ಅಕ್ರಮವಾಗಿ ಹಿತ್ತಿಲಿಗೆ ನುಗ್ಗಿ ಕಲ್ಲೆಸೆದು ಗಾಯಗೊಳಿಸಿದ ಪ್ರಕರಣ: ಆರೋಪಿಗೆ 3 ವರ್ಷ ಸಜೆ, ಜುಲ್ಮಾನೆ

ಕಾಸರಗೋಡು: ಅಕ್ರಮವಾಗಿ ಹಿತ್ತಿಲಿಗೆ ನುಗ್ಗಿ ದಂಪತಿಗೆ ಕಲ್ಲೆಸೆದು, ಕಲ್ಲಿನಿಂದ ಹೊಡೆದು ಗಾಯಗೊಳಿಸಿದ ಪ್ರಕರಣದ ಒಂದನೇ ಆರೋಪಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (2) ನ್ಯಾಯಾಧೀಶೆ ಪ್ರಿಯಾ ಕೆ. ಅವರು ೩ ವರ್ಷ ಸಜೆ ಹಾಗೂ 35,000 ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ. ಕಳ್ಳಾರ್ ನೀಲಿಮಲ ನಿವಾಸಿ ಶಿಜು ಬೇಬಿ (44) ಎಂಬಾತನಿಗೆ ಈ ಶಿಕ್ಷೆ ವಿಧಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ 4 ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. ಶಿಕ್ಷಿಸಲ್ಪಟ್ಟ ಆರೋಪಿಯ …

ನಿಧನ

ಕಾಸರಗೋಡು: ನೆಲ್ಲಿಕುಂಜೆ ಬೀಚ್ ನಿವಾಸಿ ರತ್ನಾಕರ ಎಂಬವರ ಪತ್ನಿ ಬಿ. ಪ್ರೇಮ (70) ನಿಧನ ಹೊಂದಿದರು. ಮೃತರು ಪತಿ, ಪುತ್ರ ರೂಪೇಶ್, ಸಹೋದರರಾದ ಕೃಷ್ಣನ್, ವತ್ಸಲನ್, ಬಾಬು, ಸಹೋದರಿಯರಾದ ನಳಿನಿ, ಲಕ್ಷ್ಮಿ, ಪುಷ್ಪ, ಅನಿತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ರಾಜಧಾನಿಯಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ: ಬಹುಭಾಷಾ ಸಂಸ್ಕೃತಿಯ ಕಾಸರಗೋಡು ಜಿಲ್ಲೆಯಿಂದ ಬಂದು ರಾಜಧಾನಿಯಲ್ಲಿ ನಡೆಸಿದ ಕಾರ್ಯಕ್ರಮ ಶ್ಲಾಘನೀಯ- ಸಚಿವ ಜಿ.ಆರ್. ಅನಿಲ್

ತಿರುವನಂತಪುರ: ಬಹುಭಾಷೆ ಯಿಂದ ಕೂಡಿದ ಸಂಸ್ಕೃತಿಯನ್ನು ಹೊಂದಿರುವ ಜಿಲ್ಲೆ ಕಾಸರಗೋಡು. ಅಲ್ಲಿಂದ ಬಂದು ರಾಜಧಾನಿಯಲ್ಲಿ ಇಂತಹ ಕಾರ್ಯಕ್ರಮವನ್ನು ನಡೆಸಿಕೊಡುತ್ತಿರುವುದು ಶ್ಲಾಘನೀಯ. ಮನುಷ್ಯ ಜಾತಿಯಲ್ಲಿರುವ ನಾವೆಲ್ಲ ಒಂದೇ ಎಂಬ ಭಾವನೆ ಎಲ್ಲರಲ್ಲಿರ ಬೇಕು. ಸಂಪೂರ್ಣ ಸಾಕ್ಷರತೆಯನ್ನು ಹೊಂದಿದ ರಾಜ್ಯದಲ್ಲಿ ಇಂದು 105 ವರ್ಷದ ವ್ಯಕ್ತಿಯೂ ಆಧುನಿಕ ಕಾಲಕ್ಕೆ ಒಗ್ಗಿಕೊಂಡಿದ್ದಾರೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಿ.ಆರ್. ಅನಿಲ್ ನುಡಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ಭಾರತ್ ಭವನ ತಿರುವನಂತಪುರ ಕೇರಳ ಸರಕಾರಗಳ …

