ಪಡ್ರೆ ಶಾಲೆಯಲ್ಲಿ ಸಂದರ್ಶನ

ಪೆರ್ಲ: ಪಡ್ರೆ ವಾಣೀನಗರ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಖಾಲಿಯಿರುವ ಜೂನಿಯರ್ ಮತ್ತು ಸೀನಿಯರ್ ಪೊಲಿಟಿಕಲ್ ಸಯನ್ಸ್ (ಎಚ್ ಎಸ್ ಎಸ್ ಟಿ) ಶಿಕ್ಷಕ ಹುದ್ದೆ ಭರ್ತಿಗೆ ದಿನ ವೇತನದ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿ ನಡೆಸಲಾ ಗುವುದು. ಆ.25ರಂದು ಬೆಳಗ್ಗೆ 10.30ಕ್ಕೆ ಸಂದರ್ಶನ ನಡೆಯಲಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಅಸಲಿ ಪ್ರಮಾಣ ಪತ್ರಗಳೊಂದಿಗೆ ಹೈಯರ್ ಸೆಕೆಂಡರಿ ಕಚೇರಿಯಲ್ಲಿ ನಡೆಯುವ ಸಂದರ್ಶನದಲ್ಲಿ ಭಾಗವಹಿಸುವಂತೆ ಪ್ರಾಂಶುಪಾಲ ತಿಳಿಸಿದ್ದಾರೆ.

ಕಂಚಿಕಟ್ಟೆ ಮಳಿ ಅರಮನೆ ಕಾಂಕ್ರೀಟ್ ರಸ್ತೆ ಉದ್ಘಾಟನೆ

ಕುಂಬಳೆ: ಮಂಜೇಶ್ವರ ಶಾಸಕರ ನಿಧಿಯಿಂದ ವೆಚ್ಚ ಮಾಡಿ ನಿರ್ಮಿಸಿದ ಕಂಚಿಕಟ್ಟೆ ಮಳಿ- ಅರಮನೆ ರಸ್ತೆಯನ್ನು ಕಾಂಕ್ರಿಟೀಕ ರಣಗೊಳಿಸಿದ್ದು, ಇದರ ಉದ್ಘಾಟನೆ ಯನ್ನು ಶಾಸಕ ಎಕೆಎಂ ಅಶ್ರಫ್ ನಿರ್ವಹಿಸಿದರು. ಪಂಚಾಯತ್ ಅಧ್ಯಕ್ಷೆ ತಾಹಿರಾ ಯೂಸಫ್ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ರಹ್ಮಾನ್, ಸಬೂರ, ಸದಸ್ಯೆ ಪ್ರೇಮಾವತಿ, ಮಂಜುನಾಥ ಆಳ್ವ, ರಾಮಚಂದ್ರ ಗಟ್ಟಿ, ಕುಂಬಳೆ ಲಕ್ಷ್ಮಣ ಪ್ರಭು, ಸುಂದರ ಆರಿಕ್ಕಾಡಿ, ರವಿ ಪೂಜಾರಿ, ಪೃಥ್ವಿರಾಜ್ ಶೆಟ್ಟಿ, ಡಾಲ್ಫಿ ಡಿಸೋಜಾ, ಥೋಮಸ್ ರೋಡ್ರಿಗಸ್, ಚಿರಂಜೀವಿ ಕ್ಲಬ್‌ನ …

