೂರು ಇಚ್ಲಂಪಾಡಿ ಶಾಲಾ ಪರಿಸರ ನಿವಾಸಿ ನಿಡ್ಡಂಬಾಡಿ ರಾಮ (57) ನಿಧನ ಹೊಂದಿದರು. ಮತರು ಪತ್ನಿ ಜಯಂತಿ, ಮಕ್ಕಳಾದ ದೇವಿಕ, ಜಯಲಕ್ಷಮಿ, ಅಳಿಯ ಸುಧೀರ್, ಸಹೋದರಿ ಸುಶೀಲ, ಸಹೋದರ ಸೇಸಪ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ದೇಲಂಪಾಡಿ: ಮಯ್ಯಳ ನಿವಾಸಿ ನಾರಾಯಣ ಪೂಜಾರಿ (73) ನಿನ್ನೆ ನಿಧನಹೊಂದಿದರು. ಇವರು ಕೃಷಿಕನಾಗಿದ್ದರು. ಮೃತರು ಪತ್ನಿ ಸುಂದರಿ, ಮಕ್ಕಳಾದ ಭರತ್, ವಿಮಲ, ಅಶೋಕ, ಸಹೋದರ ಕುಶಲಪ್ಪ, ಅಳಿಯ ನಾಗೇಶ ಬಾಯಾರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಉಪ್ಪಳ: ಪ್ರತಾಪನಗರ ಪುಳಿಕುತ್ತಿ ನಿವಾಸಿ ದಿ.ಅಚ್ಚುತ್ತರ ಪತ್ನಿ ಯಶೋಧ [85] ಶುಕ್ರವಾರ ನಿಧನ ಹೊಂದಿದರು. ಮೃತರ ಮಕ್ಕಳಾದ ರಮೇಶ ಕಾಸರಗೋಡು, ಪ್ರಭಾಕರ ಮುಂಬೈ, ಸೊಸೆಯಂದಿರಾದ ವೃಂದ, ಲತಾ, ಅಳಿಯ ಭಾಸ್ಕರ ಕಾಸರಗೋಡು, ಸಹೋದರ ಶ್ರೀನಿವಾಸ ಪ್ರತಾಪನಗರ, ಸಹೋದರಿ ಸುಲೋಚನ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಪುತ್ರಿ ಕಾರ್ತಾ್ಯಯಿನಿ, ಸಹೋದರರಾದ ದಾಮೋದರ ವೈದ್ಯರ್,ಕುಂಞರಾಮ ವೈದ್ಯರ್, ನಾರಾಯಣ ಈ ಹಿಂದೆ ನಿಧನರಾಗಿದ್ದಾರೆ. ನಿಧನಕ್ಕೆ ಪ್ರತಾಪನಗರ ಶ್ರೀ ಗೌರೀ ಗಣೇಶ ಭಜನಾ ಮಂದಿರದ ಆಡಳಿತ ಸಮಿತಿ, ಉತ್ಸವ ಸಮಿತಿ, ಭಜನಾ …
ಪೈವಳಿಕೆ: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಹಾಗೂ ದೇಶದ ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಫೆಡರಲಿಸಂನ ಮೌಲ್ಯಗಳನ್ನು ಸಂರಕ್ಷಿಸುವ ಉದ್ದೇಶದಿಂದ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಸೆಪ್ಟೆಂಬರ್ ೧ರಂದು ನಡೆಸಲಿರುವ ‘ದೆಹಲಿ ಚಲೋ’ ಕಾರ್ಯಕ್ರಮದ ಅಂಗವಾಗಿ ಕಾಲ್ನಡೆಗೆ ಪ್ರಚಾರ ಜಾಥಾ ನಡೆಯಿತು. ಸಿಪಿಐ ಪೈವಳಿಕೆ ಲೋಕಲ್ ಸಮಿತಿ ನೇತೃತ್ವದಲ್ಲಿ ನಿನ್ನೆ ಬಾಯಾರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದರು.ಶಾಸಕ ಗೋವಿಂದನ್ ಪಳ್ಳಿಕ್ಕಾಪ್ಪಿಲ್ ಉದ್ಘಾಟಿಸಿದರು. ಸಿಪಿಐ ಮಂಡಲ ಸಮಿತಿ ಸದಸ್ಯ ಚಣಿಯಾ ಕೊಮ್ಮಂಗಳ ಅಧ್ಯಕ್ಷತೆ ವಹಿಸಿದ್ದರು. …
Read more “ಸಿಪಿಐಯಿಂದ ದೆಹಲಿ ಚಲೋ::ಪೈವಳಿಕೆಯಲ್ಲಿ ಕಾಲ್ನಡೆ ಪ್ರಚಾರ ಜಾಥಾ”
ಕಾಸರಗೋಡು: ನಗರದ ಪ್ರಧಾನ ರಸ್ತೆಗಳಲ್ಲೊಂದಾದ ಕೆಪಿಆರ್ ರಾವ್ ರೋಡ್‌ನಲ್ಲಿ ಬೃಹತ್ ಹೊಂಡ ಪ್ರತ್ಯಕ್ಷಗೊಂಡು ಅಪಾಯವನ್ನು ಕೈಬೀಸಿ ಕರೆಯುತ್ತಿದೆ. ನಗರದ ಪ್ರಧಾನ ಅಂಚೆಕಚೇರಿ ಸಮೀಪದಲ್ಲೇ ಕೆಪಿಆರ್ ರಾವ್ ರಸ್ತೆಯಲ್ಲಿ ಈ ಹೊಂಡ ಸೃಷ್ಟಿಯಾಗಿದ್ದು, ದಿನಂಪ್ರತಿ ನೂರಾರು ವಾಹನಗಳು ಈ ರಸ್ತೆ ಮೂಲಕ ಸಂಚರಿಸುತ್ತಿವೆ. ದಿನದಿಂದ ದಿನಕ್ಕೆ ಹೊಂಡದ ಗಾತ್ರ ಬೆಳೆಯುತ್ತಿದ್ದು, ಹಲವು ವಾಹನಗಳು ಹೊಂಡದೊಳಗೆ ಬಿದ್ದು ಅಪಘಾತ ಸಂಭವಿಸಿರುವುದಾಗಿಯೂ ಹೇಳಲಾಗುತ್ತಿದೆ. ನಗರದ ಪ್ರಧಾನ ಭಾಗದಲ್ಲಿ ಕಂಡುಬರುವ ಈ ಹೊಂಡವನ್ನು ಮುಚ್ಚಲು ಇದುವರೆಗೂ ಯಾವುದೇ ಕ್ರಮ ಉಂಟಾಗಲಿಲ್ಲವೆಂದು ದೂರಲಾಗಿದೆ. ರಸ್ತೆಯಲ್ಲಿರುವ …
Read more “ಅಧಿಕಾರಿಗಳ ಕಣ್ಣಿಗೆ ಬೀಳದ ನಗರದ ಪ್ರಧಾನ ರಸ್ತೆಯ ಬೃಹತ್ ಹೊಂಡ: ಅಪಘಾತ ಭೀತಿಯಲ್ಲಿ ಸವಾರರು”
ಮುಳ್ಳೇರಿಯ: ನಾಪತ್ತೆಯಾಗಿದ್ದ ಯುವಕ ನೇಣುಬಿಗಿದು ಸಾವಿಗೀ ಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಬೆಳ್ಳೂರು ಪಂಚಾಯತ್ ವ್ಯಾಪ್ತಿಯ ಕುಳದಪಾರೆ ನಾಕೂರು ಎಂಬಲ್ಲಿನ ಕೊರಗಪ್ಪ ಎಂಬವರ ಪುತ್ರ ಸುನಿಲ್ (23) ಮೃತಪಟ್ಟ ಯುವಕ. ಕೂಲಿ ಕಾರ್ಮಿಕನಾಗಿದ್ದ ಸುನಿಲ್ ಬುಧವಾರ ಅಪರಾಹ್ನ ೩ ಗಂಟೆಗೆ ಮನೆಯಿಂದ ಹೊರಗೆ ತೆರಳಿದ್ದನು. ಅನಂತರ ಮನೆಗೆ ಬಂದಿರಲಿಲ್ಲ. ಈಬಗ್ಗೆ ನಿನ್ನೆ ಮನೆಯವರು ಆದೂರು ಪೊಲೀಸರಿಗೆ ದೂರು ನೀಡಿದ್ದರು. ಅನಂತರ ಮನೆಯವರು ನಡೆಸಿದ ಶೋಧ ವೇಳೆ ಮನೆ ಸಮೀಪದ ರಬ್ಬರ್ ತೋಟದಲ್ಲಿ ಸುನಿಲ್ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. …
