ಶ್ರೀ ವಿಶ್ವ ಬ್ರಾಹ್ಮಣ ಸೇವಾ ಸಂಘ, ಉಪ ಸಮಿತಿಗಳ ವಾರ್ಷಿಕ ಮಹಾಸಭೆ

ಕಾಸರಗೋಡು: ಶ್ರೀ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಹಾಗೂ ಉಪಸಮಿತಿ ಗಳಾದ ಶ್ರೀ ವಿಶ್ವಕರ್ಮ ಯುವಕ ಸಂಘ, ಶ್ರೀ ವಿಶ್ವಕರ್ಮ ಮಹಿಳಾ ಸಂಘ ಕಾಸರಗೋಡು ಇದರ ವಾರ್ಷಿಕ ಮಹಾಸಭೆ ಕರಂದಕ್ಕಾಡು ಶ್ರೀ ವಿಶ್ವಕರ್ಮ ಮಂದಿರದಲ್ಲಿ ಸಂಘದ ಅಧ್ಯಕ್ಷ ಕೆ ಭುವನೇಶ ಆಚಾರ್ಯ ತಾಳಿಪಡ್ಪು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಕೆ ಜಿ ಗಣೇಶ ಆಚಾರ್ಯ ಹಾಗೂ ಲೆಕ್ಕ ಪತ್ರವನ್ನು ಕೋಶಾಧಿಕಾರಿ ಪ್ರವೀಣ್ ಕುಮಾರ್ ಆಚಾರ್ಯ ನಲ್ಕ ಮಂಡಿಸಿದರು.ಮಹಿಳಾ ಸಂಘದ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ …

ಬಿಎಂಎಸ್ ಕಾರಡ್ಕ ಪಂ. ಕುಟುಂಬ ಸಂಗಮ

ಮುಳ್ಳೇರಿಯ: ಭಾರತೀಯ ಮಜ್ದೂರ್ ಸಂಘ್ (ಬಿಎಂಎಸ್) ಕಾರಡ್ಕ ಪಂಚಾಯತ್ ಕುಟುಂಬ ಸಂಗಮ ಮುಳ್ಳೇರಿಯದಲ್ಲಿ ನಡೆಯಿತು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಪಂಚಾಯತ್ ಸಮಿತಿ ಅಧ್ಯಕ್ಷ ಸಿ.ಕೆ. ಚಂದ್ರನ್ ಅಧ್ಯಕ್ಷತೆ ವಹಿಸಿದರು.  ಭಾರತೀಯ ವಿಚಾರ ಕೇಂದ್ರ ಸ್ಥಾನೀಯ ಸಮಿತಿ ಕಾರ್ಯದರ್ಶಿ ಸೂರಜ್, ಕಾರಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷೆ  ಜನನಿ, ಬಿಎಂಎಸ್ ಜಿಲ್ಲಾ ಜತೆ ಕಾರ್ಯದರ್ಶಿ ಲೀಲಾಕೃಷ್ಣನ್, ಪಂಚಾಯತ್ ಸದಸರಾದ ಸವಿತ, ಪ್ರಶಾಂತ್, ವಲಯ ಅಧ್ಯಕ್ಷ ಸದಾಶಿವ ಮೊದಲಾದವರು ಮಾತನಾಡಿದರು. ಬಿಎಂಎಸ್ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯಎಂ.ಕೆ. …

ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ವತಿಯಿಂದ ಸನ್ಮಾನ

ಉಪ್ಪಳ: ಹೊಳೆಗೆ ಬಿದ್ದ ಯುವತಿ ಯನ್ನು ರಕ್ಷಿಸಿದ ಉದಯ ಕುಮಾರ್ ಶೆಟ್ಟಿ ದೇರಂಬಳ ಹಾಗೂ ಜೋಡು ಕಲ್ಲು ಹಾಲಿನ ಸೊಸೈಟಿಯ ನಿವೃತ್ತ ಕಾರ್ಯದರ್ಶಿ ರಾಜರಾಮ್ ಬಲ್ಲಾಳ್ ರನ್ನು ಫ್ರೆಂಡ್ಸ್ ಕ್ಲಬ್ ಜೋಡುಕಲ್ಲು ಇದರ ವತಿಯಿಂದ ಸನ್ಮಾನಿಸಲಾ ಯಿತು. ಸಭೆಯಲ್ಲಿ ಕ್ಲಬ್‌ನ ಗೌರವಾಧ್ಯಕ್ಷ ದಯಾನಂದ ಮಾಡ, ಅಧ್ಯಕ್ಷ ಪ್ರೇಮ್ ಕಾಂತ್ ಶೆಟ್ಟಿ ದೇರಂಬಳ, ನಾರಾಯಣ ಕೆ ಪಿ ಪಟ್ಲ, ಅಶ್ವಿನ್ ಭಟ್ ಆಟಿಕುಕ್ಕೆ, ರವಿರಾಜ್ ನಾಯ್ಕ್ ಗುಂಡಿಬೈಲ್, ಪ್ರಭಾತ್ ರೈ ಬೊಳಂಪಾಡಿ, ತ್ಯಾಂಪಣ್ಣ ಶೆಟ್ಟಿ ದೇರಂಬಳ, ಕನ್ಯಾಕಮಾರಿ ಮಾತಾಜಿ …

