ಎನ್‌ಫೋರ್ಸ್‌ಮೆಂಟ್ ಸ್ಕ್ವಾಡ್‌ನಿಂದ  ತ್ಯಾಜ್ಯ ನೀತಿ ಉಲ್ಲಂಘನೆ ಪತ್ತೆ: ದಂಡ ವಸೂಲಿ

ಕಾಸರಗೋಡು:  ಸ್ಥಳೀಯಾ ಡಳಿತ ಇಲಾಖೆಯ ಜಿಲ್ಲಾ ಎನ್ಫೋರ್ಸ್‌ಮೆಂಟ್ ಸ್ಕ್ವಾಡ್ ವಿವಿಧ ಸ್ಥಳೀಯಾಡಳಿತ ಸಂಸ್ಥೆ ವ್ಯಾಪ್ತಿಯಲ್ಲಿ ನಡೆಸಿದ ತಪಾಸಣೆಗಳಲ್ಲಿ ತ್ಯಾಜ್ಯ ಸಂಸ್ಕರಣೆ ವಲಯದ ಕಾನೂನು ಉಲ್ಲಂಘನೆಗಳನ್ನು ಪತ್ತೆಹಚ್ಚಿ ದಂಡ ಹೇರಿದೆ. ದೇಲಂಪಾಡಿ ಪಂಚಾಯತ್‌ನ ಅಡೂರ್‌ನಲ್ಲಿರುವ ಸ್ಟೋರ್, ಹೋಟೆಲ್, ಮಾರ್ಟ್ ಎಂಬೀ ಸಂಸ್ಥೆಗಳಲ್ಲೂ, ಬದಿಯಡ್ಕದ ಅಪಾರ್ಟ್‌ಮೆಂಟ್‌ನಲ್ಲೂ, ಮಧೂರಿನ ಪಟ್ಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲೂ ಅವೈಜ್ಞಾನಿಕವಾಗಿ ತ್ಯಾಜ್ಯ ಸಂಸ್ಕರಣೆ ನಡೆಸಿರುವುದನ್ನು ಪತ್ತೆಹಚ್ಚಿದ ಹಿನ್ನೆಲೆಯಲ್ಲಿ 2೦,೦೦೦ ರೂ. ದಂಡ ಹೇರಲಾಗಿದೆ. ಕುಂಬಳೆಯ ರಸ್ತೆಯಲ್ಲಿ ಕೆರೆ ನಿರ್ಮಿಸಿ ಅದಕ್ಕೆ ತ್ಯಾಜ್ಯವನ್ನು ತಂದು ಹಾಕಲು …

ಕಟ್ಟೆ ಬಜಾರ್ ತಿರುವಲ್ಲಿ ಅಪಘಾತ ಭೀತಿ ಬಾಯ್ದೆರೆದ ಚರಂಡಿ ದುರಸ್ತಿಗೊಳಿಸಲು ಒತ್ತಾಯ

ಮಂಜೇಶ್ವರ: ಮಂಜೇಶ್ವರ ಪಂಚಾಯತ್ ವ್ಯಾಪ್ತಿಯ ಬಂಗ್ರ ಮಂಜೇಶ್ವರ ರಸ್ತೆಯ ಕಟ್ಟೆಬಜಾರ್ ತಿರುವು ವಾಹನ ಸವಾರರಲ್ಲಿ ಆತಂಕವನ್ನು ಉಂಟುಮಾಡುತ್ತಿದೆ. ಈ ತಿರುವಿನ ಇಕ್ಕೆಡೆಗಳಲ್ಲಿ ರಸ್ತೆಗೆ ತಾಗಿಕೊಂಡು ತೆರೆದ ಸ್ಥಿತಿಯಲ್ಲಿರುವ ಚರಂಡಿ ವಾಹನ ಸವಾರರಲ್ಲಿ ಆತಂಕ ವನ್ನುಂಟುಮಾಡಿದೆ. ಮಂಜೇಶ್ವರ ಭಾಗದಿಂದ ಹೊಸಂಗಡಿ ಕಡೆಗೆ ಸಂಚರಿಸುವಾಗ ತಿರುವಿನಲ್ಲಿ ಎದುರಿನಿಂದ ಬರುವ ವಾಹನಕ್ಕೆ ಸೈಡು ನೀಡುವ ವೇಳೆ ಚರಂಡಿಗೆ ಬಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ. ಕೆಲವರು ಕೂದಲೆಳೆ ಅಂತರದಿAದ ಪಾರಾಗಿದ್ದಾರೆ. ಈ ಪರಿಸರದಲ್ಲಿ ಚರಂಡಿಯಲ್ಲಿ ಗಿಡ, ಪೊದೆಗಳು ತುಂಬಿ ಚರಂಡಿ ಗಮನಕ್ಕೆ ಬಾರದೆ ಇನ್ನಷ್ಟು …

