ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ ಸಮಾವೇಶ

ಕಾಸರಗೋಡು: ಕಾಸರಗೋಡು ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ ಇದರ ಜಿಲ್ಲಾ ಸಮಾವೇಶ ಮುಳ್ಳೇರಿಯ ಕಾರಡ್ಕ ಸಹಕಾರಿ ಬ್ಯಾಂಕ್ ಹಾಲ್‌ನಲ್ಲಿ ಜರಗಿತು. ಜಿಲ್ಲಾಧ್ಯಕ್ಷ ಗುಣ ಪಾಲ ಅಮೈ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಕೋಶಾಧಿಕಾರಿ ಕುಂಞ್ಞಪ್ಪು ಮಂಞಂಪಾರೆ, ಜಿಲ್ಲಾ ಪದಾಧಿಕಾರಿಗಳಾದ ಶೀನಾ ಮಂಞAಪಾರೆ, ಮುತ್ತಪ್ಪ ದೇವರಡ್ಕ, ಸೌಧಾಮಿನಿ ಕಾಞಂಗಾಡ್, ಗುಲಾಬಿ ಕುಂಬಳೆ, ಬಾಬು ಎಡಪರಂಬು, ಸುಂದರ ನೆಟ್ಟಣಿಗೆ, ರಾಜರಾಮ್ ಪುತ್ರಕಳ, ಸಂತೋಷ್ ಆದೂರ್, ರಾಧಾಕೃಷ್ಣ ಮಂಞಂಪಾರೆ ಭಾಗಿಯಾದರು.ಸಮುದಾಯದ ಏಳಿಗೆಗಾಗಿ, ಬೆಳವಣಿಗೆಗಾಗಿ, ರಕ್ಷಣೆಗಾಗಿ, ಸಂಘಟನಾತ್ಮಕವಾಗಿ ಕಾರ್ಯಪ್ರವೃತಿಗೆ ಬರಲು ಜಿಲ್ಲಾ …

ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ಬೂತ್ ನಿರ್ಮಾಣ ಪೊಲೀಸ್ ಬಂದೋಬಸ್ತುನೊಂದಿಗೆ ಆರಂಭ

ಕುಂಬಳೆ: ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯಲ್ಲಿ ತಾತ್ಕಾಲಿಕ ಟೋಲ್ ಬೂತ್ ನಿರ್ಮಾಣ ಕಾಮಗಾರಿ ಇಂದು ಬೆಳಿಗ್ಗೆ ಪೊಲೀಸ್ ಬಂದೋಬಸ್ತ್ ನೊಂದಿಗೆ ಪುನರಾರಂಭಿಸಲಾಯಿತು. ಕುಂಬಳೆ ಠಾಣೆ ಇನ್ಸ್‌ಪೆಕ್ಟರ್ ಪಿ.ಕೆ. ಜಿಜೀಶ್‌ರ ನೇತೃತ್ವದಲ್ಲಿ ಸ್ಥಳದಲ್ಲಿ ಪೊಲೀ ಸರು ಭಾರೀ ಭದ್ರತೆ ಏರ್ಪಡಿಸಿದ್ದಾರೆ. ಮೊನ್ನೆ ಮಧ್ಯಾಹ್ನ ಟೋಲ್ ಬೂತ್ ನಿರ್ಮಾಣ ಕೆಲಸ ಆರಂಭಿ ಸಲಾಗಿತ್ತು. ಈ ವೇಳೆ ಜನಪರ ಮುಷ್ಕರ ಸಮಿತಿ ಪದಾಧಿಕಾರಿಗಳು ಅಲ್ಲಿಗೆ ತಲುಪಿ ಕಾಮಗಾರಿಗೆ ತಡೆಯೊಡ್ಡಿದ್ದರು. ಈ ಹಿನ್ನೆಲೆಯಲ್ಲಿ ಕೆಲಸ ನಿಲ್ಲಿಸಿ ಸಂಜೆ 3.30ಕ್ಕೆ ಮತ್ತೆ ಪೊಲೀಸರ ಕಾವಲಿನಲ್ಲಿ ಕೆಲಸ …