ಊರಾಳುಂಗಲ್ ಚೆಯರ್‌ಮೆನ್ ರಮೇಶನ್ ಪಾಲೇರಿ ನಿಧನ

ಕಲ್ಲಿಕೋಟೆ: ಊರಾಳುಂಗಲ್ ಲೇಬರ್ ಕಾಂಟ್ರಾಕ್ಟ್ ಕೋ ಆಪರೇಟಿವ್ ಸೊಸೈಟಿ ಯ ಚೆಯರ್‌ಮೆನ್  ವಡಗರ ನಿವಾಸಿ ರಮೇಶನ್ ಪಾಲೇರಿ (66) ಇಂದು ಬೆಳಿಗ್ಗೆ ಕೊಯಂಬತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅಸೌಖ್ಯ ನಿಮಿತ್ತ ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.  ಅದು ಫಲಕಾರಿಯಾಗದೆ ಇಂದು ಬೆಳಿಗ್ಗೆ ನಿಧನಹೊಂದಿದರು. ಕಾಸರಗೋಡು ಜಿಲ್ಲೆಯ ತಲಪಾಡಿಯಿಂದ ಆರಂಭಗೊಂಡು ಚೆಂಗಳ ತನಕದ 16೦೦ ಕೋಟಿ ರೂ.ಗಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ ಗುತ್ತಿಗೆ ವಹಿಸಿಕೊಂಡು ಅದನ್ನು ಈಗಾಗಲೇ ಯಶಸ್ವಿಯಾಗಿ ಪೂರ್ತೀಕರಿಸಿದ ಸಂಸ್ಥೆಯಾಗಿದೆ ಊರಾಳುಂಗಲ್ ಲೇಬರ್ …

ಕುಸಿದು ಬಿದ್ದ ದೇರಂಬಳ ಸೇತುವೆ: ಪುನರ್ ನಿರ್ಮಾಣ ಬಗ್ಗೆ ಶಾಸಕರ ನೇತೃತ್ವದಲ್ಲಿ ಪೂರ್ವಭಾವಿ ಭೇಟಿ

ಉಪ್ಪಳ: ಮೀಂಜ- ಮಂಗಲ್ಪಾಡಿ ಪಂಚಾಯತ್‌ಗಳನ್ನು ಸಂಪರ್ಕಿಸುವ ದೇರಂಬಳ ಸೇತುವೆ ಕುಸಿದ ಸ್ಥಳಕ್ಕೆ ಶಾಸಕ ಎಕೆಎಂ ಅಶ್ರಫ್‌ರ ನೇತೃತ್ವದ ತಂಡ ನಿನ್ನೆ ಭೇಟಿ ನೀಡಿದೆ. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‌ನಲ್ಲಿ ಅಳವಡಿಸಿ ನೂತನ ಸೇತುವೆ ಶೀಘ್ರ ನಿರ್ಮಿಸುವ ಯೋಜನೆ ಸಿದ್ಧವಾಗುತ್ತಿದ್ದು, ಇದರ ಪೂರ್ವಭಾವಿಯಾಗಿ ಲೋಕೋಪ ಯೋಗಿ ಇಲಾಖೆ, ಮೇಜರ್ ಮತ್ತು ಮೈನರ್ ಇರಿಗೇಶನ್ ಇಲಾಖೆ ಪ್ರತಿ ನಿಧಿಗಳ ಸಹಿತ ಶಾಸಕರು, ಜನಪ್ರತಿ ನಿಧಿಗಳು ಸ್ಥಳ ಸಂದರ್ಶಿಸಿದ್ದಾರೆ. ಈ ವೇಳೆ ಸ್ಥಳೀಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾಸರಗೋಡಿನ ಮಣ್ಣಿನಲ್ಲಿ ಮಾದಕವಸ್ತುವಿಗೆ ಸ್ಥಾನವಿಲ್ಲ :ಮಾಫಿಯಾಗಳ ವಿರುದ್ಧ ಕಠಿಣ ಕ್ರಮ-ಗೃಹ ಸಚಿವ

