ಪತ್ನಿ ನಾಪತ್ತೆಯಾದುದರಿಂದ ಮನನೊಂದ ಪತಿ ಆತ್ಮಹತ್ಯೆ: ಪೊಲೀಸರ ಶೋಧ ವೇಳೆ ಪತ್ನಿ ಪತ್ತೆ

ಕಾಯಂಕುಳಂ: ಪತ್ನಿ ಎರಡು ತಿಂಗಳಿಂದ ನಾಪತ್ತೆಯಾಗಿದ್ದುದರಿಂದ ಮನನೊಂದು ಪತಿ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಇದೇ ವೇಳೆ ಪೊಲೀಸರು ನಡೆಸಿದ ಶೋಧ ವೇಳೆ ಕಣ್ಣೂರಿನಲ್ಲಿ ಹೋಂನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪತ್ನಿಯನ್ನು ಪತ್ತೆ ಹಚ್ಚಲಾಗಿದೆ. ಕಣ್ಣಂಬಳ್ಳಿ ಭಾಗಂ ವಿಷ್ಣುಭವನದ ವಿನೋದ್ (49) ಎಂಬವರು ಸಾವಿಗೀಡಾದ ವ್ಯಕ್ತಿ. ಇವರ ಪತ್ನಿ ರಂಜಿನಿ ಕಳೆದ ಜೂನ್ 11ರಂದು ಬೆಳಿಗ್ಗೆ ಬ್ಯಾಂಕ್‌ಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೊರಟಿದ್ದರೆನ್ನಲಾಗಿದೆ. ಅನಂತರ ಅವರು ಮನೆಗೆ ಮರಳಿ ಬಂದಿರಲಿಲ್ಲ. ಈ ಬಗ್ಗೆ ದೂರು ಲಭಿಸಿದ ಪೊಲೀಸರು …

ಅಸೌಖ್ಯ: ಮಹಿಳೆ ನಿಧನ

ಪೈವಳಿಕೆ: ಕುಡಾಲು ಕೋರಿಕಾರ್ ನಿವಾಸಿ ನಾಗವೇಣಿ ರೈ (68) ನಿಧನ ಹೊಂದಿ ದರು. ಕಳೆದ ಮೂರು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಚಿಕಿತ್ಸೆಯಲ್ಲಿದ್ದರು. ಒಂದು ವಾರದ ಹಿಂದೆ ಉಲ್ಬಣಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ಮಧ್ಯಾಹ್ನ ನಿಧನರಾದರು. ಮೃತರು ಪತಿ ಹಿರಿಯ ಕೃಷಿಕ ಕುಡಾಲು ಗುತ್ತು ವಿಠಲ ರೈ, ಮಕ್ಕಳಾದ ಗಣೇಶ್ ರೈ, ದಿನೇಶ್ ರೈ, ಗೀತಾ ಶೆಟ್ಟಿ, ಪ್ರಕಾಶ್ ರೈ, ಸೊಸೆಯಂದಿರಾದ ಅಕ್ಷತಾ, ದೀಕ್ಷಿತಾ, ಅಳಿಯ ಪ್ರಕಾಶ್ ಶೆಟ್ಟಿ, ಸಹೋದರ ಸಹೋದರಿಯರಾದ ನಾಗಣ್ಣ ಭಂಡಾರಿ, …

ಗಣೇಶ್ ಕಾಸರಗೋಡು ಅವರಿಗೆ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿ

ಕಾಸರಗೋಡು: ಕಾಸರಗೋಡಿನ ಕನ್ನಡಭವನ ಮತ್ತು ಗ್ರಂಥಾಲಯ ಕೊಡಮಾಡುವ ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿಗೆ ಹಿರಿಯ ಪತ್ರಕರ್ತ, ಸಾಹಿತಿ ಗಣೇಶ್ ಕಾಸರಗೋಡು ಅವರನ್ನು ಆಯ್ಕೆ ಮಾಡಲಾಗಿದೆ. ಈ ತಿಂಗಳ 27ರಂದು ಸಂಜೆ 5 ಗಂಟೆಗೆ ಕಾಸರಗೋಡು ಕನ್ನಡಭವನ ಸಮುಚ್ಚಯದ ಸಭಾಂಗಣ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಗಣೇಶ್ ಕಾಸರಗೋಡು ಅವರನ್ನು ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ವಾಮನ್ ರಾವ್ ಬೇಕಲ್, ಕಾರ್ಯದರ್ಶಿ ವಸಂತ್ ಕೆರೆಮನೆ ತಿಳಿಸಿದ್ದಾರೆ.

