ಕಾರಿನಲ್ಲಿ ಸಾಗಿಸುತ್ತಿದ್ದ ನಿಷೇಧಿತ ತಂಬಾಕು ಉತ್ಪನ್ನ ವಶ: ಓರ್ವ ಸೆರೆ

ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಭಾರೀ ಪ್ರಮಾಣದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ಕಣ್ಣೂರು ಮುನೀಶ್ವರ ಕೋವಿಲ್‌ನಿಂದ ಪೊಲೀಸರು ಪತ್ತೆಹಚ್ಚಿ ವಶಪಡಿಸಿದ್ದಾರೆ. ಇದಕ್ಕೆ ಸಂಬಂಧಿಸಿ ತೃಕರಿಪುರ ನೋರ್ತ್ ನಿವಾಸಿ ಪಿ.ಕೆ. ಮುಹಮ್ಮದ್ ಸಫೀರ್ (26) ಎಂಬಾತನನ್ನು ಸೆರೆಹಿಡಿದು ಪ್ರಕರಣ ದಾಖಲಿಸಲಾಗಿದೆ. ಈತ ಚಲಾಯಿಸುತ್ತಿದ್ದ ಕಾರಿನಿಂದ ೧೦ ಗೋಣಿ ಚೀಲಗಳಲ್ಲಿ ತುಂಬಿಸಿಡಲಾಗಿದ್ದ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಹಲವಾರು ಲೋಡ್ ಮಣ್ಣು ಸಾಗಾಟ: ಚಂದ್ರಗಿರಿ ಕೋಟೆ ಸಂರಕ್ಷಿಸಲು ಎಂ.ಎಲ್. ಅಶ್ವಿನಿ ಆಗ್ರಹ

ಕಾಸರಗೋಡು: ಅನಧಿಕೃತವಾಗಿ ಮಣ್ಣು ಸಾಗಿಸಿದ ಹಿನ್ನೆಲೆಯಲ್ಲಿ ಅಪಾಯಕರ ಸ್ಥಿತಿಗೆ ತಲುಪಿದ ಜಿಲ್ಲೆಯ ಚೆಮ್ಮನಾಡು ಪಂಚಾಯತ್‌ನ ಕಳನಾಡುನಲ್ಲಿರುವ ಚಂದ್ರಗಿರಿ ಕೋಟೆಯನ್ನು ಸಂರಕ್ಷಿಸಲು ಜಿಲ್ಲಾ- ರಾಜ್ಯ ಆಡಳಿತ ಕೂಟಗಳು ಸಿದ್ಧವಾಗಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಆಗ್ರಹಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್. ಬಾಬುರಾಜ್, ಜಿಲ್ಲಾ ಕಾರ್ಯದರ್ಶಿ  ಕೆ.ಟಿ. ಪುರುಷೋತ್ತಮನ್, ಜಿಲ್ಲಾ ಸಮಿತಿ ಸದಸ್ಯ ಶ್ರೀನಿವಾಸನ್, ಉದುಮ ಮಂಡಲ ಉಪಾಧ್ಯಕ್ಷ ಸದಾಶಿವನ್ ಮಣಿಯಂಗಾನ, ಕಾರ್ಯದರ್ಶಿ ಸೌಮ್ಯಾ ಪದ್ಮನಾಭನ್, ಕೋಶಾಧಿಕಾರಿ ರತೀಶ್ ವಿ.ಎ., ರಾಜೇಶ್ ಕೈಂದಾರ್, ಪ್ರಮೋದ್ ಕೀಳೂರು, ಹರೀಶ್ …