ಕಾಸರಗೋಡು: ಆಪರೇಶನ್ ತೂಫಾನ್ ಕಾರ್ಯಾಚರಣೆಗೆ ಅತೀ ಹೆಚ್ಚು ಬೆಂಬಲ ವ್ಯಕ್ತಪಡಿಸುತ್ತಿರುವುದು ತಾಯಂದಿರಾಗಿದ್ದಾರೆ. ಇವರು ದಿನಂಪ್ರತಿ ಕಳುಹಿಸುತ್ತಿರುವ ಪತ್ರಗಳು, ಫೋನ್ ಕರೆಗಳು ಹಾಗೂ ಸಂದೇಶಗಳು ಇದನ್ನು ಸಾಬೀತುಪಡಿಸುತ್ತಿವೆಯೆಂದು ರಾಜ್ಯ ಗೃಹ ಸಚಿವ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ. ಜಿಲ್ಲಾ ಪೊಲೀಸ್ ನಾಯಮ್ಮಾರಮೂಲೆ ತನ್‌ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಿನ್ನೆ ನಡೆಸಿದ ‘ಆಪರೇಶನ್ ತೂಫಾನ್ ದಿ ನಾರ್ಕೋ ಹಂಟ್’ ಜಾಗರಣ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಾಸರಗೋಡಿನ ಮಣ್ಣಿನಲ್ಲಿ ಮಾದಕವಸ್ತುಗಳಿಗೆ ಜಾಗವೊದ ಗಿಸುವುದಿಲ್ಲ. ಅದನ್ನು ತಡೆಯಲು ರಾಜ್ಯದ ಗಡಿ ಪ್ರದೇಶಗಳಲ್ಲಿ ತೂಪಾನ್ …

ಆಪರೇಶನ್ ತೂಫಾನ್:  ಜಿಲ್ಲಾ ಮಟ್ಟದ ಕಾರ್ಯಾಚರಣೆಗೆ ಚಾಲನೆ ನೀಡಿದ ಗೃಹ ಸಚಿವ ಚೆನ್ನಿತ್ತಲ

ಕಾಸರಗೋಡು: ಕಾಸರಗೋಡು ಜಿಲ್ಲಾ ಪೊಲೀಸ್ ನೇತೃತ್ವದಲ್ಲಿ ನಡೆದ ಆಪರೇಶನ್ ತೂಫಾನ್ ದಿ ನಾರ್ಕೋ ಹಂಟ್  ಜಾಗರಣ್ ಇದರ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ನಾಯಮ್ಮಾರಮೂಲೆಯ ತನ್‌ಬೀಹುಲ್ ಇಸ್ಲಾಂ ಹೈಯರ್ ಸೆಕಂಡರಿ ಶಾಲೆಯಲ್ಲಿ ಇಂದು ಬೆಳಿಗ್ಗೆ  ರಾಜ್ಯ ಗೃಹ ಮತ್ತು ವಿಜಿಲೆನ್ಸ್ ಖಾತೆ ಸಚಿವ ರಮೇಶ್ ಚೆನ್ನಿತ್ತಲ ನೆರವೇರಿಸಿದರು.  ಶಾಸಕ ಕಲ್ಲಟ್ರ ಮಾಹಿನ್ ಅಧ್ಯಕ್ಷತೆ ವಹಿಸಿದರು.  ಕಾರ್ಯಕ್ರಮದ ಮುಂಚಿತ ವಿದ್ಯಾನಗರದಿಂದ ನಾಯಮ್ಮಾರಮೂಲೆ ಟಿಐಎಚ್‌ಎಸ್‌ಎಸ್‌ಗೆ ಬಹುಜನ ರ‍್ಯಾಲಿ ನಡೆಯಿತು.  ಗೃಹ ಸಚಿವ ರಮೇಶ್ ಚೆನ್ನಿತ್ತಲ,ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್,ಶಾಸಕರಾದ ಕಲ್ಲಟ್ರ ಮಾಹಿನ್, ಎಕೆಎಂ …

ಗೃಹಿಣಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಬಂದಡ್ಕ: ಬೇತೂರುಪಾರದಲ್ಲಿ ಗೃಹಿಣಿ ಶೆಡ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವಿ. ನಾರಾಯಣನ್‌ರ ಪತ್ನಿ ಎನ್. ಶೋಭಾ (50) ಮೃತಪಟ್ಟವರು. ನಿನ್ನೆ ಬೆಳಿಗ್ಗೆ ೬ ಗಂಟೆಗೆ ಮನೆ ಸಮೀಪದ ಶೆಡ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೂಡಲೇ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಿದರೂ ಆ ವೇಳೆಗೆ ನಿಧನ ಸಂಭವಿಸಿತ್ತು. ಬೇಡಗಂ ಪೊಲೀಸರು  ಮಹಜರು ನಡೆಸಿದರು. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಮನೆಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಮೃತರು ಪತಿ, ಮಕ್ಕಳಾದ ಶೋಭಿತ, ನಿಖಿತ, ನಿಶಿತ, …

ಬಾಲಕಿಗೆ ಸಂದೇಶ ಕಳುಹಿಸಿ ಕಿರುಕುಳ : ಯುವಕನ ವಿರುದ್ಧ ಕೇಸು ದಾಖಲು

ಕುಂಬಳೆ: ೧೬ರ ಹರೆಯದ ಬಾಲಕಿಗೆ  ಫೋನ್‌ನಲ್ಲಿ ಸಂದೇಶಗಳನ್ನು ಕಳುಹಿಸಿ, ಅನಂತರ ಆಕೆಯನ್ನು ಹಿಂಬಾಲಿಸಿ  ಕಿರುಕುಳ ನೀಡಲೆತ್ನಿಸಿದ ಬಗ್ಗೆ ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ವಾಸಿಸುವ ಬಾಲಕಿ ನೀಡಿದ ದೂರಿನಂತೆ ಕೊಡ್ಯಮ್ಮೆಯ ಖಲಂದರ್ ಶಾನಿ (26) ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ.  ಬಾಲಕಿಯ ಫೋನ್‌ನಂಬ್ರವನ್ನು ಎಲ್ಲಿಂದಲೋ ಸಂಗ್ರಹಿಸಿದ ಆರೋಪಿ ಬಳಿಕ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡತೊಡಗಿದ್ದಾನೆನ್ನ  ಲಾಗಿದೆ. ಆದರೆ ಬಾಲಕಿ ಸಂದೇಶ ಗಳಿಗೆ  ಪ್ರತಿಕ್ರಿಯಿಸಲಿಲ್ಲ. ಇದರಿಂದ  ಆರೋಪಿ ಆಕೆಯನ್ನು ಹಿಂಬಾಲಿಸಿ ಉಪಟಳ ನೀಡಲು …

ಎಂಡಿಎಂಎ ಮಾರಾಟ, ಆರ್ಥಿಕ ವ್ಯವಹಾರ ಪ್ರಕರಣ; ಬಂಧಿತ ಅಧ್ಯಾಪಿಕೆಯರ ವಜಾ

ಕಲ್ಲಿಕೋಟೆ: ಎಂಡಿಎಂಎ ಮಾರಾಟ ಹಾಗೂ ಆರ್ಥಿಕ ವ್ಯವಹಾರದಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಅಧ್ಯಾಪಿಕೆ ಯರನ್ನು ರಾಜ್ಯಶಿಕ್ಷಣ ಇಲಾಖೆ  ಹುದ್ದೆಯಿಂದ ತಕ್ಷಣ ವಜಾಗೈದಿದೆ. ಪೇರಾಂಬ್ರ ಮರುತ್ತೊರಗದ ನಿವಾಸಿ ಕೀರ್ತನ (28) ಮತ್ತು ಕೂರಾಚುಂಡು ಚೆರುಕ್ಕಾಡಿನ  ಕಾವ್ಯ(29) ಎಂಬವರು ವಜಾಗೈಯ್ಯಲ್ಪಟ್ಟ ಅಧ್ಯಾಪಿಕೆಯರು.  ಸಮಗ್ರಶಿಕ್ಷಾ ಕೇರಳ ಯೋಜನೆಯಂತೆ ಈ ಇಬ್ಬರು ಪೇರಾಂಬ್ರ ಬಿಅರ್‌ಸಿ  ಸ್ಪೆಷಲಿಸ್ಟ್ ಎಜ್ಯುಕೇಟರ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ಇತ್ತೀಚೆಗೆ ನೇಮಕಗೊಂ ಡಿದ್ದರು.  ಎಂಡಿಎಂಎಯೊಂದಿಗೆ ಪೊಲೀಸರು ದಿನಗಳ ಹಿಂದೆ ವಡಗರ ನಿವಾಸಿಯಾದ ಯುವಕನನ್ನು ಬಂಧಿಸಿದ್ದರು. ಪೊಲೀಸರು ಆತನನ್ನು  ವಿಚಾರಣೆಗೊಳಪಡಿಸಿದಾಗ  …