ಹಿಂದೂ ಸಮಾಜ ಸೌಹಾರ್ದ ವೇದಿಕೆಯ  ರಾಜ್ಯ ಸಮ್ಮೇಳನ ಯಶಸ್ವಿಗೆ ಕರೆ

ಮಂಜೇಶ್ವರ: ಆಗಸ್ಟ್ ೮ರಂದು ಗುರುವಾಯೂರಿನಲ್ಲಿ ನಡೆಯಲಿರುವ ಹಿಂದೂ ಸಮಾಜ ಸೌಹಾರ್ದ ವೇದಿಕೆಯ ರಾಜ್ಯ ಸಮ್ಮೇಳನವನ್ನು ಯಶಸ್ವಿಗೊಳಿಸುವ ಕುರಿತು ಜಿಲ್ಲಾ ಸಮಿತಿ ಸಭೆ ಮಂಜೇಶ್ವರದಲ್ಲಿ ನಡೆಯಿತು. ಸಮ್ಮೇಳನವನ್ನು ಯಶಸ್ವಿಗೊಳಿಸಲು ಜಿಲ್ಲೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಭೆಯಲ್ಲಿ ಕರೆ ನೀಡಲಾಯಿತು. ಹಿಂದುಳಿದ ವರ್ಗಗಳ, ಸಮುದಾಯಗಳ ಹಕ್ಕುಗಳು ಮತ್ತು ನ್ಯಾಯಸಮ್ಮತ ಬೇಡಿಕೆಗಳ ಕುರಿತು ಚರ್ಚಿಸಲಾಯಿತು. ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಸಂಘಟಿತವಾಗಿ ಹೋರಾಟ ನಡೆಸುವ ಅಗತ್ಯವಿದೆ ಎಂದು ಸಭೆ ಅಭಿಪ್ರಾಯಪಟ್ಟಿತು. ಹಿಂದುಳಿದ ವರ್ಗಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು …

ಕಮಲ ರೈ ನಿಧನ

ಮುಳ್ಳೇರಿಯ: ಆದೂರು ಕಾನಕ್ಕೋಡು ನಿವಾಸಿ ನಾರಾಯಣ ರೈ ಅವರ ಪತ್ನಿ ಕಮಲ ರೈ (೬೮) ನಿಧನ ಹೊಂದಿದರು. ಮೃತರು ಪತಿ, ಮಕ್ಕಳಾದ ಕರುಣಾಕರ್ ರೈ, ಸುಮಿತ್ರ, ಸ್ವರ್ಣಲತ, ಅಳಿಯಂದಿರಾದ ದಿನೇಶ್ ಚೌಟ, ಪ್ರಶಾಂತ್ ಭಂಡಾರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಎಡನೀರು ಶ್ರೀಗಳ ಚಾತುರ್ಮಾಸ್ಯ ವ್ರತಾಚರಣೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ

ಬದಿಯಡ್ಕ: ವರ್ತಮಾನದ ತಲ್ಲಣಗಳಿಗೆ ಕಾರಣಗಳನ್ನು ಪತ್ತೆ ಮಾಡುತ್ತಾ ಹೋದಲ್ಲಿ ಪರಿಹಾರಗಳು ಲಭ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆದಿ ಶಂಕರರು ನೀಡಿದ ಸಂದೇಶಗಳು ನಮ್ಮ ಕಣ್ತೆರೆಸಿ ಬದುಕಿನ ಮೂಲ ಲಕ್ಷö್ಯದ ದಾರಿ ತೋರಿಸುತ್ತದೆ. ಶ್ರೀಶಂಕರರ ಸಂದೇಶಗಳನ್ನು ಪಾಲಿಸುತ್ತಾ ಬಂದಲ್ಲಿ ಆಂತರ್ಯದ ಸಂಘರ್ಷಗಳಿಗೆ ಉತ್ತರ ಕಂಡುಕೊಳ್ಳಬಹುದು. ಅವರ ಸಂದೇಶ ಗಳನ್ನು ಪಸರಿಸುವಲ್ಲಿ ಪೀಠಗಳು, ಮಠಾಧೀಶರ ಕೊಡುಗೆಗಳು ಸಮಾಜಕ್ಕೆ ಅತ್ಯಪೂರ್ವವಾದುದು ಎಂದು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅಭಿಪ್ರಾಯ ವ್ಯಕ್ತಪಡಿಸಿದರು.ಎಡನೀರು ಮಠದ ಶ್ರೀ ಸಚ್ಚಿದಾ ನಂದ ಭಾರತೀ ಸ್ವಾಮೀಜಿಯವರ …