ಭಗತ್ ಸಿಂಗ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕೋತ್ಸವ

ಬದಿಯಡ್ಕ: ಬಾಂಜತ್ತಡ್ಕ ಉದಯಗಿರಿ ಭಗತ್ ಸಿಂಗ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ವಾರ್ಷಿಕೋತ್ಸವ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಉದಯಗಿರಿ ಶಾಲಾ ವಠಾರದಲ್ಲಿ ಜರಗಿತು. ಮುಖ್ಯೋಪಾಧ್ಯಾಯ ಶ್ರೀಧರ ಭಟ್ ಬಿ. ಉದ್ಘಾಟಿಸಿದರು. ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ಸಮಾರೋಪ ಸಮಾರಂಭದಲ್ಲಿ ಯಕ್ಷಗಾನ ಕಲಾವಿದ ನಾರಾಯಣ ಮೂಲಡ್ಕ ಅಧ್ಯಕ್ಷತೆ ವಹಿಸಿದರು. ಪಂಚಾಯತ್ ಸದಸ್ಯ ಈಶ್ವರ, ಸಿಪಿಐ ಬದಿಯಡ್ಕ ಮಂಡಲ ಕಾರ್ಯದರ್ಶಿ ಕೆ. ಚಂದ್ರಶೇಖರ ಶೆಟ್ಟಿ, ಬಿಜೆಪಿಯ ಹರಿಪ್ರಸಾದ್ ಯಾದವ್ ಪುತ್ತೂರು, ಸಿಪಿಎಂ ಬದಿಯಡ್ಕ ಲೋಕಲ್ ಕಾರ್ಯದರ್ಶಿ ಶ್ರೀಕಾಂತ್, ಅಧ್ಯಾಪಕ …

ರ‍್ಯಾಗಿಂಗ್ ಸಾಬೀತುಗೊಂಡಲ್ಲ್ಲಿ ಎರಡು ವರ್ಷ ಸಜೆ, 10,000 ರೂ. ಜುಲ್ಮಾನೆ

ಕಾಸರಗೋಡು: ಶಾಲಾಕಾಲೇಜು ಗಳಲ್ಲಿ ನಡೆಯುತ್ತ್ತಿರುವ ರ‍್ಯಾಗಿಂಗ್ ಪ್ರಕರಣಗಳು ಸಾಬೀತುಗೊಂಡಲ್ಲಿ ಅಂತಹ ಪ್ರಕರಣಗಳ ಆರೋಪಿಗಳಾದ ವಿದ್ಯಾರ್ಥಿಗಳಿಗೆ ಎgಡು ವರ್ಷ  ಸಜೆ ಲಭಿಸಲಿದೆ ಮಾತ್ರವಲ್ಲ 10,000 ರೂ. ಜುಲ್ಮಾನೆ ಪಾವತಿಸಬೇಕಾಗಿ ಬರಲಿದೆ. ಇದು ಮಾತ್ರವಲ್ಲ  ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವ ರ‍್ಯಾಗಿಂಗ್ ಆರೋಪದ  ಕುರಿತಾಗಿ ದೂರುಗಳಿದ್ದಲ್ಲಿ ಅದನ್ನು ಬಚ್ಚಿಡಲು ಯತ್ನಿಸಿದಲ್ಲ್ಲಿ ಅಂತಹ ಶಿಕ್ಷಣ ಸಂಸ್ಥೆಗಳು ರ‍್ಯಾಗಿಂಗ್‌ಗೆ ಸಹಾಯ ಮಾಡಿರುವುದಾಗಿ ಪರಿಗಣಿಸಿ ಅವುಗಳನ್ನು ಅಂತಹ ಪ್ರಕರಣಗಳಲ್ಲಿ ಆರೋಪಿ ಸ್ಥಾನದಲ್ಲಿ  ಸೇರ್ಪಡೆಗೊಳಿಸಲಾಗುವುದು. ಶಿಕ್ಷಣ ಸಂಸ್ಥೆಗಳಲ್ಲಿ ರ‍್ಯಾಗಿಂಗ್ ನಡೆದಲ್ಲಿ ಆ ಕುರಿತಾದ ದೂರುಗಳನ್ನು ಆಂಟಿ ರ‍್ಯಾಗಿಂಗ್ …