ಲಂಚ ಸ್ವೀಕಾರ ಆರೋಪ: ಕೆಎಸ್‌ಇಬಿ ಸಬ್ ಇಂಜಿನಿಯರ್ ಬಂಧನ

ಕಾಸರಗೋಡು: ಲಂಚ ಸ್ವೀಕರಿ ಸಿದ ಆರೋಪದಂತೆ ವಿದ್ಯುನ್ಮಂಡ ಳಿಯ ಸಬ್ ಇಂಜಿನಿಯರ್‌ರನ್ನು  ಕಾಸರಗೋ ಡು ಜಾಗ್ರತಾ ದಳ ಬಂಧಿಸಿದೆ. ವಿದ್ಯುನ್ಮಂಡಳಿಯ ಚಿತ್ತಾರಿ  ಕಚೇರಿಯ ಸಬ್ ಇಂಜಿನಿಯರ್ ಕೆ. ಸುರೇಂದ್ರನ್ (55) ಬಂಧಿತ ವ್ಯಕ್ತಿ. ಇವರು ಹೊಸದುರ್ಗ ಕಾರಾಟು ವಯಲ್ ನಿವಾಸಿಯಾಗಿದ್ದಾರೆ. ಪೂಚಕ್ಕಾಡ್ ನಿವಾಸಿಯಿಂದ 3000 ರೂ. ಲಂಚ ಸ್ವೀಕರಿಸಿದ ಆರೋಪ ದಂತೆ ಈತನನ್ನು ಬಂಧಿಸಲಾಗಿದೆ. ಪೂಚಕ್ಕಾಡ್ ನಿವಾಸಿಯಾಗಿರುವ ದೂರುಗಾರ ಮುಕ್ಕುಟಿನಲ್ಲಿ ನಿರ್ಮಿ ಸುತ್ತಿರುವ ಹೊಸ ಮನೆಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ನೀಡಲು ಅವರಿಂದ ಸಬ್ ಇಂಜಿನಿಯರ್ ಲಂಚ …

ಕಾಂಗ್ರೆಸ್‌ನಲ್ಲೇ ಅಸಂತೃಪ್ತಿ: ರಾಹುಲ್ ಮಾಕೂಟತ್ತಿಲ್‌ರ ಶಾಸಕ ಸ್ಥಾನಕ್ಕೆ ಕುತ್ತು ಸಾಧ್ಯತೆ

ತಿರುವನಂತಪುರ: ಯುವತಿಯ ರೊಂದಿಗೆ ಅನುಚಿತ ರೀತಿಯಲ್ಲಿ ವರ್ತಿ ಸಿದ ಗಂಭೀರ ಆರೋಪ ಎದುರಿಸುತ್ತಿ ರುವ ಪಾಲಕ್ಕಾಡ್ ಶಾಸಕ ರಾಹುಲ್ ಮಾಕೂಟತ್ತಿಲ್‌ರ ವಿಷಯದಲ್ಲಿ ಕಾಂಗ್ರೆಸ್ ರಾಜ್ಯ ಘಟಕದಲ್ಲೇ ಅಸಂತೃಪ್ತಿ ಹೊಗೆಯಾಡತೊಡಗಿದೆ.  ಕೇವಲ ತಾಂತ್ರಿಕತೆಯ ಹೆಸರಲ್ಲಿ ರಾಹುಲ್‌ರ ಸಂರಕ್ಷಣೆ ನೀಡುವುದು ಪಕ್ಷಕ್ಕೆ ಪ್ರತಿ ಕೂಲಕರವಾಗಿ ಪರಿಣಮಿಸಲಿದೆಯೆಂದು ಕಾಂಗ್ರೆಸ್ ರಾಜ್ಯ ಘಟಕದ ಒಂದು ವಿಭಾಗ ಪ್ರಶ್ನಿಸತೊಡಗಿದೆ. ರಾಹುಲ್ ವಿರುದ್ಧ ಈಗ ಯಾವುದೇ ಪ್ರಕರಣಗಳಾಗಲೀ, ದೂರು ಗಳಾಗಲೀ ಸಲ್ಲಿಸಲ್ಪಡದ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ಅವರ ವಿರುದ್ಧ ಕಠಿಣ ನಿಲುವು ಕೈಗೊಳ್ಳುವ ಅಗತ್ಯವಿದೆಯೇ ಎಂದು …