ಬಿಜೆಪಿ ಕುಂಬಳೆ ಮಂಡಲ ಸಮಿತಿಯಿಂದ ಗುರುವಂದನೆ

ಕುಂಬಳೆ: ಬಿಜೆಪಿ ಕುಂಬಳೆ ಮಂಡಲ ಸಮಿತಿಯ ನೇತೃತ್ವದಲ್ಲಿ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹಾಗೂ ಯಕ್ಷಗಾನ ಕಲಾವಿದ ರಾಮ ಅವರನ್ನು ಗುರು ಪೂರ್ಣಿಮೆ ಪ್ರಯಕ್ತ ಗೌರವಿಸಲಾಯಿತು.ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ, ರಾಜ್ಯ ಸಮಿತಿ ಸದಸ್ಯರಾದ ವಿ. ರವೀಂದ್ರನ್, ಸತೀಶ್ಚಂದ್ರ ಭಂಡಾರಿ, ಜಿಲ್ಲಾ ಉಪಾಧ್ಯಕ್ಷರಾದ ಪಿ. ರಮೇಶ್, ಮುರಳೀಧರ, ಕುಂಬಳೆ ಮಂಡಲ ಅಧ್ಯಕ್ಷ ವಿಕ್ರಮ್ ಪೈ, ಮಂಡಲ ಉಪಾಧ್ಯಕ್ಷರಾದ ಬಾಲಕೃಷ್ಣ ಅಂಬಾರ್, ಪದ್ಮನಾಭ, …

ನಿವೃತ್ತ ಮುಖ್ಯೋಪಾಧ್ಯಾಯ ನಿಧನ

ಮುಳ್ಳೇರಿಯ: ಕುಂಟಾರು ಹುಣಸೆಯಡ್ಕ ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯ ವೀರೋಜಿ ರಾವ್ (90) ನಿಧನ ಹೊಂದಿದರು. ಎಡಪರಂಬ ಎಲ್‌ಪಿ ಶಾಲೆಯ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು. ಮೃತರು ಪತ್ನಿ ಜಯಲಕ್ಷ್ಮಿ, ಮಕ್ಕಳಾದ ಪ್ರವೀಣ್ ಕುಮಾರ್, ಯಶ್ವಂತ್ ಕುಮಾರ್, ಕಿಶೋರ್ ಕುಮಾರ್, ಸೊಸೆಯಂದಿರಾದ ಗೀತಾ ಕುಮಾರಿ, ಯಶೋಧ, ನವ್ಯ ಕುಮಾರಿ, ಸಹೋದರಿಯರಾದ ಲೀಲಾವತಿ ಆದೂರು ಮೇಗಿನಮನೆ, ಶೀಲಾವತಿ ಮಂಗಳೂರು, ಶಾರದ ಮಂಗಳೂರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಹದಗೆಟ್ಟು ಸಂಚಾರ ಸಮಸ್ಯೆಯಿಂದ ಕೂಡಿದ  ಕೋಡಿಬೈಲು ರಸ್ತೆ ದುರಸ್ತಿಗೆ ಆಗ್ರಹ

ಉಪ್ಪಳ: ಮಂಗಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕೋಡಿಬೈಲುನಲ್ಲಿ ಸಂಗಮ ರಸ್ತೆ ಹದಗೆಟ್ಟು ವಾಹನ ಸಂಚಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿರುವುದಾಗಿ ಸಾರ್ವಜನಿಕರು ದೂರಿದ್ದಾರೆ. ಮಣ್ಣಂಗುಳಿಯಿAದ ಕೋಡಿಬೈಲು ಹಾಗೂ ಉಪ್ಪಳ ಪತ್ವಾಡಿ ರಸ್ತೆಯಿಂದ ಕೋಡಿಬೈಲು ಪ್ರದೇಶಕ್ಕೆ ಸಾಗುವ ರಸ್ತೆಗಳು ಶೋಚನೀಯವಾಗಿವೆ.ಈ ಪ್ರದೇಶದಲ್ಲಿ ನೂರಾರು ಮನೆಗಳು, ಶಾಲೆ ಇದ್ದು, ನೂರಾರು ವಾಹನಗಳು ದಿನನಿತ್ಯ ಸಂಚರಿಸುತ್ತಿವೆ. ಅಲ್ಲಲ್ಲಿ ಡಾಮಾರೀಕರಣ, ಕಾಂಕ್ರಿಟ್, ಇಂಟರ್‌ಲಾಕ್ ಹಾಕಲಾಗಿದ್ದು, ಇವುಗಳೆಲ್ಲ ಹೊಂಡಗಳಿAದ ಕೂಡಿ ಸಂಚಾರ ದುಸ್ತರವಾಗಿದೆ. ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ವ್ಯಾಪಿಸುತ್ತಿರುವ ಸಾಂಕ್ರಾಮಿಕ ರೋಗ : ಎಚ್1ಎನ್1 ಬಾಧಿಸಿ ಮಹಿಳೆ, ಹಳದಿಕಾಮಾಲೆ ಬಾಧಿಸಿ ಯುವಕ ಮೃತ್ಯು; ಅಮೀಬಿಕ್ ಮೆದುಳುಜ್ವರ ಬಾಧಿಸಿದ ಯುವಕನ ಸ್ಥಿತಿ ಗಂಭೀರ