ರಾಜ್ಯದ ರಾಷ್ಟ್ರೀಯ ಹೆದ್ದಾರಿಯಲ್ಲಿ 11 ಟೋಲ್ ಪ್ಲಾಸಾಗಳ ನಿರ್ಮಾಣ ಕೆಲಸ ಆರಂಭ

ಕಾಸರಗೋಡು: ತಲಪಾಡಿಯಿಂದ ಆರಂಭಗೊಂಡು ತಿರುವನಂತಪುರ ತನಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ಒಟ್ಟು  11 ಟೋಲ್‌ಪ್ಲಾಸಾಗಳನ್ನು ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ತೀರ್ಮಾನಿಸಿದೆ. ಮಾತ್ರವಲ್ಲದೆ ಹೆಚ್ಚಿನೆಡೆಗಳಲ್ಲಿ ಟೋಲ್ ಪ್ಲಾಸಾಗಳ ನಿರ್ಮಾಣ ಕೆಲಸಗಳು ಈಗಾಗಲೇ ಆರಂಭಗೊಂಡಿದೆ. ತಲಪಾಡಿಯಿಂದ ಆರಂಭಗೊಂಡು ತಿರುವನಂತಪುರದ ತನಕ ಒಟ್ಟು 645 ಕಿಲೋ ಮೀಟರ್ ಉದ್ದದ ರಾಷ್ಟ್ರೀಯ ಹೆದ್ದಾರಿ-66 ಹೊಂದಿದೆ. ಇದರಲ್ಲಿ ಪ್ರತಿ 60 ಕೀ.ಮೀ ಅಂತರದಲ್ಲಿ ತಲಾ ಒಂದರಂತೆ ಟೋಲ್ ಪ್ಲಾಸಾ ನಿರ್ಮಿಸಲಾಗುತ್ತಿದೆ. ತಲಪ್ಪಾಡಿಯಲ್ಲಿ ಈಗಾಗಲೇ ಟೋಲ್ ಪ್ಲಾಸಾ ಕಾರ್ಯವೆಸಗುತ್ತಿದೆ. ಅದನ್ನು ಹೊರತುಪಡಿಸಿದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ …

ಕಾಸರಗೋಡು ನಗರದಲ್ಲಿ 3 ಅಂಗಡಿಗಳಿಂದ ಕಳವು

ಕಾಸರಗೋಡು: ಕಾಸರಗೋಡು ನಗರದಲ್ಲಿ ಅಂಗಡಿಗಳಿಂದ ಸರಣಿ ಕಳ್ಳತನ ನಡೆದಿದೆ. ನಗರದ ಹೃದಯ ಭಾಗವಾದ  ಎಂ.ಜಿ. ರಸ್ತೆಯಲ್ಲಿರುವ ಮೂರು ಅಂಗಡಿಗಳಿಂದ ಕಳವು ಹಾಗೂ ಒಂದರಿಂದ ಕಳವಿಗೆತ್ನ ನಡೆದಿದೆ. ನಿನ್ನೆ ರಾತ್ರಿ ಕಳ್ಳರು ಅಂಗಡಿಗಳಿಗೆ ನುಗ್ಗಿದ್ದಾರೆ. ಫೋರ್ಟ್ ರೋಡ್  ನಿವಾಸಿ ಶಾಲಿನಿ ಎಂಬವರ ಮಾಲಕತ್ವದಲ್ಲಿರುವ ವಿನ್ನರ್ ಫೂಟ್ ವೇರ್, ಯೂಸಫ್‌ರ ಮಾಲಕತ್ವದಲ್ಲಿ ರುವ ಮಿನಿ ಮಾರ್ಟ್ ಗ್ರೋಸರಿ ಶಾಪ್, ಮಾಂಙಾಡ್‌ನ ಎಂ.ಕೆ. ಶಂಸುದ್ದೀನ್‌ರ ಮಾಲಕತ್ವದಲ್ಲಿರುವ ಆಶ್ವಾಸ್ ಕಮ್ಯೂ ನಿಟಿ ಫಾರ್ಮಸಿ ಎಂಬಿಡೆಗಳಿಂದ ಕಳವು ನಡೆದಿದೆ. ಚೆಂಗಳ ಪಾಣಲದ ಅಬ್ದುಲ್ ಖಾದರ್‌ರ …