ಸ್ಥಳೀಯಾಡಳಿತ ಸಂಸ್ಥೆಗಳ ವಾರ್ಡ್ ವಿಭಜನೆ: ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ ವಾರ್ಡ್ಗಳ ಸಂಖ್ಯೆ 725ಕ್ಕೇರಿಕೆ

ಕಾಸರಗೋಡು: ಸ್ಥಳೀಯಾಡ ಳಿತ ಸಂಸ್ಥೆಗಳ ವಾರ್ಡ್ ವಿಭಜನೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇದರಂತೆ ಜಿಲ್ಲೆಯಲ್ಲಿ ಗ್ರಾಮ ಪಂಚಾಯತ್ಗಳ ವಾರ್ಡ್ಗಳ ಸಂಖ್ಯೆ ಈಗ 664ರಿಂದ 725ಕ್ಕೇರಿದೆ. 2011ರ ಜನಗಣತಿ ಆಧಾರದಲ್ಲಿ ವಾರ್ಡ್ಗಳ ಮರು ವಿಭಜನೆ ನಡೆಸಲಾಗಿದೆ. ಇದರ ಜೊತೆಗೆ ಪ್ರತೀ ವಾರ್ಡ್ಗಳ ಡಿಜಿಟಲ್ ಭೂಪಟಗಳನ್ನು ತಯಾರಿಸಲಾಗಿದೆ. ಇದರ ಹೊರತಾಗಿ ಜಿಲ್ಲೆಯ ಕಾಸರಗೋಡು, ಹೊಸದುರ್ಗ ಮತ್ತು ನೀಲೇಶ್ವರ ನಗರಸಭೆಗಳ ವಾರ್ಡ್ ಗಳ ಸಂಖ್ಯೆ, ವಾರ್ಡ್ಗಳ ಮರು ವಿಭಜನೆ ಬಳಿಕ ವಾರ್ಡ್ಗಳ ಸಂಖ್ಯೆ 113ರಿಂದ 120ಕ್ಕೇರಿದೆ. ಅದೇ ರೀತಿ ಬ್ಲೋಕ್ ಪಂಚಾ ಯತ್ಗಳ …

ರಾಹುಲ್ ಗಾಂಧಿ ಬಂಧನ ಪ್ರತಿಭಟಿಸಿ ಮುಳ್ಳೇರಿಯದಲ್ಲಿ ಪ್ರತಿಭಟನೆ

ಮುಳ್ಳೇರಿಯ: ನಕಲಿ ಮತದಾನದ ವಿರುದ್ಧ ಪ್ರತಿಕ್ರಿಯಿಸಿದ ಲೋಕಸಭೆಯ ವಿಪಕ್ಷ ಮುಖಂಡ ರಾಹುಲ್  ಗಾಂಧಿಯನ್ನು ಬಂಧಿಸಿರುವುದನ್ನು ಪ್ರತಿಭಟಿಸಿ ಕಾರಡ್ಕ ಬ್ಲೋಕ್ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮುಳ್ಳೇರಿಯದಲ್ಲಿ ನಡೆದ ಪ್ರತಿಭಟನೆಗೆ ಬ್ಲೋಕ್ ಸಮಿತಿ ಅಧ್ಯಕ್ಷ ಗೋಪಕುಮಾರ್ ವಿ, ಕೆ. ವಾರಿಜಾಕ್ಷನ್, ಆನಂದ ಮವ್ವಾರ್, ಇಬ್ರಾಹಿಂ ಹಾಜಿ ಸಿ, ಶ್ರೀಧರನ್ ಅಯರ್‌ಕಾಡ್, ಪ್ರಸಾದ್ ಭಂಡಾರಿ, ಗಂಗಾಧರ ಗೋಳಿಯಡ್ಕ, ಶ್ಯಾಮ್‌ಪ್ರಸಾದ್ ಮಾನ್ಯ, ಪುರುಷೋತ್ತಮನ್ ಕೆ, ಜ್ಯೋನಿ ಕ್ರಾಸ್ತ, ವಿನೋದನ್ ನಂಬ್ಯಾರ್ ಬಿ.ಕೆ., ಚಂದ್ರಹಾಸ ಬಲೆಕ್ಕಳ, ರಂಜಿತ್ ಕುಮಾರ್, ಶಾರದಾ …

