ವರ್ಕಾಡಿಯಲ್ಲಿ ಕಾಡುಹಂದಿಗಳ ನಿಗೂಢ ಸಾವು: ಎರಡು ವಾರಗಳಲ್ಲಿ 10ರಷ್ಟು ಹಂದಿಗಳು ವಿವಿಧೆಡೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ವರ್ಕಾಡಿ:  ಪಾವೂರು ಪೊಯ್ಯೆ ಹಾಗೂ  ಪರಿಸರ ಪ್ರದೇಶಗಳಲ್ಲಿ ಕಾಡುಹಂದಿಗಳು ನಿಗೂಢವಾಗಿ ಸಾವಿಗೀಡಾಗುತ್ತಿರುವುದಾಗಿ ತಿಳಿದುಬಂದಿದೆ. ಕಳೆದ ಎರಡು ವಾರಗಳಿಂದ 10ರಷ್ಟು ಹಂದಿಗಳು ಸಾವಿಗೀಡಾಗಿವೆ. ಇಂದು ಬೆಳಿಗ್ಗೆ ಭಾರೀ ಗಾತ್ರದ ಕಾಡುಹಂದಿ ಪಾವೂರಿನ ರಸ್ತೆ ಬದಿ ಸತ್ತು ಬಿದ್ದಿರುವುದು ಕಂಡುಬಂದಿದೆ.  ಈ ಮೊದಲು ಸಾವಿಗೀಡಾದ ಹಂದಿಗಳು ರಸ್ತೆ ಹಾಗೂ ಗುಡ್ಡೆ ಪ್ರದೇಶಗಳಲ್ಲಿ ಪತ್ತೆಯಾಗಿದ್ದವು. ಅವುಗಳನ್ನು ನಾಗರಿಕರು ಹೂತು ಹಾಕಿದ್ದಾರೆ. ಅಲ್ಲದೆ ಈ ಬಗ್ಗೆ ನಾಗರಿಕರು ಪಂಚಾಯತ್ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದಾಗಿ ಹೇಳಲಾಗುತ್ತಿದೆ.  ಇದೇ ವೇಳೆ ಹಂದಿಗಳು ವ್ಯಾಪಕವಾಗಿ ಸಾವಿಗೀಡಾಗುತ್ತಿರುವುದು ಸ್ಥಳೀಯರಲ್ಲಿ …

ಅಂಗಡಿಯಲ್ಲಿ ಕೆಲಸಕ್ಕಿದ್ದ ಯುವತಿ ನಾಪತ್ತೆ

ಉಪ್ಪಳ: ಅಂಗಡಿಗೆ ಕೆಲಸಕ್ಕೆ ಹೋದ ಯುವತಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಘಟನೆಗೆ ಸಂಬಂಧಿಸಿ ತಾಯಿ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿ ದ್ದಾರೆ. ಪೈವಳಿಕೆ ಆಜಾದ್‌ನಗರ ನಿವಾಸಿಯಾದ ಫಾತಿಮತ್ ಮಕ್ನಾಸ್ (19) ನಾಪತ್ತೆಯಾದ ಯುವತಿ. ಈಕೆ ಉಪ್ಪಳದ ವ್ಯಾಪಾರ ಸಂಸ್ಥೆ ಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದಳು.ಎಂದಿನಂತೆ ನಿನ್ನೆ ಬೆಳಿಗ್ಗೆ ಮನೆಯಿಂದ ಯುವತಿ ತೆರಳಿದ್ದಳು. ಸಂಜೆ ಮರಳಿ ಮನೆಗೆ ತಲುಪದ ಹಿನ್ನೆಲೆಯಲ್ಲಿ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬೀರಂತಬೈಲಿನ ಶಿವರಾಮ ನಿಧನ