ಮೂರುಬಾರಿ ತಲ್ಲಾಖ್ ನುಡಿದು ವಿವಾಹ ಸಂಬಂಧದಿಂದ ಹಿಂಜರಿತ; ಪತಿ ವಿರುದ್ಧ  ಕೇಸು

ಮುಳ್ಳೇರಿಯ:  ಹೆಚ್ಚುವರಿ ಚಿನ್ನಾಭರಣ ಚಿನ್ನಾಭರಣ ನೀಡದ ದ್ವೇಷದಿಂದ ಪತ್ನಿಗೆ ಮೂರುಬಾರಿ ತಲಾಖ್ ನುಡಿದು ವಿವಾಹ ಸಂಬಂ ಧದಿಂದ ಹಿಂಜರಿದ ಬಗ್ಗೆ ದೂರಲಾ ಗಿದೆ. ಇದರಂತೆ ಯುವತಿ ನೀಡಿದ ದೂರಿನ ಮೇರೆಗೆ ಆದೂರು ಪೊಲೀ ಸರು ಕೇಸು ದಾಖಲಿಸಿಕೊಂಡಿದ್ದಾರೆ. ದೇಲಂಪಾಡಿಯ ಎಚ್. ರಾಶಿದ (22) ನೀಡಿದ ದೂರಿನಂತೆ  ಪತಿ ಕುಂಬ್ಡಾಜೆ ಬೆಳಿಂಜದ  ಬಾಡಿಗೆ ಮನೆಯಲ್ಲಿ ವಾಸಿಸುವ ಇಬ್ರಾಹಿಂ ಬಾದುಶ ಎಂಬಾತನ ವಿರುದ್ಧ ಕೇಸು ದಾಖಲಿಸಲಾಗಿದೆ. ಇಬ್ರಾಹಿಂ ಬಾದುಶ ಈಶ್ವರಮಂಗಲ ಕಾವು ನಿವಾಸಿಯಾಗಿದ್ದಾನೆ. 2018 ಮೇ 18ರಂದು  ಇಬ್ರಾಹಿಂ ಬಾದುಶ …

ಐತಿಹಾಸಿಕ ಮಸೂದೆ ಇಂದು ಸಂಸತ್‌ನಲ್ಲಿ ಮಂಡನೆ: ಪ್ರಧಾನಿ, ಮುಖ್ಯಮಂತ್ರಿ, ಸಚಿವರು ಬಂಧನವಾದಲ್ಲಿ ಹುದ್ದೆಯಿಂದ ವಜಾ

ನವದೆಹಲಿ: ಗಂಭೀರ ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಮತ್ತು ಸಚಿ ವರುಗಳು (ಕೇಂದ್ರಾಡಳಿತ ಪ್ರದೇಶಗಳೂ ಸೇರಿ) ಬಂಧಿಸಲ್ಪಟ್ಟಲ್ಲಿ ಅವರನ್ನು ಪದಚ್ಯುತಿಗೊಳಿಸುವ ಮಸೂದೆಯನ್ನು  ಇಂದು ಲೋಕಸಭೆಯಲ್ಲಿ ಕಂದ್ರ ಗೃಹ ಸಚಿವ ಅಮಿತ್ ಷಾ ಮಂಡಿಸಲಿದ್ದಾರೆ. ಇದರ ಜೊತೆಗೆ ಸಂವಿಧಾನದ (130ನೇ ತಿದ್ದುಪಡಿ) ಮಸೂದೆ-೨೦೨೫, ಕೇಂದ್ರಾ ಡಳಿತ ಸರಕಾರ (ತಿದ್ದುಪಡಿ) ಮಸೂದೆ ಮತ್ತು ಜಮ್ಮು ಕಾಶ್ಮೀರ ಪುನರ್ ರಚನೆ (ತಿದ್ದುಪಡಿ) ಮಸೂದೆ 2025ಗಳನ್ನೂ ಗೃಹ ಸಚಿವರು ಲೋಕಸಭೆಯಲ್ಲಿ ಇಂದು ಮಂಡಿಸಲಿದ್ದಾರೆ.  ಆಡಳಿತದಲ್ಲಿ ಹೊಣೆಗಾರಿಕೆ ಯನ್ನು ಸರಿಯಾದ ರೀತಿಯಲ್ಲಿ …