ಕಾಸರಗೋಡು: ಜಿಲ್ಲೆಯಲ್ಲಿ ವಿವಿಧ ಜ್ವರಗಳು ವ್ಯಾಪಕಗೊಂಡಿದೆ.  ಎಚ್೧ಎನ್೧ ಬಾಧಿಸಿ ಮಹಿಳೆ, ಹಳದಿಕಾಮಾಲೆ ಬಾಧಿಸಿ ಯುವಕ ಮೃತಪಟ್ಟಿದ್ದಾರೆ. ಇದೇ ವೇಳೆ ಅಮೀಬಿಕ್ ಮೆದುಳುಜ್ವರ ಬಾಧಿಸಿದ ಯುವಕನ ಸ್ಥಿತಿ ಅತೀ ಗಂಭೀರವಾ ಗಿದೆಯೆಂದು ತಿಳಿದುಬಂದಿದೆ. ಅಜಾನೂರು ಮಾಣಿಕೋತ್ತ್‌ನ ಕರುಣಾಕರನ್ ಎಂಬವರ ಪತ್ನಿ ಯಶೋಧ ಎಚ್1ಎನ್1 ಬಾಧಿಸಿ ಮೃತಪಟ್ಟ ದುರ್ದೈವಿಯಾಗಿದ್ದಾರೆ.  ತೀವ್ರ ಜ್ವರ ಹಾಗೂ ಕೆಮ್ಮ ಕಾಣಿಸಿಕೊಂಡ ಯಶೋಧರನ್ನು ಮೊದಲು ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಬಳಿಕ ಎಚ್೧ಎನ್೧ನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ತಜ್ಞ ಚಿಕಿತ್ಸೆಗಾಗಿ  ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. …

ಅಯೋಧ್ಯೆ ಕ್ಷೇತ್ರ ದರ್ಶನಕ್ಕೆ ಹೋಗಿ ಹಿಂತಿರುಗುತ್ತಿದ್ದ ಮಧ್ಯೆ ಬದಿಯಡ್ಕದ ಯುವಕ ನಾಪತ್ತೆ

ಬದಿಯಡ್ಕ: ಅಯೋಧ್ಯೆ ಕ್ಷೇತ್ರ ದರ್ಶನಕ್ಕೆ ತೆರಳಿದ ಯುವಕ  ಮನೆಗೆ ತಲುಪದೆ ನಾಪತ್ತೆಯಾದ ಬಗ್ಗೆ ದೂರಲಾಗಿದೆ.  ಪೆರಡಾಲ ಪಂಜಿನಡ್ಕ ನಿವಾಸಿ ಕುಂಞಿರಾಮನ್ ಎಂಬವರ ಪುತ್ರ ರಾಜೇಶ್ (42) ನಾಪತ್ತೆಯಾದ ವ್ಯಕ್ತಿ. ಈ ಬಗ್ಗೆ  ಅವರ ಸಹೋದರ ಅನಿಲ್ ಕುಮಾರ್  ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ರಾಜೇಶ್ ಅಯೋಧ್ಯೆಗೆ ಹೋಗಿದ್ದು ಅಲ್ಲಿಂದ ಅವರು ಊರಿಗೆ ಮರಳಿದ್ದರು. ಈ ಮಧ್ಯೆ ಜುಲೈ ೨೨ರಂದು ಸಂಜೆ ಮಧ್ಯಪ್ರದೇಶದ ಇಚ್ಚಾರ್ಸಿ ಎಂಬಲ್ಲಿ ಇಳಿದು ಅಲ್ಲಿಂದ ಬೇರೆ ಯಾವುದೋ ರೈಲಿಗೆ …