ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 11 ಲಕ್ಷ ರೂ. ಕಾಳಧನ ವಶ: ಓರ್ವ ಸೆರೆ

ಕಾಸರಗೋಡು: ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ 11 ಲಕ್ಷ ರೂಪಾಯಿ ಕಾಳ ಧನವನ್ನು ಪೊಲೀಸರು ವಶಪಡಿಸಿ ಕೊಂಡು ಈ ಸಂಬಂಧ ಓರ್ವನನ್ನು ಬಂಧಿಸಿದ್ದಾರೆ. ಪಡನ್ನ ಕೊಕ್ಕಕಡವ್ ನಿವಾಸಿ ಎಸ್.ಸಿ. ನಿಸಾರ್ (42) ಎಂಬಾತ ಬಂಧಿತ ವ್ಯಕ್ತಿಯಾಗಿದ್ದಾನೆ. ನಿನ್ನೆ ಮಧ್ಯಾಹ್ನ ಪಳ್ಳಿಕ್ಕೆರೆ ಮೇಲ್ಸೇತುವೆ ಸಮೀಪ ನೀಲೇಶ್ವರ ಎಸ್‌ಐ ರತೀಶ್ ನೇತೃತ್ವದ ಪೊಲೀಸ್ ತಂಡ ನಡೆಸಿದ ವಾಹನ ತಪಾಸಣೆಯಲ್ಲಿ ಕಾಳಧನ ಪತ್ತೆಹಚ್ಚಲಾಗಿದೆ. ಹಣ ಸಾಗಾಟ ಬಗ್ಗೆ  ಗುಪ್ತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತಲುಪಿ ವಾಹನ ತಪಾಸಣೆ ನಡೆಸಿದ್ದರು. ಹಣ …

ಆನ್‌ಲೈನ್ ವ್ಯಾಪಾರದ ಹೆಸರಲ್ಲಿ 22 ಲಕ್ಷ ರೂ. ಲಪಟಾವಣೆ

ಕಾಸರಗೋಡು: ಆನ್‌ಲೈನ್ ಪ್ಲಾಟ್ ಫಾಂ ಮೂಲಕ ಶೇರು ವ್ಯಾಪಾರಕ್ಕಾಗಿ  22.38 ಲಕ್ಷ ರೂ. ಠೇವಣಿ ಪಡೆದು ಅದರ ಲಾಭವನ್ನಾಗಲೀ ಠೇವಣಿ ಹಣ ವನ್ನಾಗಲೀ ಹಿಂತಿರುಗಿಸದೆ ವಂಚಿಸಿದ ಬಗ್ಗೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಚೀಮೇನಿ ನಿವಾಸಿ ಪಿ.ಶ್ರೀಧರನ್ ಎಂಬವರು ಈ ರೀತಿ ವಂಚನೆಗೊಳಗಾಗಿದ್ದು, ಆ ಬಗ್ಗೆ ಅವರು ನೀಡಿದ ದೂರಿನಂತೆ ಚೀಮೇನಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಟ್ಸಪ್ ಮತ್ತು ಫೇಸ್‌ಬುಕ್‌ನಲ್ಲಿ ಯುಟಿಐಎಎಂಸಿ ಎಂಬ ಆನ್‌ಲೈನ್ ಪ್ಲಾಟ್ ಪಾಂನಲ್ಲಿ ಶೇರು ಟ್ರೇಡಿಂಗ್ ಎಂಬ ಹೆಸರಲ್ಲಿ ಅಮಿತ ಲಾಭ ನೀಡುವುದೆಂಬ ವಾಗ್ದಾನ …

ಸಪ್ತತಿ ಮಹೋತ್ಸವಕ್ಕೆ ಅದ್ದೂರಿಯ ಚಾಲನೆ: ಗಣೇಶೋತ್ಸವ ಮೂಲಕ ಸಾಮಾಜಿಕ ಪರಿವರ್ತನೆ ತರಲು ಸಾಧ್ಯವಾಗಿದೆ-ಪಿ.ಎನ್. ಹರಿಕೃಷ್ಣ ಕುಮಾರ್

ಕಾಸರಗೋಡು: ಕಾಸರಗೋಡು ಸಾರ್ವಜನಿಕ ಶ್ರೀ ಗಣೇಶೋತ್ಸವದ ಸಪ್ತತಿ ಮಹೋತ್ಸವಕ್ಕೆ ನಿನ್ನೆಯಿಂದ ಅದ್ದೂರಿಯ ಚಾಲನೆ ದೊರಕಿದೆ. ಕಾರ್ಯಕ್ರಮ ಸೆಪ್ಟಂಬರ್ ೬ರ ತನಕ ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮುಂದುವರಿಯಲಿದೆ. ನಿನ್ನೆ ಆರಂಭಗೊಂಡ ಸಪ್ತತಿ ಮಹೋತ್ಸವವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ  ಕ್ಷೇತ್ರೀಯ ಪ್ರಚಾರಕ್ ಪಿ.ಎನ್. ಹರಿಕೃಷ್ಣ ಕುಮಾರ್ ಉದ್ಘಾಟಿಸಿದರು. ಸಾರ್ವ ಜನಿಕ ಶ್ರೀ ಗಣೇಶೋತ್ಸವದ ಮೂಲಕ ಸಾಮಾಜಿಕ ಪರಿವರ್ತನೆ ತರಲು ಸಾಧ್ಯವಾಗಿದೆ. ಮಂದಗತಿಯಲ್ಲಿ ಸಾಗುತ್ತಿದ್ದ ಭಾರತದ ಪ್ರಥಮ ಹಂತದ ಸ್ವಾತಂತ್ರ್ಯ ಚಳವಳಿಯ ವೇಳೆ ಸ್ವಾತಂತ್ರ್ಯ …

ಪ್ರತಾಪನಗರ ಸಾರ್ವಜನಿಕ ಶ್ರೀ ಗೌರೀ ಗಣೇಶೋತ್ಸವದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ

ಉಪ್ಪಳ: ಪ್ರತಾಪನಗರ ಗೌರಿ ಗಣೇಶ ಮಂದಿರದಲ್ಲಿ ಗಣೇಶೋ ತ್ಸವದ ಗೌರಿತದಿಗೆಯ ದಿನದಂದು ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ನ ಜಿಲ್ಲಾ ಸಹ ಕಾರ್ಯದರ್ಶಿ ಲತೇಶ್ ಬಾಕ್ರಬೈಲ್ ಧಾರ್ಮಿಕ ಭಾಷಣ ಮಾಡಿದರು. ಗಣೇಶ ಮಂದಿರದ ಅಧ್ಯಕ್ಷ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಗಳಾಗಿ ಮೋಹನ್ ಶೆಟ್ಟಿ ತೂಮಿನಾಡು, ಶಿವರಾಮ ಪಕಳ, ಜಗದೀಶ್ ಬೊಳ್ಳಂ ದರು, ಡಾಕ್ಟರ್ ಮನುಭಟ್, ವಿಜಯ ಪಂಡಿತ್,  ಧರ್ಮ ಸಂದೇಶ ಯಾತ್ರೆಯ ಸಾಧು ವಿನೋದ್ ಸ್ವಾಮೀಜಿ ಶುಭಾಶಂಸನೆ ಗೈದರು. ನಿತೀಶ್ ಪ್ರತಾಪನಗರ ಸ್ವಾಗತಿಸಿ, …

ಪೆರ್ಲ ಗೋಳಿತ್ತಾರಿನಲ್ಲಿ ಗಣೇಶೋತ್ಸವ: ಧಾರ್ಮಿಕ ಸಭೆ

ಪೆರ್ಲ: ಗೋಳಿತ್ತಾರು ಶ್ರೀ ಸಿದ್ಧಿ ವಿನಾಯಕ ಭಜನಾ ಮಂದಿರದಲ್ಲಿ 37 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳೊಂದಿಗೆ ನಡೆಯಿತು.ಬೆಳಿಗ್ಗೆ ದೀಪ ಪ್ರತಿಷ್ಠೆ, ಮಹೇಶ್ ಉಪಾಧ್ಯಾಯರ ಪೌರೋಹಿತ್ಯದಲ್ಲಿ ಗಣಪತಿ ಹೋಮ, ಶ್ರೀ ಸಿದ್ಧಿವಿನಾಯಕ ಭಜನಾ ಸಮಿತಿಯಿಂದ ಸಂಕೀರ್ತನೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆ ಗಳು, ಮಹಾಪೂಜೆ, ಅನ್ನಸಂತರ್ಪಣೆ, ಸಂಜೆ ನಡೆÀದ ಧಾರ್ಮಿಕ ಸಭೆಯಲ್ಲಿ ಸಮಿತಿ ಅಧ್ಯಕ್ಷ ಕಮಲಾಕ್ಷ ಪೂಜಾರಿ ಕಾನ ಅಧ್ಯಕತೆ ವಹಿಸಿದರು. ವಾರ್ಡ್ ಪ್ರತಿನಿಧಿ ಆಸೀಫ್ ಅಲಿ, ದಾಮೋದÀರ ಶೆಟ್ಟಿ ಗುರುಪುರ …

ಗಾಳಿಯಡ್ಕದ ಲಾರಿ ಚಾಲಕ ಆಸೀಫ್‌ನ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಸರ್ಕಾರ ವಿಫಲ-ಕಾಂಗ್ರೆಸ್