ಕಾಸರಗೋಡು: ಬೀರಂ ತಬೈಲು ನಿವಾಸಿ ಶಿವರಾಮ ಕೆ (88) ಎಂಬವರು  ನಿಧನ ಹೊಂದಿದರು. ನಿನ್ನೆ ರಾತ್ರಿ ಮನೆಯಲ್ಲಿ ಇವರಿಗೆ ದಿಢೀರ್ ಅಸೌಖ್ಯ ಕಾಣಿಸಿಕೊಂಡಿತ್ತು. ಕೂಡಲೇ  ನಗರದ ಖಾಸಗಿ ಆಸ್ಪತ್ರೆಗೆ ತಲುಪಿಸಿದ್ದು ಅಷ್ಟರೊಳಗೆ ನಿಧನ ಸಂಭವಿಸಿದೆ.  ಇವರು ಈ ಹಿಂದೆ ನೆಲ್ಲಿಕುಂಜೆಯಲ್ಲಿದ್ದ ಎಚ್.ಎಂ.ಟಿ ಕಂಪೆನಿಯ ವಾಹನ ಚಾಲಕನಾಗಿ ಕೆಲಸ ನಿರ್ವಹಿಸಿ ದ್ದರು.  ಮೃತರು ಪತ್ನಿ ಪ್ರೇಮಾ ಭಾ, ಮಕ್ಕಳಾದ ಕಮಲಾಕ್ಷ, ಪುಷ್ಪವೇಣಿ, ಪ್ರದೀಪ್ ಕುಮಾರ್, ಕವಿತ, ಪ್ರಕಾಶ, ಅಳಿಯ-ಸೊಸೆಯಂದಿರಾದ ಶಿವಪ್ರಸಾದ್, ಸುಜಿತ್ ಕುಮಾರ್, ಪುಷ್ಪಾವತಿ, ಉಮಾ, ರೇಖಾ, ಅನಿತಾ …

ಮೀನಿನಂಗಡಿಯಿಂದ ಮೀನು, ಹಣ ಸಹಿತ 1.40 ಲಕ್ಷ ರೂ.ಗಳ ಸೊತ್ತು ಕಳವು

ಮಂಜೇಶ್ವರ: ಮೀನಿನಂಗಡಿ ಯಿಂದ ಮೀನು ಸಹಿತ ವಿವಿಧ ಸೊತ್ತುಗಳನ್ನು ಕಳವು ನಡೆಸಲಾಗಿದೆ. ತಲಪ್ಪಾಡಿಯಲ್ಲಿರುವ  ಮೀನಿ ನಂಗಡಿಯಿಂದ ಮೀನುಗಳಿದ್ದ ಎರಡು ಫ್ರೀಸರ್, ಐದು ಫೈಬರ್ ಪೆಟ್ಟಿಗೆಗಳು, ಬಕೆಟ್‌ನಲ್ಲಿದ್ದ  ೫ ಸಾವಿರ ರೂಪಾಯಿ ಹಾಗೂ ೪ ಚಾಕುಗಳನ್ನು  ಕಳವು ನಡೆಸಲಾಗಿದೆ. ಇದರಿಂದ ಸುಮಾರು 1.40 ಲಕ್ಷ ರೂಪಾಯಿಗಳ ನಷ್ಟ ಉಂಟಾಗಿದೆಯೆಂದು ದೂರಲಾ ಗಿದೆ.   ಮೀನಿನಂಗಡಿಯ ಪಾಲು ದಾರ ನಾದ ಬಂಗ್ರಮಂಜೇಶ್ವರ ಕಡಿಗಾರ್ ಹೌಸ್‌ನ ಮೊಹಮ್ಮದ್ ರಫೀಕ್ (34) ಎಂಬವರು  ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಕೊಂಡಿದ್ದಾರೆ.  ಈ …

ರೈಲಿನಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆಯೊಡ್ಡಿದ ಯುವಕ ಸೆರೆ

ಕಾಸರಗೋಡು: ರೈಲಿನಲ್ಲಿ  ಬಾಂಬ್ ಇರಿಸಲಾಗಿದೆಯೆಂದು ಬೆದರಿಕೆ ಸಂದೇಶ ಕಳುಹಿಸಿದ ಯುವಕನನ್ನು  ಸೆರೆಹಿಡಿಯಲಾಗಿದೆ. ಬಂಗಳಂ ನಿವಾಸಿ ರತೀಶ್ (42) ಸೆರೆಗೀಡಾದ ವ್ಯಕ್ತಿ. ಈತ ಮಲಬಾರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಇರಿಸಿ ರುವುದಾಗಿ ಬೆದರಿಕೆಯೊಡ್ಡಿದ್ದನು.  ಬುಧವಾರ ರಾತ್ರಿ 7.30ರ ವೇಳೆ ಪೊಲೀಸ್ ಕಂಟ್ರೋಲ್ ರೂಂಗೆ ಕರೆಮಾಡಿ ಬೆದರಿಕೆಯೊಡ್ಡಲಾಗಿದೆ. ಇದರಂತೆ ಬಾಂಬ್ ನಿಷ್ಕ್ರಿಯದಳ ಹಾಗೂ ಶ್ವಾನದಳ ಕಾಞಂಗಾಡ್ ರೈಲ್ವೇ ನಿಲ್ದಾಣಕ್ಕೆ ತಲುಪಿದ ವಿವಿಧ ರೈಲುಗಳನ್ನು ಪರಿಶೀಲನೆ ನಡೆಸಿವೆ. ಆದರೆ ಬಾಂಬ್ ಅಥವಾ ಬೇರೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಅನಂತರ ಬೆದರಿಕೆ …

ಪೂಜೆ ಮೂಲಕ ವಿವಾಹ ವಿಚ್ಛೇದನ ಭರವಸೆ ನೀಡಿ ಹಣ ಎಗರಿಸಿದ ಪ್ರಕರಣ: ಆರೋಪಿ ಸೆರೆ

ಕಾಸರಗೋಡು: ವಿವಾಹ ವಿಚ್ಛೇಧನವನ್ನು ಹೈಕೋರ್ಟ್‌ನ ಮೂಲಕ ತ್ವರಿತಗೊಳಿಸಲಾಗುವುದು ಹಾಗೂ ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪೂಜೆಗಳನ್ನು ನಡೆಸುವ ಭರವಸೆ ನೀಡಿ ಹಣ ಎಗರಿಸಿದ ಪ್ರಕರಣದ ಆರೋಪಿಯನ್ನು ಕಾಸರಗೋಡು ಸೈಬ ರ್ ಕ್ರೈಮ್ ಪೊಲೀಸರು ಬಂಧಿಸಿದ್ದಾರೆ. ಕೋಟ್ಟಯಂ ಅನಿಕ್ಕಾಟ್ ನಿವಾಸಿ ಆಂಟನಿ ವಿನ್ಸೆಂಟ್ (40) ಬಂಧಿತ ಆರೋಪಿ. ಕೊಲ್ಲಂ ತೇನ್ಮಲದಿಂದ ಈತನನ್ನು ಬಂಧಿಸಲಾಗಿದೆ. ಉದುಮ ನಿವಾಸಿಯಾಗಿರುವ ಯುವತಿಯನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಲಾಗಿದೆ. ಗಂಡನಿಂದ ಬೇರ್ಪಟ್ಟು ಜೀವಿಸುತ್ತಿರುವ ಈ ಯುವತಿಯ  ವಿವಾಹ ವಿಚ್ಛೇಧನ ಪ್ರಕರಣದ ತೀರ್ಪನ್ನು ಹೈಕೋರ್ಟ್‌ನಲ್ಲಿ …