ಅಸೌಖ್ಯ: ಇಲೆಕ್ಟ್ರೀಷನ್ ನಿಧನ

ಮಧೂರು: ಅರಂತೋಡು ಬಾಬು ಪಾಟಾಳಿ ಯವರ ಪುತ್ರ ಜಯರಾಮ (49) ಮೆದುಳು ಸಂಬಂಧ ಅಸೌಖ್ಯದಿಂದ ನಿಧನ ಹೊಂದಿದರು. ಇಲೆಕ್ಟ್ರೀಶ್ಯನ್ ಆಗಿದ್ದರು. ಮೃತರು ತಂದೆ, ಪತ್ನಿ ಮಮತ, ಮಕ್ಕಳಾದ ಅಹ್‌ನ, ಅಶ್‌ನ, ಸಹೋದರ ರಾದ ಬಾಲಕೃಷ್ಣ, ಚಂದ್ರ, ಸಹೋದರಿ ಪುಷ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಕಾಲ್ನಡೆ ಮೂಲಕ ಸಾಗಿ ಪುಸ್ತಕ ಮಾರಾಟ ಮಾಡುತ್ತಿದ್ದ ಉಪೇಂದ್ರ ಆಚಾರ್ಯ ನಿಧನ

ಕಾಸರಗೋಡು: ನಡೆದುಕೊಂಡು ಹೋಗಿ ಪುಸ್ತಕಗಳನ್ನು ಪುಸ್ತಕಪ್ರಿಯರಿಗೆ ತಲುಪಿಸುತ್ತಿದ್ದ ನಡೆದಾಡುವ ಗ್ರಂಥಾಲಯ ಎಂದೇ ಕರೆಸಿಕೊಂಡಿದ್ದ ಮೂಲತಃ ಅಣಂಗೂರು ನಿವಾಸಿ ಹಾಗೂ ಮೊಗ್ರಾಲ್ ಪುತ್ತೂರು ಬೆದ್ರಡ್ಕದ ಉಜಿತೆರೆಕೆ ಬಳಿ ವಾಸವಾಗಿದ್ದ ಉಪೇಂದ್ರ ಆಚಾರ್ಯ (80) ನಿಧನ ಹೊಂದಿದರು. ಮಕ್ಕಳ ಕಥೆಪುಸ್ತಕ, ಚಿತ್ರಕಥೆಪುಸ್ತಕಗಳು, ಸಾಮಾನ್ಯ ಜ್ಞಾನ ಪುಸ್ತಕ, ಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳನ್ನು ಶಾಲಾ, ಕಾಲೇಜು, ಕಚೇರಿಗಳಿಗೆ ತೆರಳಿ ಅಗತ್ಯದವರಿಗೆ ಮಾರಾಟ ಮಾಡುತ್ತಿದ್ದ ಇವರು ಈ ಮೊದಲು ಮುದ್ರಣ ತಂತ್ರಜ್ಞರಾಗಿಯೂ ಕಾರ್ಯನಿರ್ವಹಿಸಿದ್ದರು. ಮಣಿಪಾಲ ಹಾಗೂ ಕಾಸರಗೋಡಿನ ಮುದ್ರಣಾಲ ಯದಲ್ಲಿ ಕೆಲಸ ನಿರ್ವಹಿಸಿದ್ದರು. …