ಪೈವಳಿಕೆ: ಕಳೆದ ಜನವರಿ ತಿಂಗಳಲ್ಲಿ ಬಾಯಾರು ಧರ್ಮಡ್ಕದಲ್ಲಿ ಅಸಹಜ ರೀತಿಯಲ್ಲಿ ಅಕ್ರಮಣಕ್ಕೊ ಳಗಾಗಿ ಕಂಡುಬಂದ ಬಳಿಕ ಆಸ್ಪತ್ರೆಗೆ ತಲುಪಿಸುವಷ್ಟರಲ್ಲಿ ಮೃತಪಟ್ಟ ಬಾಯಾರು ಗಾಳಿಯಡ್ಕದ ಲಾರಿ ಚಾಲಕ ಮೊಹ್ಮದ್ ಆಸೀಫ್‌ರ ಸಾವಿನ ಬಗೆಗಿನ ತನಿಖೆಯಲ್ಲಿ ತಿಂಗಳು ಎಂಟು ಆದರೂ ಯಾವುದೇ ಪ್ರಗತಿ ಇಲ್ಲದಿರುವುದು ನಮ್ಮ ರಾಜ್ಯದ ಪೊಲೀಸ್ ಇಲಾಖೆಯ ಸಾಮರ್ಥ್ಯದ ಕೈಗನ್ನಡಿಯಾಗಿದೆಯೆಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಜೆ.ಎಸ್ ಹೇಳಿದರು. ಈ ವಿಚಾರದಲ್ಲಿ  ಸರಕಾರ ತುರ್ತಾಗಿ ಸ್ಪಂದಿಸಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡದೇ ಇದ್ದಲ್ಲಿ ಪಕ್ಷ ಚಳವಳಿಗೆ ಸಿದ್ಧರಾಗಬೇಕಾದೀತು …

ತಿರುವನಂತಪುರದಲ್ಲಿ ಕನ್ನಡ ಕೃತಿ ‘ಗುರುದರ್ಶನ’ ಬಿಡುಗಡೆ

ತಿರುವನಂತಪುರ: ಲೇಖಕ ಶಿವಾನಂದ ಕೋಟ್ಯಾನ್ ಕಟಪಾಡಿ ಅವರು ನಾರಾಯಣ ಗುರುಗಳ ಕುರಿತು ಬರೆದ ಗುರುದರ್ಶನ ಕನ್ನಡ ಕೃತಿಯನ್ನು ಕೇರಳದ ತಿರುವನಂತ ಪುರದಲ್ಲಿ ಬಿಡುಗಡೆಗೊಳಿ ಸಲಾಯಿತು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಬಿಕಾರ, ಕರ್ನಾಟಕ ಸರಕಾರ, ಭಾರತ್ ಭವನ ತಿರುವನಂತಪುರ ಕೇರಳ ಸರಕಾರಗಳ ಆಶ್ರಯದಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ ಸಮಾರೋಪ ಸಮಾರಂಭದಲ್ಲಿ ರಾಜ್ಯ ಶಿಕ್ಷಣ ಸಚಿವ ಶಿವನ್ ಕುಟ್ಟಿ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ನಾರಾಯಣ ಗುರುಗಳ ತತ್ವಾದ ರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅವರ ಜೀವನ ಚರಿತ್ರೆಯನ್ನು ಮುಂದಿನ …

ಉಳಿಯತ್ತಡ್ಕದಲ್ಲಿ ಓಣಂ ಮಾರಾಟ ಮಳಿಗೆ ಆರಂಭ

ಮಧೂರು: ಮಧೂರು ಅಗ್ರಿಕಲ್ಚರಿಸ್ಟ್ ಸಹಕಾರಿ ಸಂಘದ ವತಿಯಿಂದ ನಡೆಸುವ ಓಣಂ ಮಾರಾಟ ಮಳಿಗೆಯನ್ನು ಸಂಘದ ಅಧ್ಯಕ್ಷ ಎಂ. ಕೆ.ರವೀಂದ್ರನ್ ಉದ್ಘಾಟಿಸಿದರು.ಉಪಾಧ್ಯಕ್ಷ ಎಂ ಅಶೋಕ ರೈ ಅಧ್ಯಕ್ಷತೆ ವಹಿಸಿದರು.ಮಾಜಿ ಅಧ್ಯಕ್ಷ ಎ.ರವೀಂದ್ರನ್, ತುಳು ಅಕಾಡೆಮಿ ಸದಸ್ಯ ಕೆ ಬುಜಂಗ ಶೆಟ್ಟಿ, ಪಂಚಾಯತ್ ಸದಸ್ಯರಾದ ಸಿ ಉದಯ್ ಕುಮಾರ್, ಪಿ ಎಂ ಬಶೀರ್, ಮೊಹಮ್ಮದ್ ಅಸ್ಲಾಂ ಶುಭ ಹಾರೈಸಿದರು. ಕಾರ್ಯದರ್ಶಿ. ರಾಜಶ್ರೀ ಸ್ವಾಗತಿಸಿ, ನಿರ್ದೇಶಕ ಶ್ರೀ ಸುಬ್ರಮಣ್ಯ ತಂತ್ರಿ ವಂದಿಸಿದರು.

ಮಂಜೇಶ್ವರ ತಾಲೂಕು ಮಟ್ಟದ ಓಣಂ ಸಂತೆ ಉದ್ಘಾಟನೆ

ಸೀತಾಂಗೋಳಿ:  ಮಂಜೇಶ್ವರ ತಾಲೂಕು ಮಟ್ಟದ ಓಣಂ ಸಂತೆಯ ಉದ್ಘಾಟನೆ ಎಡನಾರು ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ನೇತೃತ್ವದಲ್ಲಿ ಸೀತಾಂಗೋಳಿಯಲ್ಲಿ ನಡೆಯಿತು. ಬ್ಯಾಂಕ್‌ನ ಅಧ್ಯಕ್ಷ ಶ್ಯಾಮರಾಜ ದೊಡ್ಡಮಾಣಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯತ್ ಅಧ್ಯಕ್ಷ ಡಿ. ಸುಬ್ಬಣ್ಣ ಆಳ್ವ ಉದ್ಘಾಟಿಸಿ ಮಾತನಾಡಿದರು. ಅಸಿಸ್ಟೆಂಟ್ ರಿಜಿಸ್ಟ್ರಾರ್ ರವೀಂದ್ರ ಎ. ಓಣಂ ಕಿಟ್‌ನ ಪ್ರಥಮ ವಿತರಣೆಯ ಮಾಡಿದರು. ವಿವಿಧ ಬ್ಯಾಂಕ್‌ಗಳ ಅಧ್ಯಕ್ಷರು, ವಿವಿಧ ಸಂಘಟನೆಗಳ ಪ್ರಮುಖರು ಉಪಸ್ಥಿತರಿ ದ್ದರು. ಬ್ಯಾಂಕಿನ ನಿರ್ದೇಶಕರು ಹಾಗೂ ಸರ್ಕಲ್ ಸಹಕಾರಿ ಯೂನಿಯನ್‌ನ ನಿರ್ದೇಶಕರು ಆಗಿರುವ ಶ್ರೀಕೃಷ್ಣ ಪ್ರಸಾದ …

ನಾಡಿನಾದ್ಯಂತ ಗಣೇಶೋತ್ಸವ ಸಂಭ್ರಮ

ಕಾಸರಗೋಡು: ವಿದ್ಯಾ ಬುದ್ಧಿ ಸಿದ್ಧಿದಾಯಕ ಪ್ರಥಮ ವಂದ್ಯಾ ಸಿದ್ದಿವಿನಾಯಕನ ಜನ್ಮದಿನವಾದ ಗಣೇಶ ಚತುರ್ಥಿ ಹಬ್ಬಕ್ಕೆ ಅಬ್ಬರದ ಮಳೆಯ ನಡುವೆಯೂ ವೈಭವದ ಕಳೆ ಕಂಡು ಬರುತ್ತಿದೆ. ವಿಘ್ನ ನಿವಾರಕನಾದ ವಿಘ್ನೇಶ್ವರನ ಉತ್ಸವಾಚರಣೆಯ ಸಂಭ್ರಮಕ್ಕೆ ತೊಡಕೆಂದೂ ಉಂಟಾಗಲ್ಲ ಎಂಬ ಭಕ್ತರ ಮನೋಭಿಲಾಷೆಗೆ ಸೋನೆ ಮಳೆಯು ಹೂಮಳೆಯಾಗಿ ಪರಿಣಮಿಸಿದೆ. ನಾಡಿನ ಪ್ರಸಿದ್ಧ ಗಣಪತಿ ದೇವಾಲಯಗಳಾದ ಮಧೂರು, ಶರವು, ಸೌತಡ್ಕ,  ಹಟ್ಟಿಯಂಗಡಿ, ಇಡಗುಂಜಿ, ಕುಂಭಾಶಿ, ಗೋಕರ್ಣ ಮೊದಲಾದ ದೇವಸ್ಥಾನಗಳಲ್ಲದೆ ಸ್ಥಳೀಯ ಹೆಚ್ಚಿನ ದೇವಸ್ಥಾನಗಳಿಗೆ ಭಕ್ತರು ಭೇಟಿ ನೀಡಿ ಸೇವೆ ಸಲ್ಲಿಸಿ ಸಂತೃಪ್ತಿ ಪಡೆದುಕೊಳ್ಳುತ್ತಿದ್ದಾರೆ. …