ಪತ್ವಾಡಿ- ಮೀಯಪದವು ರಸ್ತೆ ಶೋಚನೀಯ: ಸಂಚಾರಕ್ಕೆ ಸಂಕಷ್ಟ

ಉಪ್ಪಳ: ಮಂಗಲ್ಪಾಡಿ-ಮೀAಜ ಪಂಚಾಯತ್ ಸಂಗಮಿಸಿಸುವ ಉಪ್ಪಳದಿಂದ ಪತ್ವಾಡಿ-ಮೀಯಪದವು ಲೋಕೋಪಯೋಗಿ ಇಲಾಖೆ ರಸ್ತೆ ಅಲ್ಲಲ್ಲಿ ಹದಗೆಟ್ಟು ಶೋಚನೀಯÁವಸ್ಥೆಯಲ್ಲಿದೆ. ವಾಹನ ಸಂಚಾರ ದುಸ್ತರವಾಗಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಮಜಲ್, ಪತ್ವಾಡಿ, ಕಂಚಿಲ ಸಹಿತ ವಿವಿಧ ಕಡೆಗಳ ಹೊಂಡಗಳಲ್ಲಿ ನೀರು ಕಟ್ಟಿ ನಿಂತು ವಾಹನ ಸಂಚಾರದ ವೇಳೆ ಅಪಘಾತಕ್ಕೆ ಕಾರಣವಾಗುತ್ತಿದೆ. ಚರಂಡಿಯ ಅವ್ಯವಸ್ಥೆಯಿಂದ ರಸ್ತೆಯಲ್ಲಿ ನೀರು ಕಟ್ಟಿ ನಿಂತು ಸ್ಥಳೀಯರ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ಅಲ್ಲದೆ ರಸ್ತೆ ಬದಿಯಲ್ಲಿ ತ್ಯಾಜ್ಯ ರಾಶಿ ಹಾಗು ಪೊದೆಗಳು ತುಂಬಿಕೊAಡಿದೆ. ರಸ್ತೆ ಬದಿಗಳಲ್ಲÆ ಹೊಂಡಗಳು ಉಂಟಾಗಿ ವಾಹನಗಳಿಗೆ …

ಕೆಸರುಗದ್ದೆಯಂತಾದ ದರ್ಭೆತ್ತಡ್ಕ-ಕುಂಜಾರು ರಸ್ತೆ: ಸ್ಥಳೀಯರಿಗೆ ಸಂಚಾರ ಸಮಸ್ಯೆ

ಸೀತಾಂಗೋಳಿ: ಕುಂಜಾರು ಪ್ರದೇಶದ ನಿವಾಸಿಗಳು ಸಂಚಾರ ಸಮಸ್ಯೆಯಿಂದ ಬಳಲುತ್ತಿದ್ದರೂ ಅಧಿಕಾರಿಗಳು ಮೌನ ವಹಿಸಿರುವುದಾಗಿ ಸ್ಥಳೀಯರು ದೂರಿದ್ದಾರೆ. ದರ್ಭೆತ್ತಡ್ಕದಿಂದ ಕುಂಜಾರುಗೆ  ತೆರಳುವ ರಸ್ತೆ ಶೋಚನೀಯಗೊಂಡು ಸಂಚಾರವೇ ದುಸ್ತರವಾಗಿದ್ದರೂ ದುರಸ್ತಿಗೆ ಕ್ರಮವುಂಟಾಗುವುದಿಲ್ಲವೆಂದು ಸ್ಥಳೀಯರು ದೂರಿದ್ದಾರೆ. ಸುಮಾರು 3ಕಿಲೋ ಮೀಟರ್ ದೂರದ ಈ ರಸ್ತೆಯಲ್ಲಿ 100 ಮೀಟರ್‌ನಷ್ಟು ಕಾಂಕ್ರೀಟ್ ಹಾಕಲಾಗಿದ್ದರೂ ಉಳಿದ ಕಡೆ ರಸ್ತೆ ಕೆಸರುಗದ್ದೆಯಂತಿದೆ. ಇದರಿಂದಾಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಅಸಾಧ್ಯವಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಕೂಡಾ ಸ್ಥಳೀಯರಿಗೆ ವಾಹನಗಳು ಈ ರಸ್ತೆಯಲ್ಲಿ ಸಂಚರಿಸದ ಕಾರಣ ಸ್ಥಳೀಯರು ಸಂಕಷ್ಟಕ್ಕೀಡಾಗಿದ್ದಾರೆ. ಸ್ಥಳೀಯರು …