ಧರ್ಮಸ್ಥಳ ಸಹಿತ ಕ್ಷೇತ್ರಗಳ ನಕಲಿ ಆರೋಪದ ಹಿಂದೆ ಗೂಢಾಲೋಚನೆ- ಬಾಬುರಾಜ್

ಬದಿಯಡ್ಕ: ಹಿಂದೂ ಸಂಸ್ಕೃತಿಯನ್ನು ಹಾಳು ಮಾಡುವ ಉದ್ದೇಶದಿಂದ ಧರ್ಮಸ್ಥಳ ಸಹಿತ ಕ್ಷೇತ್ರಗಳ ಮೇಲೆ ಸುಳ್ಳು ಆರೋಪ ಹೊರಿಸುತ್ತಿರುವುದರ ಹಿಂದೆ ದೊಡ್ಡ ಗೂಢಾಲೋಚನೆ ಇದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬುರಾಜ್ ನುಡಿದರು. ಕುಂಬ್ಡಾಜೆ ಪಂಚಾಯತ್ ಅಗಲ್ಪಾಡಿ ವಾರ್ಡ್ ಸಮಾವೇಶವನ್ನು ಪಡುಮೂಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಧರ್ಮಸ್ಥಳ ಕ್ಷೇತ್ರದ ಬಗ್ಗೆ ಸುಳ್ಳು ದೂರು ಆರೋಪ ಹೊರಿಸಿದ್ದು, ಈ ಹಿಂದೆ ಶಬರಿಮಲೆಯಲ್ಲೂ ಇದೇ ರೀತಿಯಲ್ಲಿ ಗಲಭೆ ಸೃಷ್ಟಿಸಿ ಹಿಂದುಗಳ ಧಾರ್ಮಿಕ ಭಾವನೆಯನ್ನು ಹಾಳುಗೆಡಹುವ ಕೆಲಸ ಮಾಡಿದ್ದಾರೆ. ಮುಂದಿನ ಸ್ಥಳೀಯಾಡಳಿತ ಚುನಾವಣೆಯಲ್ಲಿ …

ಖ್ಯಾತ ಚಲನಚಿತ್ರ ನಟ,ನಿರ್ದೇಶಕ ನಿಧನ

ಮಂಗಳೂರು: ಹಿರಿಯ ಕನ್ನಡ ಚಲನಚಿತ್ರ ನಟ, ಕಲಾ ನಿರ್ದೇಶಕ ಮಂಗಳೂರು ದಿನೇಶ್ ನಿಧನ ಹೊಂದಿದರು. ಇಂದು ಬೆಳಿಗ್ಗೆ ಕುಂದಾಪುರದ ವಸತಿಗೃಹದಲ್ಲಿ ನಿಧನ ಸಂಭವಿಸಿದೆ. ಹಲವು ಕಾಲದಿಂದ ಅಸೌಖ್ಯ ತಗಲಿ ಚಿಕಿತ್ಸೆಯಲ್ಲಿದ್ದರು. ನಾಟಕರಂಗದ ಮೂಲಕ ಸಿನಿಮಾವಲಯಕ್ಕೆ ಪ್ರವೇಶಿಸಿದ್ದರು. ಚಿನ್ನಾರಿಮುತ್ತ ಸಹಿತ ಹಲವಾರು ಸಿನಿಮಾಗಳಿಗೆ ಕಲಾ ನಿರ್ದೇಶನ ನೀಡಿದ ಶಶಿಧರ ಅಡಪರ ಸಹಾಯಿಯಾಗಿ ದುಡಿದಿದ್ದರು. ಮೃತರು ಪತ್ನಿ ಭಾರತಿ, ಮಕ್ಕಳಾದ ಪವನ್, ಸಂಜನ್ ಹಾಗೂ ಅಪಾರರ ಬಂಧು-ಬಳಗವನ್ನು ಅಗಲಿದ್ದಾರೆ.

ಮೆರವಣಿಗೆ: ಕಾಂಗ್ರೆಸ್ ಮುಖಂಡರ ಸಹಿತ 83 ಮಂದಿ ವಿರುದ್ಧ ಕೇಸು

ಕಾಸರಗೋಡು: ಕಲ್ಯೋಟ್ ಅವಳಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಪರೋಲ್ ಮಂಜೂರು ಮಾಡಿರುವು ದನ್ನು ಪ್ರತಿಭಟಿಸಿ ಅನುಮತಿರಹಿತ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರ ಸಹಿತ 83 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಯುಡಿಎಫ್ ಜಿಲ್ಲಾ ಸಂಚಾಲಕ ಎ. ಗೋವಿಂದನ್ ನಾಯರ್ ಸಹಿತ ಹಲವರ ವಿರುದ್ಧ ಇನ್ಸ್‌ಪೆಕ್ಟರ್ ಎಂ.ವಿ. ಶ್ರೀದಾಸ್‌ರ ದೂರಿನಂತೆ ಬೇಕಲ ಪೊಲೀಸರು ಕೇಸು ದಾಖಲಿಸಿದ್ದಾರೆ.

ನಗರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ: ಯಜ್ಞಕುಂಡ ಮುಹೂರ್ತ

ಕಾಸರಗೋಡು: ಶ್ರೀ ಮಲ್ಲಿಕಾರ್ಜುನ ಕ್ಷೇತ್ರ ವಠಾರದಲ್ಲಿ 27ರಿಂದ ಸೆ.6ರವರೆಗೆ ಜರಗುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಯಜ್ಞಕುಂಡ ಮುಹೂರ್ತ ರಮೇಶ್ ಕಾರಂತ ಅವರ ನಿರ್ದೇಶನದಲ್ಲಿ ಜರಗಿತು. ಈ ವೇಳೆ ಕ್ಷೇತ್ರದ ಪ್ರಧಾನ ಅರ್ಚಕ ಶಿವಶಂಕರ ಅಡಿಗ, ಸಮಿತಿ ಅಧ್ಯಕ್ಷ ನ್ಯಾಯವಾದಿ ಮುರಳೀಧರ, ಉಪಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಪಿ. ರಮೇಶ್, ಪ್ರಧಾನ ಕಾರ್ಯದರ್ಶಿ ಕಮಲಾಕ್ಷ ಕೆ.ಎನ್, ಕಾರ್ಯದರ್ಶಿ ರವಿ ಕೇಸರಿ, ರವಿ ಕೇಳುಗುಡ್ಡೆ, ಕೋಶಾಧಿಕಾರಿ ಅನಿಲ್ ಕುಮಾರ್, ಉಮೇಶ್ ಮೇಸ್ತ್ರಿ, ಲವ ಮೀಪುಗುರಿ ಹಾಗೂ ಭಕ್ತರು ಉಪಸ್ಥಿತರಿದ್ದರು.

ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರದ ಬಗ್ಗೆ ಕೇರಳದಲ್ಲೂ ತನಿಖೆ ನಡೆಸಬೇಕು-ಬಿಜೆಪಿ

ಕಾಸರಗೋಡು: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಕಲಿ ಪುರಾವೆಗಳನ್ನು ಸೃಷ್ಟಿಸಿ ಅಪಪ್ರಚಾರಗಳನ್ನು ನಡೆಸಿ ಆ ಮೂಲಕ ಶ್ರೀ ಕ್ಷೇತ್ರದ ನಂಬುಗೆಗೆ ಘಾಸಿ ಉಂಟುಮಾಡಲೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಯೂಟ್ಯೂಬರ್ ಕೇರಳದ ಮನಾಫ್‌ನನ್ನು ಬಂಧಿಸಿ ತನಿಖೆಯನ್ನು ಕೇರಳಕ್ಕೂ  ವಿಸ್ತರಿಸಿ ಆ ಮೂಲಕ ಇದರ ಹಿಂದಿನ ಷಡ್ಯಂತ್ರವನ್ನು ಪತ್ತೆಹಚ್ಚಬೇಕೆಂದು ಬಿಜೆಪಿ ವಲಯ ಕಾರ್ಯದರ್ಶಿ  ಕೆ. ಶ್ರೀಕಾಂತ್ ಆಗ್ರಹಪಟ್ಟಿದ್ದಾರೆ. ಆಧಾರರಹಿತವಾದ ಗಂಭೀರ ಆರೋಪಗಳನ್ನು ತೋರಿಸಿ ನಕಲಿ ಪುರಾವೆಗಳನ್ನು ಸೃಷ್ಟಿಸಿ ಅಪಪ್ರಚಾರ ನಡೆಸಲಾಗಿದೆ ಎಂಬುವುದು ಖಾತರಿಗೊಂಡ ಕರ್ನಾಟಕದ ಕಾಂಗ್ರೆಸ್ ಸರಕಾರದ ವಿರುದ್ಧ ಜನರ ಆಕ್ರೋಶ …