ಅಶ್ಲೀಲ ವೀಡಿಯೋ ತೋರಿಸಿ ಬಾಲಕಿಗೆ ಕಿರುಕುಳ: ಆರೋಪಿಗೆ 77 ವರ್ಷ ಕಠಿಣ ಸಜೆ

ಕಾಸರಗೋಡು: ಅಶ್ಲೀಲ ವೀಡಿಯೋ ತೋರಿಸಿ ಪ್ರಾಯಪೂರ್ತಿ ಯಾಗದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣದ ಆರೋಪಿಗೆ 77 ವರ್ಷಕಠಿಣ ಸಜೆ ಹಾಗೂ 2,09,000 ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ. ಮುಳಿಯಾರು ಮಲ್ಲ ನಿವಾಸಿ ಕೊಳಂಕೋಡ್ ಹೌಸ್‌ನ ಕೆ. ಸುಕುಮಾರನ್ (45) ಎಂಬಾತನಿಗೆ ಹೊಸದುರ್ಗ ಕ್ಷಿಪ್ರ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪಿ.ಎಂ. ಸುರೇಶ್ ಈ ಶಿಕ್ಷೆ ವಿಧಿಸಿದ್ದಾರೆ. ಆರೋಪಿ ದಂಡ ಪಾವತಿಸದಿದ್ದಲ್ಲಿ 2 ವರ್ಷ ಹಾಗೂ 7 ತಿಂಗಳು ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ. ೨೦೨೩ ಜೂನ್ ೨೫ರಂದು …

ಮಮ್ಮುಟ್ಟಿ ಸಂಪೂರ್ಣ ಗುಣಮುಖ

ತಿರುವನಂತಪುರ: ಹಲವು ತಿಂಗಳುಗಳಿಂದ ಸಿನಿಮಾ ರಂಗದಿಂದ ದೂರವಿದ್ದ ಖ್ಯಾತ ನಟ ಮಮ್ಮುಟ್ಟಿ ಮತ್ತೆ ರಂಗಕ್ಕೆ  ಮರಳಿದ್ದಾರೆ. ಅಸೌಖ್ಯ ಹಿನ್ನೆಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಇವರು ಈಗ ಸಂಪೂರ್ಣ ಗುಣಮುಖರಾ ಗಿದ್ದು ಸಿನಿಮಾ ರಂಗದಲ್ಲಿ ಸಕ್ರಿಯ ರಾಗುವುದಾಗಿ ಅವರ ಸಹಚರನಾದ ಆಂಟೋ ಜೋಸೆಫ್ ಜೊರ್ಜ್ ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಸಿದ್ದಾರೆ.  ಅಸೌಖ್ಯದ ಸಮಯ ದಲ್ಲಿ ಅವರ ಚೇತರಿಕೆಗಾಗಿ ಪ್ರಾರ್ಥಿ ಸಿದ ಅಭಿಮಾನಿಗಳು, ಸಾರ್ವಜನಿ ಕರಿಗೆ  ಕೃತಜ್ಞತೆ ಸಲ್ಲಿಸಿ ಅವರು ಪೋಸ್ಟ್ ಹಾಕಿದ್ದರು.