ಮೀನುಗಾರರ ಕಾಯುವಿಕೆಗೆ ವಿರಾಮ: ಮಂಜೇಶ್ವರ ಮೀನುಗಾರಿಕಾ ಬಂದರು ನವೀಕರಣೆಗೆ 57.84 ಕೋಟಿ ರೂ.ಮಂಜೂರು

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಮಂಡಲದ ಮೀನುಗಾರಿಕಾ ವಲಯದ ಪ್ರಧಾನ ಆಶಯವಾದ ಮಂಜೇಶ್ವರ ಫಿಶ್ಶಿಂಗ್ ಹಾರ್ಬರ್‌ಗೆ 1೦ ವರ್ಷದ ಬಳಿಕ ಮತ್ತೆ ಸರಕಾರದ ಪರಿಗಣನೆ ಉಂಟಾಗಿದೆ. ಹಾರ್ಬರ್‌ನ ಸಮಗ್ರ ನವೀಕರಣೆಗಾಗಿ ನಬಾರ್ಡ್ ಯೋಜನೆಯಲ್ಲಿ ಒಳಪಡಿಸಿ 57.84 ಕೋಟಿ ರೂ.ವನ್ನು ಸರಕಾರ ಮಂಜೂರು ಮಾಡಿದೆ. ಕಳೆದ ಉಮ್ಮನ್‌ಚಾಂಡಿ ಸರಕಾರದ ಕಾಲದಲ್ಲಿ ಮಂಜೇಶ್ವರ ಮೀನುಗಾರಿಕಾ ಬಂದರನ್ನು ಮಂಜೂರು ಮಾಡಲಾಗಿತ್ತು. ಆ ಬಳಿಕ ಅಗತ್ಯದ ಮೊತ್ತ ಮೀಸಲಿರಿಸಿ ನಿರ್ಮಾಣ ಆರಂಭಿಸಲಾಗಿದ್ದು, ಆದರೆ ಆ ಬಳಿಕದ ಹತ್ತು ವರ್ಷದಲ್ಲಿ ಬಂದರಿಗೆ ಅಗತ್ಯದ ಮೊತ್ತ ಲಭ್ಯವಾಗದಿರುವುದು …

ಆರ್. ಜಯಚಂದ್ರನ್ ನಿಧನ

ಕಾಸರಗೋಡು: ಮತ್ಸ್ಯ ತೊಯಿಲಾಳಿ ಕಾಂಗ್ರೆಸ್ ಅಖಿಲ ಭಾರತ ಕಾರ್ಯದರ್ಶಿ ಆರ್. ಗಂಗಾಧ ರನ್‌ರ ಸಹೋದರ ಕಾಸರಗೋಡು ಕಸಬಾ ಕಡಪ್ಪುರ ನಿವಾಸಿ ಆರ್. ಜಯಚಂದ್ರನ್ (58) ನಿಧನ ಹೊಂದಿದರು. ಮೃತರು ಪತ್ನಿ ಪ್ರಮೀಳ, ಮಕ್ಕಳಾದ ಸುದರ್ಶನ್, ಅಶ್ವಿನಿ, ಅಳಿಯ ದೀಪು, ಇತರ ಸಹೋದರರಾದ ಯತೀಂತ್ರನ್, ಪ್ರದೀಪನ್, ಭೌಮಿಕ್‌ಚಂದ್ರನ್, ಉಮೇಶನ್, ಸಹೋದರಿ ಜಯಂತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.