ರೈಲ್ವೇಯ ಸ್ಥಳದಿಂದ ಮರ ಕಡಿದು ಸಾಗಾಟ: ನಾಲ್ಕು ಮಂದಿ ಸೆರೆ

ಉಪ್ಪಳ: ರೈಲ್ವೇ ಇಲಾಖೆಯ ಸ್ವಾಧೀನದಲ್ಲಿರುವ  ಸ್ಥಳದಿಂದ ತೇಗು ಸಹಿತ 11 ಮರಗಳನ್ನು ಕಡಿದು ಸಾಗಿಸಿದ ಪ್ರಕರಣದಲ್ಲಿ ಉಪ್ಪಳ ನಿವಾಸಿಗಳಾದ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ. ರೋಶನ್ ಸಮೀರ್, ದಾದಪೀರ್, ಅಬ್ದುಲ್ಲ ಕುಂಞಿ, ರಾಜೇಶ್ ಎಂಬಿವರನ್ನು ಆರ್‌ಪಿಎಫ್‌ನ ಮಂಗಳೂರು ಇನ್‌ಸ್ಪೆಕ್ಟರ್ ಮನೋಜ್ ಕುಮಾರ್‌ರ ನೇತೃತ್ವದಲ್ಲಿ ಸೆರೆಹಿಡಿಯಲಾಗಿದೆ. ಕಡಿದ  ಮರಗಳನ್ನು, ಅವುಗಳನ್ನು ಸಾಗಿಸಲು ಉಪಯೋಗಿಸಿದ ವಾಹನ ಹಾಗೂ ಮರ ಕತ್ತರಿಸಲು  ಬಳಸಿದ ಯಂತ್ರಗಳನ್ನು ಆರ್‌ಪಿಎಫ್ ವಶಪಡಿಸಿಕೊಂಡಿದೆ. ಉಪ್ಪಳ ರೈಲ್ವೇ ನಿಲ್ದಾಣದ ಅಧೀನತೆಯಲ್ಲಿರುವ ಮರಗಳನ್ನು ಕಡಿದು ಸಾಗಿಸಲಾಗಿತ್ತು.  ರೈಲ್ವೇಯ ಸ್ಥಳಕ್ಕೆ ಹೊಂದಿಕೊಂಡಿರುವ ಆರೋಪಿಗಳ …

ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಯುವಕ ಮೃತ್ಯು

ನೀರ್ಚಾಲು: ಬ್ರೈನ್ ಹ್ಯೂಮ ರೇಜ್ ಅಸೌಖ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಫಿನಾನ್ಸ್ ಕಂಪೆನಿ ನೌಕರ ಮೃತಪಟ್ಟರು.  ಆರ್.ಎಸ್.ಎಸ್.ನ ಸಕ್ರಿಯ ಕಾರ್ಯಕರ್ತನಾಗಿದ್ದ   ಕಿಳಿಂಗಾರು ಮುಂಡಾನ್‌ತ್ತಡ್ಕದ  ಲೋಕೇಶ್ (48) ಮೃತಪಟ್ಟ ಯುವಕನಾಗಿದ್ದಾರೆ. ಶ್ರೀರಾಂ ಫಿನಾನ್ಸ್ ಕಂಪೆನಿಯ ನೌಕರನಾಗಿದ್ದ ಲೋಕೇಶ್ ಡಿಸ್ಕ್ ಸಂಬಂಧ ಅಸೌಖ್ಯ ಬಾಧಿಸಿ ಮನೆಯಲ್ಲಿ ಚಿಕಿತ್ಸೆಯಲ್ಲಿದ್ದರು. ನಿನ್ನೆ ಅಸೌಖ್ಯ ಉಲ್ಭಣಗೊಂಡ ಹಿನ್ನೆಲೆಯಲ್ಲಿ ಇವರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ರಾತ್ರಿ ವೇಳೆ ನಿಧನ ಸಂಭವಿಸಿದೆ. ಇವರು ಮಜೀರ್ಪಳ್ಳಕಟ್ಟೆ ಶ್ರೀ ಅಯ್ಯಪ್ಪ ಭಜನಾ ಮಂದಿರದ ಸಕ್ರಿಯ ಕಾರ್ಯಕರ್ತ, ಯುವಕೇಸರಿ ಫ್ರೆಂಡ್ಸ್ …