ಕರ್ತವ್ಯ ವೇಳೆ ಕೆಎಸ್‌ಆರ್‌ಟಿಸಿ ಬಸ್‌ನೊಳಗೆ ನಿರ್ವಾಹಕ ಕುಸಿದು ಬಿದ್ದು ಮೃತ್ಯು

ಕಾಸರಗೋಡು: ಕರ್ತವ್ಯದ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಅದರ ನಿರ್ವಾಹಕ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಪಾಣತ್ತೂರು ಚಿರಂಕಡವು ನಿವಾಸಿ ಸುನೀಶ್ ಅಬ್ರಹಾಂ (50) ಸಾವನ್ನಪ್ಪಿದ ವ್ಯಕ್ತಿ. ಇವರು ಪಾಣತ್ತೂರಿನ ಹೊಸದುರ್ಗ ರೂಟ್‌ನ ಕೆಎಸ್‌ಆರ್‌ಟಿಸಿ ಬಸ್‌ನ ನಿರ್ವಾಹಕನಾಗಿದ್ದಾರೆ. ಬಸ್ ಇಂದು ಬೆಳಿಗ್ಗೆ ಪಾಣತ್ತೂರಿನಿಂದ ಹೊಸದುರ್ಗಕ್ಕೆ ಹೋಗುತ್ತಿದ್ದ ದಾರಿ ಮಧ್ಯೆ ಕೋಳಿಚ್ಚಾಲ್ ತಲುಪಿದಾಗ ಸುನೀಶ್‌ರಿಗೆ ಎದೆನೋವು ಅನುಭವಗೊಂಡಿದೆ. ಅದನ್ನು ಕಂಡ ಚಾಲಕ ಬಸ್‌ನ್ನು ಅಲ್ಲೇ ರಸ್ತೆ ಬದಿಯಲ್ಲಿ ನಿಲ್ಲಿಸಿ ಪ್ರಯಾಣಿಸುತ್ತಿದ್ದ ಸಮಾಜಸೇವಕ ಶಿಬು ಪಾಣತ್ತೂರು ಮತ್ತಿತರರು …

ಮೂನಾಂಕಡವ್ ಏರು ರಸ್ತೆಯಲ್ಲಿ ಮತ್ತೆ ಅಪಘಾತ: ತಪ್ಪಿದ ಭಾರೀ ದುರಂತ

ಕಾಸರಗೋಡು:ಪೆರಿಯ ಮೂನಾಂ ಕಡವ್ ಏರುರಸ್ತೆಯಲ್ಲಿ ಮತ್ತೆ  ಅಪಘಾತ ಸಂಭವಿಸಿದೆ. ಇಂದು ಬೆಳಿಗ್ಗೆ 7 ಗಂಟೆ ವೇಳೆ ಅಪಘಾತ ಉಂಟಾಗಿದ್ದು, ಸುಳ್ಯದಿಂದ ನೀಲೇಶ್ವರಕ್ಕೆ ನೇಂದ್ರ ಬಾಳೆಕಾಯಿಯನ್ನು ಕೊಂಡೊಯ್ಯುತ್ತಿದ್ದ ಪಿಕಪ್ ವ್ಯಾನ್ ಅಪಘಾತಕ್ಕೀಡಾಗಿದೆ.  ಏರು ರಸ್ತೆಯಲ್ಲಿ ಹಿಂದೆ ಚಲಿಸಿದ ಪಿಕಪ್ ರಸ್ತೆ ಬದಿಯ ಎಚ್‌ಟಿ ಲೈನ್ ಕಂಬಕ್ಕೆ ಗುದ್ದಿ ನಿಂತಿದೆ. ವಿದ್ಯುತ್ ಕಂಬ ಹಾನಿಗೊಂಡಿದೆ. ಕಂಬಕ್ಕೆ ಢಿಕ್ಕಿ ಹೊಡೆದು ಪಿಕಪ್ ನಿಲ್ಲದಿರುತ್ತಿದ್ದರೆ ಸಮೀಪದಲ್ಲಿ ಇರುವ ಆಳದ ಹೊಂಡಕ್ಕೆ ಬೀಳಬಹು ದಾಗಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆ ವೇಳೆ ಹಿಂಬದಿಯಿಂದ ಯಾವುದೇ …