ಅತ್ತೆಯ ಗುಣನಡತೆಯಲ್ಲಿ ದೋಷ ಆರೋಪಿಸಿ ಕೊಂದು 19 ತುಂಡುಗಳಾಗಿ ಮಾಡಿ ವಿವಿಧ ಕಡೆಗಳಲ್ಲಿ ಉಪೇಕ್ಷಿಸಿದ ದಂತವೈದ್ಯ

ತುಮಕೂರು: ಗುಣ ನಡತೆಯಲ್ಲಿ ದೋಷ ಆರೋಪಿಸಿ ಪುತ್ರಿಯ ಪತಿ ದಂತವೈದ್ಯರಾಗಿರುವ ವ್ಯಕ್ತಿ ಅತ್ತೆಯನ್ನು ಕೊಂದು ಮೃತದೇಹವನ್ನು 19 ತುಂಡುಗಳ ನ್ನಾಗಿ ಮಾಡಿ ವಿವಿಧ ಕಡೆಗಳಲ್ಲಿ ಉಪೇಕ್ಷಿಸಿದ ಧಾರುಣ ಘಟನೆ ನಡೆದಿದೆ. ಪ್ರಕರಣದಲ್ಲಿ ಅಳಿಯ ಸಹಿತ ಮೂರು ಮಂದಿಯನ್ನು ಸೆರೆ ಹಿಡಿಯಲಾಗಿದೆ. ಡಾ| ರಾಮ ಚಂದ್ರಪ್ಪ ಎಸ್. ಹಾಗೂ ಇತರ ಇಬ್ಬರು ಸಹಾಯಕರು ಸೆರೆಯಾದ ವರಾಗಿದ್ದಾರೆ. ತುಮಕೂರಿನ ಬೆಲ್ಲಾವಿ ನಿವಾಸಿಯಾದ ಲಕ್ಷ್ಮಿದೇವಿ ಅಮ್ಮ ಕೊಲೆಗೀಡಾ ದವರು. ಕಳೆದ ೭ರಂದು  ಬೀದಿನಾಯಿ ಮನುಷ್ಯನ ಕೈಯ ಅವಶಿಷ್ಟವನ್ನು ಕಚ್ಚಿಕೊಂಡು ಹೋಗುತ್ತಿರುವುದು ಗಮನಕ್ಕೆ …

ಕಳೆದುಹೋದ ಚಿನ್ನದ ಸರ ಮನೆ ವರಾಂಡದಲ್ಲಿ ಪ್ರತ್ಯಕ್ಷ: ತಂದಿರಿಸಿದ ವ್ಯಕ್ತಿ ಬರೆದ ಪತ್ರವೂ ಲಭ್ಯ

ಕಾಸರಗೋಡು: ಕಳೆದು ಹೋಯಿತೆಂದು ಎಣಿಸಿದ್ದ ೪ ಪವನ್ ತೂಕದ ಚಿನ್ನಾಭರಣ ಮನೆ ವರಾಂಡದಲ್ಲಿ ಪತ್ತೆಯಾಗಿದೆ. ಜೊತೆಗೆ ಒಂದು ಪತ್ರವೂ ಲಭಿಸಿದೆ. ಪೊಯಿನಾಚಿ ಪರಂಬ್ ನಿವಾಸಿ ನಿವೃತ್ತ ಕಂದಾಯ ಇಲಾಖೆ ಅಧಿಕಾರಿ ದಾಮೋದರನ್‌ರ ಪತ್ನಿ ಗೀತಾರ ಚಿನ್ನದ ಸರ ೧೦ ದಿನದ ಹಿಂದೆ ಬಸ್ ಪ್ರಯಾಣ ವೇಳೆ ಕಳೆದು ಹೋಗಿತ್ತು. ಅಪಹರಿಸಿದ್ದೋ, ಬಿದ್ದು ಹೋದದ್ದೋ ಎಂದು ತಿಳಿದು ಬಂದಿರಲಿಲ್ಲ. ಆದರೆ ಸರವನ್ನು ಕಂಡಾಗ ತಂದಿರಿಸಿದ ವ್ಯಕ್ತಿಯ ಉತ್ತಮ ಮನಸ್ಸಿನ ಬಗ್ಗೆ ಮನೆಯವರು ಪ್ರಶಂಸೆ ವ್ಯಕ್ತಪಡಿಸಿದರು. ಸರದ ಜೊತೆಗೆ ಲಭಿಸಿದ …