ನಾಪತ್ತೆಯಾಗಿದ್ದ ಇಬ್ಬರು ಬಾಲಕಿಯರ ಪತ್ತೆ; ಯುವತಿ, ಗೃಹಿಣಿ ನಾಪತ್ತೆ

ಕಾಸರಗೋಡು: ಜಿಲ್ಲೆಯಲ್ಲಿ ನಿನ್ನೆ ಇಬ್ಬರು ಹೆಣ್ಣುಮಕ್ಕಳ ಸಹಿತ ನಾಲ್ಕು ಮಹಿಳೆಯರು ನಾಪತ್ತೆಯಾಗಿರುವುದಾಗಿ ದೂರಲಾಗಿದ್ದು, ಇವರಲ್ಲಿ 16 ವರ್ಷ ಪ್ರಾಯದ ಇಬ್ಬರು ಹೆಣ್ಮಕ್ಕಳನ್ನು ಪತ್ತೆಹಚ್ಚಲಾಗಿದೆ. ಅಡ್ಕತ್ತಬೈಲು, ಉದುಮ, ಪಾಕ್ಯಾರ ನಿವಾಸಿಗಳನ್ನು ಬೇಕಲ, ಕಾಸರ ಗೋಡು ನಗರ ಠಾಣೆ ಪೊಲೀಸ್ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಎರಡು ಘಟನೆಗಳಲ್ಲಿ ಪೊಲೀಸರು ಕೇಸು ದಾಖಲಿಸಿದ್ದರು. ಸಣ್ಣ ವಿಷಯಕ್ಕೆ ಸಂಬಂಧಿಸಿ ಈ ಇಬ್ಬರು ಹೆಣ್ಮಕ್ಕಳು ಮನೆ ತೊರೆದು ತೆರಳಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಕಾಸರಗೋಡು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೂಡ್ಲು ಪಾಯಿಚ್ಚಾಲ್‌ನಿಂದ …

ಆಟೋರಿಕ್ಷಾದಲ್ಲಿ ಸಾಗಿಸುತ್ತಿದ್ದ 172 ಲೀಟರ್ ಮದ್ಯ ವಶ: ಓರ್ವ ಸೆರೆ

ಮುಳ್ಳೇರಿಯ: ಆಟೋರಿಕ್ಷಾದಲ್ಲಿ  ಸಾಗಿಸುತ್ತಿದ್ದ  172.8 ಲೀಟರ್ ಗೋವಾ ನಿರ್ಮಿತ ಮದ್ಯವನ್ನು ಅಬಕಾರಿ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಇದಕ್ಕೆ ಸಂಬಂಧಿಸಿ ನಾಯ್ಕಾಪು ನಿವಾಸಿ ಧನಂಜಯನ್ (35) ಎಂಬಾತನನ್ನು ಬಂಧಿಸಿ ಅಬಕಾರಿ ಪ್ರಕರಣ ದಾಖಲಿಸಲಾಗಿದೆ. ಕಾಸರಗೋಡು ಎಕ್ಸೈಸ್ ಎನ್‌ಫೋರ್ಸ್‌ಮೆಂಟ್ ಆಂಡ್ ಆಂಟೀ ನರ್ಕೋಟಿಕ್ಸ್ ಸ್ಪೆಷಲ್ ಸ್ಕ್ವಾಡ್‌ನ ಪ್ರಿವೆಂಟೀವ್ ಆಫೀಸರ್ ಕೆ.ವಿ. ರಂಜಿತ್‌ರ ನೇತೃತ್ವದಲ್ಲಿ ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಶೈಲೇಶ್ ಕುಮಾರ್, ಸುಧೀರ್ ಪಾರಮ್ಮಲ್, ಮಂಜುನಾಥನ್, ಕಬೀರ್ ವಿ.ಪಿ, ಎಕ್ಸೈಸ್ ಇಂಟೆಲಿಜೆನ್ಸ್ ಬ್ಯೂರೋ ಪ್ರಿವೆಂಟೀವ್ ಆಫೀಸರ್ ಸಾಜನ್ ಅಪ್ಯಾಲ್, ಚಾಲಕ ಕ್ರಿಸ್ಟಿನ್ …