ಕಾರಿನಲ್ಲಿ ಮಾದಕವಸ್ತು ಸಾಗಾಟ: ಬಂಧಿತ ಮೂವರಿಗೆ ರಿಮಾಂಡ್

ಮಂಜೇಶ್ವರ: ಕಾರಿನಲ್ಲಿ ಮಾದಕವಸ್ತು ಸಾಗಾಟ ನಡೆಸುತ್ತಿದ್ದ ವೇಳೆ ಸೆರೆಗೀಡಾದ ಮೂವರು ಆರೋಪಿಗಳಿಗೆ ಕಾಸರಗೋಡು ನ್ಯಾಯಾಲಯ ರಿಮಾಂಡ್ ವಿಧಿಸಿದೆ. ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ಲೋವರ್ ಬಜಾರ್‌ನ ಮುಹಮ್ಮದ್ ಅಬ್ಬಾಸ್ (30), ಬಂಟ್ವಾಳ ಕಲ್ಲಡ್ಕ ಗೋಳ್ತಮಜಲಿನ ಮಹಮ್ಮದ್ ಜುನೈದ್ (32), ಕಲ್ಲಡ್ಕದ ಅನ್ಸಾರ್ ಸಾಬಿತ್ (26) ಎಂಬಿವರಿಗೆ ರಿಮಾಂಡ್ ವಿಧಿಸಲಾಗಿದೆ.  ನಿನ್ನೆ ಮುಂಜಾನೆ ಮಂಜೇಶ್ವರ ಪೊಲೀಸ್ ಇನ್‌ಸ್ಪೆಕ್ಟರ್ ಇ. ಅನೂಬ್ ಕುಮಾರ್ ನೇತೃತ್ವದಲ್ಲಿ ಈ ಮೂವರನ್ನು ಬಂಧಿಸಲಾಗಿತ್ತು.  ಇನ್‌ಸ್ಪೆಕ್ಟರ್‌ರ ನೇತೃತ್ವದಲ್ಲಿ ತಲಪ್ಪಾಡಿಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಆಗಮಿಸಿದ ಕಾರನ್ನು …

ಯುವತಿ ದೇಹಕ್ಕೆ ಕಿಚ್ಚಿಡುವ ವೇಳೆ ಸುಟ್ಟು ಗಾಯಗೊಂಡ ಯುವಕ ಮೃತ್ಯು

ಕಣ್ಣೂರು: ಯುವತಿಯ ದೇಹಕ್ಕೆ  ಪೆಟ್ರೋಲ್ ಸುರಿದು ಕಿಚ್ಚಿಡುವ ವೇಳೆ ಸುಟ್ಟು ಗಾಯಗೊಂಡು ಚಿಕಿತ್ಸೆಯಲ್ಲಿದ್ದ ಯುವಕನೂ ಮೃತಪಟ್ಟನು.  ಪೆರುವಳತ್ತ್‌ಪರಂಬು ಕುಟ್ಟಾವು ನಿವಾಸಿ  ಜಿಜೇಶ್ ಎಂಬಾತ ಇಂದು ಮುಂಜಾನೆ ಪರಿಯಾರಂನ  ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟನು.  ಈತಿಂಗಳ 20ರಂದು  ಮಧ್ಯಾಹ್ನ ೨ .೩೦ಕ್ಕೆ ಈತ ಕುಟ್ಟಿಯಾಟೂರು ಉರ್ವಚ್ಚಾಲಿನ ಪ್ರವೀಣ (39) ಎಂಬಾಕೆಯನ್ನು ಪೆಟ್ರೋಲ್ ಸುರಿದು ಕೊಲೆಗೈಯ್ಯಲೆತ್ನಿ ಸಿದ್ದನು. ನೀರು ಕೇಳಿ ಯುವತಿಯ ಮನೆಯೊಳಗೆ ನುಗ್ಗಿದ ಜಿಜೇಶ್ ಆಕೆಯ ದೇಹದ ಮೇಲೆ ಪೆಟ್ರೋಲ್ ಸುರಿದು ಕಿಚ್ಚಿಟ್ಟಿದ್ದನೆನ್ನಲಾ ಗಿದೆ. ಈ …