Read more “ನಾಪತ್ತೆಯಾಗಿದ್ದ ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ”
ಕಲ್ಲಿಕೋಟೆ: ಅಪ್ರಾಪ್ತೆಯನ್ನು ಕೊಲೆಗೈದ ಬಳಿಕ ಮೃತದೇಹದ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಆರೋಪಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಕಲ್ಲಿಕೋಟೆ ಮಾಳಿಕಡವಿನ ಸ್ವಂತ ಗ್ಯಾರೇಜ್ ಹೊಂದಿರುವ ವೆಂಙಾರಿ ತಡಂಬಾಟ್ಟುತಾಳಂ ಪಿಸ್ ಗಾರ್ಡನ್‌ನ ವೈಶಾಖ್ (35) ಸಾವನ್ನಪ್ಪಿದ ವ್ಯಕ್ತಿ. ಈತ ತನ್ನ ಮನೆಯಲ್ಲಿ ನಿನ್ನೆ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ಬಳಿಕ ಆತನನ್ನು ಕಲ್ಲಿಕೋಟೆ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವನ್ನಪ್ಪಿದ್ದಾನೆ. ವಿವಾಹಿತನಾಗಿರುವ ಆರೋಪಿ ವೈಶಾಖ್ ಅಪ್ರಾಪ್ತೆಯೊಂದಿಗೆ ನಂಟು ಹೊಂದಿದ್ದನು. ಆ ಬಳಿಕ …
Read more “ಅಪ್ರಾಪ್ತೆಯನ್ನು ಕೊಲೆಗೈದು ಅತ್ಯಾಚಾರವೆಸಗಿದ ಆರೋಪಿ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ”
ಕಾಸರಗೋಡು: ಓಣಂ ಸ್ಪೆಷಲ್ ಡ್ರೈವ್‌ನಂಗವಾಗಿ ಅಬಕಾರಿ ಇಲಾಖೆ ನಡೆಸಿದ ದಾಳಿಯಲ್ಲಿ ಕಾರಿನಲ್ಲಿ ಸಾಗಿಸಲೆತ್ನಿಸಿದ ವಿದೇಶ ಮದ್ಯ ಹಾಗೂ ಬಿಯರ್ ವಶಪಡಿಸಲಾ ಗಿದೆ. ಈ ಪ್ರಕರಣದಲ್ಲಿ ಓರ್ವ ಸೆರೆಯಾಗಿದ್ದಾನೆ. ನಿನ್ನೆ ಅಪರಾಹ್ನ ೨.೩೦ರ ವೇಳೆಗೆ ಮೀಂಜ ಬೆಜ್ಜಂಗಳ ದಲ್ಲಿ ನಡೆದ ವಾಹನ ತಪಾಸಣೆ ಮಧ್ಯೆ ಮದ್ಯ ಸಾಗಾಟ ಪತ್ತೆಹಚ್ಚಲಾಗಿದೆ. ಮಂಜೇಶ್ವರ ಅಬಕಾರಿ ಚೆಕ್‌ಪೋಸ್ಟ್ ಸರ್ಕಲ್ ಇನ್ಸ್‌ಪೆಕ್ಟರ್ ಜಿ. ಕೃಷ್ಣ ಕುಮಾರ್‌ರ ನೇತೃತ್ವದಲ್ಲಿನ ತಂಡ ಹಾಗೂ ಕುಂಬಳೆ ಅಬಕಾರಿ ತಂಡ ಜಂಟಿಯಾಗಿ ನಡೆಸಿದ ದಾಳಿಯಲ್ಲಿ 133.92 ಲೀಟರ್ ಕರ್ನಾಟಕ ಮದ್ಯ, …