ಸರಕಾರದ ಅಂಗೀಕಾರವಿಲ್ಲದ ‘ಹೋಮ್ ಸ್ಟೇ’ಗಳಿಗೆ ಶೀಘ್ರ ಬೀಗ

ಕಾಸರಗೋಡು: ಸರಕಾರದ ಅಂಗೀಕಾರವಿಲ್ಲದೆ ಪ್ರವಾಸೀ ಕೇಂದ್ರಗಳಲ್ಲಿ ‘ಹೋಮ್ ಸ್ಟೇ’ಗಳನ್ನು ನಿರ್ಮಿಸಿ ಅದರ ಹೆಸರಲ್ಲಿ ನಡೆಸಲಾಗುವ ವ್ಯಾಪಾರಕ್ಕೆ ಕಡಿವಾಣ ಹಾಕಲು ರಾಜ್ಯ ಸರಕಾರ ಮುಂದಾಗಿದೆ. ಪ್ರವಾಸಿಗರಿಗೆ ವಾಸ ಸೌಕರ್ಯ ಏರ್ಪಡಿಸುವ ಹೆಸರಲ್ಲಿ ‘ಹೋಮ್ ಸ್ಟೇ’ ಎಂಬ ಹೆಸರನ್ನು ಉಪಯೋಗಿಸಿ ಸರಕಾರದ ಅನುಮತಿ ಇಲ್ಲದೆ ವಸತಿ ಸೌಕರ್ಯಗಳನ್ನು ನಿರ್ಮಿಸುವುದರ ವಿರುದ್ಧ ಇನ್ನು ಕ್ರಮ ಕೈಗೊಳ್ಳಲಾಗುವುದು. ಇಂತಹ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ಪ್ರವಾಸೋದಮ ಇಲಾಖೆಯ ಕ್ಲಾಸಿಫಿಕೇಷನ್ ಸರ್ಟಿಫಿಕೆಟ್‌ನ್ನು ಮೊದಲು ಪಡೆಯಬೇಕು. ಅದನ್ನು ಪಡೆಯದೆ ಹೋಮ್ ಸ್ಟೇ ಹೆಸರಲ್ಲಿ ವಸತಿ ಸೌಕರ್ಯ ಏರ್ಪಡಿಸಿದಲ್ಲಿ …

ಮನೆಗಳಲ್ಲೇ ತ್ಯಾಜ್ಯ ಸಂಸ್ಕರಿಸಿದಲ್ಲಿ ಕಟ್ಟಡ ತೆರಿಗೆಯಲ್ಲಿ ಶೇ. 5ರಷ್ಟು ರಿಯಾಯಿತಿ

ಕಾಸರಗೋಡು: ತ್ಯಾಜ್ಯ ವಸ್ತುಗಳನ್ನು ಸಾರ್ವಜನಿಕ ಪ್ರದೇಶಗಳು, ರಸ್ತೆ ಹಾಗೂ ಉಪಯೋಗ ಶೂನ್ಯ ಹಿತ್ತಿಲುಗಳಲ್ಲಿ ತಂದೆಸೆಯುವವರನ್ನು ಪತ್ತೆಹಚ್ಚಿ ಅವರಿಗೆ ದೊಡ್ಡ ಮಟ್ಟದ ಜುಲ್ಮಾನೆ ವಿಧಿಸುವ  ಕ್ರಮದ ಬೆನ್ನಲ್ಲೇ ಮನೆಗಳು ಮತ್ತು ಇತರ ಕಟ್ಟಡಗಳ ತ್ಯಾಜ್ಯವನ್ನು ಅಲ್ಲೇ ಸಂಸ್ಕರಿಸುವವರಿಗೆ ಕಟ್ಟಡ ತೆರಿಗೆ ಯಲ್ಲಿ ಶೇ. 5ರಷ್ಟು ರಿಯಾಯಿತಿ ನೀಡಲಾಗುವುದೆಂದು ರಾಜ್ಯ ಸ್ಥಳೀಯಾಡಳಿತ ಸಚಿವ ಎಂ.ಬಿ. ರಾಜೇಶ್ ತಿಳಿಸಿದ್ದಾರೆ.  ಮನೆಗಳ ತ್ಯಾಜ್ಯವನ್ನು ಅಲ್ಲೇ ಸಂಸ್ಕರಿಸಲು ಸೂಕ್ತ ರೀತಿಯ ಕಿಚನ್ ಬಿನ್, ಹೆಚ್ಚುವರಿ ತ್ಯಾಜ್ಯವನ್ನು ಸಂಸ್ಕರಿಸಬೇಕಾಗಿ  ಬರುವ ಮನೆಗಳಿಗೆ ಬಯೋಗ್ಯಾಸ್ ಸ್ಥಾವರಗಳನ್ನು ಸ್ಥಾಪಿಸಿ …