ವ್ಯಾಪಾರಿಯ ತಲೆಗೆ  ಹೊಡೆದು ಹಣ ದರೋಡೆಗೆತ್ನಿಸಿದ ಆರೋಪಿ 22 ವರ್ಷಗಳ ಬಳಿಕ ಸೆರೆ

ಕಾಸರಗೋಡು: ಕಾಡುತ್ಪನ್ನ ವ್ಯಾಪಾರಿಯ ತಲೆಗೆ ಹೊಡೆದು ಹಣ ದರೋಡೆಗೈಯ್ಯಲೆತ್ನಿಸಿದ ಪ್ರಕರಣದ ಆರೋಪಿಯನ್ನು 22 ವರ್ಷಗಳ ಬಳಿಕ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರು ಅಲವಿಲ್ ನಿವಾಸಿ ಎಚ್. ಮುನ್ನ ಯಾನೆ ಮುನೀರ್ (45) ಬಂಧಿತ ಆರೋಪಿ. ಹೊಸದುರ್ಗದ ಕಾಫಿಯಾ ಟ್ರೇಡರ್ಸ್ ಎಂಬ ಹೆಸರಿನ ಕಾಡುತ್ಪನ್ನ ಮಾರಾಟದಂಗಡಿಯ ಮಾಲಕ ಸಿ. ಅಬ್ದುಲ್ಲ ಹಾಜಿ ಎಂಬವರು 2004 ಜನವರಿ 9ರಂದು  ರಾತ್ರಿ ಅಂಗಡಿ ಮುಚ್ಚಿ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದ ದಾರಿ ಮಧ್ಯೆ ಹೊಸದುರ್ಗ ಪೇಟೆಯಲ್ಲಿ ಅಕ್ರಮಿಗಳ ತಂಡವೊಂದು ಅವರ ಮೇಲೆರಗಿ ತಲೆಗೆ ಹೊಡೆದು …

ಜಿಲ್ಲೆಯಲ್ಲಿ 11ಕ್ಕೂ ಹೆಚ್ಚು ಮನೆಗಳಿಗೆ ಹಾನಿ: ಮಲೆನಾಡು ಪ್ರದೇಶಗಳಲ್ಲಿ ಭೂಕುಸಿತ, ಹಲವು ಕುಟುಂಬಗಳ ಸ್ಥಳಾಂತರ

ಕಾಸರಗೋಡು: ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಹನ್ನೊಂದಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಜಿಲ್ಲೆಯ ಮಲೆನಾಡು ಪ್ರದೇಶವಾದ ಚೆರ್ವತ್ತೂರು ಸಮೀಪದ ಮಯೀಚ್ಚದಲ್ಲಿ ಭೂಕುಸಿತ ಉಂಟಾಗಿದ್ದು ಇದರಿಂದ ಅಲ್ಲಿನ ೩೩ರಷ್ಟು ಕುಟುಂಬಗಳನ್ನು ನಿನ್ನೆ ರಾತ್ರಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ೪೦ರಷ್ಟು ಮನೆಯವರು  ನೆರೆ ಭೀತಿಯಲ್ಲಿದ್ದಾರೆ. ಈ ಪ್ರದೇಶದಲ್ಲಿ ಭಾರೀ ಮಳೆಗೆ ಭೂಕುಸಿತ ಉಂಟಾದ ಪರಿಣಾಮ ತಗ್ಗು ಪ್ರದೇಶಗಳೆಲ್ಲವೂ ನೀರಿನಿಂದಾವೃತವಾಗಿದೆ.  ದೇಲಂಪಾಡಿ ಗ್ರಾಮದ ಊಜಂಪಾಡಿಯಲ್ಲಿ ಮನೆಯೊಂದು ಆಂಶಿಕವಾಗಿ ಕುಸಿದಿದ್ದು ಇದರಿಂದ ಅಶ್ವಿನಿ(14) ಎಂಬ ಬಾಲಕಿ ಗಾಯಗೊಂಡಿದ್ದಾಳೆ.  ಹೊಸದುರ್ಗ, ವೆಳ್ಳರಿಕುಂಡ್ ತಾಲೂಕುಗಳಲ್ಲಿ ಅತೀ ಹೆಚ್ಚು …