ನಿರಂತರ ಉಪಟಳ: ತಾಕೀತು ನೀಡಿದ ಯುವತಿಯ ಟೈಲರಿಂಗ್ ಅಂಗಡಿಯಲ್ಲಿ ನೇಣು ಬಿಗಿದು ಯುವಕ ಆತ್ಮಹತ್ಯೆ

ಕಣ್ಣೂರು: ಹಿಂದಿನಿಂದ ನಡೆದುಕೊಂಡು ಹೋಗಿ ನಿರಂತರ ಉಪಟಳ ನೀಡು ತ್ತಿರುವುದರ ವಿರುದ್ಧ ಪ್ರತಿಕ್ರಿಯಿಸಿದ ಯುವತಿಯ ಟೈಲರಿಂಗ್ ಶಾಪ್‌ಗೆ ನುಗ್ಗಿ ಯುವಕ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ನಡೆದಿದೆ. ಇರಿಟ್ಟಿ ಕೋಳಿಕ್ಕಡವ್ ನಿವಾಸಿ ಮೋಹನನ್ (48) ಆತ್ಮಹತ್ಯೆಗೈದ ಯುವಕ. ಕೋಳಿಕ್ಕಡವ್ ನಿವಾಸಿಯ ಮಾಲಕತ್ವದಲ್ಲಿ ಕರಿಯಾಲ್‌ನಲ್ಲಿರುವ ಅಂಗಡಿಯಲ್ಲಿ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಯುವತಿ ವಿವಾಹಿತೆಯಾಗಿದ್ದಾಳೆ. ಮೋಹನನ್ ಕುಟುಂಬದಿಂದ ದೂರವಿದ್ದು ವಾಸಿಸುತ್ತಿದ್ದನು. ಈ ಮಧ್ಯೆ ಟೈಲರಿಂಗ್ ಅಂಗಡಿ ಮಾಲಕಿಯಾದ ಯುವತಿಯ ಹಿಂದೆ ನಡೆದು ಉಪಟಳ ನೀಡುತ್ತಿದ್ದುದಾಗಿ ಹೇಳಲಾಗಿದೆ. …

ಕಲ್ಯೋಟ್ ಅವಳಿ ಕೊಲೆ ಪ್ರಕರಣದ ಆರೋಪಿಗಳಿಗೆ ಪರೋಲ್: ಯೂತ್ ಕಾಂಗ್ರೆಸ್‌ನ ಪ್ರತಿಭಟನಾ ಮಾರ್ಚ್‌ಗೆ ಪೊಲೀಸ್ ಅನುಮತಿ ನಿರಾಕರಣೆ

ಕಾಸರಗೋಡು: ಕಲ್ಯೋಟ್ ಯೂತ್ ಕಾಂಗ್ರೆಸ್ ಕಾರ್ಯಕರ್ತರಾದ ಕೃಪೇಶ್ ಹಾಗೂ ಶರತ್‌ಲಾಲ್‌ರನ್ನು ಇರಿದು ಕೊಲೆಗೈದ ಪ್ರಕರಣದ ಇಬ್ಬರು ಆರೋಪಿಗಳಿಗೆ ಪರೋಲ್ ಮಂಜೂರು ಮಾಡಿದ ಸರಕಾರದ ಕ್ರಮವನ್ನು ಪ್ರತಿ ಭಟಿಸಿ ಯೂತ್ ಕಾಂಗ್ರೆಸ್ ಘೋಷಿಸಿದ್ದ ಪ್ರತಿಭಟನಾ ಮಾರ್ಚ್‌ಗೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಅನುಮತಿ ಲಭಿಸದಿದ್ದರೂ ಮಾರ್ಚ್ ನಡೆಸುವು ದಾಗಿ ಯೂತ್ ಕಾಂಗ್ರೆಸ್ ತಿಳಿಸಿದೆ. ಘರ್ಷಣೆ ಸಾಧ್ಯತೆ ಇದೆ ಎಂಬ ರಹಸ್ಯ ತನಿಖಾ ವಿಭಾಗದ ವರದಿಗಳ ಹಿನ್ನೆಲೆಯಲ್ಲಿ ಪೊಲೀಸರು ಭಾರೀ ಭದ್ರತೆ ಏರ್ಪಡಿಸಿದ್ದಾರೆ. ಇದರಂಗವಾಗಿ ಕಣ್ಣೂರು ಮಾಂಙಾಟ್ ಪರಂಬ್ ಪೊಲೀಸ್ ಕ್ಯಾಂಪ್‌ನಿಂದ …