ನಗರಸಭಾ ಕುಟುಂಬಶ್ರೀ ಸಿಡಿಎಸ್ ಆಶ್ರಯದಲ್ಲಿ ಅಮೈ ಬಯಲಿನಲ್ಲಿ ಮಳೆ ಕೊಯ್ಲು

ಕಾಸರಗೋಡು: ನಗರಸಭೆಯ  ಸಿಡಿಎಸ್‌ನ ನೇತೃತ್ವದಲ್ಲಿ 18ನೇ ವಾರ್ಡ್ ಅಮೈ ಬಯಲಿನಲ್ಲಿ ಮಳೆ ಕೊಯ್ಲು ನಡೆಸಲಾಯಿತು. ಹೊಸ ತಲೆಮಾರನ್ನು ಕೃಷಿಗೆ ಆಕರ್ಷಿಸುವ ಹಿನ್ನೆಲೆಯಲ್ಲಿ ವಿವಿಧ ಸಾಂಸ್ಕೃತಿಕ ಕ್ರೀಡಾ ಕಾರ್ಯಕ್ರಮಗಳೊಂದಿಗೆ ಅಮೈ ಬಯಲಿನ ಮೂರು ಎಕ್ರೆ ಸ್ಥಳದಲ್ಲಿ ಕಾರ್ಯಕ್ರಮ ನಡೆಸಿ ಕೃಷಿ ಕೈಗೊಳ್ಳಲಾಗಿದೆ. ಸಂಸದ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸಿದರು. ಆಯಿಷಾ ಇಬ್ರಾಹಿಂ ಅಧ್ಯಕ್ಷತೆ ವಹಿಸಿದರು. ನಗರಸಭಾ ಅಧ್ಯಕ್ಷ ಅಬ್ಬಾಸ್ ಬೀಗಂ ಮುಖ್ಯ ಅತಿಥಿಯಾಗಿದ್ದರು. ಶಂಸೀದಾ ಫಿರೋಸ್, ಸಹೀರ್ ಆಸಿಫ್, ಖಾಲಿದ್ ಪಚ್ಚಕ್ಕಾಡ್, ವಿಮಲ ಶ್ರೀಧರ್, ಅಬ್ದುಲ್ ಜಲೀಲ್, ಉಣ್ಣಿ ಕೃಷ್ಣನ್, …

ಜಿಲ್ಲಾ ಕುಲಾಲ ಸಂಘದಿಂದ ಚಿಕಿತ್ಸಾ ಸಹಾಯ ಹಸ್ತಾಂತರ

ಮಂಜೇಶ್ವರ: ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಇದರ ಆಶ್ರಯದಲ್ಲಿ ಕುಲಾಲ ಬಂಧುಗಳ ಸಹಕಾರದಿಂದ ರೂಪೀಕರಿಸಿದ ಕುಲಾಲ ಸಮಾಜದ ‘ನೊಂದ ಜೀವಕ್ಕೊಂದು ಆಸರೆ’ ಯೋಜನೆಯಂತೆ 10ನೇ ಸಹಾಯವನ್ನು ಕುಲಾಲ ಸಂಘ ಮೀಂಜ ಶಾಖೆಯ ಮದಂಗಲ್ಲುಕಟ್ಟೆ ಗೌರಿಮೂಲೆ ಜಯರಾಜ್‌ರ ಚಿಕಿತ್ಸೆಗಾಗಿ ಹಸ್ತಾಂತ ರಿಸಲಾಯಿತು. ತೂಮಿನಾಡಿನಲ್ಲಿರುವ ಜಿಲ್ಲಾ ಕುಲಾಲ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ರವೀಂದ್ರ ಮನ್ನಿಪ್ಪಾಡಿ ಹಸ್ತಾಂತರಿಸಿದರು. ಹಲವಾರು ಗಣ್ಯರು ಉಪಸ್ಥಿತರಿದ್ದರು.