ದೈಗೋಳಿಯ ಸೇವಾಶ್ರಮದಿಂದ ವ್ಯಕ್ತಿ ನಾಪತ್ತೆ

ಉಪ್ಪಳ: ಕೊಡ್ಲಮೊಗರು ದೈಗೋಳಿಯಲ್ಲಿರುವ ಸಾಯಿ ನಿಕೇತನ್  ಸೇವಾಶ್ರಮದ ನಿವಾಸಿಯೋರ್ವ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಉತ್ತರಪ್ರದೇಶದ ಆಗ್ರ ಪ್ರಯಾಗ್‌ರಾಜ್ ನಿವಾಸಿ ವಿಷ್ಣು  ಕುಮಾರ್ (25) ನಾಪತ್ತೆಯಾದ ವ್ಯಕ್ತಿ.  ಆಶ್ರಮದ ನೌಕರ  ಕೆ.ಆದಿಶ್ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಕಳೆದ ಗುರುವಾರ ಬೆಳಿಗ್ಗೆ ೮ರಿಂದ ಮಧ್ಯಾಹ್ನ ೨ ಗಂಟೆ ಮಧ್ಯೆಗಿನ ಸಮ ಯದಲ್ಲಿ ವಿಷ್ಣುಕುಮಾರ್ ನಾಪತ್ತೆ ಯಾಗಿರುವುದಾಗಿ ತಿಳಿಸಲಾಗಿದೆ. ದೈಗೋಳಿಯಲ್ಲಿ ತಿರುಗಾಡುತ್ತಿದ್ದ ವಿಷ್ಣುಕುಮಾರ್‌ರನ್ನು ಒಂದು ತಿಂಗಳ ಹಿಂದೆ ಸೇವಾಶ್ರಮಕ್ಕೆ ಸೇರಿಸಲಾಗಿತ್ತು.

ಪತ್ನಿಯ ನಿಧನದ 10ನೇ ದಿನ ಪತಿಯೂ ನಿಧನ

ಕಾಸರಗೋಡು: ಪತ್ನಿ ಮೃತಪಟ್ಟ 10ನೇ ದಿನ ಪತಿ ಕೂಡಾ ನಿಧನ ಹೊಂದಿದರು. ಪಾಕಂ ಕಣ್ಣಂವಯಲ್ ಕಿಳಕ್ಕೇವೀಟಿಲ್ ಅಡುಕ್ಕಾಡುಕ್ಕಂ ತರವಾಡು ಕಾರ್ನವರ್ ಕೆ. ಕೃಷ್ಣನ್ ನಾಯರ್ (86) ನಿಧನ ಹೊಂದಿದರು. ಇವರ ಪತ್ನಿ ಮುಂಙತ್ ಕಾರ್ತ್ಯಾಯಿನಿ ಅಮ್ಮ ಕಳೆದ ತಿಂಗಳ 23ರಂದು ನಿಧನ ಹೊಂದಿದ್ದರು. ಮೃತರು ಮಕ್ಕಳಾದ ಎಂ. ತಂಬಾನ್ ನಾಯರ್, ಸೀತಾ ಕುಮಾರಿ, ಉಷಾ, ಚಂದ್ರನ್, ವಿನೋದ್, ಅಳಿಯಂದಿರಾದ ಕುಂಞಿಕಣ್ಣನ್, ಗೋಪಿನಾಥನ್, ಸೊಸೆಯಂದಿರಾದ ಎಂ. ಸೀನ, ಎ. ಅರ್ಚನ, ಸಹೋದರಿ ನಾರಾಯಣಿಅಮ್ಮ, ಸಹೋದರರಾದ ನಾರಾಯಣನ್ ನಾಯರ್, ಕುಮಾರನ್ …

ಬದಿಯಡ್ಕದಲ್ಲಿ ಕಾಂಗ್ರೆಸ್ ನೇತಾರ ರಾಮ ಪಾಟಾಳಿಯವರ ಸಂಸ್ಮರಣೆ

ಬದಿಯಡ್ಕ:  ಬದಿಯಡ್ಕ ಪಂಚಾ ಯತ್‌ನ ಮಾಜಿ ಅಧ್ಯಕ್ಷ, ಬದಿಯಡ್ಕ ಮಂಡಲ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷರೂ ಆದ ದಿ| ಬಿ. ರಾಮ ಪಾಟಾಳಿಯವರ  ಏಳನೇ ಸಂಸ್ಮರಣಾ ವಾರ್ಷಿಕವನ್ನು  ಇಂಡಿಯನ್ ನೇಶನಲ್ ಕಾಂಗ್ರೆಸ್ ಬದಿಯಡ್ಕ ಮಂಡಲ ಸಮಿತಿ ನೇತೃತ್ವದಲ್ಲಿ  ಮಂಡಲ ಸಮಿತಿ ಕಚೇರಿ ಸಭಾಂಗಣದಲ್ಲಿ ನಡೆಸಲಾಯಿತು.  ಕಾಂಗ್ರೆಸ್ ಮಂಡಲ ಅಧ್ಯಕ್ಷ ಶ್ಯಾಮ್ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಾರಿಜಾಕ್ಷನ್ ಅವರು ರಾಮ ಪಾಟಾಳಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಬಳಿಕ ನಡೆದ ಸಂಸ್ಮರಣಾ ಕಾರ್ಯಕ್ರಮವನ್ನು  ಕಾಂಗ್ರೆಸ್ …