ಕುಂಬಳೆ: ಅಸೌಖ್ಯ ಬಾಧಿಸಿ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಕುಂಬಳೆ ರೈಲ್ವೇ ನಿಲ್ದಾಣ ಸಮೀಪದ ನಿವಾಸಿ ಬಿ.ಎಂ. ಮುಹಮ್ಮದ್ ಅಲಿ (58) ನಿಧನಹೊಂದಿದರು. ಮಾಜಿ ಅನಿವಾಸಿಯಾಗಿದ್ದ ಇವರು ಮುಸ್ಲಿಂ ಲೀಗ್‌ನ ಸಕ್ರಿಯ ಕಾರ್ಯಕರ್ತ ನಾಗಿದ್ದರು. ದಿ| ಬಾವ ಹಾಜಿ-ಆಯಿಷ ದಂಪತಿಯ ಪುತ್ರನಾದ ಮೃತರು ಪತ್ನಿ ಶಾರ್ತಾಜ್, ಮಕ್ಕಳಾದ ಮಿಸಾಜ್, ಮಿನ್‌ಹಾಜ್, ಮಿಸ್‌ಹಬ್, ಅಳಿಯ ದಿಲ್ಶಾದ್, ಸಹೋದರ-ಸಹೋದರಿಯರಾದ ಮುಮ್ತಾಸ್, ಬಿ.ಎಂ. ಸಿದ್ದಿಕ್ ಅಲಿ, ರಸೀನ, ಬಿ.ಎಂ. ಅಶ್ರಫ್ ಅಲಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಕುಂಬಳೆ ೧೮ನೇ …
Read more “ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಮಾಜಿ ಅನಿವಾಸಿ ನಿಧನ”
ಕಾಸರಗೋಡು: ಎಂಡೋಸ ಲ್ಫಾನ್‌ನಿಂದ ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವತಿ ಮೃತಪಟ್ಟಳು. ಕಲ್ಲಕಟ್ಟ ಚಿತ್ತಾರಿಕುನ್ನು ಎಂಬಲ್ಲಿನ ಶೇಕ್ ಹಸೀನ (37) ಮೃತಪಟ್ಟ ದುರ್ದೈವಿ. ಜನ್ಮತಃ ಅಸೌಖ್ಯ ಬಾಧಿಸಿದ್ದ ಈಕೆಗೆ ಅನಂತರ ಅರ್ಬುದ ತಗಲಿತ್ತು. ಅಸೌಖ್ಯ ಉಲ್ಭಣಗೊಂಡು ನಿಧನ ಸಂಭವಿಸಿದೆ. ಕಾಞಂಗಾಡ್ ನೆಹರೂ ಕಾಲೇಜು ಸಾಹಿತ್ಯ ವೇದಿಕೆಯ ವಸತಿ ನಿರ್ಮಾಣ ಯೋಜನೆಯಲ್ಲಿ ಒಳಪಡಿಸಿ ಹಸೀನರಿಗೆ ಸಿನಿಮಾ ನಟನೂ, ಕೇಂದ್ರ ಸಚಿವರೂ ಆಗಿರುವ ಸುರೇಶ್ ಗೋಪಿ ಮನೆ ಹಸ್ತಾಂತರಿಸಿದ್ದರು. ಕರೀಂ-ಬಲ್ಕೀಸ್ ದಂಪತಿಯ ಪುತ್ರಿಯಾದ ಮೃತರು ಸಹೋದರ ಅಶ್ರಫ್ ಹಾಗೂ ಅಪಾರ ಬಂಧು-ಬಳಗವನ್ನು …
You cannot copy contents of this page