ಒಣಗಿಸಿ ಸಂಗ್ರಹಿಸಿಟ್ಟಿದ್ದ 4 ಗೋಣಿ ಅಡಿಕೆ ಸ್ಕೂಟರ್‌ನಲ್ಲಿ ಕಳವು ಯತ್ನ ಮಧ್ಯೆ ಸೆರೆ

ಕಾಸರಗೋಡು: ಮನೆ ವರಾಂಡದಲ್ಲಿ ಸಂಗ್ರಹಿಸಿಟ್ಟಿದ್ದ ನಾಲ್ಕು ಗೋಣಿ ಒಣ ಅಡಿಕೆಯನ್ನು ಸ್ಕೂಟಿಯಲ್ಲಿ ಸಾಗಿಸ ಲೆತ್ನಿಸಿದ ಯುವಕನನ್ನು ಸ್ಥಳೀಯರು ಸೆರೆ ಹಿಡಿದು ಪೊಲೀಸರಿಗೆ ಹಸ್ತಾಂತರಿಸಿ ದ್ದಾರೆ. ಮಡಿಕೈ, ಬೆಳ್ಳಚ್ಚೇರಿ ನಿವಾಸಿಯಾದ ಮಹೇಶ್ ಸೆರೆಯಾದ ವ್ಯಕ್ತಿ. ಈತನನ್ನು ಅಂಬಲತ್ತರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ 12.45ರ ವೇಳೆ ಘಟನೆ ನಡೆದಿದ್ದು, ಪೊಲೀಸರು ಈ ರೀತಿ ತಿಳಿಸುತ್ತಿದ್ದಾರೆ. ‘ತಾಯ ನ್ನೂರು ಆನಕ್ಕುಳಿಯ ಕೃಷಿಕ ವರ್ಗೀಸ್‌ರ ಮನೆ ವರಾಂಡದಿಂದ ನಾಲ್ಕು ಗೋಣಿ ಅಡಿಕೆ ಕಳವುಹೋಗಿತ್ತು. ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿದ ಬಳಿಕ …

24 ತಾಸುಗಳ ರಾಷ್ಟ್ರೀಯ ಮುಷ್ಕರ ಇಂದು ಮಧ್ಯರಾತ್ರಿಯಿಂದ

ಕಾಸರಗೋಡು: ಕೇಂದ್ರ ಕಾರ್ಮಿಕ ಸಂಘಟನೆಗಳು ಹಾಗೂ ರಾಷ್ಟ್ರೀಯ ಕಾರ್ಮಿಕ ಫೆಡರೇಶನ್ ಜಂಟಿಯಾಗಿ ಆಹ್ವಾನ ನೀಡಿರುವ 24 ತಾಸುಗಳ ರಾಷ್ಟ್ರೀಯ ಮುಷ್ಕರ ಇಂದು ರಾತ್ರಿ ೧೨ ಗಂಟೆಯಿಂದ ಆರಂಭಗೊಳ್ಳಲಿದೆ. ಕೇಂದ್ರ ಸರಕಾರ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದೂ ಅಂತಹ ನೀತಿಯನ್ನು ಪ್ರತಿಭಟಿಸಿ ಈ ರಾಷ್ಟ್ರೀಯ ಮುಷ್ಕರಕ್ಕೆ ಆಹ್ವಾನ ನೀಡಲಾಗಿರುವ ಕೃಷಿ, ಉದ್ದಿಮೆ    ಹಾಗೂ ವ್ಯಾಪಾರ ವಲಯಗಳ ಕಾರ್ಮಿಕರೂ ಈ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆಂದು ಸಂಯುಕ್ತ ಮುಷ್ಕರ ಸಮಿತಿ ತಿಳಿಸಿದೆ. ಉದ್ಯೋಗಖಾತರಿ ಯೋಜನೆಯನ್ನು ಮರುಸ್ಥಾಪಿಸಬೇಕು. ವಿದ್ಯುತ್, ಬೀಜ ತಿದ್ದುಪಡಿ ಮಸೂದೆಗಳನ್ನು …