ಅಮೈ ಬಯಲಿನಲ್ಲಿ ಪರಿವಾರ ಬಂಟರ ಸಂಘದಿಂದ ಕೆಸರುಗದ್ದೆ ಕ್ರೀಡೋತ್ಸವ

ಕಾಸರಗೋಡು: ಪರಿವಾರ ಬಂಟರ ಸಂಘ ಕಾಸರಗೋಡು ವಲಯದ ಯುವ ವೇದಿಕೆ ಹಾಗೂ ಮಹಿಳಾ ವೇದಿಕೆ ವತಿಯಿಂದ ಅಮೈ ಬಯಲಿನಲ್ಲಿ ಪಂಚವಾರ್ಷಿಕ ಕೆಸರು ಗದ್ದೆ ಕ್ರೀಡೋತ್ಸವ ಆಚರಿಸಲಾಯಿತು. ವಿಶ್ವ ಪರಿವಾರ ಬಂಟರ ಸಂಘದ ಉಪಾದ್ಯಕ್ಷ ರಘುವೀರ ನಾಯ್ಕ ಉದ್ಘಾಟಿಸಿ, ಗ್ರಾಮೀಣ ಆಟೋಟ ಸ್ಪರ್ಧೆ ಮತ್ತು ಕೆಸರುಗದ್ದೆ ಕ್ರೀಡೋತ್ಸವ ನಮ್ಮ ಹಿಂದಿನ ಜನಾಂಗದವರಿಗೆ ವಿನೋದವಾಗಿತ್ತು. ಗದ್ದೆಯ ಕೆಸರು ಮನುಷ್ಯ ಶರೀರವನ್ನು ರೋಗ ರುಜಿನುಗಳಿಂದ ಕಾಪಾಡುವುದು ಎಂದರು. ಪ್ರೊಫೆಸರ್ ಡಾ. ಜಯಪ್ರಕಾಶ ನಾಯ್ಕರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಬೀರಂತಬೈಲು ಸಂತಾನ ಗುರಿಕ್ಕಾರ …

ಹಿರಿಯ ಸೈಕಲ್ ವ್ಯಾಪಾರಿ ನಿಧನ

ಕಾಸರಗೋಡು: ಚಕ್ಕರಬಜಾರ್‌ನ ಹಿರಿಯ ಸೈಕಲ್ ಅಂಗಡಿ ಮಾಲಕ ನಾಗಿದ್ದ ಅಡ್ಕತ್ತಬೈಲು ಕೋಟವಳಪ್ ನಿವಾಸಿ ಕೆ.ಟಿ. ರವಿಶಂಕರ್ (63) ನಿಧನ ಹೊಂದಿದರು. ಮೃತರು ಪತ್ನಿ ಟಿ. ಬೇಬಿ, ಮಕ್ಕಳಾದ ಶಿಲ್ಪ, ಹರ್ಷಿತ, ಶಿಜಿನ, ರಮಿತ, ಅಳಿಯಂದಿರಾದ ಸುನಿಲ್, ರಾಜನ್, ಪ್ರಮೋದ್, ಮಂಜುಪ್ರಸಾದ್, ಸಹೋದರ ಸಹೋದರಿಯರಾದ ಎಸ್. ಸುಬ್ರಹ್ಮಣ್ಯನ್, ಪ್ರೇಮ, ಜಯಂತಿ, ಜ್ಯೋತಿ, ಶಶಿಕಲ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹೃದಯಾಘಾತ ಶಾಲಾ ನೌಕರೆ ನಿಧನ

ಕಾಸರಗೋಡು: ಶಾಲೆಯ ನೌಕರೆಯಾದ ಯುವತಿ ಹೃದಯಾಘಾತದಿಂದ ಮೃತಪಟ್ಟರು. ವೆಳ್ಳಿಕ್ಕೋತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಆಫೀಸ್ ಅಸಿಸ್ಟೆಂಟ್, ಮಾಣಿಕೋತ್ ಶಾಲೆ ಸಮೀಪ ನಿವಾಸಿಯಾದ ಬಿಂದು (45) ಮೃತಪಟ್ಟವರು. ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಆಸ್ಪತ್ರೆಗೆ  ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇವರ ಪತಿ ಉತ್ತೇಶ್ ಈ ಹಿಂದೆ ನಿಧನ ಹೊಂದಿದ್ದಾರೆ. ಮೃತರು ಮಕ್ಕಳಾದ ಪಾರ್ವಣೇಂದು, ದೇವನಂದನ್, ಸಹೋದರರಾದ ಜಯರಾಮನ್, ಯಶವಾನಂದನ್, ಕುಂದಿರಿಯಾಕ್ಷನ್, ಹಿತೇಶನ್, ಸಹೋದರಿಯರಾದ ಚಂದ್ರಾವತಿ, ಶ್ರೀಲತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಚಾಲಕ ಅಸ್ವಸ್ಥ: ನಿಯಂತ್ರಣ ತಪ್ಪಿದ ಸಾರಿಗೆ ಬಸ್ ಢಿಕ್ಕಿ ಹೊಡೆದು ಪಾದಚಾರಿ ಮಹಿಳೆ ಮೃತ್ಯು

ತೃಶೂರು: ಚಾಲಕನಿಗೆ ಅಸ್ವಸ್ಥತೆ ಉಂಟಾದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್ ಢಿಕ್ಕಿ ಹೊಡೆದು ಪಾದಚಾರಿ ಮಹಿಳೆ ಮೃತಪಟ್ಟರು. ಕಾಞೂರು ನಿವಾಸಿ ಬಿಂದು (49) ಮೃತಪಟ್ಟ ಮಹಿಳೆ. ಇಂದು ಬೆಳಿಗ್ಗೆ ೭ ಗಂಟೆ ವೇಳೆ ಪುದುಕ್ಕಾಡ್‌ನಲ್ಲಿ ಅಪಘಾತ ಸಂಭವಿಸಿದೆ. ನಡೆದುಕೊಂಡು ಹೋಗುತ್ತಿದ್ದ ಈಕೆಗೆ ಬಸ್ ಢಿಕ್ಕಿ ಹೊಡೆದ ಬಳಿಕ ಮುಂದುವರಿದು ಸಾಗಿದ ಬಸ್ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಅಂಗಡಿಗೆ ನುಗ್ಗಿದೆ. ಚಾಲಕ ಸೀಟ್‌ನಲ್ಲಿ ಕುಸಿದು ಬಿದ್ದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಸ್ಥಳಕ್ಕೆ ತಲುಪಿದವರು ಚಾಲಕನನ್ನು ಕೂಡಲೇ ಆಸ್ಪತ್ರೆಗೆ …

ಕಿಳಿಂಗಾರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ  ಆಮಂತ್ರಣ ಪತ್ರಿಕೆ ಬಿಡುಗಡೆ

ನೀರ್ಚಾಲು: ಕಿಳಿಂಗಾರು ಯುವಕೇಸರಿ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಏಕಲವ್ಯ ಬಾಲಗೋಕುಲದ ವತಿಯಿಂದ ಸೆಪ್ಟಂಬರ್ 6ರಂದು ನಡೆಯುವ ಶ್ರೀಕೃಷ್ಣ ಜನ್ಮಾಷ್ಟಮಿಯ ಆಮಂತ್ರಣಪತ್ರಿಕೆಯನ್ನು ಕಿಳಿಂಗಾರು ಶಾಲಾ ಪರಿಸರದಲ್ಲಿ ತಾಲೂಕು ಸಪ್ಲೈ ಆಫೀಸರ್ ಕೃಷ್ಣ ನಾಯ್ಕ್ ಬಂಡ್ರಡ್ಕ ಬಿಡುಗಡೆಗೊಳಿಸಿದರು. ಕ್ಲಬ್‌ನ ಅಧ್ಯಕ್ಷ ಸುಧಾಕರ ಅನ್ನೆಪಲ್ಲಡ್ಕ ಅಧ್ಯಕ್ಷತೆ ವಹಿಸಿದರು. ಕ್ಲಬ್ ಸಂಚಾಲಕ ವಸಂತ ಅನ್ನೆಪಲ್ಲಡ್ಕ, ರಾಮ ಬೇರಿಗೆ, ರಂಜಿತ್ ಕಿಳಿಂಗಾರು, ಜಯರಾಜ ಅನ್ನೆಪಲ್ಲಡ್ಕ, ಯಜ್ಞ ಕುಮಾರ್, ಉದಯ, ರಕ್ಷಿತ್, ಏಕಲವ್ಯ, ರಾಜೇಶ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಪ್ರಕಾಶ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ …